ಇದೇ ತಿಂಗಳು 29ರಂದು ಅನಾವರಣಗೊಳ್ಳಲಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಇವಿ ಕಾರು

ಟಾಟಾ ಮೋಟಾರ್ಸ್ ಕಂಪನಿಯು ಕಳೆದ ವಾರವಷ್ಟೇ ಕರ್ವ್ ಕಾನ್ಸೆಪ್ಟ್ ಇವಿ ಕಾರು ಮಾದರಿಯನ್ನು ಅನಾವರಣಗೊಳಿಸಿ ಇದೀಗ ಮತ್ತೊಂದು ಹೊಸ ಇವಿ ಕಾರು ಮಾದರಿಯ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಬಹುನೀರಿಕ್ಷಿತ ಆಲ್‌ಟ್ರೋಜ್ ಇವಿ ಅಥವಾ ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

ಇದೇ ತಿಂಗಳು 29ರಂದು ಅನಾವರಣಗೊಳ್ಳಲಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಇವಿ ಕಾರು

ಕರ್ವ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರನ್ನು ಮುಂಬರುವ 2024ರಲ್ಲಿ ಬಿಡುಗಡೆಯ ಸುಳಿವು ನೀಡಿದೆ. ಹೀಗಾಗಿ ಮುಂಬರುವ ಇವಿ ಮಾದರಿಯ ಕುರಿತು ಕುತೂಹಲ ಹುಟ್ಟುಹಾಕಿರುವ ಟಾಟಾ ಕಂಪನಿಯು ಆಲ್‌ಟ್ರೋಜ್ ಇವಿ ಅನಾವರಣಗೊಳಿಸಲಿದೆಯಾ ಅಥವಾ ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಿದೆಯಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.

ಇದೇ ತಿಂಗಳು 29ರಂದು ಅನಾವರಣಗೊಳ್ಳಲಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಇವಿ ಕಾರು

ಆದರೆ ಹೊಸ ಕಾರಿನ ಕುರಿತಾದ ಕುತೂಲದ ಪ್ರಶ್ನೆಗೆ ಏಪ್ರಿಲ್ 29ರಂದೇ ಉತ್ತರ ಸಿಗಲಿದ್ದು, ಕೆಲವು ಮಾಹಿತಿಗಳ ಪ್ರಕಾರ ಸದ್ಯಕ್ಕೆ ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಮಾದರಿಯು ಬಿಡುಗಡೆಯಾಗಬಹುದಾಗಿದ್ದು, ತದನಂತರವಷ್ಟೇ ಆಲ್‌ಟ್ರೊಜ್ ಇವಿ ಅನಾವರಣವಾಗಲಿದೆ ಎನ್ನಲಾಗಿದೆ.

ಇದೇ ತಿಂಗಳು 29ರಂದು ಅನಾವರಣಗೊಳ್ಳಲಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಇವಿ ಕಾರು

ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ಕಾರು ಮಾರಾಟದಲ್ಲಿ ಸಾಕಷ್ಟು ಬದಲಾವಣೆ ಪರಿಚಯಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಎಲೆಕ್ಟ್ರಿಕ್ ಕಾರು ಮಾರಾಟದಲ್ಲೂ ಮುಂಚೂಣಿ ಸಾಧಿಸುತ್ತಿದೆ. ಕಂಪನಿಯು ನೆಕ್ಸಾನ್ ಎಲೆಕ್ಟ್ರಿಕ್ ಮತ್ತು ಟಿಗೋರ್ ಎಲೆಕ್ಟ್ರಿಕ್ ಕಾರುಗಳ ಸದ್ಯ ಇವಿ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಹೊಸ ಆಲ್‌ಟ್ರೊಜ್ ಇವಿ ಕೂಡಾ ಭರ್ಜರಿ ಬೇಡಿಕೆ ತಂದುಕೊಡುವ ನೀರಿಕ್ಷೆಗಳಿವೆ.

