ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ಭಾರತದಲ್ಲಿ ಕಾರು ಉತ್ಪಾದನೆಯನ್ನು ಅಧಿಕಕೃತವಾಗಿ ಸ್ಥಗಿತಗೊಳಿಸಿರುವ ಫೋರ್ಡ್ ಇಂಡಿಯಾ ಕಂಪನಿಯು ತನ್ನ ಬೃಹತ್ ಕಾರು ಉತ್ಪಾದನಾ ಘಟಕದ ಸ್ಟಾಕ್ ಮಾರಾಟ ಮಾಡಲು ನಿರ್ಧರಿಸಿದ್ದು, ಗುಜುರಾತಿನ ಸನಂದ್‌ನಲ್ಲಿರುವ ಕಾರು ಉತ್ಪಾದನಾ ಘಟಕವನ್ನು ದೇಶದ ಮುಂಚೂಣಿ ಕಾರು ಉತ್ಪಾದನಾ ಕಂಪನಿಯಾದ ಟಾಟಾ ಮೋಟಾರ್ಸ್ ಖರೀದಿಗೆ ಸಿದ್ದವಾಗಿದೆ.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ಫೋರ್ಡ್ ಕಂಪನಿಯು ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಅಧಿಕೃತವಾಗಿ ಸ್ಥಗಿತ ಘೋಷಣೆ ನಂತರ ಸನಂದ್‌ನಲ್ಲಿರುವ ಕಾರು ಉತ್ಪಾದನಾ ಘಟಕ ಖರೀದಿಗೆ ಪ್ರಮುಖ ಕಾರು ಕಂಪನಿಗಳು ಆಸಕ್ತಿ ತೋರಿದ್ದವು. ಆದರೆ ಅಂತಿಮವಾಗಿ ಟಾಟಾ ಮೋಟಾರ್ಸ್ ಕಂಪನಿಯು ಫೋರ್ಡ್ ಘಟಕವನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ಬಹುತೇಕ ಖಚಿತವಾಗಿದ್ದು, ಉತ್ಪಾದನಾ ಘಟಕ ಮಾಲೀಕತ್ವ ಬದಲಾವಣೆಗಾಗಿ ಎರಡು ಕಂಪನಿಗಳು ಒಪ್ಪಿಗೆ ಪತ್ರ ಸಲ್ಲಿಸಿವೆ.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ಮುಂಬರುವ ಕೆಲವೇ ವಾರಗಳಲ್ಲಿ ಉತ್ಪಾದನಾ ಘಟಕ ಮಾಲೀಕತ್ವ ಬದಲಾವಣೆಗಾಗಿ ಅನುಮೋದನೆ ಸಿಗಲಿದ್ದು, ಗುಜರಾತ್ ರಾಜ್ಯ ಸರ್ಕಾರ ರಚಿಸಿರುವ ಹೈ ಪವರ್ ಸಮಿತಿಯು ಹೊಸ ಪ್ರಸ್ತಾವನೆಗೆ ಶೀಘ್ರವೇ ಅನುಮೋದನೆ ನೀಡಲಿದೆ.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ವಾರ್ಷಿಕ 2.4 ಲಕ್ಷ ಯೂನಿಟ್‌ ಕಾರುಗಳನ್ನು ಮತ್ತು ವರ್ಷಕ್ಕೆ 2.7 ಲಕ್ಷ ಎಂಜಿನ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿರುವ ಈ ಸ್ಥಾವರವನ್ನು ಸ್ಥಾಪಿಸಲು ಫೋರ್ಡ್ ಇಂಡಿಯಾ ಕಂಪನಿಯು ಇದುವರೆಗೆ ಬರೋಬ್ಬರಿ ರೂ. 4,500 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದು, ಇದೀಗ ಹೊಸ ಘಟಕ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಕೂಡಾ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಘಟಕವನ್ನು ಉನ್ನತೀಕರಿಸುವ ಯೋಜನೆ ಹೊಂದಿದೆ.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ಫೋರ್ಡ್ ಕಂಪನಿಯು ಭಾರತದಲ್ಲಿ ಒಟ್ಟು ಎರಡು ಘಟಕಗಳನ್ನು ಹೊಂದಿದ್ದು, ಗುಜರಾತಿನ ಸನಂದ್‌ದಲ್ಲಿ ಮೊದಲ ಘಟಕವನ್ನು ಮತ್ತು ಎರಡನೇ ಘಟಕವನ್ನು ತಮಿಳಿನಾಡಿನ ಚೆನ್ನೈ ಹೊರವಲಯದಲ್ಲಿ ಸ್ಥಾಪಿಸಿತ್ತು.