ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

ಟಾಟಾ ಮೋಟಾರ್ಸ್(Tata Motors) ಕಂಪನಿಯು 2022ರ ಐಪಿಎಲ್‌ನ ಅಧಿಕೃತ ಪ್ರಾಯೋಜಕತ್ವ ವಹಿಸಿರುವ ಹಿನ್ನಲೆಯಲ್ಲಿ ತನ್ನ ಪ್ರಮುಖ ಕಾರುಗಳಲ್ಲಿ ಕಾಜಿರಂಗ ಎಡಿಷನ್ ಕಾರು ಮಾದರಿಗಳನ್ನು ಪರಿಚಯಿಸುತ್ತಿದ್ದು, ಪಂಚ್ ಮಾದರಿಯ ನಂತರ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.

ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

ಐಪಿಎಲ್‌ ಸರಣಿಯಲ್ಲಿ ಸತತ ನಾಲ್ಕನೇ ವರ್ಷವೂ ಪ್ರಾಯೋಜಕತ್ವ ವಹಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಈ ಬಾರಿಯ ಐಪಿಎಲ್‌ನಲ್ಲಿ ಹೊಚ್ಚ ಹೊಸ ಪಂಚ್ ಕಾರು ಮಾದರಿಯನ್ನು ಪ್ರದರ್ಶನಗೊಳಿಸಲು ನಿರ್ಧರಿಸಿದ್ದು, ಪ್ರಾಯೋಜಕತ್ವ ವಿಶೇಷತೆಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಪಂಚ್ ಕಾರಿನಲ್ಲಿ ಕಾಜಿರಂಗ ಎನ್ನುವ ವಿಶೇಷ ಆವೃತ್ತಿಯನ್ನು ಅಭಿವೃದ್ದಿಪಡಿಸಿ ಈಗಾಗಲೇ ಅನಾವರಣಗೊಳಿಸಿದೆ.

ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

ಐಪಿಎಲ್‌ನಲ್ಲಿ ಪ್ರದರ್ಶನಗೊಳ್ಳುವ ಹೊಸ ಕಾಜಿರಂಗ ಆವೃತ್ತಿಗಳನ್ನು ಹರಾಜು ಮಾಡಲಿರುವ ಟಾಟಾ ಮೋಟಾರ್ಸ್ ಕಂಪನಿಯು ಹರಾಜು ಪ್ರಕ್ರಿಯೆಯಿಂದ ಬಂದ ಹಣವನ್ನು ಸಂಪೂರ್ಣವಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಂರಕ್ಷಣಾ ಅಭಿವೃದ್ದಿ ಕಾರ್ಯಗಳಿಗೆ ದೇಣಿಗೆ ನೀಡಲು ನಿರ್ಧರಿಸಿದೆ.

ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

ಮೊದಲು ಪಂಚ್ ಕಾರು ಮಾದರಿಗಾಗಿ ಮಾತ್ರ ಕಾಜಿರಂಗ ಆವೃತ್ತಿಯನ್ನು ಪರಿಚಯಿಸಲು ನಿರ್ಧರಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಇನ್ನುಳಿದ ಎಸ್‌ಯುವಿ ಮಾದರಿಗಳಿಗೂ ಹೊಸ ಆವೃತ್ತಿ ಪರಿಚಯಿಸಲು ನಿರ್ಧರಿಸಿದ್ದು, ವಿಶೇಷ ಕಾರು ಮಾದರಿಗಳ ಟೀಸರ್ ಮೂಲಕ ಅಳಿವಿಂಚಿನಲ್ಲಿರುವ ಘೆಂಡಾಮೃಗಗಳ ಸಂರಕ್ಷಣೆಗೆ ಸಹಕಾರ ನೀಡಲು ಸಜ್ಜಾಗಿದೆ.

2020ರಲ್ಲಿ ಭೀಕರ ಪ್ರವಾಹದ ಪರಿಣಾಮ ಹೆಚ್ಚಿನ ಮಟ್ಟದ ಹಾನಿಗೊಳಗಾಗಿದ್ದ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಅಭಿವೃದ್ದಿ ಕಾರ್ಯಗಳಿಗೆ ಸಹಾಯಹಸ್ತ ಚಾಚಲು ವಿಶೇಷ ಕಾರು ಮಾದರಿಗಳನ್ನು ಅಭಿವೃದ್ದಿಪಡಿಸಿ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಿದ್ದು, ಟೂರ್ನಿ ಮುಕ್ತಾಯದ ನಂತರವಷ್ಟೇ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ.

ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

ಹೈ ಎಂಡ್ ಮಾದರಿಗಳನ್ನು ಆಧರಿಸಿ ನಿರ್ಮಾಣವಾಗಿ ಕಾಜಿರಂಗ ಆವೃತ್ತಿಗಳು ವಿಶೇಷ ಬಣ್ಣದ ಆಯ್ಕೆ ಮತ್ತು ಲೊಗೊ ಮೂಲಕ ಆಕರ್ಷಕ ವಿನ್ಯಾಸ ಹೊಂದಿದ್ದು, ವಿಶೇಷ ಆವೃತ್ತಿಗಳು ಭಾರೀ ಮೊತ್ತಕ್ಕೆ ಹರಾಜುಕೊಳ್ಳುವ ನೀರಿಕ್ಷೆಯಲ್ಲಿದೆ.

ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

ಕಾಜಿರಂಗ ಆವೃತ್ತಿಗಳಿಗೆ ಮೆಟೆರಿಯಲ್ ಬ್ರೋಂಜ್ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಬಣ್ಣದ ಜೊತೆಗೆ ಕಾರಿನ ಹಿಂಬದಿಯ ಟೈಲ್‌ಗೇಟ್ ಮತ್ತು ಇಂಟಿರಿಯರ್‌ನಲ್ಲಿ ರೈನೊ ಬ್ಯಾಜ್ಡ್ ಜೊತೆಗೆ ಕಾರಿನ ಇಂಟಿರಿಯರ್‌ನಲ್ಲಿ ರೈನೊ ಮೋಟಿಫ್ ಜೋಡಿಸಲಾಗಿದೆ.

ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

ಹೊಸ ಆವೃತ್ತಿಗಳು ಆಕರ್ಷಕ ಬಣ್ಣದ ಆಯ್ಕೆ ಜೊತೆಗೆ ಕೆಲವು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇನ್ನುಳಿದಂತೆ ಎಲ್ಲಾ ತಾಂತ್ರಿಕ ಸೌಲಭ್ಯಗಳು ಸಾಮಾನ್ಯ ಮಾದರಿಯಲ್ಲಿರುವಂತೆಯೇ ಇರಲಿವೆ.

ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

ಇನ್ನು ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಬದಲಾವಣೆಗಳೊಂದಿಗೆ ತಿಂಗಳಿನಿಂದ ತಿಂಗಳಿಗೆ ಹೆಚ್ಚಿನ ಬೆಳವಣಿಗೆ ಸಾಧಿಸುತ್ತಿದ್ದು, 2022ರ ಜನವರಿ ಅವಧಿಯಲ್ಲಿನ ಪ್ರಯಾಣಿಕರ ಕಾರು ಮಾರಾಟದಲ್ಲಿ ಶೇ.51 ರಷ್ಟು ಬೆಳವಣಿಯೊಂದಿಗೆ 40 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.

ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿ ಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

ಟಾಟಾ ಮೋಟಾರ್ಸ್ ಕಂಪನಿಯು ಸೆಮಿಕಂಡಕ್ಟರ್ ಕೊರತೆ ಮತ್ತು ಕೋವಿಡ್‌ನಿಂದ ಉಂಟಾಗುತ್ತಿರುವ ಆರ್ಥಿಕ ಏರಿಳಿತದ ನಡುವೆಯೂ ಕಳೆದ ಕೆಲ ತಿಂಗಳಿನಿಂದ ಹೊಸ ಕಾರುಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದ್ದು, ಜನವರಿ ಅವಧಿಯ ಕಾರು ಮಾರಾಟದಲ್ಲಿ ಶೇ.51 ರಷ್ಟು ಬೆಳವಣಿಯೊಂದಿಗೆ ಪ್ರಮುಖ ಕಾರು ಕಂಪನಿಗಳಿಗೆ ಭರ್ಜರಿ ಪೈಪೋಟಿ ನೀಡಿದೆ.

ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿ ಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

ಜನವರಿ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 40,777 ಯುನಿಟ್ ಕಾರುಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ವರ್ಷದ ಜನವರಿ ಅವಧಿಯಲ್ಲಿ ಮಾರಾಟಗೊಂಡಿದ್ದ 26,978 ಯುನಿಟ್‌ಗಿಂತಲೂ ಶೇ.51 ರಷ್ಟು ಹೆಚ್ಚಳವಾಗಿದೆ.

ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿ ಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

2022ರ ಜನವರಿ ಅವಧಿಯಲ್ಲಿನ ಒಟ್ಟು ವಾಹನ ಮಾರಾಟದಲ್ಲಿ ಶೇ. 26 ರಷ್ಟು ಬೆಳವಣಿಗೆ ಸಾಧಿಸಿರುವ ಟಾಟಾ ಮೋಟಾರ್ಸ್ ಕಂಪನಿಯು 72,485 ವಾಹನಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ವರ್ಷದ ಜನವರಿ ಅವಧಿಯಲ್ಲಿ ಮಾರಾಟ ಮಾಡಿದ್ದ 57,649 ಯನಿಟ್ ವಾಹನಗಳಿಂತ ಶೇ.26 ರಷ್ಟು ಹೆಚ್ಚಳವಾಗಿದೆ.

ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿ ಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

ಕಳೆದ ಕೆಲ ತಿಂಗಳಿನಿಂದ ಸ್ವದೇಶಿ ಕಾರುಗಳಿಗೆ ಹೆಚ್ಚಿನ ಬೇಡಿಕೆ ದಾಖಲಾಗುತ್ತಿರುವುದೇ ಟಾಟಾ ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಪ್ರಯಾಣಿಕ ಕಾರು ಮಾರಾಟದಲ್ಲಿ ಮಾತ್ರವಲ್ಲದೆ ಟಾಟಾ ಕಂಪನಿಯು ಈ ಬಾರಿ ವಾಣಿಜ್ಯ ವಾಹನ ಮಾರಾಟದಲ್ಲೂ ಶೇ.7 ರಷ್ಟು ಮುನ್ನಡೆ ಸಾಧಿಸಿದೆ.

ಪಂಚ್ ಜೊತೆ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿ ಗಳಲ್ಲೂ ಬಿಡುಗಡೆಯಾಗಲಿದೆ ಕಾಜಿರಂಗ ಎಡಿಷನ್

ಜನವರಿ ಅವಧಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 35,268 ಯುನಿಟ್ ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದ್ದು, 3,560 ವಾಣಿಜ್ಯ ವಾಹನಗಳನ್ನು ವಿದೇಶಿ ಮಾರುಕಟ್ಟೆಗೆ ರಫ್ತುಗೊಳಿಸಿದೆ.

Most Read Articles

Kannada
English summary
Tata new nexon harrier safari punch kaziranga editions coming soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X