ಇನ್ನು ಗುರಿ ತಪ್ಪುವುದಿಲ್ಲ...ಪಕ್ಕಾ ಪ್ಲಾನ್‌ನೊಂದಿಗೆ ಹ್ಯುಂಡೈ ಅನ್ನು ಹಿಂದಕ್ಕಲು ಸಜ್ಜಾದ ಟಾಟಾ

ಟಾಟಾ ಮೋಟಾರ್ಸ್ ಮಾರಾಟದಲ್ಲಿ ಹ್ಯುಂಡೈಗೆ ತೀರ್ವ ಪೈಪೋಟಿ ನೀಡುತ್ತಿದೆ. ಮುಂದಿನ ತಿಂಗಳುಗಳಲ್ಲಿ ಪಕ್ಕಾ ಪ್ಲಾನ್‌ನೊಂದಿಗೆ ಟಾಟಾ, ಹ್ಯುಂಡೈ ಅನ್ನು ಹಿಂದಿಕ್ಕಲು ಸಜ್ಜಾಗುತ್ತಿದೆ.

ಕಳೆದ ಅಕ್ಟೋಬರ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಟಾಪ್-10 ಕಂಪನಿಗಳ ಪಟ್ಟಿಯಲ್ಲಿ, ಟಾಟಾ ಮೋಟಾರ್ಸ್ ಸಣ್ಣ ಅಂತರದಲ್ಲಿ 2ನೇ ಸ್ಥಾನವನ್ನು ಕಳೆದುಕೊಂಡಿದ್ದು, ಹ್ಯುಂಡೈ ತನ್ನದಾಗಿಸಿಕೊಂಡಿದೆ.

ಕಳೆದ ಅಕ್ಟೋಬರ್‌ನಲ್ಲಿ ಟಾಟಾ ಮೋಟಾರ್ಸ್ ಭಾರತದಲ್ಲಿ 45,220 ಕಾರುಗಳನ್ನು ಮಾರಾಟ ಮಾಡಿದೆ. ಆದರೆ ಹ್ಯುಂಡೈ 48,001 ಕಾರುಗಳ ಮಾರಾಟದೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದ್ದರಿಂದ ಟಾಟಾ ಮೋಟಾರ್ಸ್ 2,781 ಕಾರುಗಳ ಕಡಿಮೆ ಅಂತರದಿಂದ ಎರಡನೇ ಸ್ಥಾನವನ್ನು ಕಳೆದುಕೊಂಡಿದೆ.

ಈ ಮೂಲಕ ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ನಡುವಿನ ಸ್ಪರ್ಧೆಯು ಇತ್ತೀಚೆಗೆ ತೀವ್ರವಾಗಿದೆ. ಕಳೆದ ತಿಂಗಳು ಹ್ಯುಂಡೈ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದು, ಮುಂಬರುವ ತಿಂಗಳುಗಳಲ್ಲಿ ಟಾಟಾ ಮೋಟಾರ್ಸ್ ಗಂಭೀರ ಸವಾಲನ್ನು ಎದುರಿಸಲಿದೆ ಎಂದು ನಿರೀಕ್ಷಿಸಬಹುದು.

ಕಳೆದ ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಟಾಟಾ ಕಾರುಗಳ ಮಾಹಿತಿಯನ್ನು ಇಲ್ಲಿ ನೋಡಬಹುದು. ಈ ಟಾಪ್ 3 ಕಾರುಗಳು ಹ್ಯುಂಡೈ ಅನ್ನು ಹಿಂದಿಕ್ಕಲು ಮುಂಬರುವ ತಿಂಗಳುಗಳಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ಕಾರುಗಳು ಟಾಟಾ ಮೋಟಾರ್ಸ್‌ನ ಮಾಸಿಕ ಮಾರಾಟ ಸಂಖ್ಯೆಗಳು ಉತ್ತಮವಾಗಲು ಪ್ರಮುಖ ಕೊಡುಗೆಗಳಾಗಿವೆ.

ಟಾಟಾ ನೆಕ್ಸನ್
ನೆಕ್ಸಾನ್ ಕಳೆದ ಅಕ್ಟೋಬರ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಟಾಟಾ ಕಾರು ಎನಿಸಿಕೊಂಡಿದೆ. ಅಕ್ಟೋಬರ್ 2021 ರಲ್ಲಿ ಟಾಟಾ ಕೇವಲ 10,096 ನೆಕ್ಸಾನ್ ಕಾರುಗಳನ್ನು ಮಾರಾಟ ಮಾಡಿತ್ತು. ಆದರೆ ಈ ವರ್ಷ ಅಕ್ಟೋಬರ್‌ನಲ್ಲಿ ಈ ಸಂಖ್ಯೆ 13,767 ಕ್ಕೆ ಏರಿಕೆಯಾಗಿದೆ. ಇದು ಶೇ 36ರಷ್ಟು ಬೆಳವಣಿಗೆಯಾಗಿದೆ.

