ಟಾಟಾ ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ: ವಾರಂಟಿ ಅಭಯ ನೀಡಿದ ಕಂಪನಿ

ಪೆಟ್ರೋಲ್, ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಕಾರುಗಳು ದುಬಾರಿಯಾಗಿವೆ. ಇದಕ್ಕೆ ಪ್ರಮುಖ ಕಾರಣ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸುವ ಬ್ಯಾಟರಿ ಮತ್ತು ಮೋಟಾರ್‌ಗಳಾಗಿವೆ. ಕಾರಿನ ಶೇ 70-80 ರಷ್ಟು ಬೆಲೆ ಈ ಎರಡೂ ಪ್ರಮುಖ ಭಾಗಗಳಿಗೆ ಇಡಬೇಕಾಗುತ್ತದೆ. ಆದರೆ ಇವುಗಳ ನಿಖರ ಬೆಲೆ ಮಾತ್ರ ಗ್ರಾಹಕರಿಗೆ ತಿಳಿದಿಲ್ಲ.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ಪ್ರಸ್ತುತ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಅಗ್ರ ಸ್ಥಾನದಲ್ಲಿರುವ ಟಾಟಾ ಮೋಟಾರ್ಸ್‌ಗೆ ನೆಕ್ಸಾನ್ ಇವಿ ಮಾದರಿ ಆಧಾರ ಸ್ಥಂಭವಾಗಿದೆ. ಈ ಮಾದರಿಯು ಪ್ರತಿ ತಿಂಗಳು ದಾಖಲೆ ಮಟ್ಟದ ಮಾರಾಟವನ್ನು ದಾಖಲಿಸಿ ಟಾಟಾವನ್ನು ಟಾಪ್‌ನಲ್ಲಿ ನಿಲ್ಲಿಸಿದೆ. ಆದರೆ ಈ ಮಾದರಿಯ ಬ್ಯಾಟರಿ ಹಾಗೂ ಮೋಟಾರ್ ಬೆಲೆ ಇದೀಗ ಬಹಿರಂಗವಾಗಿದೆ.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ಇತ್ತೀಚೆಗೆ ನೆಕ್ಸಾನ್ ಇವಿ ಬಳಕೆದಾರರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಬ್ಯಾಟರಿ ಬೆಲೆ ರೂ. 7 ಲಕ್ಷವೆಂದು ಮಾಹಿತಿ ಹಂಚಿಕೊಂಡಿದ್ದರು. ಇದೀಗ ಮತ್ತೊಬ್ಬ ನೆಕ್ಸಾನ್ ಇವಿ ಮಾಲೀಕರು ಎಲೆಕ್ಟ್ರಿಕ್ ಮೋಟರ್‌ನ ಬೆಲೆಯನ್ನು ಹಂಚಿಕೊಂಡಿದ್ದಾರೆ. ಇವರು ನೀಡಿರುವ ಮಾಹಿತಿಯಂತೆ ಈ ಎಲೆಕ್ಟ್ರಿಕ್ ಮೋಟಾರ್ ಬೆಲೆಯು ರೂ. 4,47,489 ಇದೆ.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ಈ ಬೆಲಯು "ಟ್ರಾಕ್ಷನ್ ಮೋಟಾರ್ ಅಸೆಂಬ್ಲಿ" MRP ಆಗಿದೆ. ಇವು ಅತ್ಯಂತ ದುಬಾರಿ ಭಾಗಗಳು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಟಾಟಾ ವಾರಂಟಿ ನೀಡುವುದರಿಂದ ಯಾವುದೇ ಭಯಪಡುವ ಅಗತ್ಯವೂ ಇಲ್ಲ. ಟಾಟಾ ನೆಕ್ಸಾನ್ ಬ್ಯಾಟರಿಯ ಮೇಲೆ 8 ವರ್ಷ ಅಥವಾ 1.6 ಲಕ್ಷ ಕಿ.ಮೀ ವಾರಂಟಿ ನೀಡಲಾಗುತ್ತದೆ.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ಈ ಅವಧಿಯಲ್ಲಿ ಬ್ಯಾಟರಿ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ನೀವು ಹೊಸ ಬ್ಯಾಟರಿಯನ್ನು ಉಚಿತವಾಗಿ ಪಡೆಯಬಹುದು. ಈ ಹಿಂದೆ ನಮ್ಮ ರಾಜ್ಯದ ನೆಕ್ಸಾನ್ ಇವಿ ಮಾಲೀಕರೊಬ್ಬರು ಎರಡು ವರ್ಷಗಳಲ್ಲಿ 68,000 ಕಿ.