ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ ತನ್ನ ಹೊಸ ತಲೆಮಾರಿನ ಪಿಕ್ಅಪ್ ಸರಣಿ ವಾಣಿಜ್ಯ ವಾಹನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದು, ಹೊಸ ವೈಶಿಷ್ಟ್ಯತೆಗಳನ್ನು ಹೊಂದಿರುವ ನವೀಕೃತ ಮಾದರಿಗಳ ಟೀಸರ್ ಪ್ರಕಟಿಸಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ಪ್ರಯಾಣಿಕರ ಕಾರು ಮಾರಾಟದಲ್ಲಿ ಮಹತ್ವದ ಬದಲಾವಣೆಯನ್ನು ಅಳವಡಿಸಿಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ವಾಣಿಜ್ಯ ವಾಹನಗಳ ನಿರ್ಮಾಣದಲ್ಲೂ ಹಂತ-ಹಂತವಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ತಂತ್ರಜ್ಞಾನ ಬಳಕೆಯೊಂದಿಗೆ ಉತ್ಪಾದನಾ ಗುಣಮಟ್ಟವನ್ನು ಹೆಚ್ಚಿಸುತ್ತಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ಹೊಸ ಟೀಸರ್ ಮೂಲಕ ಮಾರುಕಟ್ಟೆಯಲ್ಲಿರುವ ಏಸ್ ಗೋಲ್ಡ್, ಇಂಟ್ರಾ ವಿ-10, ಇಂಟ್ರಾ ವಿ-30 ಮತ್ತು ಯೋಧಾ ಪಿಕ್ಅಪ್ ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದ್ದು, ಹೊಸ ವಾಹನಗಳು ಸುಧಾರಿತ ವಿನ್ಯಾಸಗಳು, ಉನ್ನತೀಕರಿಸಿದ ವೈಶಿಷ್ಟ್ಯಗಳು ಮತ್ತು ನವೀಕರಿಸಿದ ತಂತ್ರಜ್ಞಾನದೊಂದಿಗೆ ಬರುವ ನಿರೀಕ್ಷೆಯಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ಯೋಧಾ ಪಿಕ್ಅಪ್‌ನಲ್ಲಿ ಕಂಪನಿಯು ಹೊಸ ಹೆಡ್‌ಲ್ಯಾಂಪ್ ವಿನ್ಯಾಸದೊಂದಿಗೆ ಎಲ್ಇಡಿ ಸೌಲಭ್ಯವನ್ನು ಪಡೆದುಕೊಳ್ಳಲಿದ್ದು, ಮರುವಿನ್ಯಾಸಗೊಳಿಸಲಾದ ಮುಂಭಾಗದ ಗ್ರಿಲ್ ಮತ್ತು ಮರುವಿನ್ಯಾಸಗೊಳಿಸಲಾದ ಬಂಪರ್‌ ಹೊಸ ವಾಹನದ ಹೊರನೋಟವನ್ನು ಉತ್ತಮವಾಗಿಸಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ಸ್ಪೋರ್ಟಿ ಲುಕ್‌ ಹೆಚ್ಚಿಸಲು ಯೋಧಾ ಪಿಕ್ಅಪ್ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‌ನೊಂದಿಗೆ ಹೊಸ ಬಾಡಿ ಡಿಕಾಲ್‌ಗಳನ್ನು ನೀಡಲಾಗಿದ್ದು, ಯೋಧಾ ಮಾದರಿಯಲ್ಲಿ ಮಾತ್ರ ಇತರೆ ಮೂರು ಮಾದರಿಗಳಲ್ಲೂ ಹೊರಭಾಗದಲ್ಲಿ ಹೆಚ್ಚಿನ ಬದಲಾವಣೆಗಳಾಗಿವೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ಟಾಟಾ ಕಂಪನಿಯು ಹೊಸ ಪಿಕ್ಅಪ್‌ನಲ್ಲಿ ಕ್ಯಾಬಿನ್ ವಿನ್ಯಾಸವನ್ನು ಸಹ ಸಾಕಷ್ಟು ಬದಲಾವಣೆಗೊಳಿಸಿದ್ದು, ಇದು ಪ್ರಯಾಣಿಕ ಕಾರು ಮಾದರಿಗಳಲ್ಲಿನ ಇನ್-ಲೈನ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳಿವೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ಹೊಸ ಸರಣಿ ವಾಹನಗಳನ್ನು ಕಂಪನಿಯು ಪರಿಷ್ಕೃತ ಡ್ಯಾಶ್‌ಬೋರ್ಡ್ ವಿನ್ಯಾಸ, ಹೊಸ ವಿನ್ಯಾಸದ ಆಸನಗಳು, ಸೌಕರ್ಯ ಮತ್ತು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಇದರೊಂದಿಗೆ ಹೊಸ ಪಿಕ್ಅಪ್ ಟ್ರಕ್‌ ಮಾದರಿಯು ಈ ಹಿಂದಿನ ಮಾದರಿಗಿಂತಲೂ ತುಸು ದುಬಾರಿ ಬೆಲೆ ಸಹ ಪಡೆದುಕೊಳ್ಳಬಹುದಾಗಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ಮಾಹಿತಿಗಳ ಪ್ರಕಾರ ಟಾಟಾ ಕಂಪನಿಯು ಹೊಸ ವಾಹನಗಳಲ್ಲಿ ಎಲೆಕ್ಟ್ರಿಕ್ ಪವರ್ ಅಸಿಸ್ಟೆಡ್ ಸ್ಟೀರಿಂಗ್, ಪವರ್ ಸ್ಟೀರಿಂಗ್, ರಿಯರ್ ಸ್ಲೈಡಿಂಗ್ ವಿಂಡೋಸ್, ಮೊಬೈಲ್ ಚಾರ್ಜರ್, ಬಕೆಟ್ ಸೀಟ್ ವಿತ್ ಹೆಡ್‌ರೆಸ್ಟ್, ಎಂಐಡಿ, ವೈಡ್ ಒಆರ್‌ವಿಎಂಗಳು ಮತ್ತು ರಿವರ್ಸ್ ಪಾರ್ಕಿಂಗ್ ಅಸಿಸ್ಟ್‌ನಂತಹ ವೈಶಿಷ್ಟ್ಯಗಳನ್ನು ನೀಡಲಿದೆ ಎನ್ನಲಾಗಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ಹೊಸ ಪಿಕ್ಅಪ್ ಟ್ರಕ್‌ಗಳೊಂದಿಗೆ ಟಾಟಾ ಮೋಟಾರ್ಸ್ ಹಲವಾರು ರಿಯಾಯಿತಿ ಕೊಡುಗೆಗಳು ಮತ್ತು ಸುಲಭವಾದ ಹಣಕಾಸು ಆಯ್ಕೆಗಳನ್ನು ಸಹ ನೀಡಲಿದ್ದು, ಕಂಪನಿಯು ಹೊಸ ಪಿಕ್ಅಪ್ ಶ್ರೇಣಿಯ ಗ್ರಾಹಕರಿಗೆ ಕಡಿಮೆ ದರಗಳಲ್ಲಿ ಇಎಂಐ ಆಯ್ಕೆ, ಉಚಿತವಾಗಿ ಒಂದು ವರ್ಷದ ವಿಮೆ ಮತ್ತು ಸುಲಭವಾದ ಸಾಲದ ಆಯ್ಕೆಯೊಂದಿಗೆ ಶೇ. 100 ರಷ್ಟು ಹಣಕಾಸು ಆಯ್ಕೆಯನ್ನು ಸಹ ನೀಡುತ್ತದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ಇದರೊಂದಿಗೆ ಹೊಸ ಟಾಟಾ ಪಿಕ್ಅಪ್‌ಗಳಲ್ಲಿ ಉತ್ತಮ ಎಂಜಿನ್ ಕಾರ್ಯಕ್ಷಮತೆ ಮತ್ತು ಸುಧಾರಿತ ಮೈಲೇಜ್ ಒದಗಿಸುವ ಭರವಸೆ ನೀಡಿದ್ದು, ಹೊಸ ಮಾದರಿಗಳೊಂದಿಗೆ ವಾಣಿಜ್ಯ ವಾಹನದಲ್ಲಿ ತನ್ನ ಪಾಲು ಹೆಚ್ಚಿಸುವ ನೀರಿಕ್ಷೆಯಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ವಾಣಿಜ್ಯ ವಾಹನ ವಿಭಾಗದಲ್ಲಿ ಸದ್ಯ ಟಾಟಾ ಮೋಟಾರ್ಸ್ ಕಂಪನಿಯು ಶೇಕಡಾ 40 ರಷ್ಟು ಪಾಲನ್ನು ಹೊಂದಿದ್ದು, ವಾಣಿಜ್ಯ ವಾಹನ ವಿಭಾಗದಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ದೊಡ್ಡ ಮತ್ತು ಮಧ್ಯಮ ಗಾತ್ರದ ಟ್ರಕ್‌ಗಳು ಮತ್ತು ಪಿಕಪ್ ವಾಹನಗಳನ್ನು ಮಾರಾಟ ಮಾಡುತ್ತಿದೆ.

ನ್ಯೂ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಜ್ಜಾದ ಟಾಟಾ ಹೊಸ ಪಿಕ್ಅಪ್ ಶ್ರೇಣಿಗಳು

ಟಾಟಾ ಪಿಕ್ಅಪ್ ವಾಹನಗಳು ಪ್ರಯಾಣಿಕ ಮತ್ತು ಸರಕುಗಳ ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ಉತ್ತಮ ದೃಢತೆ, ಸುಧಾರಿತ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಮೈಲೇಜ್‌ಗೆ ಹೆಸರುವಾಸಿಯಾಗಿವೆ.

Most Read Articles

Kannada
English summary
Tata motors to launch new range of pickup trucks in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X