ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್- ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನ್ಯೂ ವರ್ಷನ್..

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ ಫೇಸ‌್‌ಲಿಫ್ಟ್ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಇವಿ ಕಾರು ಬಿಡುಗಡೆಗೂ ಮುನ್ನ ಕಂಪನಿಯು ನೆಕ್ಸಾನ್ ಇವಿ ಮ್ಯಾಕ್ಸ್ ಬ್ಯಾಟರಿ ರೇಂಜ್ ಕುರಿತಂತೆ ಹೊಸ ಟೀಸರ್ ಪ್ರಕಟಿಸಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

2022ರ ನೆಕ್ಸಾನ್ ಇವಿ ಮಾದರಿಯು ನೆಕ್ಸಾನ್ ಇವಿ ಮ್ಯಾಕ್ಸ್ ಹೆಸರಿನೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಂತೆ ಕಂಪನಿಯು ವಿವಿಧ ಟೀಸರ್‌ಗಳನ್ನು ಪ್ರಕಟಿಸುತ್ತಿದೆ. ಹೊಸ ಟೀಸರ್‌ನಲ್ಲಿ ಕಂಪನಿಯು ಹೊಸ ಕಾರಿನ ರಿಯಲ್ ವರ್ಲ್ಡ್ ಮೈಲೇಜ್ ಕುರಿತಂತೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿರದೆ ಪ್ರಮುಖ ನಗರಗಳ ನಡುವೆ ಸಂಚರಿಸುವ ಸುಲಭವಾಗುವಂತೆ ಮೈಲೇಜ್ ರೇಂಜ್ ಹೆಚ್ಚಿಸಲಾಗಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ಹೊಸ ಟೀಸರ್‌ನಲ್ಲಿ ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು-ಮೈಸೂರಿನ ನಡುವಿನ ಸಂಚಾರವನ್ನು ಒಂದೇ ಚಾರ್ಜ್ ಮೂಲಕ ಯಶಸ್ವಿಯಾಗಿ ಪ್ರಯಾಣಿಸಬಹುದಾದ ಸಾಧ್ಯತೆ ಬಗೆಗೆ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ಮತ್ತು ಮೈಸೂರು ಮಾತ್ರವಲ್ಲ ದೇಶದ ಪ್ರಮುಖ ಅಂತರ ನಗರಗಳ(300 ಕಿ.ಮೀ ಅಂತರದಲ್ಲಿರುವ) ನಡುವಿನ ಪ್ರಮಾಣವನ್ನು ಸುಲಭವಾಗಿಸುವ ಸುಳಿವು ನೀಡಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ನೆಕ್ಸಾನ್ ಇವಿ ಕಾರಿನಲ್ಲಿ 95kW ಎಲೆಕ್ಟ್ರಿಕ್ ಮೋಟಾರ್ ಮತ್ತು 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, 2022ರ ಆವೃತ್ತಿಯಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯನ್ನು ಆಧರಿಸಿ 40kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಿದೆ ಎನ್ನಲಾಗಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ನೆಕ್ಸಾನ್ ಇವಿ ಎಆರ್‌ಎಐ ಸಂಸ್ಥೆಯು ಪ್ರಮಾಣಿಕರಿಸದಂತೆ ಸದ್ಯ 30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಇಕೋ ಡ್ರೈವ್ ಮೋಡ್‌ನಲ್ಲಿ ಗರಿಷ್ಠ 312 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದರೆ 2022ರ ಆವೃತ್ತಿಯಲ್ಲಿನ ಮೈಲೇಜ್ ರೇಂಜ್ ಪ್ರಮಾಣವು ಪ್ರತಿ ಚಾರ್ಜ್ 400 ಕಿ.ಮೀ ಗೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

30kWh ಲಿಥೀಯಂ ಅಯಾನ್ ಬ್ಯಾಟರಿ ಪ್ಯಾಕ್‌ ಹೊಂದಿರುವ ಪ್ರಸ್ತುತ ಮಾದರಿಯು ವಿವಿಧ ಡ್ರೈವ್ ಮೋಡ್ ಮತ್ತು ರಸ್ತೆ ಸೌಲಭ್ಯಕ್ಕೆ ಅನುಗುಣವಾಗಿ ಪ್ರತಿ ಚಾರ್ಜ್‌ಗೆ ಗರಿಷ್ಠ 200ರಿಂದ 220 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯು ಇಕೋ ಮೋಡ್‌ನಲ್ಲಿ 400 ಕಿ.ಮೀ ಮೈಲೇಜ್ ಹೊಂದಿದ್ದರೂ ವಿವಿಧ ಡ್ರೈವಿಂಗ್ ಮೋಡ್ ಮತ್ತು ರಸ್ತೆ ಸೌಲಭ್ಯಕ್ಕೆ ಅನುಗುಣವಾಗಿ ಕನಿಷ್ಠ 300 ಕಿ.ಮೀ ಗಿಂತಲೂ ಹೆಚ್ಚು ಮೈಲೇಜ್ ನೀಡಲಿದೆ ಎನ್ನಲಾಗಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ಹೊಸ ನೆಕ್ಸಾನ್ ಇವಿ ಮಾದರಿಯಲ್ಲಿ ಹೆಚ್ಚಿನ ಮೈಲೇಜ್ ರೇಂಜ್ ಹೊಂದಿರುವ ಮಾದರಿಗಾಗಿ ಹೆಚ್ಚಿನ ಬೇಡಿಕೆ ಹರಿದುಬರುತ್ತಿದ್ದು, ಕಂಪನಿಯು ಗ್ರಾಹಕರ ಬೇಡಿಕೆ ಅನುಸಾರವಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಅಭಿವೃದ್ದಿಗೊಳಿಸಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ಇದರೊಂದಿಗೆ ಜಿಪ್‌ಟ್ರಾನ್ ತಂತ್ರಜ್ಞಾನ ಹೊಂದಿರುವ ನೆಕ್ಸಾನ್ ಇವಿ ಮಾದರಿಯು 127 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದ್ದು, ಸುಧಾರಿತ ತಂತ್ರಜ್ಞಾನದೊಂದಿಗೆ ಉನ್ನತೀಕರಿಸಲಾಗುತ್ತಿರುವ ಹೊಸ ಮಾದರಿಯು ಪ್ರಸ್ತುತ ಮಾದರಿಯಲ್ಲಿ ಬಳಕೆ ಮಾಡಲಾಗುತ್ತಿರುವ 95kW ಎಲೆಕ್ಟ್ರಿಕ್ ಮೋಟಾರ್ ಮೂಲಕವೇ 134 ಬಿಎಚ್‌ಪಿ ಉತ್ಪಾದನಾ ವೈಶಿಷ್ಟ್ಯತೆ ಹೊಂದಿರಲಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ಹೊಸ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪ್ರಮುಖ ಸೇಫ್ಟಿ ಫೀಚರ್ಸ್‌ಗಳನ್ನು ಸಹ ಉನ್ನತೀಕರಿಸುತ್ತಿದ್ದು, ಹೊಸ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ವೆಂಟಿಲೆಟೆಡ್ ಸೀಟುಗಳು ಸೇರಿದಂತೆ ಕೆಲವು ಹೊಸ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ಸದ್ಯ ಮಾರುಕಟ್ಟೆಯಲ್ಲಿ ಎಂಜಿ ಜೆಡ್ಎಸ್ ಎಲೆಕ್ಟ್ರಿಕ್ ಮತ್ತು ಹ್ಯುಂಡೈ ಕೊನಾ ಕಾರುಗಳಿಗೆ ಪೈಪೋಟಿಯಾಗಿ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಸುಧಾರಿತ ಜಿಪ್‌ಟ್ರಾನ್ ತಂತ್ರಜ್ಞಾನ ಬಳಕೆ ಮಾಡುತ್ತಿರುವುದೇ ಟಾಟಾ ಹೊಸ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ಜಿಪ್‌ಟ್ರಾನ್ ತಂತ್ರಜ್ಞಾನವು ಟಾಟಾ ಕಂಪನಿಯ ಜನಪ್ರಿಯತೆಯನನು ಜಾಗತಿಕ ಮಟ್ಟದಲ್ಲಿ ಗಮನಸೆಳೆಯುವಂತೆ ಮಾಡಿದ್ದು, ಎಲೆಕ್ಟ್ರಿಕ್ ಕಾರುಗಳ ಕಾರ್ಯಕ್ಷಮತೆ, ಬ್ಯಾಟರಿ ದಕ್ಷತೆ ಮತ್ತು ಗ್ರಾಹಕರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಯಲ್ಲಿ ಸಹಕಾರಿಯಾಗುತ್ತಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ನೆಕ್ಸಾನ್ ಇವಿ ಮಾದರಿಯಲ್ಲಿ ಬಳಕೆ ಮಾಡಲಾಗುತ್ತಿರುವ ಹೈ-ವೊಲ್ಟೆಜ್ ಆರ್ಕಿಟೆಕ್ಚರ್ ಪ್ರೇರಿತ ಜಿಪ್‌ಟ್ರಾನ್ ತಂತ್ರಜ್ಞಾನವು ಹಲವು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ಹೈ ವೊಲ್ಟೆಜ್ ಸಿಸ್ಟಂ, ದೀರ್ಘಕಾಲಿಕ ಬ್ಯಾಟರಿ ಸಾಮಾರ್ಥ್ಯ, ಅತಿಕಡಿಮೆ ಅವಧಿಯಲ್ಲಿ ಹೆಚ್ಚು ಚಾರ್ಜಿಂಗ್ ಸಿಸ್ಟಂ ಮತ್ತು ಸೂಪಿರಿಯರ್ ಪರ್ಫಾಮೆನ್ಸ್ ವೈಶಿಷ್ಟ್ಯತೆಗಳಿಂದ ಕೂಡಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ಜಿಪ್‌ಟ್ರಾನ್ ತಂತ್ರಜ್ಞಾನವು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಅಳವಡಿಕೆ ಹಿನ್ನಲೆಯಲ್ಲಿ ಕಾರು ಚಾಲನೆ ವೇಳೆ ನೀರ್ದಿಷ್ಟ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜಿಂಗ್ ಪ್ರಕ್ರಿಯೆಯು ಮರಳಿ ಪಡೆಯಬಹುದಾಗಿದ್ದು, ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನವು ಬ್ಯಾಟರಿ ದೀರ್ಘಕಾಲದ ಬಾಳಿಕೆಗೆ ಸಹಕರಿಸಲಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ಜೊತೆಗೆ ಹೊಸ ಕಾರಿನ ಮುಂಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗೊಳಿಸಿದ್ದು, ಕಾರಿನ ಒಳಭಾಗದಲ್ಲೂ ಹಲವಾರು ಹೊಸ ತಾಂತ್ರಿಕ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ. ಸ್ಟ್ಯಾಂಡರ್ಡ್ ನೆಕ್ಸಾನ್ ಇವಿ ಮಾದರಿಗಿಂತ ನೆಕ್ಸಾನ್ ಮ್ಯಾಕ್ಸ್ ಮಾದರಿಯು ತುಸು ದುಬಾರಿಯಾಗಿರಲಿದ್ದು, ಬೆಲೆ ಆಧರಿಸಿ ಗ್ರಾಹಕರು ವಿವಿಧ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ಸದ್ಯ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಎಕ್ಸ್‌ಎಂ, ಎಕ್ಸ್‌ಜೆಡ್ ಪ್ಲಸ್, ಎಕ್ಸ್‌ಜೆಡ್ ಪ್ಲಸ್ ಲಕ್ಸ್ ಎನ್ನುವ ಮೂರು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಮೂರು ವೆರಿಯೆಂಟ್‌ಗಳಲ್ಲೂ ಹಲವಾರು ಹೊಸ ಪ್ರೀಮಿಯಂ ಫೀಚರ್ಸ್‌ಗಳಿವೆ.

ಪ್ರತಿ ಚಾರ್ಜ್‌ಗೆ 300ಕಿ.ಮೀ ಗೂ ಅಧಿಕ ಮೈಲೇಜ್ ನೀಡಲಿದೆ ನೆಕ್ಸಾನ್ ಇವಿ ನ್ಯೂ ವರ್ಷನ್

ಸದ್ಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.40 ಲಕ್ಷ ಬೆಲೆ ಪಡೆದುಕೊಂಡಿದ್ದು, ನವೀಕೃತ ಮಾದರಿಯು ಪ್ರಸ್ತುತ ಮಾದರಿಯ ಬೆಲೆಗಿಂತಲೂ ರೂ 1.50 ಲಕ್ಷದಿಂದ ರೂ. 2 ಲಕ್ಷದ ತನಕ ಹೆಚ್ಚುವರಿ ಬೆಲೆ ಹೊಂದಬಹುದಾಗಿದೆ.

Article Published On: Monday, May 9, 2022, 15:34 [IST]
English summary
Tata nexon ev max claims 300 kms real world range
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+