YouTube

ಯಾರೂ ನಿರೀಕ್ಷಿಸದ ಮೈಲೇಜ್.. ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ನೀಡಬಹುದೇ?

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಬೇಡಿಕೆ ಹೆಚ್ಚಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ದೇಶ - ವಿದೇಶ ಕಂಪನಿಗಳು ಮಾರುಕಟ್ಟೆಯಲ್ಲಿ ತಮ್ಮ ಇವಿಗಳನ್ನು ಪರಿಚಯಿಸುತ್ತಿವೆ. ಇದೀಗ ಟಾಟಾ ತನ್ನ ಟಿಯಾಗೊ ಇವಿಯನ್ನು ಲಾಂಚ್ ಮಾಡಿದ್ದು, ಸದ್ಯ ಖರೀದಿಗೆ ದೊರೆಯುವ ಕೈಗೆಟುಕುವ ಬೆಲೆಯ ಇವಿ ಇದಾಗಿದೆ.

ಆಟೋಮೊಬೈಲ್ ದೈತ್ಯ ಟಾಟಾ ಮೋಟಾರ್ಸ್ 2008ರಲ್ಲಿ ನ್ಯಾನೋ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದನ್ನು ವಿಶ್ವದ ಅತ್ಯಂತ ಅಗ್ಗದ ಕಾರು ಎಂದು ಕರೆಯಲಾಗಿತ್ತು. ಈ ಕಾರು ನಿರೀಕ್ಷೆ ಮಾಡಿದಂತೆ ಯಶಸ್ಸನ್ನು ಪಡೆಯಲಿಲ್ಲ. ಕಂಪನಿಯು ಕಳಪೆ ಮಾರಾಟ ಪ್ರಮಾಣ ವರದಿ ಮಾಡಿದ ನಂತರ, ನ್ಯಾನೋವನ್ನು 2018ರಲ್ಲಿ ಸ್ಥಗಿತಗೊಳಿಸಲಾಯಿತು. ಈಗ, ಟಾಟಾ ಮೋಟಾರ್ಸ್, ನ್ಯಾನೊದ ಎಲೆಕ್ಟ್ರಿಕ್ ಆವೃತ್ತಿಯನ್ನು ದೇಶೀಯ ಮಾರುಕಟ್ಟೆಗಳಲ್ಲಿ ಹೊರತರಲು ಯೋಜಿಸುತ್ತಿದೆ. ಆದರೆ, ಈ ಮಾದರಿಯನ್ನು ಯಾವಾಗ ಅನಾವರಣಗೊಳಿಸಲಾಗುತ್ತದೆ ಎಂಬುದು ತಿಳಿದಿಲ್ಲ.

ನ್ಯಾನೋ ಇವಿ ಮಾರುಕಟ್ಟೆಯಲ್ಲಿ ತನಗಾಗಿಯೇ ಸ್ಥಾನವನ್ನು ಸೃಷ್ಟಿಸಿಕೊಳ್ಳಬಹುದು. ಆಟೋಮೋಟಿವ್ ವಿನ್ಯಾಸ ತಜ್ಞ ಪ್ರತ್ಯೂಷ್ ರಾವುತ್ ನ್ಯಾನೋ ಇವಿಗಾಗಿ ಪರಿಕಲ್ಪನೆಯ ನೋಟವನ್ನು ಡಿಸೈನ್ ಮಾಡಿದ್ದು, ಹೊಸ ಕಾರು ಕೊಂಚ ದೊಡ್ಡ ಗಾತ್ರ ಹೊಂದಿದ ರೀತಿ ಕಾಣುತ್ತದೆ. ವರದಿಯ ಪ್ರಕಾರ, ನ್ಯಾನೊ EV ದೊಡ್ಡದಾದ ಡೇ-ಟೈಮ್ ರನ್ನಿಂಗ್ ಲೈಟ್ (DRL) ಮತ್ತು ಕಾಂಪ್ಯಾಕ್ಟ್ ಹೆಡ್‌ಲ್ಯಾಂಪ್ ಹೊಂದಿರಬಹುದು. ಅಲಂಕರಿಸಿದ ಸೈಡ್ ಪ್ಯಾನೆಲ್‌ಗಳ ಹೊರತಾಗಿ ಬಂಪರ್ ವಿಭಾಗವು ಸ್ಮೈಲಿಯಾಗಿದ್ದು, ಬಾಗಿಲು ಸಿ-ಪಿಲ್ಲರ್‌ನಲ್ಲಿ ಹ್ಯಾಂಡಲ್‌ಗಳನ್ನು ಹೊಂದಿರುತ್ತದೆ. ಜೊತೆಗೆ ಉದ್ದವಾದ ವೀಲ್‌ಬೇಸ್ ಮತ್ತು ವಿಶಾಲವಾದ ಒಳಾಂಗಣವನ್ನು ಹೊಂದಿರಬಹುದು.

