ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ಟಾಟಾ ಮೋಟಾರ್ಸ್ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಕಾರು ತಯಾರಕಾ ಕಂಪನಿಯಾಗಿದೆ. ಗ್ರಾಹಕರಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುಂದುವರಿಯುತ್ತಿದೆ. ಇಂತಹ ಸಂದರ್ಭದಲ್ಲಿ ತನ್ನ ಎಲ್ಲಾ ಮಾದರಿಗಳ ಬೆಲೆ ಏರಿಕೆ ಮಾಡುವ ಕುರಿತು ಘೋಷಣೆ ಮಾಡಿದೆ.

ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಟಿಯಾಗೋ, ಟಿಗೋರ್, ಪಂಚ್, ಆಲ್ಟರೊಜ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿದಂತಹಾ ಪ್ರಮಾಣಿತ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ಕಾರುಗಳು ಪ್ರತಿ ತಿಂಗಳು ಉತ್ತಮ ಮಾರಾಟವನ್ನು ದಾಖಲಿಸುತ್ತಿವೆ.

ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ಇದಕ್ಕೆ ಪ್ರಮುಖ ಕಾರಣವೆಂದರೆ ಟಾಟಾ ಮೋಟಾರ್ಸ್ ಕಾರುಗಳು ತುಂಬಾ ಸುರಕ್ಷಿತವಾಗಿರುವುದು. ಇದಲ್ಲದೆ, ಟಾಟಾ ಮೋಟಾರ್ಸ್ ಕಾರುಗಳು ವಿನ್ಯಾಸದಲ್ಲಿ ಸಾಕಷ್ಟು ಸ್ಟೈಲಿಷ್ ಆಗಿರುತ್ತವೆ. ಅಲ್ಲದೆ, ಟಾಟಾ ಮೋಟಾರ್ಸ್ ತನ್ನ ಕಾರುಗಳಿಗೆ ಕಡಿಮೆ ಬೆಲೆಯನ್ನು ನಿಗದಿಪಡಿಸುತ್ತದೆ.

ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ಇವೆಲ್ಲವೂ ಒಟ್ಟಾಗಿ ಟಾಟಾ ಮೋಟಾರ್ಸ್ ಅನ್ನು ಅತ್ಯಂತ ಯಶಸ್ವಿ ಕಾರು ಕಂಪನಿಗಳಲ್ಲಿ ಒಂದನ್ನಾಗಿ ಮಾಡಿದೆ. ವಿವಿಧ ರೀತಿಯಲ್ಲಿ ಗ್ರಾಹಕರಿಂದ ಉತ್ತಮ ಹೆಸರು ಗಳಿಸಿರುವ ಟಾಟಾ ಮೋಟಾರ್ಸ್ ಇದೀಗ ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದೆ.

ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ಹೌದು, ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಕಾರುಗಳ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಲಿದೆ. ಬೆಲೆ ಏರಿಕೆ ನವೆಂಬರ್ 7 ರಿಂದ ಜಾರಿಗೆ ಬರಲಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಬೆಲೆ ಏರಿಕೆಯು ಟಾಟಾ ಮೋಟಾರ್ಸ್‌ನ ಎಲ್ಲಾ ಕಾರುಗಳಿಗೆ ಅನ್ವಯಿಸುತ್ತದೆ.

ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ಈ ಕುರಿತು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ, "ಮಾದರಿ ಮತ್ತು ರೂಪಾಂತರವನ್ನು ಅವಲಂಬಿಸಿ, ಕಾರುಗಳ ಬೆಲೆಗಳು ಸರಾಸರಿ ಶೇಕಡಾ 0.9 ರಷ್ಟು ಹೆಚ್ಚಾಗುತ್ತವೆ" ಎಂದು ಹೇಳಿದೆ. ಹೆಚ್ಚುತ್ತಿರುವ ಕಾರುಗಳ ಉತ್ಪಾದನಾ ವೆಚ್ಚದ ಕಾರಣ, ಬೆಲೆಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಟಾಟಾ ಮೋಟಾರ್ಸ್ ಮಾಹಿತಿ ನೀಡಿದೆ.

ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ಟಾಟಾ ಮೋಟಾರ್ಸ್ ಪ್ರಸಕ್ತ ವರ್ಷ 2022 ರಲ್ಲಿ ಕಾರುಗಳ ಬೆಲೆಯನ್ನು ಹೆಚ್ಚಿಸಿರುವುದು ಇದೇ ಮೊದಲಲ್ಲ. ಟಾಟಾ ಮೋಟಾರ್ಸ್ ಈಗಾಗಲೇ ಜನವರಿ, ಏಪ್ರಿಲ್ ಮತ್ತು ಜುಲೈನಲ್ಲಿ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಈ ಸಾಲಿನಲ್ಲಿ ಮತ್ತೊಮ್ಮೆ ಬೆಲೆ ಏರಿಕೆ ಜಾರಿಯಾಗಲಿದೆ.

ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ವರದಿಗಳ ಪ್ರಕಾರ ಟಾಟಾ ಮೋಟಾರ್ಸ್ ಪ್ರಸ್ತುತ ನೆಕ್ಸಾನ್‌ನ ಸಿಎನ್‌ಜಿ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಾರುತಿ ಸುಜುಕಿ ಶೀಘ್ರದಲ್ಲೇ ಬ್ರೆಜ್ಜಾದ CNG ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.

ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ಮಾರುತಿ ಸುಜುಕಿ ಬ್ರೆಝಾ ನೆಕ್ಸಾನ್‌ನ ಪ್ರಮುಖ ಪ್ರತಿಸ್ಪರ್ಧಿಯಾಗಲಿದೆ. ಹಾಗಾಗಿ ಟಾಟಾ ಮೋಟಾರ್ಸ್ ನೆಕ್ಸಾನ್ ನ ಸಿಎನ್ ಜಿ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. ಇದಲ್ಲದೇ ವಿವಿಧ ಕಾರುಗಳ ಎಲೆಕ್ಟ್ರಿಕ್ ಆವೃತ್ತಿಗಳನ್ನು ಬಿಡುಗಡೆ ಮಾಡಲು ಟಾಟಾ ಮೋಟಾರ್ಸ್ ಸಿದ್ಧತೆ ನಡೆಸಿದೆ.

ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ಟಾಟಾ ಮೋಟಾರ್ಸ್ ಪ್ರಸ್ತುತ ನೆಕ್ಸಾನ್, ಟಿಗೊರ್ ಮತ್ತು ಟಿಯಾಗೊದ ಎಲೆಕ್ಟ್ರಿಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದೆ. ಇದರಲ್ಲಿ ಇತ್ತೀಚೆಗೆ ಟಾಟಾ ಟಿಯಾಗೊ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಇದರ ನಂತರ, ಟಾಟಾ ಮೋಟಾರ್ಸ್ ಪಂಚ್ ಮತ್ತು ಅಲ್ಟ್ರಾಜ್ ಕಾರುಗಳ ಎಲೆಕ್ಟ್ರಿಕ್ ಆವೃತ್ತಿಗಳನ್ನು ಸಹ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ಹಾಗಾಗಿ ಟಾಟಾ ಮೋಟಾರ್ಸ್ ಭವಿಷ್ಯದಲ್ಲಿ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಈಗಿರುವಂತೆ ಪ್ರಾಬಲ್ಯ ಸಾಧಿಸುತ್ತದೆ ಎಂದು ನಾವು ನಿರೀಕ್ಷಿಸಬಹುದು. ಜಗತ್ತು ಎಲೆಕ್ಟ್ರಿಕ್ ವಾಹನಗಳತ್ತ ವೇಗವಾಗಿ ಚಲಿಸುತ್ತಿರುವಾಗ, ಇನ್ನೂ ಅನೇಕ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟಕ್ಕೆ ಪರಿಚಯಿಸಲು ಯೋಜಿಸುತ್ತಿವೆ.

ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ಪೈಪೋಟಿ ಹೆಚ್ಚಾದಂತೆ ಆಯಾ ವಲಯಗಳಲ್ಲಿ ಉತ್ಪಾದನಾ ವೆಚ್ಚವೂ ಹೆಚ್ಚಾಗುತ್ತದೆ. ಹಾಗಾಗಿ ಟಾಟಾ ಸದ್ಯ ಬೆಲೆ ಏರಿಕೆಯ ನಿರ್ಣಯವನ್ನು ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಇತರ ಕಂಪನಿಗಳು ಕೂಡ ಬೆಲೆ ಏರಿಕೆ ಮಾಡುವ ಸಾಧ್ಯತೆಯಿದೆ. ಟಾಟಾ ಮೋಟಾರ್ಸ್ ಬೆಲೆ ಏರಿಕೆ ಬಳಿಕ ಯಾವ ಮಾದರಿಯ ಬೆಲೆ ಎಷ್ಟಾಗಲಿದೆ ಎಂಬುದನ್ನು ತಿಳಿಯಲು ಕಾಯಬೇಕಿದೆ.

ಗ್ರಾಹಕರನ್ನು ಅತೃಪ್ತರನ್ನಾಗಿಸುವ ಪ್ರಕಟಣೆ ಹೊರಡಿಸಿದ ಟಾಟಾ ಮೋಟಾರ್ಸ್... ಅನಿರೀಕ್ಷಿತ ಘೋಷಣೆ

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನೊಂದಿಗೆ ಸಂಪರ್ಕದಲ್ಲಿರಿ.

Most Read Articles

Kannada
English summary
Tata motors made an announcement that made customers unhappy an unexpected announcement
Story first published: [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X