Just In
Don't Miss!
- News
ಯುಎಪಿಎ ಅಡಿ ಯಾವುದೇ ವಕ್ತಿಯನ್ನು ವಿಚಾರಣೆಗೊಳಪಡಿಸಬಹುದು-ಹೈಕೋರ್ಟ್ ಆದೇಶ
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Sports
ICC Womens ODI Ranking: ಅಗ್ರ 10ರೊಳಗೆ ಸ್ಮೃತಿ ಮಂಧಾನ, 11ನೇ ಸ್ಥಾನದಲ್ಲಿ ರಾಜೇಶ್ವರಿ
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಬಿಡುಗಡೆಗೆ ಸಿದ್ಧವಾಗಿವೆ ಟಾಟಾ ಮೋಟಾರ್ಸ್‌ನ 5 ಹೊಸ ಎಸ್‌ಯುವಿ ಮಾದರಿಗಳು!
ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್(Tata Motors) ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ತಿಂಗಳಿನಿಂದ ತಿಂಗಳಿಗೆ ಹೆಚ್ಚಿನ ಬೆಳವಣಿಗೆ ಸಾಧಿಸುತ್ತಿದ್ದು, ಗ್ರಾಹಕರಿಗಾಗಿ ಹಲವು ಆಸಕ್ತಿದಾಯಕ ಮಾದರಿಗಳನ್ನು ಹೊರತರುವ ಮೂಲಕ ಕಂಪನಿಯ ಮಾರಾಟವೂ ಹೆಚ್ಚಾಗಿದೆ.

ಟಾಟಾ ಮೋಟಾರ್ಸ್ ಈಗ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಟಾಟಾ ಲೈನಪ್‌ನಲ್ಲಿ ಇನ್ನೂ ಹಲವು ಮಾದರಿಗಳು ಬಿಡುಗಡೆಗೆ ಸಿದ್ದವಾಗಿದ್ದು, ಕಂಪನಿಯು 5 ಹೊಸ SUV ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ.

1. ಟಾಟಾ ಪಂಚ್ ಟರ್ಬೊ
ಟಾಟಾ ಮೋಟಾರ್ಸ್ ಕಳೆದ ವರ್ಷ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಮೈಕ್ರೋ-ಎಸ್‌ಯುವಿಯನ್ನು ಬಿಡುಗಡೆ ಮಾಡಿತ್ತು. ಈ ಮಾದರಿ ಬಹುಬೇಗ ಖರೀದಿದಾರರಲ್ಲಿ ಜನಪ್ರಿಯವಾಯಿತು. ಈ ಮೈಕ್ರೋ SUV 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ. ಟಾಟಾ ಪಂಚ್‌ನ ಒಂದು ನ್ಯೂನತೆಯೆಂದರೆ ಅದರ ಎಂಜಿನ್. ಇದು 1.2L, ಮೂರು-ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದೆ.

ಹಾಗಾಗಿ ಟಾಟಾ ಮೋಟಾರ್ಸ್ ಈ ಸಮಸ್ಯೆಯನ್ನು ಬಗೆಹರಿಸಲು ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಈ ಮೈಕ್ರೋ-ಎಸ್‌ಯುವಿಯನ್ನು ಹೆಚ್ಚು ಶಕ್ತಿಶಾಲಿ ಟರ್ಬೋಚಾರ್ಜ್ಡ್ ಆವೃತ್ತಿಯಲ್ಲಿ ನೀಡಲು ಯೋಜಿಸಿದೆ. ಇದು ಟಾಟಾ ಆಲ್ಟ್ರೋಝ್ ಐ-ಟರ್ಬೊದಲ್ಲಿ ಕಂಡುಬರುವ ಅದೇ ಟರ್ಬೊ ಎಂಜಿನ್ ಅನ್ನು ಬಳಸಲಿದ್ದು, 110 bh ಪವರ್ ಮತ್ತು 140 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

2. ಟಾಟಾ ನೆಕ್ಸಾನ್ ಇವಿ
ಟಾಟಾ ನೆಕ್ಸಾನ್ EV ಅನ್ನು ಕೆಲವು ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಈಗ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ SUV ಆಗಿ ಗುರ್ತಿಸಿಕೊಂಡಿದೆ. ಈ ಸ್ಥಾನವನ್ನು ಉಳಿಸಿಕೊಳ್ಳಲು, ಟಾಟಾ ಮೋಟಾರ್ಸ್ ಈಗ EVಗೆ ಕೆಲವು ಬದಲಾವಣೆಗಳನ್ನು ಮಾಡುವ ಕೆಲಸ ಮಾಡುತ್ತಿದ್ದು, ಈ ಕಾರನ್ನು 400 ಕಿಮೀ ವ್ಯಾಪ್ತಿಯೊಂದಿಗೆ ನೀಡಬಹುದು.

3. ಟಾಟಾ ಹ್ಯಾರಿಯರ್ ಮತ್ತು ಸಫಾರಿ ಪೆಟ್ರೋಲ್
ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎರಡೂ ಆಯಾ ವಿಭಾಗಗಳಲ್ಲಿ ಜನಪ್ರಿಯ SUVಗಳಾಗಿವೆ. ನಿಮಗೆ ತಿಳಿದಿರುವಂತೆ ಟಾಟಾ ಸಫಾರಿಯು 5 ಆಸನಗಳ ಟಾಟಾ ಹ್ಯಾರಿಯರ್ ಎಸ್‌ಯುವಿಯನ್ನು ಆಧರಿಸಿದೆ. ಎರಡೂ SUV ಗಳನ್ನು ಪ್ರಸ್ತುತ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ. ಆದರೆ ಶೀಘ್ರದಲ್ಲೇ ಕಂಪನಿಯು ಅವುಗಳನ್ನು ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆ ಮಾಡಲಿದೆ.

ಈ ಎಂಜಿನ್ ಹೊಚ್ಚ ಹೊಸ 1.5 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಗಿರಬಹುದು. ಇದು ಕಂಪನಿಯು ಟಾಟಾ ನೆಕ್ಸಾನ್‌ನಲ್ಲಿ ಬಳಸುವ 1.2 ಲೀಟರ್ ಟರ್ಬೊ ಪೆಟ್ರೋಲ್ ಆವೃತ್ತಿಯ ದೊಡ್ಡ ಆವೃತ್ತಿಯಾಗಲಿದೆ. ಹೊಸ ಎಂಜಿನ್ ಎರಡೂ SUV ಗಳಲ್ಲಿ 160 Bhp ಶಕ್ತಿಯನ್ನು ಉತ್ಪಾದಿಸುವ ನಿರೀಕ್ಷೆಯಿದೆ.

4. ಟಾಟಾ ಕರ್ವ್
ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಎರಡನೇ ತಲೆಮಾರಿನ ಎಲೆಕ್ಟ್ರಿಕ್ ಕಾರಿನ ಪರಿಕಲ್ಪನೆಯನ್ನು ಪರಿಚಯಿಸಿತು. ಈ ಕಾನ್ಸೆಪ್ಟ್ ಮಾದರಿಯನ್ನು Tata Curvv ಎಂದು ಪರಿಚಯಿಸಲಾಗಿದೆ. ಇದರ ಬಾಹ್ಯ ವಿನ್ಯಾಸವು ಕೂಪ್‌ನಂತಿದೆ. ಟಾಟಾ Curvv ನ ಉತ್ಪಾದನಾ ಆವೃತ್ತಿಯನ್ನು 2024 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಬಹುದು.

5. ಟಾಟಾ ಸಿಯೆರಾ EV
ಟಾಟಾ ಮೋಟಾರ್ಸ್ ಈ ಸಿಯೆರಾ ಇವಿ ಕಾನ್ಸೆಪ್ಟ್ ಅನ್ನು 2020 ರಲ್ಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿತು. ಈ ಪರಿಕಲ್ಪನೆಯು ಅದರ ಹೆಸರಿನಿಂದಾಗಿ ಹೆಚ್ಚಿನ ಗಮನ ಸೆಳೆದಿದೆ. ಈ ಕಾನ್ಸೆಪ್ಟ್‌ಗಾಗಿ ಟಾಟಾ ಮೋಟಾರ್ಸ್ ಮೂಲ ಟಾಟಾ ಸಿಯೆರಾ ಎಸ್‌ಯುವಿಯಿಂದ ಸ್ಫೂರ್ತಿ ಪಡೆದಿದೆ. ಕೆಲವು ವರದಿಗಳ ಪ್ರಕಾರ ಇದನ್ನು ಎಲೆಕ್ಟ್ರಿಕ್ ಕಾರ್ ಆಗಿ ಬಿಡುಗಡೆ ಮಾಡಬಹುದು.

160 ಹೊಸ ಸರ್ವಿಸ್ ಸೆಂಟರ್‌ಗಳಿಗೆ ಚಾಲನೆ
ಗ್ರಾಹಕರ ಸೇವೆಗಳ ಕುರಿತಂತೆ ಗ್ರಾಹಕರಿಂದ ಅಸಮಾಧಾನದ ಬಗೆಗೆ ಗಮನಹರಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಈ ವರ್ಷಾಂತ್ಯಕ್ಕೆ ಕಂಪನಿಯು ತನ್ನ ಅಧಿಕೃತ ಸೇವಾ ಕೇಂದ್ರಗಳ ಸಂಖ್ಯೆಯನ್ನು 705ಕ್ಕೆ ಹೆಚ್ಚಿಸುವ ಗುರಿಹೊಂದಿದೆ.

ಇದೀಗ ಹೊಸದಾಗಿ 160 ಅಧಿಕೃತ ಸೇವಾ ಕೇಂದ್ರಗಳೊಂದಿಗೆ 485 ನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ವಾಹನಗಳು ಹೆಚ್ಚಿದಂತೆ ಅದಕ್ಕೆ ಪೂರಕವಾಗಿ ಸೇವಾ ಕೇಂದ್ರ ಕಾರ್ಯಕ್ಷಮತೆಯನ್ನು ಸುಧಾರಿಸುತ್ತಿದೆ.

ಇದರ ಜೊತೆಗೆ ಕಂಪನಿಯು ಇಜೆಡ್‌ಸರ್ವ್(EzServe) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದು, ಇದು ವಿಶಿಷ್ಟವಾದ ಗ್ರಾಹಕ ಸ್ನೇಹಿ ದ್ವಿಚಕ್ರ ವಾಹನ ಆಧಾರಿತ ಸೇವೆಯಾಗಿದೆ. ಇದು ಗ್ರಾಹಕರಿಗೆ ಅವರ ಮನೆ ಬಾಗಿಲಿಗೆ ಸುರಕ್ಷಿತ ಮತ್ತು ತೊಂದರೆ-ಮುಕ್ತ ಸೇವಾ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ.