ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಟೆಂಡರ್ ವಶಪಡಿಸಿಕೊಂಡ ಟಾಟಾ ಮೋಟಾರ್ಸ್

ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ದೇಶದ ಬೃಹತ್ ಟೆಂಡರ್‌ವೊಂದನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ. ಈ ಬೃಹತ್‌ ಒಪ್ಪಂದವು ಸುಮಾರು 5,000 ಕೋಟಿ ರೂ. ಮೌಲ್ಯದ್ದಾಗಿದ್ದು, ಈ ಕುರಿತು ಮತ್ತಷ್ಟು ಅಚ್ಚರಿಯ ಮಾಹಿತಿ ಹೊರಬಿದ್ದಿದೆ.

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಟೆಂಡರ್ ವಶಪಡಿಸಿಕೊಂಡ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ CESL (ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್) ನಿಂದ ಅತಿದೊಡ್ಡ ಆರ್ಡರ್‌ ಅನ್ನು ಸ್ವೀಕರಿಸಿದೆ. CESL ಇತ್ತೀಚೆಗೆ 5,450 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಟೆಂಡರ್ ಅನ್ನು ಘೋಷಿಸಿತು. ಇದಕ್ಕಾಗಿ ಹಲವು ಪ್ರಮುಖ ವಾಹನ ತಯಾರಕರು ಅರ್ಜಿ ಸಲ್ಲಿಸಿದ್ದರು. ಆದರೆ, ಇತರ ಕಂಪನಿಗಳು ಟಾಟಾ ಮೋಟಾರ್ಸ್‌ಗಿಂತ ಕಡಿಮೆ ಮೌಲ್ಯದ ಅರ್ಜಿ ಸಲ್ಲಿಸದ ಕಾರಣ ಈ ಬೃಹತ್ ಆರ್ಡರ್ ಈಗ ಟಾಟಾ ವಶಪಡಿಸಿಕೊಂಡಿದೆ.

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಟೆಂಡರ್ ವಶಪಡಿಸಿಕೊಂಡ ಟಾಟಾ ಮೋಟಾರ್ಸ್

ಮಂಗಳವಾರ ಬೃಹತ್ ಕೈಗಾರಿಕೆಗಳ ಸಚಿವಾಲಯ (MHI) ಟೆಂಡರ್‌ಗಳನ್ನು ಕರೆಯಿತು. ಕೋಲ್ಕತ್ತಾ, ದೆಹಲಿ, ಬೆಂಗಳೂರು, ಹೈದರಾಬಾದ್ ಮತ್ತು ಸೂರತ್‌ನ ಐದು ಪ್ರಮುಖ ನಗರಗಳಲ್ಲಿ 5,450 ಬಸ್‌ಗಳ ಅತಿದೊಡ್ಡ ಒಟ್ಟುಗೂಡಿಸುವಿಕೆಯನ್ನು ಈ ಯೋಜನೆ ಒಳಗೊಂಡಿದೆ.

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಟೆಂಡರ್ ವಶಪಡಿಸಿಕೊಂಡ ಟಾಟಾ ಮೋಟಾರ್ಸ್

ಈ ಟೆಂಡರ್‌ನಲ್ಲಿ ಇತರ ವಾಹನ ತಯಾರಕರಾದ ಸ್ವಿಚ್ ಮೊಬಿಲಿಟಿ - ಎಲೆಕ್ಟ್ರಿಕ್ ವಾಹನದ ಕೌಂಟರ್‌ ಪಾರ್ಟ್‌ ಆದ ಅಶೋಕ್ ಲೇಲ್ಯಾಂಡ್, ಒಲೆಕ್ಟ್ರಾ ಗುಂಪಿನ ಎವಿ ಟ್ರಾನ್ಸ್ ಮತ್ತು VECV - ವೋಲ್ವೋ ಗ್ರೂಪ್ ಮತ್ತು ಐಚರ್ ಮೋಟಾರ್ಸ್ ನಡುವಿನ JV ಭಾಗವಹಿಸಿದ್ದವು.

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಟೆಂಡರ್ ವಶಪಡಿಸಿಕೊಂಡ ಟಾಟಾ ಮೋಟಾರ್ಸ್

ಟೆಂಡರ್‌ನ ಎಲ್ಲಾ ಐದು ವರ್ಗಗಳಿಗೆ ಕಡಿಮೆ ಬಿಡ್ಡರ್ ಎಂದು ಘೋಷಿಸಿದ ನಂತರ, ಟಾಟಾ ಮೋಟಾರ್ಸ್ 5,000 ಕೋಟಿ ರೂಪಾಯಿ ಮೌಲ್ಯದ 5,450 ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಲಿದೆ. ಎಲ್ಲಾ ವಿಭಾಗಗಳಲ್ಲಿ L1 ಮತ್ತು L2 ಬಿಡ್ಡರ್‌ಗಳ ನಡುವಿನ ವ್ಯತ್ಯಾಸವು 10 ರೂ ಆಗಿತ್ತು.

