ಈ ಕಾರಣಗಳಿಂದಲೇ ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮೂಲಕ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಶೇ.70 ರಷ್ಟು ತನ್ನದಾಗಿಸಿಕೊಂಡಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಭಾರತದಲ್ಲಿ ಸದ್ಯ ಎಲೆಕ್ಟ್ರಿಕ್ ಕಾರು ಮಾರಾಟವು ಹಂತ-ಹಂತವಾಗಿ ಬೆಳವಣಿಗೆ ಹೊಂದುತ್ತಿದ್ದು, ಇವಿ ವಾಹನಗಳಿಗೆ ಪೂರಕವಾಗಿ ಹೆಚ್ಚಿನ ಸಂಖ್ಯೆಯ ಚಾರ್ಜಿಂಗ್ ಸೌಲಭ್ಯ ಕೊರತೆಯು ಇವಿ ವಾಹನ ಮಾರಾಟದಲ್ಲಿ ತೀವ್ರ ಬೆಳವಣಿಗೆ ಸಾಧಿಸಲು ಸಾಧ್ಯವಾಗುತ್ತಿಲ್ಲ. ಗ್ರಾಹಕರಿಗೆ ಇವಿ ವಾಹನಗಳನ್ನು ಖರೀದಿಸುವ ಯೋಜನೆಯಿದ್ದರೂ ಎಲ್ಲಾ ಕಡೆಗಳಿಗೂ ಪ್ರಯಾಣಕ್ಕೆ ಸಹಕಾರಿಯಾಗುವಂತೆ ಸಾರ್ವಜನಿಕ ಬಳಕೆಯ ಇವಿ ಚಾರ್ಜಿಂಗ್ ಸೌಲಭ್ಯವಿಲ್ಲದಿರುವುದು ಇವಿ ವಾಹನಗಳ ಮಾರಾಟದಲ್ಲಿ ಸಾಕಷ್ಟು ಬೆಳವಣಿಗೆಗೆ ಹಿನ್ನಡೆ ಉಂಟುಮಾಡುತ್ತಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಎಲೆಕ್ಟ್ರಿಕ್ ವಾಹನಗಳ ಮಾರಾಟವು ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಹೆಚ್ಚಳವಾಗಿದ್ದರೂ ಇಂಧನ ಚಾಲಿತ ವಾಹನಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಅದು ಕೆಳಮಟ್ಟದಲ್ಲಿದ್ದು, ಇಂಧನ ಚಾಲಿತ ವಾಹನಗಳಿಗೆ ಸರಿಸಮನಾಗಿ ಇವಿ ವಾಹನ ಮಾರಾಟ ಹೆಚ್ಚಳವಾಗಬೇಕಾದರೆ ಹೆಚ್ಚಿನ ಸಂಖ್ಯೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಅವಶ್ಯಕತೆಯಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಇದೇ ಕಾರಣಕ್ಕೆ ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಕಾರು ಮಾದರಿಗಳೊಂದಿಗೆ ಹೆಚ್ಚಿನ ಮೈಲೇಜ್ ಹೊಂದಿರುವ ಪರಿಸರ ಸ್ನೇಹಿಯೂ ಆಗಿ ಸಿಎನ್‌ಜಿ ಕಾರುಗಳಿತ್ತ ಟಾಟಾ ಮೋಟಾರ್ಸ್ ಕಂಪನಿಯು ಗಮನಹರಿಸಿದೆ. ಇದೇ ಕಾರಣಕ್ಕೆ 2022ರ ಜನವರಿ ಅಥವಾ ಫೆಬ್ರವರಿ ಬಿಡುಗಡೆಯಾಗಬೇಕಿದ್ದ ಆಲ್‌ಟ್ರೊಜ್ ಎಲೆಕ್ಟ್ರಿಕ್ ಕಾರು ಮಾದರಿಯ ಮಾರಾಟವನ್ನು ಕಂಪನಿಯು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದ್ದು, ಸಿಎನ್‌ಜಿ ಕಾರುಗಳ ಗಮನಹರಿಸಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಡೀಸೆಲ್ ಮಾದರಿಗಳಿಂತಲೂ ಹೆಚ್ಚು ಮೈಲೇಜ್ ನೀಡುವ ಸಿಎನ್‌ಜಿ ಕಾರುಗಳು ಸದ್ಯ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೇ ಕಾರಣಕ್ಕೆ ಕಂಪನಿಯು ಇವಿ ಮಾದರಿಗಳಿಂತ ಸಿಎನ್‌ಜಿ ಕಾರುಗಳ ಮೇಲೆ ಗಮನಹರಿಸುವ ಉದ್ದೇಶದಿಂದ ಟಿಗೋರ್ ಮತ್ತು ಟಿಯಾಗೋ ಕಾರುಗಳ ಸಿಎನ್‌ಜಿ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಲಭ್ಯವಿರುವ ಮಾಹಿತಿಗಳ ಪ್ರಕಾರ ಟಾಟಾ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಕಾರುಗಳಲ್ಲಿ ಸಿಎನ್‌ಜಿ ಮಾದರಿಗಳನ್ನು ಬಿಡುಗಡೆಗಾಗಿ ಸಿದ್ದವಾಗುತ್ತಿದೆ ಎನ್ನಲಾಗಿದ್ದು, ಹೊಸ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯನ್ನು 2023ಕ್ಕೆ ಮುಂದೂಡಿಕೆ ಮಾಡಲಾಗಿದೆ ಎನ್ನಲಾಗಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಕಂಪನಿಯು ಸದ್ಯ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳನ್ನು ಮಾರಾಟ ಮಾಡುತ್ತಿರುವುದರಿಂದ ಆ ಎರಡು ಕಾರುಗಳ ಮೇಲೆ ಮಾತ್ರ ಗಮನಹರಿಸಲು ನಿರ್ಧರಿಸಿದ್ದು, ಆಲ್‌ಟ್ರೊಜ್ ಮತ್ತು ಸಿಯೆರಾ ಕಾರುಗಳ ಎಲೆಕ್ಟ್ರಿಕ್ ಮಾದರಿಗಳ ಬಿಡುಗಡೆ ಯೋಜನೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿಕೆ ಮಾಡಿದೆ ಎನ್ನಲಾಗಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಟಾಟಾ ಮೋಟಾರ್ಸ್ ಕಂಪನಿಯು ಮುಂದಿನ ತಿಂಗಳು ನೆಕ್ಸಾನ್ ಇವಿ ಕಾರಿನ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನ ಬ್ಯಾಟರಿ ಪ್ಯಾಕ್ ಉನ್ನತೀಕರಿಸಿರುವ ಕಂಪನಿಯು ಪ್ರತಿ ಚಾರ್ಜ್‌ಗೆ ಕನಿಷ್ಠ 400ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್ ನೀಡುವ ಬ್ಯಾಟರಿ ಪ್ಯಾಕ್ ಜೋಡಣೆ ಮಾಡುತ್ತಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಕಾರು ಇಕೋ ಡ್ರೈವ್ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಮಥ್ಯ ಹೊಂದಿದ್ದು, 2022ರ ಆವೃತ್ತಿಯಲ್ಲಿನ ಮೈಲೇಜ್ ರೇಂಜ್ ಪ್ರಮಾಣವನ್ನು 380 ಕಿ.ಮೀ ನಿಂದ 420 ಕಿ.ಮೀ ಹೆಚ್ಚಿಸುವ ಸಾಧ್ಯತೆಗಳಿವೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಇವಿ ವಾಹನಗಳ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿರುವುದೇ ಟಾಟಾ ಹೊಸ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದ್ದು, ಟಿಗೋರ್ ಇವಿ ಕೂಡಾ ಇತ್ತೀಚೆಗೆ ಉನ್ನತೀಕರಿಸಿದ ಮಾದರಿಯೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಆದರೂ ಸದ್ಯ ಟಾಟಾ ನಿರ್ಮಾಣದ ಸಾಮಾನ್ಯ ಕಾರುಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಇವಿ ಕಾರುಗಳ ಮಾರಾಟವು ಇನ್ನಷ್ಟು ಸುಧಾರಿಸಬೇಕಿದೆ. ಇದರಿಂದಾಗಿಯೇ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಮಾದರಿಗಳ ಮಾರಾಟ ಹೆಚ್ಚಳದ ಮೇಲೆ ಮಾತ್ರ ಗಮನಹರಿಸಲು ನಿರ್ಧರಿಸಿದ್ದು, ಪೂರ್ವ ನಿಗದಿಯೆಂತೆ 2022ರ ಆರಂಭದಲ್ಲಿ ಬಿಡುಗಡೆಯಾಗಬೇಕಿದ್ದ ಆಲ್‌ಟ್ರೊಜ್ ಇವಿ ಬಿಡುಗಡೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಹೊಸ ಆಲ್‌ಟ್ರೊಜ್ ಮಾದರಿಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡಿದ್ದರೂ ಹೊಸ ಕಾರಿನ ತಂತ್ರಜ್ಞಾನ ಸುಧಾರಣೆ ಮತ್ತು ಬ್ಯಾಟರಿ ರೇಂಜ್ ಹೆಚ್ಚಳಕ್ಕಾಗಿ ಹೊಸ ಹೊಸ ಪ್ರಯೋಗಗಳನ್ನು ಮುಂದುವರಿಸಿರುವ ಟಾಟಾ ಕಂಪನಿಯು ಆಲ್‌ಟ್ರೊಜ್ ಮಾದರಿಯನ್ನು ಸದ್ಯ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಬ್ಯಾಟರಿ ರೇಂಜ್ ಒದಗಿಸುವ ಯೋಜನೆಯಲ್ಲಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಬ್ಯಾಟರಿ ರೇಂಜ್ ಸುಧಾರಣೆಗಾಗಿ ಹೊಸ ಸಂಶೋಧನೆಗಳ ಪರಿಣಾಮ ಕಳೆದ 2 ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದು, ಮುಂಬರುವ ದಿನಗಳಲ್ಲಿ ಆರಂಭಿಕ ಇವಿ ಕಾರು ಮಾದರಿಗಳಲ್ಲೂ ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಹೊಂದಿರುವ ಬ್ಯಾಟರಿ ಜೋಡಣೆ ಸಾಧ್ಯತೆಗಳ ಕುರಿತು ನಿರಂತರ ಪ್ರಯತ್ನಗಳು ನಡೆಯುತ್ತಿವೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಹೀಗಾಗಿ ಆಲ್‌ಟ್ರೊಜ್ ಇವಿ ಮಾದರಿಯು 500ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್ ನೀಡಬಹುದಾದ ಬ್ಯಾಟರಿ ಪ್ಯಾಕ್ ಹೊಂದಬಹುದಾದ ಎಲ್ಲಾ ಸಾಧ್ಯತೆಗಳಿದ್ದು, ಟಾಟಾ ಮೋಟಾರ್ಸ್ ಕಂಪನಿಯ ಮತ್ತೊಂದು ಕಾರು ಸಿಯೆರಾ ಎಲೆಕ್ಟ್ರಿಕ್ ಎಸ್‌ಯುವಿ ಕೂಡಾ ಭಾರತದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಸದ್ಯ ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳು ವಿವಿಧ ಮಾದರಿಯ ಹೆಚ್ಚಿನ ಮೈಲೇಜ್ ಹೊಂದಿರುವ ಇವಿ ಕಾನ್ಸೆಪ್ಟ್‌ಗಳನ್ನು ಅಭಿವೃದ್ದಿಪಡಿಸಿ ಬಿಡುಗಡೆಗೆ ಸಿದ್ದವಾಗಿದ್ದು, ನಿಗದಿತ ಮಟ್ಟದ ಚಾರ್ಜಿಂಗ್ ಸೌಲಭ್ಯ ನಿರ್ಮಾಣಕ್ಕಾಗಿ ಎದುರುನೋಡುತ್ತಿವೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಮೇಲೆ ಹಲವಾರು ಕಂಪನಿಗಳು ಇತ್ತೀಚೆಗೆ ಭಾರೀ ಪ್ರಮಾಣದ ಹೂಡಿಕೆ ಘೋಷಣೆ ಮಾಡಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇವಿ ಚಾರ್ಜಿಂಗ್ ಸೌಲಭ್ಯ ಒಂದು ಹಂತದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಇವಿ ಚಾರ್ಜಿಂಗ್ ನಿಲ್ದಾಣಗಳ ಲಭ್ಯತೆ ಆಧರಿಸಿ ಇವಿ ವಾಹನಗಳ ಬಿಡುಗಡೆ ಪ್ರಕ್ರಿಯೆ ಹೆಚ್ಚಳವಾಗಲಿದ್ದು, 2027ರ ವೇಳೆಗೆ ಟಾಟಾ ಕಂಪನಿಯು ಒಟ್ಟು 10 ಇವಿ ಕಾರು ಮಾದರಿಗಳ ಮಾರಾಟ ಹೊಂದುವ ಯೋಜನೆಯಲ್ಲಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಕಾರುಗಳನ್ನು ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಸಹ ಆರಂಭಿಸಿದೆ.

ಟಾಟಾ ಆಲ್‌ಟ್ರೊಜ್ ಎಲೆಕ್ಟ್ರಿಕ್ ಬಿಡುಗಡೆಯಲ್ಲಿ ಮತ್ತಷ್ಟು ವಿಳಂಬ!

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಅಂಗಸಂಸ್ಥೆಯ ಕಾರ್ಯಾಚರಣೆಗಾಗಿ ರೂ. 700 ಕೋಟಿ ರೂಪಾಯಿ ಆರಂಭಿಕ ಹೂಡಿಕೆಯೊಂದಿಗೆ ಆರಂಭಗೊಳಿಸಿದ್ದು, ಪ್ರತ್ಯೇಕ ಪ್ಲ್ಯಾಟ್‌ಫಾರ್ಮ ಮೂಲಕ ಇವಿ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದೆ.

Most Read Articles

Kannada
English summary
Tata motors revealed reasons behind the delay of altroz ev launch
Story first published: Saturday, January 22, 2022, 8:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X