ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೊದಲ ಟಿವಿಸಿ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

ಟಿಯಾಗೋ ಮತ್ತು ಟಿಗೋರ್ ಕಾರು ಮಾದರಿಗಳ ಸಿಎನ್‌ಜಿ ಆವೃತ್ತಿಗಳನ್ನು ಬಿಡುಗಡೆ ಮಾಡಿರುವ ಟಾಟಾ ಮೋಟಾರ್ಸ್ ಕಂಪನಿಯು ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಕಂಪನಿಯು ಹೊಸ ಕಾರುಗಳ ಮೊದಲ ಟಿವಿ ಜಾಹೀರಾತು ಮೂಲಕ ಕಾರುಗಳ ಕಾರ್ಯಕ್ಷಮತೆ ಕುರಿತ ಮಾಹಿತಿ ಹಂಚಿಕೊಂಡಿದೆ.

ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೊದಲ ಟಿವಿಸಿ ಬಿಡುಗಡೆ ಮಾಡಿದ ಟಾಟಾ

ಟಾಟಾ ಮೋಟಾರ್ಸ್ ಕಂಪನಿಯು ಸಿಎನ್‌ಜಿ ತಂತ್ರಜ್ಞಾನವನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಮತ್ತಷ್ಟು ಬದಲಾವಣೆಗೊಳಿಸಿ ಇನ್‌ಕ್ರೆಡೆಬಲ್‌ ಸಿಎನ್‌ಜಿ(ಐ-ಸಿಎನ್‌ಜಿ) ಎಂದು ಘೋಷಣೆ ಮಾಡಿದ್ದು, ಹೊಸ ಸಿಎನ್‌ಜಿ ಕಾರುಗಳಲ್ಲಿ ಯಾವುದೇ ಕಂಪನಿಯು ನೀಡಿರದಂತಹ ಹಲವು ತಾಂತ್ರಿಕ ಸೌಲಭ್ಯಗಳನ್ನು ನೀಡಿದೆ.

ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೊದಲ ಟಿವಿಸಿ ಬಿಡುಗಡೆ ಮಾಡಿದ ಟಾಟಾ

ಟಾಟಾ ಕಂಪನಿಯು ಹೊಸ ಸಿಎನ್‌ಜಿ ಕಾರುಗಳಲ್ಲಿ ಪ್ರತ್ಯೇಕವಾಗಿ ನಿಯಂತ್ರಣ ಹೊಂದಿರುವ ಪೆಟ್ರೋಲ್ ಮತ್ತು ಸಿಎನ್‌ಜಿ ಸ್ವಿಚ್‌ಗಳನ್ನು ಜೋಡಣೆ ಮಾಡಿದ್ದು, ವಾಹನ ಮಾಲೀಕರು ಪೆಟ್ರೋಲ್ ಅಥವಾ ಸಿಎನ್‌ಜಿ ಲಭ್ಯತೆ ಆಧಾರದ ಮೇಲೆ ಎರಡು ಆಯ್ಕೆಗಳನ್ನು ಪ್ರತ್ಯೇಕವಾಗಿ ಬಳಕೆ ಮಾಡಿಕೊಳ್ಳಬಹುದು.

ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೊದಲ ಟಿವಿಸಿ ಬಿಡುಗಡೆ ಮಾಡಿದ ಟಾಟಾ

ಹೊಸ ಟಾಟಾ ಟಿಯಾಗೋ ಸಿಎನ್‌ಜಿ ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6,09,900 ದಿಂದ ಟಾಪ್ ಎಂಡ್ ಮಾದರಿಯು ರೂ. 7,52,900 ಬೆಲೆ ಹೊಂದಿದ್ದರೆ ಟಿಗೋರ್ ಸಿಎನ್‌ಜಿ ಆವೃತ್ತಿಯು ಪ್ರಮುಖ ಎರಡು ವೆರಿಯೆಂಟ್‌ಗಳೊಂದಿಗೆ ಆರಂಭಿಕವಾಗಿ ರೂ. 7,69,900 ದಿಂದ ಟಾಪ್ ಎಂಡ್ ಮಾದರಿಯು ರೂ. 8,29,900 ಬೆಲೆ ಹೊಂದಿದೆ.