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ಗುಜರಾತಿನಲ್ಲಿರುವ ಸನಂದ್ ಘಟಕವು ಇದೀಗ ಟಾಟಾ ಮೋಟಾರ್ಸ್ ಕಂಪನಿಯೇ ಸ್ವಾಧೀನಪಡಿಸಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ತಮಿಳಿನಾಡಿನಲ್ಲಿರುವ ಕಾರು ಘಟಕದ ಸ್ವಾಧೀನಪಡಿಸಿಕೊಳ್ಳುವಿಕೆ ಕುರಿತು ಇನ್ನು ಯಾವುದೇ ನಿಖರ ಮಾಹಿತಿಗಳಿಲ್ಲ.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ತಮಿಳುನಾಡಿನಲ್ಲಿರುವ ಫೋರ್ಡ್ ಕಾರು ಘಟಕವನ್ನು ಸಹ ಟಾಟಾ ಮೋಟಾರ್ಸ್ ಕಂಪನಿಯೇ ಸ್ವಾಧೀನಪಡಿಸಿಕೊಳ್ಳಲಿದೆ ಎನ್ನುವ ಕೆಲವೇ ಮಾಹಿತಿಗಳಿದ್ದು, ಇದಕ್ಕೆ ಪೂರಕವಾಗಿ ಕೆಲ ತಿಂಗಳ ಹಿಂದಷ್ಟೇ ಟಾಟಾ ಮೋಟಾರ್ಸ್ ಸಮೂಹಗಳ ಅಧ್ಯಕ್ಷ ಎನ್ ಚಂದ್ರಶೇಖರನ್ ತಮಿಳುನಾಡು ಸರ್ಕಾರದ ಜೊತೆ ಮಾತುಕತೆ ನಡೆಸಿದ್ದರು.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ಸದ್ಯ ಸನಂದ್ ಕಾರು ಉತ್ಪಾದನಾ ಘಟಕದ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆಯಲ್ಲಿರುವುದರಿಂದ ಮುಂಬರುವ ದಿನಗಳಲ್ಲಿ ತಮಿಳುನಾಡಿನಲ್ಲಿರುವ ಕಾರು ಉತ್ಪಾದನಾ ಘಟಕದ ಮಾಲೀತಕ್ವದ ಕುರಿತು ಮಾಹಿತಿ ದೊರೆಯಲಿದ್ದು, ತಮಿಳುನಾಡಿನಲ್ಲಿರುವ ಘಟಕವು ಸಹ ಟಾಟಾ ಪಾಲಾಗುವ ಸಾಧ್ಯತೆಗಳು ಹೆಚ್ಚಿವೆ.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ಹೊಸ ಕಾರು ಉತ್ಪಾದನಾ ಘಟಕಗಳೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿಯೇ ಸೆಮಿಕಂಡಕ್ಟರ್ ಉತ್ಪಾದನಾ ಅವಕಾಶಗಳನ್ನು ಎದುರುನೋಡುತ್ತಿದ್ದು, ಜೊತೆಗೆ ಇವಿ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕ ಘಟಕವನ್ನು ತೆರೆಯುವ ಯೋಜನೆಯಲ್ಲಿದೆ.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ಸನಂದ್‌ದಲ್ಲಿ ಈಗಾಗಲೇ ಟಾಟಾ ಮೋಟಾರ್ಸ್ ಕೂಡಾ ಉತ್ಪಾದನಾ ಘಟಕ ಹೊಂದಿದ್ದು, ಫೋರ್ಡ್ ಹೊಸ ಘಟಕವು ಟಾಟಾ ಕಾರ್ಯಾಚರಣೆಗೆ ಮತ್ತಷ್ಟು ಅನುಕೂಲಕರವಾಗಲಿದೆ ಎನ್ನಬಹುದು.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ಇನ್ನು ಭಾರತದಲ್ಲಿ ಒಟ್ಟು ಐದು ಕಾರು ಮಾದರಿಗಳ ಉತ್ಪಾದನೆಯನ್ನು ಹೊಂದಿದ್ದ ಫೋರ್ಡ್ ಕಂಪನಿಯು ಇಕೋಸ್ಪೋರ್ಟ್, ಫಿಗೋ, ಫ್ರೀಸ್ಟೈಲ್, ಎಂಡೀವರ್ ಮತ್ತು ಆಸ್ಪೈರ್ ಕಾರು ಮಾದರಿಗಳನ್ನು ಸ್ಥಳೀಯವಾಗಿಯೇ ಅಭಿವೃದ್ದಿಗೊಳಿಸಿ ಮಾರಾಟ ಸೌಲಭ್ಯವನ್ನು ಹೊಂದಿತ್ತು.