ಇದೇ ತಿಂಗಳು 29ರಂದು ಅನಾವರಣಗೊಳ್ಳಲಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಇವಿ ಕಾರು

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಕಾರು ಮಾದರಿಯೊಂದಿಗೆ ಹಲವಾರು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ ಆಲ್‌ಟ್ರೊಜ್ ಕಾರು ಕೂಡಾ ಉತ್ತಮ ಬೇಡಿಕೆ ಪಡೆದುಕೊಳ್ಳಲಿದೆ.

ನೆಕ್ಸಾನ್ ಇವಿ ಮತ್ತು ಟಿಗೋರ್ ಇವಿ ಮೂಲಕ ಗ್ರಾಹಕರ ಗರಿಷ್ಠ ಬೇಡಿಕೆಗಳನ್ನು ಪೂರೈಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಕಾರುಗಳಲ್ಲಿ ಇನ್ನು ಕೆಲವು ಬದಲಾವಣೆಗಳನ್ನು ಪರಿಚಯಿಸಲು ಸಿದ್ದವಾಗಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ ಆಲ್‌ಟ್ರೊಜ್ ಇವಿಯಲ್ಲಿ ಪ್ರತಿ ಚಾರ್ಜ್‌ಗೆ 400 ಕಿ.ಮೀ ಗಿಂತಲೂ ಅಧಿಕ ಮೈಲೇಜ್ ಹೊಂದಿರುವ ಬ್ಯಾಟರಿ ಪ್ಯಾಕ್ ನೀಡಲು ನಿರ್ಧರಿಸಿದೆ.

ಇದೇ ತಿಂಗಳು 29ರಂದು ಅನಾವರಣಗೊಳ್ಳಲಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಇವಿ ಕಾರು

ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ಇವಿ ಕಾರುಗಳಿಗಾಗಿ ಪ್ರಸ್ತುತ ಬಳಕೆಯಲ್ಲಿರುವ ಬ್ಯಾಟರಿ ರೇಂಜ್‌ಗಿಂತಲೂ ಶೇ.20 ರಿಂದ ಶೇ.40 ರಷ್ಟು ಸುಧಾರಣೆ ಕಂಡಿರುವ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲು ನಿರ್ಧರಿಸಿದ್ದು, ಆಲ್‌ಟ್ರೊಜ್ ಇವಿ ಕಾರು ಸಹ ಸರಾಸರಿಯಾಗಿ ಪ್ರತಿ ಚಾರ್ಜ್‌ಗೆ 400 ಕಿ.ಮೀ ಗಿಂತಲೂ ಮೈಲೇಜ್ ನೀಡುವ ಬ್ಯಾಟರಿ ಜೋಡಣೆ ಹೊಂದುವುದು ಸ್ಪಷ್ಟವಾಗಿದೆ.

ಇದೇ ತಿಂಗಳು 29ರಂದು ಅನಾವರಣಗೊಳ್ಳಲಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಇವಿ ಕಾರು

ಹೊಸ ಕಾರು ಕೇಂದ್ರ ಸರ್ಕಾರದ ಸಬ್ಸಡಿಯೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.10 ಲಕ್ಷದಿಂದ ರೂ. 13 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ನೀರಿಕ್ಷೆಗಳಿದ್ದು, ಸಾಮಾನ್ಯ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಮತ್ತು ಸುರಕ್ಷಾ ಸೌಲಭ್ಯಗಳು ಇವಿ ಮಾದರಿಯಲ್ಲಿವೆ.

ಇದೇ ತಿಂಗಳು 29ರಂದು ಅನಾವರಣಗೊಳ್ಳಲಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಇವಿ ಕಾರು

ಇನ್ನು ನೆಕ್ಸಾನ್ ಇವಿ ಕಾರಿನಲ್ಲಿ ಸದ್ಯ ಟಾಟಾ ಕಂಪನಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸುವ 30.2kWh ಬ್ಯಾಟರಿ ಜೋಡಣೆ ಮಾಡಿ ಮಾರಾಟಗೊಳಿಸುತ್ತಿದ್ದು, ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಹೊಸ ಬ್ಯಾಟರಿ ಪ್ಯಾಕ್ ಹೊಂದಿರುವ ನೆಕ್ಸಾನ್ ಇವಿ ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಮೈಲೇಜ್ ನೀಡುವುದರ ಜೊತೆಗೆ ಅತಿ ಕಡಿಮೆ ಅವಧಿಯಲ್ಲಿ ಗರಿಷ್ಠ ಚಾರ್ಜ್ ಆಗುವ ವೈಶಿಷ್ಟ್ಯತೆ ಹೊಂದಿರಲಿದೆ.