ಟಿಯಾಗೋ ಸಿಎನ್‌ಜಿ ಹ್ಯಾಚ್‌ಬ್ಯಾಕ್ ಮಾದರಿಯು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಪ್ಲಸ್ ವೆರಿಯೆಂಟ್ ಹೊಂದಿದ್ದರೆ ಟಿಗೋರ್ ಸಿಎನ್‌ಜಿ ಕಂಪ್ಯಾಕ್ಟ್ ಸೆಡಾನ್ ಮಾದರಿಯು ಎಕ್ಸ್‌ಜೆಡ್ ಮತ್ತು ಎಕ್ಸ್‌ಜೆಡ್ ಪ್ಲಸ್ ವೆರಿಯೆಂಟ್‌ ಹೊಂದಿದೆ.

ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೊದಲ ಟಿವಿಸಿ ಬಿಡುಗಡೆ ಮಾಡಿದ ಟಾಟಾ

ಹೊಸ ಟಿಯಾಗೋ ಸಿಎನ್‌ಜಿ ಮತ್ತು ಟಿಗೋರ್ ಸಿಎನ್‌ಜಿ ಮಾದರಿಗಳು ಸ್ಟ್ಯಾಂಡರ್ಡ್ ಪೆಟ್ರೋಲ್ ಮಾದರಿಗಿಂತಲೂ ರೂ. 1 ಲಕ್ಷದಷ್ಟು ದುಬಾರಿಯಾಗಿದ್ದರೂ ಪರಿಸರ ಸ್ನೇಹಿ ಸಿಎನ್‌ಜಿ ತಂತ್ರಜ್ಞಾನದೊಂದಿಗೆ ಅತ್ಯಧಿಕ ಮೈಲೇಜ್ ಪ್ರೇರಣೆ ಹೊಂದಿವೆ.

ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೊದಲ ಟಿವಿಸಿ ಬಿಡುಗಡೆ ಮಾಡಿದ ಟಾಟಾ

ಹೊಸ ಕಾರುಗಳಲ್ಲಿ ಟಾಟಾ ಕಂಪನಿಯು 1.2-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಜೊತೆ ಸಿಎನ್‌ಜಿ ಕಿಟ್ ಜೋಡಣೆ ಮಾಡಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಪೆಟ್ರೋಲ್ ಮಾದರಿಗಿಂತಲೂ ಕಡಿಮೆ ಬಿಎಚ್‌ಪಿ ಉತ್ಪಾದನೆ ಹೊಂದಿದ್ದರೂ ಮೈಲೇಜ್‌ನಲ್ಲಿ ಗಮನಸೆಳೆಯಲಿವೆ.

ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೊದಲ ಟಿವಿಸಿ ಬಿಡುಗಡೆ ಮಾಡಿದ ಟಾಟಾ

ಪೆಟ್ರೋಲ್ ಮತ್ತು ಸಿಎನ್‌ಜಿ ಸ್ವಿಚ್‌ಗಳಿಗಾಗಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಪ್ರತ್ಯೇಕವಾದ ಇಂಡಿಕೇಟರ್‌ಗಳನ್ನು ನೀಡಲಾಗಿದ್ದು, ಚಾಲನೆಗೂ ಮುನ್ನ ಕಾರು ಪೆಟ್ರೋಲ್ ಮೋಡ್‌ನಲ್ಲಿ ಚಾಲನೆಯಾಗುತ್ತಿದೆಯಾ ಅಥವಾ ಸಿಎನ್‌ಜಿ ಮೋಡ್‌ನಲ್ಲಿ ಚಾಲನೆಯಾಗುತ್ತಿದೆ ಎನ್ನುವುದು ನಿಖರವಾಗಿ ತಿಳಿದುಕೊಳ್ಳಬಹುದು.

ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೊದಲ ಟಿವಿಸಿ ಬಿಡುಗಡೆ ಮಾಡಿದ ಟಾಟಾ

ಹಾಗೆಯೇ ಪೆಟ್ರೋಲ್ ಅಥವಾ ಸಿಎನ್‌ಜಿ ಲಭ್ಯತೆಯ ಆಧಾರ ಮೇಲೆ ಕೆಲವೇ ಸೆಕೆಂಡುಗಳಲ್ಲಿ ಸ್ವಿಚ್ ಮೂಲಕ ಪೆಟ್ರೋಲ್/ಸಿಎನ್‌ಜಿ ಮೋಡ್‌ಗೆ ಬದಲಾಯಿಸಿಕೊಳ್ಳಬಹುದಾಗಿದ್ದು, ಇದರ ಹೊರತಾಗಿ ಹೊಸ ಕಾರುಗಳು ಐ-ಸಿಎನ್‌ಜಿ ಬ್ಯಾಜ್ಡ್‌ನೊಂದಿಗೆ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ತಾಂತ್ರಿಕ ಸೌಲಭ್ಯಗಳನ್ನು ಹೊಂದಿವೆ.

ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೊದಲ ಟಿವಿಸಿ ಬಿಡುಗಡೆ ಮಾಡಿದ ಟಾಟಾ

ಹೊಸ ಸಿಎನ್‌ಜಿ ಮಾದರಿಗಳ ನಿಖರವಾದ ಮೈಲೇಜ್ ಮಾಹಿತಿ ಕುರಿತು ಟಾಟಾ ಕಂಪನಿಯು ಯಾವುದೇ ಮಾಹಿತಿ ಹಂಚಿಕೊಂಡಿಲ್ಲವಾದರೂ ಪ್ರತಿ ಸ್ಪರ್ಧಿ ಮಾದರಿಗಳಿಂತಲೂ ಹೆಚ್ಚು ಇಂಧನ ದಕ್ಷತೆ ಮರಳಿಸುವುದಾಗಿ ಮಾತ್ರ ಹೇಳಿಕೊಂಡಿದ್ದು, ಪೆಟ್ರೋಲ್ ಮಾದರಿಗಿಂತಲೂ ಹೆಚ್ಚುವರಿಯಾಗಿ 100 ಕೆ.ಜಿ ತೂಕ ಪಡೆದುಕೊಂಡಿರುವ ಹೊಸ ಸಿಎನ್‌ಜಿ ಕಾರುಗಳು ಮಾರುತಿ ಸುಜುಕಿ ಮತ್ತು ಹ್ಯುಂಡೈ ಸಿಎನ್‌ಜಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿವೆ.

ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೊದಲ ಟಿವಿಸಿ ಬಿಡುಗಡೆ ಮಾಡಿದ ಟಾಟಾ

ಜೊತೆಗೆ ಟಿಗೋರ್, ಟಿಯಾಗೋ ಸಿಎನ್‌ಜಿ ಮಾದರಿಯ ಹೈ ಎಂಡ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ಕೆಲವು ಹೆಚ್ಚುವರಿ ಫೀಚರ್ಸ್ ನೀಡಿದ್ದು, ಹೊಸ ಮಾದರಿಯಲ್ಲಿ ಇದೀಗ 14 ಇಂಚಿನ ಅಲಾಯ್ ವ್ಹೀಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಕಾರ್‌ಪ್ಲೇ ಪಡೆದುಕೊಂಡಿವೆ.

ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೊದಲ ಟಿವಿಸಿ ಬಿಡುಗಡೆ ಮಾಡಿದ ಟಾಟಾ

ಹಾಗೆಯೇ ಎಂಟು-ಸ್ಪೀಕರ್ ಹರ್ಮನ್ ಆಡಿಯೊ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ವಿದ್ಯುತ್ ಹೊಂದಾಣಿಕೆಯೊಂದಿಗೆ ಮಡಿಕೆಮಾಡಬಹುದಾದ ವಿಂಗ್ ಮಿರರ್‌ ಸೇರಿದಂತೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಹೊಂದಿದೆ.

ಟಿಯಾಗೋ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೊದಲ ಟಿವಿಸಿ ಬಿಡುಗಡೆ ಮಾಡಿದ ಟಾಟಾ

ಹೊಸ ಕಾರಿಗಳಲ್ಲಿನ ಸುರಕ್ಷತಾ ವೈಶಿಷ್ಟ್ಯತೆಗಳು ಕೂಡಾ ಸಾಕಷ್ಟು ಸುಧಾರಿತವಾಗಿದ್ದು, ಹೊಸ ಕಾರುಗಳಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಸೆನ್ಸಾರ್‌ ಮತ್ತು ಕಾರ್ನರ್ ಸ್ಟ್ಯಾಬಿಲಿಟಿ ಕಂಟ್ರೋಲ್ ಸಿಸ್ಟಂ ನೀಡಲಾಗಿದೆ.

Most Read Articles

Kannada
English summary
Tata new tiago tigor cng models first tvc
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X