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಟೆಂಡರ್ ವಶಪಡಿಸಿಕೊಂಡ ಟಾಟಾ ಮೋಟಾರ್ಸ್

ಭಾರತದ ಅತಿ ದೊಡ್ಡ ಎಲೆಕ್ಟ್ರಿಕ್ ಬಸ್ ಟೆಂಡರ್

12 ಮೀಟರ್ ಲೋ ಫ್ಲೋರ್ ಎಸಿ ಮತ್ತು ನಾನ್ ಎಸಿ ಇ-ಬಸ್‌ಗಳು, 12 ಮೀಟರ್ ಸ್ಟ್ಯಾಂಡರ್ಡ್ ಫ್ಲೋರ್ ನಾನ್ ಎಸಿ ಮತ್ತು 9 ಮೀಟರ್ ಸ್ಟ್ಯಾಂಡರ್ಡ್ ಫ್ಲೋರ್ ಎಸಿ, ನಾನ್ ಎಸಿ ಬಸ್‌ಗಳನ್ನು ಒಳಗೊಂಡಂತೆ 5 ವಿಭಾಗಗಳಲ್ಲಿ ಬಿಡ್ಡಿಂಗ್ ನಡೆಸಲಾಯಿತು. ಟಾಟಾ ಮೋಟಾರ್ಸ್ ಉಲ್ಲೇಖಿಸಿದ ಬೆಲೆಗಳು ಇದುವರೆಗೆ ಅತ್ಯಂತ ಕಡಿಮೆ ಮತ್ತು ಡೀಸೆಲ್ ಬಸ್‌ಗಳ ಕಾರ್ಯಾಚರಣೆಯ ವೆಚ್ಚಕ್ಕೆ ಸಮೀಪದಲ್ಲಿದ್ದವು.

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಟೆಂಡರ್ ವಶಪಡಿಸಿಕೊಂಡ ಟಾಟಾ ಮೋಟಾರ್ಸ್

12 ಮೀಟರ್ ಲೋ ಫ್ಲೋರ್ ನಾನ್ ಎಸಿ ಬಸ್‌ಗೆ ಪ್ರತಿ ಕಿಮೀಗೆ 43.49 ರೂ.ಗಳಾಗಿದ್ದರೆ, 9 ಮೀಟರ್ ನಾನ್ ಎಸಿ ಬಸ್‌ಗೆ ಪ್ರತಿ ಕಿಮೀಗೆ 39.21 ರೂ.ಗೆ ಇಳಿಕೆಯಾಗಿದೆ. 12 ಮೀಟರ್ ಲೋ ಫ್ಲೋರ್ ಎಸಿ ಬಸ್‌ಗೆ ಪ್ರತಿ ಕಿಮೀಗೆ ರೂ. 47.49 ಮತ್ತು 12 ಮೀಟರ್ ಸ್ಟ್ಯಾಂಡರ್ಡ್ ಫ್ಲೋರ್ ಎಸಿ ಬಸ್‌ಗೆ ಪ್ರತಿ ಕಿಮೀಗೆ ರೂ. 44.99 ಹಾಗೂ 9 ಮೀಟರ್ ಸ್ಟ್ಯಾಂಡರ್ಡ್ ಫ್ಲೋರ್ ಎಸಿ ಬಸ್‌ಗೆ ಪ್ರತಿ ಕಿ.ಮೀಗೆ 41.45 ರೂ. ಇದ್ದಿ ಈ ಬೆಲೆಗಳು ಪ್ರತಿ ಕಿ.ಮೀ ಚಾರ್ಜ್ ಮಾಡಲು ವಿದ್ಯುತ್ ವೆಚ್ಚವನ್ನು ಒಳಗೊಂಡಿವೆ.

