ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ತನ್ನ ಪಂಚ್ ಮೈಕ್ರೋ-ಎಸ್‌ಯುವಿಯನ್ನು ಬಿಡುಗಡೆ ಮಾಡಿತು. ಈ ಟಾಟಾ ಪಂಚ್ (Tata Punch) ಮೈಕ್ರೋ ಎಸ್‌ಯುವಿಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಯಶಸ್ಸನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

2021ರ ಡಿಸೆಂಬರ್ ತಿಂಗಳಿನಲ್ಲಿ ಟಾಟಾ ಪಂಚ್ ಮಾದರಿಯ 8,008 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ, ಇದು ಅತ್ಯಂತ ಉತ್ತಮ ಮಾರಾಟ ಸಂಖ್ಯೆಯಾಗಿದೆ. 2021ರ ನವೆಂಬರ್ ತಿಂಗಳಿನಲ್ಲಿ ಟಾಟಾ ಪಂಚ್ ಮಾದರಿಯ 6,110 ಯೂನಿಟ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.31.06 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ಈ ವಾಹನವನ್ನು ಕೇವಲ ತಿಂಗಳುಗಳ ಹಿಂದೆ ಬಿಡುಗಡೆ ಮಾಡಲಾಗಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಮಾರಾಟದ ಹೋಲಿಕೆ ಇಲ್ಲ.

ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

ಈ ಮೈಕ್ರೋ-ಎಸ್‌ಯುವಿಯ ಮಾರಾಟವು ಮುಂಬರುವ ದಿನಗಳಲ್ಲಿ ಮತ್ತಷ್ಟು ಬೆಳೆಯುವ ನಿರೀಕ್ಷೆಯಿದೆ. ಈ ಟಾಟಾ ಪಂಚ್ ಮೈಕ್ರೋ ಎಸ್‌ಯುವಿಯ ಬೆಲೆಯ ಆರಂಭಿಕ ಬೆಲೆಯು ರೂ,5.49 ಲಕ್ಷವಾಗಿದೆ. ಈ ಪಂಚ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಮೈಕ್ರೋ ಎಸ್‌ಯುವಿಗಳಲ್ಲಿ ಒಂದಾಗಿದೆ.

ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

ಟಾಟಾ ಪಂಚ್ ಮಾದರಿಯು ನೂತನ ಫೀಚರ್ಸ್, ಬಜೆಟ್ ಬೆಲೆ ಮತ್ತು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಮೈಕ್ರೊ ಎಸ್‌ಯುವಿಯಾಗಿದೆ. ಇನ್ನು ಈ ಹೊಸ ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ಲಭ್ಯವಿದೆ. ಈ ಹೊಸ ಪಂಚ್ ಮೈಕ್ರೋ ಎಸ್‌ಯುವಿ ಮಾದರಿಗಳಿಗೆ ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಿಗೂ ಭರ್ಜರಿ ಪೈಪೋಟಿ ನೀಡುತ್ತಿದೆ.

ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

ಪಂಚ್ ಕಾರು ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಲಭ್ಯವಿದೆ. ಈ ಕಾರಿನಲ್ಲಿ 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

ಈ ಟಾಟಾ ಪಂಚ್ ಮೈಕ್ರೋ ಎಸ್‌ಯುವಿ ಮಾದರಿಯಲ್ಲೂ ಸಹ ಗರಿಷ್ಠ ಮಟ್ಟದ ಸುರಕ್ಷತಾ ರೇಟಿಂಗ್ಸ್ ಪಡೆದುಕೊಂಡಿದೆ. ಹೊಸ ಕಾರು ಮುಂಭಾಗದಲ್ಲಿ ಮಾತ್ರವಲ್ಲ ಹಿಂಭಾಗದಲ್ಲಿ ಮತ್ತು ಸೈಡ್ ಪ್ರೊಫೈಲ್‌‌ನಲ್ಲೂ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ, ಪಂಚ್ ಮೈಕ್ರೋ ಎಸ್‌ಯುವಿಯ ಪ್ಯೂರ್ ವೆರಿಯೆಂಟ್ ಆರಂಭಿಕ ಮಾದರಿಯಾಗಿ ಮಾರಾಟಗೊಳ್ಳಲಿದ್ದರೆ ಕ್ರಿಯೆಟಿವ್ ಮಾದರಿಯು ಟಾಪ್ ಎಂಡ್ ಮಾದರಿಯಾಗಿ ಮಾರಾಟವಾಗಲಿದೆ,

ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

ಈ ಕಾರಿನ ಬೆಸ್ ರೂಪಾಂತರದಲ್ಲಿಯು ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಿದೆ. ಈ ಮೈಕ್ರೋ ಎಸ್‌ಯುವಿಯ ಪ್ಯೂರ್ ರೂಪಂತರದಲ್ಲಿ ಕಂಪನಿಯು ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಸ್ಯಾವಿ ಕಂಟ್ರೋಲ್, ಆರ್‌ಪಿಎಎಸ್, ಸೆಂಟ್ರೇಲ್ ಲಾಕಿಂಗ್ ಜೊತೆ ಕೀ, ಐಎಸಿ ಮತ್ತು ಇಎಸ್ಎಸ್ ಟೆಕ್ನಾಲಜಿಯನ್ನು ಹೊಂದಿದೆ,

ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

ಇದರೊಂದಿಗೆ ಫ್ರಂಟ್ ಪವರ್ ವಿಂಡೋ, ಟಿಲ್ಟ್ ಸ್ಟೀರಿಂಗ್, 90 ಡಿಗ್ರಿ ಡೋರ್ ಓಪನ್, ರಿಯರ್ ಪ್ಲ್ಯಾಟ್ ಫ್ಲೊರ್, ಬ್ಲ್ಯಾಕ್ ಒಡಿಹೆಚ್, ಹ್ಯುಮಿನಿಟಿ ಕ್ರೊಮ್ ಲೈನ್, ಪೆಟೆಂಡ್ ಬಂಪರ್, ಡೋರ್, ವೀಲ್ಹ್ ಆರ್ಚ್ ಮತ್ತು ಸಿಲ್ ಕ್ಲಾಡಿಂಗ್ ಜೋಡಣೆ ಮಾಡಿದೆ.

ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

ಪಂಚ್ ಮೈಕ್ರೋ ಎಸ್‌ಯುವಿಯ ಹೈ ಎಂಡ್ ಮಾದರಿಯಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಆರ್16 ಡೈಮಂಡ್ ಕಟ್ ಅಲಾಯ್ ವ್ಹೀಲ್, ರೂಫ್ ರೈಲ್ಸ್, 7 ಇಂಚಿನ ಟಿಎಫ್‌ಟಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಹೆಡ್‌ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್, ಆಟೋ ಫೋಡ್ಲಿಂಗ್ ರಿಯರ್ ವ್ಯೂ ಮಿರರ್, ಆಟೋಮ್ಯಾಟಿಕ್ ಎಸಿ ಕಂಟ್ರೋಲ್ ಸಿಸ್ಟಂ, ಕೂಲ್ಡ್ ಗ್ಲೊ ಬಾಕ್ಸ್, ರಿಯರ್ ವೈಪರ್ ಪ್ಲಸ್ ವಾಷ್, ರಿಯರ್ ಡಿಫಾಗರ್, ಪೆಡಲ್ ಲ್ಯಾಂಪ್ಸ್, ಹಿಂಬದಿಯ ಆಸನದಲ್ಲಿ ಆರ್ಮ್ ರೆಸ್ಟ್ ಮತ್ತು ಲೆದರ್ ಕೊಟಿಂಗ್ ಹೊಂದಿರುವ ಸ್ಟೀರಿಂಗ್ ಮತ್ತು ಗೇರ್ ನಾಬ್ ನೀಡಲಾಗಿದೆ.

ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

ಇನ್ನು ಟಾಟಾ ಪಂಚ್ ಮೈಕ್ರೋ ಎಸ್‌ಯುವಿಯು ಟೊರಾರ್ನಾಡೊ ಬ್ಲ್ಯೂ, ಟೊಪಿಕಲ್ ಮಿಸ್ಟ್, ಡೇ ಟೋನಾ ಗ್ರೆ, ಮಿಟಿಯೊರ್ ಬ್ರೊನ್ಜ್, ಆಟೊಮಿಕ್ ಆರೇಂಜ್, ಆರ್ಕಸ್ ವೈಟ್ ಮತ್ತು ಕ್ಯಾಲಿಪ್ಸೊ ರೆಡ್ ಸೇರಿ ಪ್ರಮುಖ ಏಳು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಪಂಚ್ ಮಾದರಿಯು 3840 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1635 ಎಂಎಂ ಎತ್ತರದೊಂದಿಗೆ 2450 ಎಂಎಂ ವ್ಹೀಲ್ ಬೇಸ್ ಮತ್ತು 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಅನ್ನು ಹೊಂದಿದೆ.

ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

ಟಾಟಾ ಮೋಟಾರ್ಸ್ ತನ್ನ ಟಿಯಾಗೋ ಮತ್ತು ಟಿಗೊರ್ ಸಿಎನ್‌ಜಿ ಆವೃತ್ತಿಗಳು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಸಿಎನ್‌ಜಿ-ಸ್ಪೆಕ್ ಪಂಚ್ ಮೈಕ್ರೋ ಎಸ್‌ಯುವಿಯ ಸ್ಪೈ ಶಾಟ್‌ಗಳು ಇತ್ತೀಚೆಗೆ ಬಹಿರಂಗವಾಗಿತ್ತು. ಸಿಎನ್‌ಜಿ ರೂಪಾಂತರವನ್ನು ಸೇರಿಸುವುದರಿಂದ ಶ್ರೇಣಿಯನ್ನು ವಿಸ್ತರಿಸಲು ಮತ್ತು ಹೆಚ್ಚಿನ ಇಂಧನ ಉಳಿಸಲು ಬಯಸುವ ಗ್ರಾಹಕರನ್ನು ಆಕರ್ಷಿಸಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ.

ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

ಟಾಟಾ ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಅನ್ನು ಅನುಸರಿಸಿ ಅಲ್ಟ್ರೋಜ್ ಮತ್ತು ಪಂಚ್ ಕೂಡ ಶೀಘ್ರದಲ್ಲೇ ಇದೇ ರೀತಿಯ ಸಿಎನ್‌ಜಿ ರೂಪಾಂತರವನ್ನು ಪಡೆಯುತ್ತದೆ. ಸಾಮಾನ್ಯ ಪೆಟ್ರೋಲ್ ರೂಪಾಂತರಕ್ಕೆ ಹೋಲಿಸಿದರೆ, ಸಿಎನ್‌ಜಿಯಲ್ಲಿನ ಪವರ್ ಮತ್ತು ಟಾರ್ಕ್ ಅಂಕಿಅಂಶಗಳು ಸ್ವಲ್ಪ ಕಡಿಮೆಯಾಗಬಹುದು ಮತ್ತು ಇದು ಐದು-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಲಭ್ಯವಿರಬಹುದು.

ಡಿಸೆಂಬರ್ ತಿಂಗಳಿನಲ್ಲಿ ದಾಖಲೆ ಮಟ್ಟದ ಮಾರಾಟ ಕಂಡ Tata Punch

ಬ್ಯಾಡ್ಜ್ ಸೇರ್ಪಡೆಗಳನ್ನು ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಗೆ ಹೋಲಿಸಿದರೆ ಪಂಚ್ ಸಿಎನ್‌ಜಿ ಮಾದರಿಯಲ್ಲಿ ಯಾವುದೇ ಗಮನಾರ್ಹ ಬಾಹ್ಯ ಬದಲಾವಣೆಗಳನ್ನು ನಾವು ನಿರೀಕ್ಷಿಸುವುದಿಲ್ಲ. ಟಾಟಾ ಪಂಚ್ ಸಿಎನ್‌ಜಿಯ ಕಾರು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Tata motors sold over 8000 of punch in december 2021 details
Story first published: Monday, January 10, 2022, 10:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X