ಫೋರ್ಡ್ ಕಾರು ಘಟಕ ಖರೀದಿಯೊಂದಿಗೆ ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಫೋರ್ಡ್ ಇಂಡಿಯಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಾರು ಉತ್ಪಾದನೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದ ನಂತರ ತನ್ನ ಬೃಹತ್ ಕಾರು ಉತ್ಪಾದನಾ ಘಟಕವನ್ನು ಟಾಟಾ ಮೋಟಾರ್ಸ್ ಕಂಪನಿಗೆ ಮಾರಾಟ ಮಾಡಲು ನಿರ್ಧರಿಸಿದ್ದು, ಮಾರಾಟ ಪ್ರಕ್ರಿಯೆ ಸದ್ಯ ಅಂತಿಮ ಹಂತದಲ್ಲಿದೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಗುಜುರಾತಿನ ಸನಂದ್‌ನಲ್ಲಿರುವ ಕಾರು ಉತ್ಪಾದನಾ ಘಟಕವನ್ನು ದೇಶದ ಮುಂಚೂಣಿ ಕಾರು ಉತ್ಪಾದನಾ ಕಂಪನಿಯಾದ ಟಾಟಾ ಮೋಟಾರ್ಸ್ ಖರೀದಿಗೆ ಉತ್ಸುಕವಾಗಿದ್ದು, ಈಗಾಗಲೇ ಸನಂದ್‌ಯಲ್ಲಿಯೇ ಕಾರು ಉತ್ಪಾದನಾ ಘಟಕವನ್ನು ಹೊಂದಿರುವ ಟಾಟಾ ಮೋಟಾರ್ಸ್ ಕಂಪನಿಗೆ ಹೊಸ ಘಟಕವನ್ನು ಸನೀಹದಲ್ಲಿಯೇ ಇರುವುದರಿಂದ ಕಾರ್ಯಾಚರಣೆಗೆ ಸುಲಭವಾಗಿಲಿದೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಫೋರ್ಡ್ ಕಾರು ಉತ್ಪಾದನಾ ಘಟಕದ ಮಾಲೀಕತ್ವ ಬದಲಾವಣೆಗಾಗಿ ಈಗಾಗಲೇ ಎರಡು ಕಂಪನಿಗಳು ಒಪ್ಪಿಗೆ ಪತ್ರ ಸಲ್ಲಿಸಿದ್ದು, ಗುಜರಾತ್ ರಾಜ್ಯ ಸರ್ಕಾರ ರಚಿಸಿರುವ ಹೈ ಪವರ್ ಸಮಿತಿಯು ಹೊಸ ಪ್ರಸ್ತಾವನೆಗೆ ಶೀಘ್ರವೇ ಅನುಮೋದನೆ ನೀಡುವ ಸಾಧ್ಯತೆಗಳಿವೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಹೊಸ ಘಟಕದ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ಭವಿಷ್ಯದ ವಾಹನ ಮಾದರಿಗಳಾದ ಇವಿ ಉದ್ಯಮದ ಮೇಲೆ ಗಮನಹರಿಸಲು ನಿರ್ಧರಿಸಿದ್ದು, ಹೊಸ ಕಾರು ಉತ್ಪಾದನಾ ಉನ್ನತೀಕರಣಕ್ಕಾಗಿ ಸುಮಾರು ರೂ. 2 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ಯೋಜನೆ ಹೊಂದಿದೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಹೊಸ ಯೋಜನೆಗಾಗಿ ಈಗಾಗಲೇ ರೂಪರೇಷಗಳನ್ನು ಸಿದ್ದಪಡಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹಳೆಯ ಉದ್ಯೋಗಿಗಳಿಗೂ ಸಿಹಿಸುದ್ದಿ ನೀಡಿದ್ದು, ಅಸ್ತಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯಾವುದೇ ಉದ್ಯೋಗಿಗಳನ್ನು ತೆಗೆದುಹಾಕದೆ ಟಾಟಾ ಕಂಪನಿಯಲ್ಲಿ ವಿಲೀನ ಮಾಡಿಕೊಳ್ಳುವ ಭರವಸೆ ನೀಡಿದೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ವಾರ್ಷಿಕವಾಗಿ 2.4 ಲಕ್ಷ ಯೂನಿಟ್‌ ಕಾರುಗಳನ್ನು ಮತ್ತು ವರ್ಷಕ್ಕೆ 2.7 ಲಕ್ಷ ಎಂಜಿನ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಸ್ಥಾವರವನ್ನು ಸ್ಥಾಪಿಸಲು ಫೋರ್ಡ್ ಇಂಡಿಯಾ ಕಂಪನಿಯು ಇದುವರೆಗೆ ಬರೋಬ್ಬರಿ ರೂ. 