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ಆದರೆ ಫೋರ್ಡ್ ಕಾರುಗಳಲ್ಲಿ ಇಕೋಸ್ಪೋರ್ಟ್ ಮಾದರಿಯನ್ನು ಹೊರತುಪಡಿಸಿ ಇನ್ನುಳಿದ ಕಾರು ಮಾದರಿಗಳು ನೀರಿಕ್ಷೆಯ ಮಟ್ಟದಲ್ಲಿ ಮಾರಾಟಗೊಳ್ಳಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾಗಿದ್ದ ಹೊಸ ವಿನ್ಯಾಸದ ಕಾರುಗಳ ಅಬ್ಬರ ನಡುವೆ ಫೋರ್ಡ್ ಕಾರುಗಳ ಮಾರಾಟವು ತೀವ್ರ ಹಿನ್ನಡೆ ಕಂಡಿದ್ದವು.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಕೇವಲ ಶೇ. 1.70 ರಷ್ಟು ಮಾರಾಟ ಪಾಲು ಹೊಂದಿದ್ದ ಫೋರ್ಡ್ ಕಂಪನಿಯು ಹಲವಾರು ಮಾರುಕಟ್ಟೆ ಸುಧಾರಣಾ ಕ್ರಮಗಳ ಹೊರತಾಗಿಯು ಗ್ರಾಹಕರ ಬೇಡಿಕೆ ಅನುಭವಿಸಿತು. ಹೀಗಾಗಿ 2019ರಲ್ಲೇ ಭಾರತದಿಂದ ಹೊರಹೊಗುವ ಬಗ್ಗೆ ತೀರ್ಮಾಸಿದ್ದ ಕಂಪನಿಯು ಹೊಸ ಯೋಜನೆಯನ್ನು ತಟಸ್ಥಗೊಳಿಸಿ ಅಂತಿಮವಾಗಿ 2021ರಲ್ಲಿ ತನ್ನ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿತು.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ಸದ್ಯ ಫೋರ್ಡ್ ಕಂಪನಿಯು ಭಾರತದಲ್ಲಿರುವ ತನ್ನ ಎರಡೂ ಉತ್ಪಾದನಾ ಘಟಕಗಳನ್ನು ಮುಚ್ಚುತ್ತಿದ್ದರೂ ಸಹ ಭಾರತೀಯ ಮಾರುಕಟ್ಟೆನ ಕಾರು ಮಾರಾಟ ಪ್ರಕ್ರಿಯೆಯನ್ನು ನಿಲ್ಲಿಸುತ್ತಿಲ್ಲ. ಫೋರ್ಡ್ ಕಂಪನಿಯು ಭಾರತದಲ್ಲಿನ ಮಾರಾಟ ಪ್ರಕ್ರಿಯೆಯನ್ನು ಮುಂದುವರಿಸಲಿದ್ದು, ಸಾಮಾನ್ಯ ಕಾರುಗಳ ಬದಲಾಗಿ ಹೈ ಎಂಡ್ ಕಾರು ಮಾದರಿಗಳಾದ ಫೋರ್ಡ್ ಮಸ್ಟಾಂಗ್, ಫೋರ್ಡ್ ಮಸ್ಟಾಂಗ್ ಮ್ಯಾಕ್-ಇ ಎಲೆಕ್ಟ್ರಿಕ್ ಕಾರು ಸೇರಿದಂತೆ ಕೆಲವು ಆಮದು ಕಾರು ಮಾದರಿಗಳನ್ನು ಭಾರತದಲ್ಲಿ ಮಾರಾಟ ಮುಂದುವರಿಸಲಿದೆ.

ಫೋರ್ಡ್ ಇಂಡಿಯಾ ಕಾರು ಉತ್ಪಾದನಾ ಘಟಕ ಟಾಟಾ ಮೋಟಾರ್ಸ್ ಪಾಲು

ಫೋರ್ಡ್ ಕಂಪನಿಯು 1995ರಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ಜೊತೆ 50-50 ಜಂಟಿ ಉದ್ಯಮ ಆರಂಭಿಸುವ ಮೂಲಕ ಮಹೀಂದ್ರಾ ಫೋರ್ಡ್ ಇಂಡಿಯಾ ಲಿಮಿಟೆಡ್ (MFIL) ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿ ಹೊಸ ಅಧ್ಯಯನ ಆರಂಭಿಸಿತ್ತು. ಆರಂಭದಲ್ಲಿ ಭಾರೀ ಲಾಭದಾಯಕ ಕಂಪನಿಯಾಗಿ ಹೊರಹೊಮ್ಮಿದ್ದ ಕಂಪನಿಯು ಕಾಲಾಂತರದಲ್ಲಿ ಸಾಕಷ್ಟು ಮಾರುಕಟ್ಟೆ ಏರಿಳಿತಗಳನ್ನು ಕಂಡಿತ್ತು. ಹೀಗಾಗಿ ಅಂತಿಮ ನಿರ್ಧಾರ ಪ್ರಕಟಿಸಿದ ಫೋರ್ಡ್ ಕಂಪನಿಯು ಭಾರತದಲ್ಲಿನ ಉದ್ಯಮ ಕಾರ್ಯಾಚರಣೆಗೆ ಅಧಿಕೃತವಾಗಿ ಸ್ಥಗಿತಗೊಳಿಸಿತು.

More from DriveSpark

Article Published On: Saturday, March 19, 2022, 9:00 [IST]
English summary
Tata motors to takeover ford gujarat plant soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+