ಮೀ. ಕ್ರಮಿಸಿದ್ದರು. ಆಗಲೇ ಬ್ಯಾಟರಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ಗಮನಾರ್ಹವಾಗಿ ಬ್ಯಾಟರಿ ಚಾರ್ಜ್ ಸ್ಥಿತಿಯು ಶೇ 15% ಕ್ಕಿಂತ ಕಡಿಮೆಯಾದಾಗ ಕಾರು ನಿಲ್ಲುತ್ತಿತ್ತು. ಈ ಕಾರಿನಲ್ಲಿದ್ದ ಬ್ಯಾಟರಿಯು ವಾರಂಟಿಯಲ್ಲಿದ್ದ ಕಾರಣ, ಟಾಟಾ ಮೋಟಾರ್ಸ್ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹಳೆಯ ಬ್ಯಾಟರಿಯನ್ನು ಹಿಂಪಡೆದು ಹೊಸ ಬ್ಯಾಟರಿಯನ್ನು ಬದಲಾಯಿಸಿತ್ತು.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ಸದ್ಯ ಬ್ಯಾಟರಿ ತಂತ್ರಜ್ಞಾನವನ್ನು ಸುಧಾರಿಸಲು ಕಾರು ಉತ್ಪಾದನಾ ಕಂಪನಿಗಳು ಹಲವಾರು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಹೊಸ ಬ್ಯಾಟರಿ ಪ್ಯಾಕ್ ಸಿದ್ದಪಡಿಸುವುದಕ್ಕಿಂತಲೂ ಹೆಚ್ಚು ದುರಸ್ತಿ ಕಾರ್ಯಗಳಿಗೆ ಖರ್ಚು ತಗುಲಬಹುದು ಎನ್ನುತ್ತವೆ.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ಹೀಗಾಗಿ ದೋಷಪೂರಿತ ಬ್ಯಾಟರಿ ಪ್ಯಾಕ್ ಅನ್ನು ದುರಸ್ತಿಗೊಳಿಸುವ ಬದಲು ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಮಾದರಿಗೆ ಹೊಸ ಬ್ಯಾಟರಿ ಪ್ಯಾಕ್ ಅಳವಡಿಸಿ, ದೋಷಪೂರಿತ ಬ್ಯಾಟರಿ ಪ್ಯಾಕ್ ಅನ್ನು ಅದು ವಿವಿಧ ಅಧ್ಯಯನಕ್ಕೆ ಒಳಪಡಿಸಿಕೊಂಡಿತ್ತು.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ದೋಷರೂರಿತ ಬ್ಯಾಟರಿ ಪ್ಯಾಕ್‌ನಲ್ಲಿ ಕಂಡುಬರುತ್ತಿರುವ ಸಮಸ್ಯೆ ಕುರಿತು ವಿವಿಧ ಹಂತದ ಅಧ್ಯಯನಗಳ ನಂತರ ಭವಿಷ್ಯದಲ್ಲಿನ ಬ್ಯಾಟರಿ ಪ್ಯಾಕ್‌ಗಳ ಅಭಿವೃದ್ದಿಯಲ್ಲಿ ಸುಧಾರಣೆ ತಂದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಬ್ಯಾಟರಿಗಳ ಬೆಲೆ ಕೂಡ ಗಣನೀಯವಾಗಿ ಕಡಿಮೆಯಾಗಬಹುದು.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ಇದೇ ಕಾರಣಕ್ಕೆ ಸದ್ಯ ಇವಿ ವಾಹನಗಳು ಇಂಧನ ಚಾಲಿತ ವಾಹನಗಳಿಂತ ದುಬಾರಿಯಾಗಲು ಪ್ರಮುಖ ಕಾರಣವಾಗಿದ್ದು, ಬ್ಯಾಟರಿ ಪ್ಯಾಕ್ ಎಲೆಕ್ಟ್ರಿಕ್ ವಾಹನಗಳ ಮುಖ್ಯ ತಾಂತ್ರಿಕ ಘಟಕವಾಗಿರುವುದರಿಂದ ಈ ವಿಭಾಗದಲ್ಲಿ ಇನ್ನು ಹಲವಾರು ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯ ಅವಶ್ಯವಿದೆ ಎನ್ನಬಹುದು.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ಮಾರಾಟದಲ್ಲಿ ನಂಬರ್ 1 ಸ್ಥಾನ