ಇದೇ ತಿಂಗಳು 29ರಂದು ಅನಾವರಣಗೊಳ್ಳಲಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಇವಿ ಕಾರು

ಸದ್ಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಾದರಿಯು ಎಕ್ಸ್‌ಎಂ, ಎಕ್ಸ್‌ಝಡ್ ಪ್ಲಸ್, ಎಕ್ಸ್‌ಝಡ್‍ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್‌ಗಳಿವೆ. 2022 ಆವೃತ್ತಿಯು 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಬಹುದಾಗಿದ್ದು, ಮೈಲೇಜ್ ರೇಂಜ್ ಪ್ರಮಾಣವು ಪ್ರತಿ ಚಾರ್ಜ್ 400 ಕಿ.ಮೀ ಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಇದೇ ತಿಂಗಳು 29ರಂದು ಅನಾವರಣಗೊಳ್ಳಲಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಇವಿ ಕಾರು

ಜೊತೆಗೆ ನೆಕ್ಸಾನ್ ಇವಿ ಕಾರಿನ ಎಲೆಕ್ಟ್ರಿಕ್ ಮೋಟಾರ್ ಉನ್ನತೀಕರಿಸುವ ಮೂಲಕ ಕಾರಿನ ಪರ್ಫಾಮೆನ್ಸ್ ಹೆಚ್ಚಿಸಲಾಗುತ್ತಿದ್ದು, ಉನ್ನತೀಕರಿಸಿದ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ 7 ಬಿಎಚ್‌ಪಿ ಹೆಚ್ಚುವರಿ ಶಕ್ತಿ ಪೂರೈಕೆಯೊಂದಿಗೆ ಕಾರಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕಾರಿಯಾಗಲಿದೆ.

ಇದೇ ತಿಂಗಳು 29ರಂದು ಅನಾವರಣಗೊಳ್ಳಲಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಇವಿ ಕಾರು

ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ನೆಕ್ಸಾನ್ ಇವಿ ಮಾದರಿಯು 127 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಸುಧಾರಿತ ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲಾಗುತ್ತಿರುವ ಹೊಸ ಮಾದರಿಯು ಪ್ರಸ್ತುತ ಮಾದರಿಯಲ್ಲಿ ಬಳಕೆ ಮಾಡಲಾಗುತ್ತಿರುವ 95kW ಎಲೆಕ್ಟ್ರಿಕ್ ಮೋಟಾರ್ ಮೂಲಕವೇ 134 ಬಿಎಚ್‌ಪಿ ಉತ್ಪಾದನಾ ವೈಶಿಷ್ಟ್ಯತೆ ಹೊಂದಿರಲಿದೆ.

ಇದೇ ತಿಂಗಳು 29ರಂದು ಅನಾವರಣಗೊಳ್ಳಲಿದೆ ಟಾಟಾ ನಿರ್ಮಾಣದ ಮತ್ತೊಂದು ಹೊಸ ಇವಿ ಕಾರು

ಇದರೊಂದಿಗೆ ಹೊಸ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪ್ರಮುಖ ಸೇಫ್ಟಿ ಫೀಚರ್ಸ್‌ಗಳನ್ನು ಉನ್ನತೀಕರಿಸುತ್ತಿದ್ದು, ಹೊಸ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ ಆಲ್ ವ್ಹೀಲ್ ಡಿಸ್ಕ್ ಸೇರಿದಂತೆ ಕೆಲವು ಹೊಸ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಿದೆ.

Most Read Articles

Kannada
English summary
Tata motors to launch new ev car on april 29th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X