ನ್ಯಾನೋ ಎಲೆಕ್ಟ್ರಿಕ್‌ ಕಾರಿನ ಪರಿಚಯದೊಂದಿಗೆ, ಮೈಕ್ರೋ-ಇವಿ ವಿಭಾಗದಲ್ಲಿ ಮೊದಲಿಗನಾಗಲು ಕಾರು ತಯಾರಕ ಕಂಪನಿ ಟಾಟಾ ಪ್ರಯತ್ನಿಸುತ್ತಿದೆ. ಈ ಕಾರನ್ನು ಸಂಪೂರ್ಣ ಚಾರ್ಜ್‌ ಮಾಡಿದರೆ, 200 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುವಂತೆ ರೆಡಿ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಭಾರತದಲ್ಲಿ ಎಂಟ್ರಿ-ಲೆವೆಲ್ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಟಾಟಾ, ಈಗಾಗಲೇ ಟಿಗೊರ್ ಮತ್ತು ಟಿಯಾಗೊ ಇವಿ ಮಾರಾಟದಲ್ಲಿ ಯಶಸ್ವಿಯಾಗಿದ್ದು, ಮತ್ತಷ್ಟು ಲಾಭವನ್ನು ಮಾಡಲು ನ್ಯಾನೋ ಇವಿಯನ್ನು ಮಾರುಕಟ್ಟೆಗೆ ತರಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.

ಟಾಟಾ ಕಂಪನಿಯು 2023ರಲ್ಲಿ ಪಂಚ್‌ನ ಎಲೆಕ್ಟ್ರಿಕ್ ಆವೃತ್ತಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ. ಇದರ ಮೈಲೇಜ್ ಸಂಪೂರ್ಣ ಚಾರ್ಜ್‌ನಲ್ಲಿ 300 ಕಿ.ಮೀ ಆಗಿರಬಹುದು. ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಅಳವಡಿಸಲಾಗಿರುವ 30.2 kWh ಬ್ಯಾಟರಿ ಪ್ಯಾಕ್ ಮತ್ತು 129 PS ಗರಿಷ್ಠ ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್‌ ಲಾಂಗ್ ರೇಂಜ್ ಆವೃತ್ತಿಯಲ್ಲಿ 350 ಕಿ.ಮೀ ಮೈಲೇಜ್ ನೀಡಬಹುದು. ಬೆಲೆ ವಿಚಾರಕ್ಕೆ ಬಂದರೇ ಟಾಟಾ ಪಂಚ್ ಇವಿ ಪ್ರಾರಂಭಿಕ ಬೆಲೆ 12 ಲಕ್ಷ ಇರಲಿದ್ದು, ಟಾಪ್ ವೆರಿಯಂಟ್ ಬೆಲೆ 14 ಲಕ್ಷ ಇರಬಹುದು ಎಂದು ಹೇಳಲಾಗಿದೆ.

ಕೆಲವೇ ದಿನಗಳ ಹಿಂದಷ್ಟೇ ಮಾರುಕಟ್ಟೆಗೆ ಬಂದಿರುವ ಎಲೆಕ್ಟ್ರಿಕ್ ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್‌ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಪ್ರಸ್ತುತ, ಟಿಯಾಗೊ ಇವಿ ಬೆಲೆ ರೂ.8.49 ಲಕ್ಷ-11.49 ಲಕ್ಷ (ಎಕ್ಸ್ ಶೋರೂಂ, ಭಾರತ). ರೂ. ಇದೆ. ಈ ಕಾರು ಎರಡು ಬ್ಯಾಟರಿ ಪ್ಯಾಕ್‌ ಹೊಂದಿದ್ದು, ಚಿಕ್ಕದಾದ 19.2kWh ಬ್ಯಾಟರಿ ಒಂದು ಚಾರ್ಜಿಗೆ 250 ಕಿ.ಮೀ ಮೈಲೇಜ್ ನೀಡುತ್ತದೆ. ದೊಡ್ಡ 24kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುವ ಟಿಯಾಗೊ ಇವಿಯು ಒಂದೇ ಚಾರ್ಜ್ ನಲ್ಲಿ 315 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಟಾಟಾ ಮೋಟಾರ್ಸ್ ತನ್ನ ಮಾಸಿಕ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಪ್ರಮಾಣವನ್ನು 8,000-10,000 ಯುನಿಟ್‌ಗಳಿಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, ಪ್ರತಿ ವರ್ಷ 1 ರಿಂದ 2 ಇವಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ. ಕಂಪನಿಯು ಮುಂದಿನ 12-18 ತಿಂಗಳಲ್ಲಿ 1 ಲಕ್ಷ ಇವಿಗಳನ್ನು ನಿರ್ಮಿಸುವ ಗುರಿ ಹೊಂದದೆ. ಅಲ್ಲದೆ, ತನ್ನ ಇವಿಗಳ ಮೂಲಕ ಟಾಟಾ ಮೋಟಾರ್ಸ್ ದೇಶೀಯ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಮೈಲಿಗಲ್ಲನ್ನು ಸ್ಥಾಪಿಸಿ, ಸುಮಾರು 12,000 ಕೋಟಿಗಳಿಂದ 15,000 ಕೋಟಿ ರೂ. ಆದಾಯವನ್ನು ಗಳಿಸುವತ್ತ ಹೆಜ್ಜೆ ಹಾಕಿದೆ ಎಂದು ವರದಿಯಾಗಿದೆ.

ಮತ್ತೊಂದೆಡೆ ಟಾಟಾ ಮೋಟಾರ್ಸ್ ತನ್ನ ವಾಣಿಜ್ಯ ವಾಹನಗಳ ವಿವಿಧ ಮಾದರಿ ಬೆಲೆಗಳನ್ನು ಮುಂದಿನ ವರ್ಷದ ಜನವರಿಯಿಂದ ಶೇಕಡ 2ರಷ್ಟು ಹೆಚ್ಚಿಸುವುದಾಗಿ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ. ಇನ್‌ಪುಟ್ ವೆಚ್ಚಗಳ ಹೆಚ್ಚಳದಿಂದ ವಾಹನಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಇನ್ನು, ಬಹು ನೀರಿಕ್ಷಿತ ಟಾಟಾ ನ್ಯಾನೋ ಇವಿ ಮಾರುಕಟ್ಟೆಯಲ್ಲಿ ಬಂದರೆ ಮಧ್ಯಮ ವರ್ಗದ ಜನರ ಕಾರು ಖರೀದಿಸುವ ಕನಸು ನನಸಾಗುತ್ತದೆ ಎಂದು ಹೇಳಬಹುದು.

Most Read Articles

Kannada
English summary
Tata nano electric car deliver mileage that no one expected
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X