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಟೆಂಡರ್ ವಶಪಡಿಸಿಕೊಂಡ ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್‌ನ 12 ಮೀಟರ್ ಸ್ಟ್ಯಾಂಡರ್ಡ್ ಫ್ಲೋರ್ ಎಸಿ ಎಲೆಕ್ಟ್ರಿಕ್ ಬಸ್‌ಗೆ ಪ್ರತಿ ಕಿಮೀಗೆ 44.99 ರೂ.ಗಳ ಕನಿಷ್ಠ ಬಿಡ್‌ಗೆ ವಿರುದ್ಧವಾಗಿ, ಸ್ವಿಚ್ ಮೊಬಿಲಿಟಿ ಪ್ರತಿ ಕಿ.ಮೀಗೆ 53.99 ರೂ.ಗಳನ್ನು ಉಲ್ಲೇಖಿಸಿದ್ದರೆ, 9 ಮೀಟರ್ ಎಸಿ ಬಸ್‌ಗೆ ಇವೇ ಟ್ರಾನ್ಸ್ ಪ್ರತಿ ಕಿ.ಮೀಗೆ ರೂ. 54.27 ಮತ್ತು ನಾನ್ ಎಸಿ ರೂ. 53.12 ರೂ. ನೀಡಿದ್ದವು.

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಟೆಂಡರ್ ವಶಪಡಿಸಿಕೊಂಡ ಟಾಟಾ ಮೋಟಾರ್ಸ್

ಬಸ್‌ಗಳು ಭಾರತ ಸರ್ಕಾರವು ನೀಡುವ FAME II ಸಬ್ಸಿಡಿಯ ಲಾಭವನ್ನು ಪಡೆದುಕೊಳ್ಳುತ್ತವೆ, ಇದು ಹೆಚ್ಚುವರಿ ಇ-ಬಸ್‌ಗಳನ್ನು ಖರೀದಿಸಲು ಬಳಸಬಹುದಾದ ರೂ 361 ಕೋಟಿಗಳಿಗೆ ಸಂಬಂಧಿಸಿದೆ.

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಟೆಂಡರ್ ವಶಪಡಿಸಿಕೊಂಡ ಟಾಟಾ ಮೋಟಾರ್ಸ್

1.88 ಶತಕೋಟಿ ಲೀಟರ್ ಇಂಧನ ಉಳಿಸಲಿವೆ ಇ-ಬಸ್‌ಗಳು

ಒಪ್ಪಂದದ ನಿಯಮಗಳು 12 ವರ್ಷಗಳ ಅವಧಿಗೆ, ಪ್ರತಿ ಬಸ್‌ಗೆ 10 ಲಕ್ಷ ಕಿ.ಮೀ. ಲೆಕ್ಕಾಚಾರಗಳ ಪ್ರಕಾರ, ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ಬಸ್‌ಗಳು ಮುಂದಿನ 12 ವರ್ಷಗಳಲ್ಲಿ ಸುಮಾರು 4.71 ಶತಕೋಟಿ ಕಿ.ಮೀ. ಸಂಚರಿಸಲಿದ್ದು, ಇದು 1.88 ಶತಕೋಟಿ ಲೀಟರ್ ಇಂಧನವನ್ನು ಉಳಿಸಲು ಸಹಾಯ ಮಾಡುತ್ತದೆ. 3.31 ಮಿಲಿಯನ್ ಟನ್ CO2 ಟೈಲ್‌ಪೈಪ್ ಹೊರಸೂಸುವಿಕೆಗೆ ಕಾರಣವಾಗುತ್ತದೆ.

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಬಸ್ ಟೆಂಡರ್ ವಶಪಡಿಸಿಕೊಂಡ ಟಾಟಾ ಮೋಟಾರ್ಸ್

ಅಲ್ಲದೇ ಹವಾಮಾನ ಬದಲಾವಣೆಯ ವಿಷಯದಲ್ಲಿ ಬಲವಾದ ಪ್ರಗತಿಯನ್ನು ಸಾಧಿಸುತ್ತದೆ. ಈ ಟೆಂಡರ್‌ನ ಭಾಗವಾಗಿ, ಒಟ್ಟು 25,000 ಉದ್ಯೋಗಾವಕಾಶಗಳನ್ನು ಹೆಚ್ಚಿಸಲಾಗುವುದು, ಅದರಲ್ಲಿ ಶೇ10 ಮಹಿಳೆಯರಿಗೆ ಮೀಸಲಿಡಲಾಗಿದೆ. ಇದು ಹೊಸ ಉತ್ಪಾದನಾ ಸೌಲಭ್ಯಗಳ ಮೂಲಕ ರಚಿಸಲಾದ ಯಾವುದೇ ಹೆಚ್ಚುವರಿ ಉದ್ಯೋಗವನ್ನು ಒಳಗೊಂಡಿಲ್ಲ.

Most Read Articles

Kannada
English summary
Tata motors wins india s largest electric bus tender
Story first published: Friday, April 29, 2022, 13:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X