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಟಾಟಾ ಮೋಟಾರ್ಸ್ ಪ್ರಸ್ತುತ ನಂಬರ್ 1 ಸ್ಥಾನದಲ್ಲಿದೆ. ನೆಕ್ಸಾನ್ ಇವಿ ಪ್ರೈಮ್, ನೆಕ್ಸಾನ್ ಇವಿ ಮ್ಯಾಕ್ಸ್, ಟಿಗೋರ್ ಮತ್ತು ಹೊಸದಾಗಿ ಬಿಡುಗಡೆಯಾದ ಟಿಯಾಗೋ ಇವಿಯೊಂದಿಗೆ ಟಾಟಾ ತನ್ನ ಜನಪ್ರಿಯ ಕಾರುಗಳನ್ನು ಒಂದೊಂದಾಗಿ ಎಲೆಕ್ಟ್ರಿಕ್ ವಲಯಕ್ಕೆ ಕೊಂಡೊಯ್ಯುತ್ತಿದೆ.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ಈ ಮೂಲಕ ಎಲೆಕ್ಟ್ರಿಕ್ ವಿಭಾಗದಲ್ಲಿ ಟಾಟಾ ಮೋಟಾರ್ಸ್ ತನ್ನ ಹಿಡಿತವನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಸಾಧ್ಯತೆಯಿದೆ. ಭಾರತವು EV ಗಳಿಗೆ ಯುವ ಮಾರುಕಟ್ಟೆಯಾಗಿದ್ದರೂ, ನಾವು ಟಾಟಾದ ಎಲೆಕ್ಟ್ರಿಕ್ ಉತ್ಪನ್ನಗಳಿಗೆ ಉತ್ತಮ ಸ್ವಾಗತವನ್ನು ಕಂಡಿದ್ದೇವೆ.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ಇದನ್ನು ಪ್ರತಿ ತಿಂಗಳ ಟಾಟಾ ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಕಾಣಬಹುದು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯ ಶೇ 82.80 ರಷ್ಟು ಮಾರಾಟದ ಪಾಲನ್ನು ಹೊಂದುವ ಮೂಲಕ ಟಾಟಾ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಈ ಮಾರಾಟಗಳಲ್ಲಿ ಹೆಚ್ಚಿನವು ಟಾಟಾ ನೆಕ್ಸಾನ್ ಇವಿಗಳಾಗಿರುವುದು ವಿಶೇಷ.

ನೆಕ್ಸಾನ್ EV ಎಲೆಕ್ಟ್ರಿಕ್ ಮೋಟಾರ್ ಬದಲಿ ವೆಚ್ಚಕ್ಕೆ ದಂಗಾದ ಮಾಲೀಕ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯಕ್ಕೆ ಟಾಟಾ ನೆಕ್ಸಾನ್ ಇವಿ ನೇರ ಪ್ರತಿಸ್ಪರ್ಧಿಯನ್ನು ಹೊಂದಿಲ್ಲ. ಮುಂಬರುವ ದಿನಗಳಲ್ಲಿ ಮಹೀಂದ್ರಾ XUV400 ಇವಿ, Nexon EV ಗೆ ಪ್ರಬಲ ಪ್ರತಿಸ್ಪರ್ಧಿಯಾಗಲಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ XUV400 ಕಾರು ಮಾರುಕಟ್ಟೆಗೆ ಇಳಿದ ಬಳಿಕ ನೆಕ್ಸಾನ್‌ಗೆ ಎಷ್ಟರ ಮಟ್ಟಿಗೆ ಪೈಪೋಟಿ ನೀಡಲಿದೆ ಕಾದುನೋಡಬೇಕು.

Most Read Articles

Kannada
English summary
Tata Nexon EV Electric Motor Replacement Cost Owner Shocked Company Offered Warranty
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X