ಟಾಟಾ ನೆಕ್ಸಾನ್ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗಳಲ್ಲಿ 5-ಸ್ಟಾರ್ ರೇಟಿಂಗ್ ಗಳಿಸಿದ ಮೊದಲ ಭಾರತೀಯ ಕಾರಾಗಿ ಗುರ್ತಿಸಿಕೊಂಡಿದೆ. ಟಾಟಾ ನೆಕ್ಸನ್ ಕಾರು ಪ್ರಸ್ತುತ ಐಸಿ ಎಂಜಿನ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಮಾರಾಟವಾಗುತ್ತಿದೆ. ಶೀಘ್ರದಲ್ಲೇ ಹೊಸ ಸಿಎನ್‌ಜಿ ಆವೃತ್ತಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಟಾಟಾ ಪಂಚ್
ಕಳೆದ ಅಕ್ಟೋಬರ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ನಿಂದ ಅತಿ ಹೆಚ್ಚು ಮಾರಾಟವಾದ 2ನೇ ಕಾರು ಇದಾಗಿದೆ. ಟಾಟಾ ಮೋಟಾರ್ಸ್ ಅಕ್ಟೋಬರ್ 2021 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 8,453 ಪಂಚ್ ಕಾರುಗಳನ್ನು ಮಾರಾಟ ಮಾಡಿದೆ. ಆದರೆ ಈ ವರ್ಷ ಅಕ್ಟೋಬರ್‌ನಲ್ಲಿ ಈ ಸಂಖ್ಯೆ 10,982 ಕ್ಕೆ ಏರಿದೆ. ಇದು ಶೇ 30ರಷ್ಟು ಬೆಳವಣಿಗೆಯಾಗಿದೆ.

ಟಾಟಾ ಪಂಚ್ ಕಾರನ್ನು ಮೊದಲ ಬಾರಿಗೆ ಅಕ್ಟೋಬರ್ 2021 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಟಾಟಾ ಇತ್ತೀಚೆಗೆ ಪಂಚ್ ಕಾರಿನ ಟಾಟಾ ಪಂಚ್ ಕ್ಯಾಮೊ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಪಂಚ್ ಕಾರಿನ ಮಾರಾಟ ಹೆಚ್ಚಳಕ್ಕೆ ಇದು ಒಂದು ಕಾರಣ ಎಂದು ಪರಿಗಣಿಸಲಾಗಿದೆ.

ಶೇ 78 ರಷ್ಟು ಬೆಳವಣಿಗೆಯೊಂದಿಗೆ, ಟಾಟಾ ಟಿಯಾಗೊ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಹ್ಯಾಚ್ ಬ್ಯಾಕ್ ಕಾರಾಗಿದ್ದು, ಕಳೆದ ಅಕ್ಟೋಬರ್ 2021 ರಲ್ಲಿ ಕೇವಲ 4,040 ಟಾಟಾ ಟಿಯಾಗೊ ಕಾರುಗಳು ಮಾರಾಟವಾಗಿದ್ದವು. ಆದರೆ ಈ ವರ್ಷ ಅಕ್ಟೋಬರ್‌ನಲ್ಲಿ ಈ ಸಂಖ್ಯೆ 7,187 ಕ್ಕೆ ಏರಿದೆ.

ಶೇ78 ರಷ್ಟು ಬೆಳವಣಿಗೆಯಾಗಿದೆ. ಟಾಟಾ ಮೋಟಾರ್ಸ್ ಇತ್ತೀಚೆಗೆ ಟಿಯಾಗೊ ಕಾರಿನ (ಟಾಟಾ ಟಿಯಾಗೊ ಇವಿ) ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆ ಮಾಡಿರುವುದು ಗಮನಾರ್ಹವಾಗಿದೆ. ಟಾಟಾ ಟಿಯಾಗೊ ಕಾರು ಈಗಾಗಲೇ ಸಿಎನ್‌ಜಿ ಆವೃತ್ತಿಯಲ್ಲಿ ಮಾರಾಟವಾಗಿದೆ.

Most Read Articles

Kannada
English summary
Tata motors is a fierce competitor to hyundai in sales
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X