ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ಟಾಟಾ ಮೋಟಾರ್ಸ್‌ನ ಜುಲೈ ತಿಂಗಳ ಮಾರಾಟದ ಮಾಹಿತಿಯು ಬಹಿರಂಗಗೊಂಡಿದ್ದು, ಕಂಪನಿಯು ಇಲ್ಲಿಯವರೆಗೆ ಅತಿ ಹೆಚ್ಚು ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಈ ಮಾರಾಟದ ಅಂಕಿಅಂಶಗಳು ಕಂಪನಿಯ ಎಲೆಕ್ಟ್ರಿಕ್ ವಾಹನಗಳನ್ನು ಕೂಡ ಒಳಗೊಂಡಿದ್ದು, ಒಟ್ಟು 81,790 ವಾಹನಗಳನ್ನು ಮಾರಾಟ ಮಾಡಿದೆ.

ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ಟಾಟಾ ಮೋಟಾರ್ಸ್ ಜುಲೈನಲ್ಲಿ 47,505 ಯುನಿಟ್ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ, ಇದರಲ್ಲಿ 43,483 ಯುನಿಟ್ ಐಸಿಇಗಳು ಮತ್ತು 4,022 ಯುನಿಟ್ ಎಲೆಕ್ಟ್ರಿಕ್ ವಾಹನಗಳು ಸೇರಿವೆ. ಈ ಮೂಲಕ ಕಂಪನಿಯು ಒಟ್ಟು 81,790 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ಟಾಟಾ ಮೋಟಾರ್ಸ್ ಜುಲೈ 2021ಕ್ಕೆ ಹೋಲಿಸಿದರೆ ಕಳೆದ ಜುಲೈ ತಿಂಗಳ ಮಾರಾಟದಲ್ಲಿ ಶೇ57ರಷ್ಟು ಹೆಚ್ಚಳವನ್ನು ದಾಖಲಿಸಿದೆ. ICE ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಶೇ47 ಮತ್ತು EV ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ566% ನಷ್ಟು ಬೆಳವಣಿಗೆಯನ್ನು ದಾಖಲಿಸಲಾಗಿದೆ.

ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳನ್ನು ಒಳಗೊಂಡಂತೆ 78,978 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. ಜುಲೈ 2021 ಕ್ಕೆ ಹೋಲಿಸಿದರೆ ಇದು ಶೇ52 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಜುಲೈ ತಿಂಗಳು ಅತ್ಯಧಿಕ ಮಾಸಿಕ ಮಾರಾಟವನ್ನು ದಾಖಲಿಸಿದೆ.

ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ಇದರೊಂದಿಗೆ 5,293 ಯುನಿಟ್‌ಗಳೊಂದಿಗೆ ಅತಿ ಹೆಚ್ಚು CNG ವಾಹನಗಳು ಮಾರಾಟವಾಗಿವೆ. SUV ಗಳು ಕಳೆದ ತಿಂಗಳ ಒಟ್ಟು ಮಾರಾಟದಲ್ಲಿ ಶೇ64 ರಷ್ಟಿದೆ, ಜುಲೈ 2021ಕ್ಕೆ ಹೋಲಿಸಿದೆ ಈ ಬಾರಿ ಶೇ105 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಪಂಚ್ ಮತ್ತು ಟಿಗೋರ್ ಮಾದರಿಗಳು ಅತಿ ಹೆಚ್ಚು ಮಾರಾಟವಾಗಿದ್ದು, ಕ್ರಮವಾಗಿ 11,007 ಯುನಿಟ್‌ಗಳು ಮತ್ತು 5433 ಯುನಿಟ್‌ಗಳು ಮಾರಾಟವಾಗಿವೆ.

ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ವಾಣಿಜ್ಯ ವಾಹನಗಳ ಕುರಿತು ಮಾತನಾಡುವುದಾದರೆ, ಜುಲೈ ತಿಂಗಳಲ್ಲಿ ಒಟ್ಟು 34,154 ಯೂನಿಟ್ ವಾಹನಗಳು ಮಾರಾಟವಾಗಿವೆ, ಇದನ್ನು ಕಳೆದ ವರ್ಷ ಜುಲೈನಲ್ಲಿ ಮಾರಾಟವಾದ 23,848 ಯುನಿಟ್‌ಗಳಿಗೆ ಹೋಲಿಸಿದರೆ ಶೇ43 ರಷ್ಟು ಹೆಚ್ಚಾಗಿದೆ. ಇದರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 31,473 ಯುನಿಟ್‌ಗಳು ಮಾರಾಟವಾಗಿದ್ದು, 2,681 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ.

ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ವಾಹನಗಳು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ, ಕಂಪನಿಯು ಪ್ರಸ್ತುತ ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿಗಳನ್ನು ಮಾರಾಟ ಮಾಡುತ್ತಿದೆ ಅದರಲ್ಲಿ ನೆಕ್ಸಾನ್ ಇವಿ ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರ್ ಆಗಿ ಹೊರಹೊಮ್ಮಿದೆ. ಇತ್ತೀಚೆಗೆ ಅದರ ಲಾಂಗ್ ರೇಂಜ್ ಮಾಡೆಲ್ ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು ಪರಿಚಯಿಸಲಾಗಿದೆ. ಅಂದಿನಿಂದ ಅದರ ಮಾರಾಟವು ಇನ್ನಷ್ಟು ಹೆಚ್ಚಾಗಿದೆ.

ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 9,300 ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ಹಣಕಾಸು ವರ್ಷದಲ್ಲಿ ಮಾರಾಟವಾದ ಒಟ್ಟು ಎಲೆಕ್ಟ್ರಿಕ್ ಕಾರುಗಳ ಅರ್ಧದಷ್ಟು ಇದಾಗಿದ್ದು, ಈ ವರ್ಷ ಕಂಪನಿಯು ದಾಖಲೆಯ ಮಾರಾಟವನ್ನು ನಿರೀಕ್ಷಿಸುತ್ತಿದೆ.

ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ಟಾಟಾ ಮೋಟಾರ್ಸ್ ಸಿಎನ್‌ಜಿ ರೂಪಾಂತರದಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸುತ್ತಿದೆ. ಕಂಪನಿಯು ಟಿಯಾಗೊ ಮತ್ತು ಟಿಗೊರ್ ಅನ್ನು ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯವಾಗಿಸಿದ್ದು, ಇದು ಕೂಡ ಜುಲೈ ತಿಂಗಳಲ್ಲಿ ಹೆಚ್ಚು ಮಾರಾಟವಾಗಿದೆ, ಈ ಮೂಲಕ ಸಿಎನ್‌ಜಿ ಮಾದರಿಗಳು ಹೇಗೆ ಮಾರುಕಟ್ಟೆಯಲ್ಲಿ ಯಾವ ರೀತಿ ಪ್ರತಿಕ್ರಿಯೆ ಪಡೆಯುತ್ತಿದೆ ಎಂಬುದನ್ನು ನೋಡಬಹುದು. ಮುಂದಿನ ದಿನಗಳಲ್ಲಿ ಕಂಪನಿಯು ಸಿಎನ್‌ಜಿಯಲ್ಲಿ ಹೆಚ್ಚಿನ ಮಾದರಿಗಳನ್ನು ತರಬಹುದು.

ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ಬೆಲೆ ಏರಿಕೆ

ಹೆಚ್ಚುತ್ತಿರುವ ಬಿಡಿಭಾಗಗಳ ನಿರ್ವಹಣಾ ವೆಚ್ಚ ಹಿನ್ನಲೆಯಲ್ಲಿ ಪ್ರಮುಖ ಕಾರು ಕಂಪನಿಗಳು ತಮ್ಮ ಪ್ರಮುಖ ವಾಹನಗಳ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಿಸುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ಸಹ ತನ್ನ ಹೊಸ ಕಾರುಗಳ ಬೆಲೆಯಲ್ಲಿ ಹೆಚ್ಚಳ ಘೋಷಿಸಿದೆ. ಇದು ಈ ವರ್ಷದ ಮೂರನೇ ದರ ಹೆಚ್ಚಳವಾಗಿದೆ.

ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ಜಾಗತಿಕ ಮಾರುಕಟ್ಟೆಯಲ್ಲಿ ಆಟೋ ಬಿಡಿಭಾಗಗಳ ವೆಚ್ಚ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹೊಸ ವಾಹನಗಳ ಬೆಲೆಯು ನಿರಂತರವಾಗಿ ಏರಿಕೆಯಾಗುತ್ತಿದ್ದು, ಮಧ್ಯಮ ಕ್ರಮಾಂಕದ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಸಹ ಇದೀಗ ತನ್ನ ಪ್ರಮುಖ ಕಾರು ಮಾದರಿಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ಕಳೆದ ಮಾರ್ಚ್‌ನಲ್ಲಿ ಪ್ರತಿ ಕಾರು ಬೆಲೆಯಲ್ಲಿ ಶೇ. 1ರಿಂದ ಶೇ.2 ರಷ್ಟು ಹೆಚ್ಚಳ ಘೋಷಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಜುಲೈ 9ರಿಂದ ಜಾರಿಗೆ ಬರುವಂತೆ ವಿವಿಧ ಕಾರುಗಳ ಬೆಲೆಯಲ್ಲಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಶೇ. 0.55ರಿಂದ ಶೇ.1.50 ರಷ್ಟು ಬೆಲೆ ಏರಿಕೆ ಮಾಡಿದೆ.

ಟಾಟಾ ಮೋಟಾರ್ಸ್ ಜುಲೈ ತಿಂಗಳಲ್ಲಿ ದಾಖಲೆಯ ವಾಹನ ಮಾರಾಟ: ಇವಿಗಳಿಗೆ ಬೇಡಿಕೆ ಹೆಚ್ಚಳ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಆಟೋ ಬಿಡಿಭಾಗಗಳ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿರ್ವಹಿಸಲು ಪ್ರಮುಖ ವಾಹನ ತಯಾರಕ ಕಂಪನಿಗಳು ಹೊಸ ವಾಹನಗಳ ಬೆಲೆಯನ್ನು ನಿರಂತರವಾಗಿ ಪರಿಷ್ಕರಣೆ ಮಾಡುತ್ತಲೇ ಇದ್ದು, ನಿರಂತರ ಬೆಲೆ ಏರಿಕೆ ಪರಿಣಾಮ ಹೊಸ ವಾಹನಗಳ ಮಾಲೀಕತ್ವವು ದಿನದಿಂದ ದಿನಕ್ಕೆ ದುಬಾರಿಯಾಗಿ ಪರಿಣಮಿಸುತ್ತಿದೆ.

Most Read Articles

Kannada
English summary
Tata Motors set a record in vehicle sales in the month of July
Story first published: Monday, August 1, 2022, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X