ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರು ಆಲ್‌ಟ್ರೊಜ್ ಮಾದರಿಯಲ್ಲಿ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ವರ್ಷನ್ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಹೊಸ ಕಾರು ಇದೇ ತಿಂಗಳು 21ರಂದು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಆಲ್‌ಟ್ರೊಜ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಈಗಾಗಲೇ ರೂ.21 ಸಾವಿರ ಮುಂಗಡದೊಂದಿಗೆ ಅಧಿಕೃತ ಬುಕ್ಕಿಂಗ್ ಪ್ರಕ್ರಿಯೆಗೂ ಸಹ ಚಾಲನೆ ನೀಡಿದ್ದು, ಹೊಸ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಡಿಸಿಎ ಮಾದರಿಯು ಪ್ರಮುಖ ಪ್ರತಿಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ತವಕದಲ್ಲಿದೆ.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಆಲ್‌ಟ್ರೊಜ್ ಕಾರು ಮಾದರಿಯ ಎಕ್ಸ್‌ಟಿ, ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಪ್ಲಸ್ ಮಾದರಿಗಳಲ್ಲಿರುವ 1.2 ಲೀಟರ್ ಪೆಟ್ರೋಲ್ ಆವೃತ್ತಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಆಟೋಮ್ಯಾಟಿಕ್ ಆವೃತ್ತಿಗಳನ್ನು ಇಷ್ಟಪಡುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಲಿದೆ.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಆಟೋಮ್ಯಾಟಿಕ್ ಆವೃತ್ತಿಗಳು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಸ್ಟ್ಯಾಂಡರ್ಡ್ ಮ್ಯಾನುವಲ್ ಮಾದರಿಗಿಂತಲೂ ರೂ. 20 ಸಾವಿರದಿಂದ ರೂ.35 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದ್ದು, ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ಯಶಸ್ವಿ ಎರಡು ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಹೊಸ ಮಾದರಿಯನ್ನು ಬಿಡುಗಡೆ ಮಾಡಲಾಗುತ್ತಿದೆ.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಆಲ್‌ಟ್ರೊಜ್ ಕಾರು ಮಾದರಿಯ ಮೂಲಕ ಟಾಟಾ ಕಂಪನಿಯು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರತಿ ಎರಡು ತಿಂಗಳಿಗೆ ಒಂದು ಬಾರಿಗೆ ವೆರಿಯೆಂಟ್‌ಗಳ ಉನ್ನತೀಕರಣ ಮತ್ತು ಹೊಸ ವೆರಿಯೆಂಟ್ ಸೇರ್ಪಡೆ ಪ್ರಕ್ರಿಯೆ ಕೈಗೊಂಡಿದೆ.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಇದೀಗ ಆಲ್‌ಟ್ರೊಜ್ ಮಾದರಿಯಲ್ಲಿ ಆಟೋಮ್ಯಾಟಿಕ್ ಆವೃತ್ತಿಯ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮಾದರಿಯ ಹೈ ಎಂಡ್ ಮಾದರಿಗಳಲ್ಲಿ ಮಾತ್ರ ಎಎಂಟಿ ಆಯ್ಕೆ ಲಭ್ಯವಿರಲಿದೆ ಎನ್ನಲಾಗಿದೆ.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಆಲ್‌ಟ್ರೊಜ್ ಹೊಸ ಕಾರು ಮಾದರಿಯು ಸದ್ಯ ಎಕ್ಸ್‌ಇ ಪ್ಲಸ್ ಜೊತೆಗೆ ಎಕ್ಸ್‌ಇ, ಎಕ್ಸ್ಎಂ ಪ್ಲಸ್, ಎಕ್ಸ್‌ಟಿ, ಎಕ್ಸ್‌ಜೆಡ್, ಎಕ್ಸ್‌ಜೆಡ್ ಆಪ್ಷನ್ ಮತ್ತು ಎಕ್ಸ್‌ಜೆಡ್ ಅರ್ಬನ್ ವೆರಿಯೆಂಟ್‌‌ಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿದೆ.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಎಲ್ಲಾ ರೂಪಾಂತರಗಳಲ್ಲೂ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಮತ್ತು 1.5 ಲೀಟರ್ ಟರ್ಬೊ ಚಾರ್ಜ್ಡ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಸದ್ಯಕ್ಕೆ ಆಲ್‌ಟ್ರೊಜ್ ಕಾರಿನಲ್ಲಿ ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರ ನೀಡಲಾಗುತ್ತಿದೆ.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದರೆ 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದೆ.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಹೊಸದಾಗಿ ಬಿಡುಗಡೆಯಾಗಲಿರುವ 5-ಸ್ಪೀಡ್ ಆಟೋಮ್ಯಾಟಿಕ್ ಆವೃತ್ತಿಯನ್ನು ಪಂಚ್ ಮಾದರಿಯೊಂದಿಗೆ ಹಂಚಿಕೊಳ್ಳಲಿದ್ದು, ನಗರ ಪ್ರದೇಶಗಳಲ್ಲಿ ಚಾಲನೆಯನ್ನು ಸುಲಭವಾಗಿಸಲು ಎಎಂಟಿ ಮಾದರಿಯು ಹೆಚ್ಚಿನ ಬೇಡಿಕೆ ಪಡೆದುಕೊಳ್ಳಲಿದೆ ಎನ್ನಬಹುದು.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಜೊತೆಗೆ ಆಲ್‌ಟ್ರೊಜ್ ಆಟೋಮ್ಯಾಟಿಕ್ ಆವೃತ್ತಿಗಳಿಗಾಗಿ ವಿಶೇಷ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಒಪೆರಾ ಬ್ಲ್ಯೂ ಬಣ್ಣವನ್ನು ಹೊಸ ಎಎಂಟಿ ಮಾದರಿಗಳಿಗಾಗಿ ನೀಡಲಾಗಿದೆ.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಆಲ್‌ಟ್ರೊಜ್ ಮಾದರಿಯಲ್ಲಿ ಟಾಟಾ ಕಂಪನಿಯು ಕಳೆದ ಒಂದು ವರ್ಷದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸದ್ಯ ಆರಂಭಿಕವಾಗಿ ರೂ.6 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10 ಲಕ್ಷ ಬೆಲೆ ಹೊಂದಿದೆ.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ಇದೀಗ ಬಿಡುಗಡೆಯಾಗಲಿರುವ ಆಟೋಮ್ಯಾಟಿಕ್ ಮಾದರಿಯು ಪೆಟ್ರೋಲ್ ಮಾದರಿಯಲ್ಲಿ ಜೋಡಣೆ ಮಾಡಲಾಗುತ್ತಿದ್ದು, ಟಾಪ್ ಎಂಡ್ ಮಾದರಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಾಗಲಿರುವ ಆಟೋಮ್ಯಾಟಿಕ್ ಆವೃತ್ತಿಯು ಮ್ಯಾನುವಲ್ ಮಾದರಿಗಿಂತಲೂ ತುಸು ದುಬಾರಿಯಾಗಿರಲಿವೆ.

ಮಾರ್ಚ್ 21ರಂದು ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್‌ಟ್ರೊಜ್ ಆಟೋಮ್ಯಾಟಿಕ್ ವರ್ಷನ್

ನಗರಪ್ರದೇಶಗಳಲ್ಲಿ ಕಾರು ಚಾಲನೆಗೆ ಹೆಚ್ಚಿನ ಗ್ರಾಹಕರು ಮ್ಯಾನುವಲ್‌ಗಿಂತಲೂ ಹೆಚ್ಚು ಆಟೋಮ್ಯಾಟಿಕ್ ಆವೃತ್ತಿಗಳ ಖರೀದಿಗೆ ಆದ್ಯತೆ ನೀಡುತ್ತಿದ್ದು, ಆಟೋಮ್ಯಾಟಿಕ್ ಆವೃತ್ತಿಯ ನಂತರ ಹೊಸ ಕಾರು ಹ್ಯುಂಡೈ ಐ20 ಮಾದರಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

Article Published On: Wednesday, March 16, 2022, 10:38 [IST]
English summary
Tata new altroz dct automatic launch on march 21
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+