4,500 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ಇದೀಗ ಹೊಸ ಘಟಕ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಕೂಡಾ ಭಾರೀ ಬೃಹತ್ ಮೊತ್ತಕ್ಕೆ ಖರೀದಿಸುತ್ತಿದೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಖರೀದಿ ಪ್ರಕ್ರಿಯೆಯನ್ನು ಹೊರತುಪಡಿಸಿಯೇ ಹೊಸ ಯೋಜನೆಗಾಗಿ ಟಾಟಾ ಮೋಟಾರ್ಸ್ ಕಂಪನಿಯು 2026ರ ವೇಳೆಗೆ ಒಟ್ಟು 2 ಸಾವಿರ ಕೋಟಿ ಹೂಡಿಕೆ ಮಾಡುವ ಸುಳಿವು ನೀಡಿದ್ದು, ಹೊಸ ಘಟಕವನ್ನು ಸಂಪೂರ್ಣವಾಗಿ ಇವಿ ಮಾದರಿಗಳಿಗಾಗಿ ಮೀಸಲಿರಿಸಿದೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಸನಂದ್‌ನಲ್ಲಿರುವ ತನ್ನ ಘಟಕದಲ್ಲಿ ಸದ್ಯ ಟಾಟಾ ಮೋಟಾರ್ಸ್ ಕಂಪನಿಯು ಸಾಮಾನ್ಯ ಕಾರುಗಳ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿಯೇ ವಾರ್ಷಿಕವಾಗಿ 10 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ನಿರ್ಮಾಣ ಮಾಡುತ್ತಿದ್ದು, ಸ್ವಾಧೀನಪಡಿಸಕೊಳ್ಳಲಾಗುತ್ತಿರುವ ಹೊಸ ಘಟಕವನ್ನು ಉನ್ನತೀಕರಿಸಿ ಇವಿ ಮಾದರಿಗಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸಲಿದೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಸ್ವಾಧೀನಪಡಿಸಕೊಳ್ಳಲಾಗುತ್ತಿರುವ ಹೊಸ ಘಟಕದಲ್ಲಿ ಹೊಸ ಇವಿ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಕಂಪನಿಯು ಮುಂಬರುವ ದಿನಗಳಲ್ಲಿ ವಾರ್ಷಿಕವಾಗಿ 2 ಇವಿ ಕಾರು ಮಾದರಿಗಳನ್ನು ನಿರ್ಮಾಣ ಮಾಡುವ ಗುರಿಹೊಂದಿದ್ದು, ಹೊಸ ಘಟಕದಲ್ಲಿ ಈ ಹಿಂದಿನ ಫೋರ್ಡ್ ಉದ್ಯೋಗಿಗಳು ಸೇರಿ ಸುಮಾರು 23 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸಲಿದ್ದಾರೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಇದರೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಫೋರ್ಡ್ ಒಡೆತನದಲ್ಲಿರುವ ಚೆನ್ನೈ(ಎರಡನೇ ಘಟಕ)ವನ್ನು ಸಹ ಸ್ವಾಧೀನಪಡಿಸಿಕೊಳ್ಳ ಬಗೆಗೆ ಮಾತುಕತೆ ನಡೆಸಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ಕೆಲ ತಿಂಗಳ ಹಿಂದಷ್ಟೇ ಟಾಟಾ ಮೋಟಾರ್ಸ್ ಸಮೂಹಗಳ ಅಧ್ಯಕ್ಷ ಎನ್ ಚಂದ್ರಶೇಖರನ್ ತಮಿಳುನಾಡು ಸರ್ಕಾರದ ಜೊತೆ ಮಾತುಕತೆ ಸಹ ನಡೆಸಿದ್ದರು.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಸದ್ಯ ಸನಂದ್ ಕಾರು ಉತ್ಪಾದನಾ ಘಟಕದ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆಯಲ್ಲಿರುವುದರಿಂದ ಮುಂಬರುವ ದಿನಗಳಲ್ಲಿ ತಮಿಳುನಾಡಿನಲ್ಲಿರುವ ಕಾರು ಉತ್ಪಾದನಾ ಘಟಕದ ಮಾಲೀತಕ್ವದ ಕುರಿತು ಮಾಹಿತಿ ದೊರೆಯಲಿದ್ದು, ತಮಿಳುನಾಡಿನಲ್ಲಿರುವ ಘಟಕವು ಸಹ ಟಾಟಾ ಪಾಲಾಗುವ ಸಾಧ್ಯತೆಗಳು ಹೆಚ್ಚಿವೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಹೊಸ ಕಾರು ಉತ್ಪಾದನಾ ಘಟಕಗಳೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿಯೇ ಸೆಮಿಕಂಡಕ್ಟರ್ ಉತ್ಪಾದನಾ ಅವಕಾಶಗಳನ್ನು ಎದುರುನೋಡುತ್ತಿದ್ದು, ಸನಂದ್‌ ಘಟಕದಲ್ಲಿ ಇವಿ ಮಾದರಿಗಳಿಗಾಗಿ ಪ್ರತ್ಯೇಕವನ್ನು ಮತ್ತು ಚೆನ್ನೈನಲ್ಲಿರುವ ಘಟಕದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಯ ಅವಕಾಶಗಳ ಬಗೆಗೆ ಅಧ್ಯಯನ ನಡೆಸುತ್ತಿದೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಸದ್ಯ ನೆಕ್ಸಾನ್ ಇವಿ, ಟಿಗೋರ್ ಇವಿ ನಂತ ಗ್ರಾಹಕರ ಬೇಡಿಕೆಯೆಂತೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದು, ಕಂಪನಿಯು ಇವಿ ವಾಹನಗಳ ಅಭಿವೃದ್ದಿ, ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಕೂಡಾ ಆರಂಭಿಸಿದೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಸದ್ಯ ಮಾರುಕಟ್ಟೆಯಲ್ಲಿರುವ ಇವಿ ಕಾರುಗಳನ್ನು ಸಾಮಾನ್ಯ ಕಾರುಗಳ ಉತ್ಪಾದನಾ ಪ್ಲ್ಯಾಟ್‌ಫಾರ್ಮ್‌ನಲ್ಲಿ ಅಭಿವೃದ್ದಿಪಡಿಸುತ್ತಿರುವ ಕಂಪನಿಯು ಭವಿಷ್ಯದ ಬೃಹತ್ ಯೋಜನೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಹೊಂದಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (TPEML) ಅಂಗಸಂಸ್ಥೆಯನ್ನು ಸಹ ಆರಂಭಿಸಿದೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯ ಹೊಸ ಅಂಗಸಂಸ್ಥೆಯ ಮೂಲಕ ಇವಿ ವಾಹನಗಳ ಮೇಲೆ ಹೆಚ್ಚಿನ ಗಮನಹರಿಸಲು ನಿರ್ಧರಿಸಿದ್ದು, ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಸದ್ಯ ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಬಳಸುತ್ತಿರುವ ಕಂಪನಿಯು ಭವಿಷ್ಯದ ಇವಿ ಮಾದರಿಗಳಿಗಾಗಿ ಸಿಗ್ಮಾ ಆರ್ಕಿಟೆಕ್ಚರ್ ಮತ್ತು ಸ್ಕೇಟ್‌ಬೋರ್ಡ್ ಪ್ಲ್ಯಾಟ್‌ಫಾರ್ಮ್ ತೆರೆಯುತ್ತಿದೆ.

ಯಾವುದೇ ಹಳೆಯ ಉದ್ಯೋಗಿಗಳನ್ನು ತೆಗೆದುಹಾಕದೆ ಹೊಸ ಯೋಜನೆ ರೂಪಿಸಿದ ಟಾಟಾ

ಸಿಗ್ಮಾ ಪ್ಲಾಟ್‌ಫಾರ್ಮ್ ಮೂಲಕ ಮೊದಲ ಇವಿ ಕಾರು ಮಾದರಿಯಾಗಿ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಸಿಯೆರಾ ಇವಿ ಸೇರಿದಂತೆ ಪ್ರಮುಖ ಇವಿ ಕಾರು ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಸಿಗ್ಮಾ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣವಾಗುವ ಇವಿ ಕಾರುಗಳು ಐಸಿ ಎಂಜಿನ್ ಪರಿವರ್ತಿತ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಇವಿ ಕಾರುಗಳಿಂತಲೂ ಹೆಚ್ಚು ಹಗುರ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಪಡೆದುಕೊಂಡಿವೆ.

Most Read Articles

Kannada
English summary
Tata motors to start manufacturing ev vehicles at ford sanand plant soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X