ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಕಾರು ಮಾದರಿಗಳಾದ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳಲ್ಲಿ ಜೆಟ್ ಎಡಿಷನ್ ಬಿಡುಗಡೆ ಮಾಡಿದೆ.

Recommended Video

Maruti Suzuki Grand Vitara UNVEILED IN Kannada | ಹೈಬ್ರಿಡ್ ಎಸ್‌ಯುವಿ, ಮೈಲೇಜ್, ಪರ್ಫಾಮೆನ್ಸ್, ಫೀಚರ್ಸ್

ಜೆಟ್ ಎಡಿಷನ್ ಸ್ಟ್ಯಾಂಡರ್ಡ್ ಮಾದರಿಗಿಂತ ಹೆಚ್ಚಿನ ಫೀಚರ್ಸ್‌ಗಳೊಂದಿಗೆ ವಿಶೇಷ ಬಣ್ಣದ ಆಯ್ಕೆ ಹೊಂದಿರಲಿವೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಕಂಪನಿಯು ಇದೀಗ ತನ್ನ ಪ್ರಮುಖ ಎಸ್‌ಯುವಿ ಮಾದರಿಗಳಲ್ಲಿ ಜೆಟ್ ಎಡಿಷನ್ ಬಿಡುಗಡೆ ಮಾಡಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಆವೃತ್ತಿಯಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತಲೂ ವಿಭಿನ್ನವಾಗಿ ಕಾಣಲು ಹೊರಭಾಗ ಮತ್ತು ಒಳಭಾಗವನ್ನು ನವೀಕರಿಸಲಾಗಿದ್ದು, ಹೊಸ ಸೌಲಭ್ಯದೊಂದಿಗೆ ಪ್ರೀಮಿಯಂ ಅನುಭವ ನೀಡಲಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಹೊಸ ಮಾದರಿಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ವಿಶೇಷವಾದ ಸ್ಟಾರ್‌ಲೈಟ್ ಬಣ್ಣದೊಂದಿಗೆ ಪರಿಚಯಿಸಲಾಗಿದ್ದು, ಜೆಟ್ ಮಾದರಿಯು ಎಲ್ಲಾ ಕಾರುಗಳಲ್ಲೂ ಹೈ ಎಂಡ್ ಮಾದರಿಯಾಗಿ ಮಾರಾಟಗೊಳ್ಳುತ್ತವೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಆರಂಭಿಕ ಮಾದರಿಯಾದ ನೆಕ್ಸಾನ್ ಜೆಟ್ ಎಡಿಷನ್ ವಿವಿಧ ಎಂಜಿನ್ ಆಧರಿಸಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.13 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.08 ಲಕ್ಷ ಬೆಲೆ ಹೊಂದಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಮಧ್ಯಮ ಕ್ರಮಾಂಕದ ಎಸ್‌ಯುವಿ ಮಾದರಿಯಾದ ಹ್ಯಾರಿಯರ್ ಜೆಟ್ ಎಡಿಷನ್ ಪ್ರಮುಖ ಎರಡು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 22.20 ಲಕ್ಷದಿಂದ ರೂ. 22.90 ಲಕ್ಷ ಬೆಲೆ ಹೊಂದಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಸಫಾರಿ ಎಸ್‌ಯುವಿಯ ಜೆಟ್ ಎಡಿಷನ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 21.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22.75 ಲಕ್ಷ ಬೆಲೆ ಹೊಂದಿವೆ. ಹೊಸ ಮಾದರಿಗಳು ಸ್ಟ್ಯಾಂಡರ್ಡ್ ಮಾದರಿಗಿಂತ ವಿವಿಧ ಎಡಿಷನ್ ಆಧರಿಸಿ ರೂ. 10 ಸಾವಿರದಿಂದ ರೂ. 15 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿವೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಜೆಟ್ ಆವೃತ್ತಿಗಳು ಅಸ್ತಿತ್ವದಲ್ಲಿರುವ ಮಾದರಿಗಳ ಉನ್ನತ ರೂಪಾಂತರವನ್ನು ಆಧರಿಸಿದ್ದು, ಇವುಗಳು ವಿಶಿಷ್ಟವಾದ ಡ್ಯುಯಲ್ ಟೋನ್ ಸ್ಟಾರ್‌ಲೈಟ್ ಬಣ್ಣದ ಆಯ್ಕೆ ಹಾಗೂ ಕಂಚು ಬಣ್ಣದೊಂದಿಗೆ ಸಿಲ್ವರ್ ರೂಫ್ ಹೊಂದಿವೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಅದೇ ಸಮಯದಲ್ಲಿ ವಿಶೇಷ ಆವೃತ್ತಿಗಳಲ್ಲಿ ಕಪ್ಪು ಮಿಶ್ರಲೋಹದ ಚಕ್ರಗಳು ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್‌ಗಳು ಆಕರ್ಷಕವಾಗಿದ್ದು, ಒಳಾಂಗಣದಲ್ಲಿ ಐಷಾರಾಮಿ ಲುಕ್ ನೀಡುವುದಕ್ಕಾಗಿ ಡ್ಯುಯಲ್-ಟೋನ್ ಆಯ್‌ಸ್ಟರ್ ವೈಟ್ ಮತ್ತು ಗ್ರಾನೈಟ್ ಬ್ಲ್ಯಾಕ್ ಬಣ್ಣವನ್ನು ನೀಡಲಾಗಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಹಾಗೆಯೇ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಟೆಕ್ನೋ-ಸ್ಟೀಲ್ ಸಿಲ್ವರ್ ಫಿನಿಶ್ ಮಿಡ್ ಪ್ಯಾಡ್, ಬಾಗಿಲು ಮತ್ತು ರೂಫ್‌ನಲ್ಲಿ ಸಿಲ್ವರ್ ಆಕ್ಸೆಂಟ್ ನೀಡಲಾಗಿದ್ದು, ಮುಂಭಾಗದ ಸೀಟಿನಲ್ಲಿ ಹೆಡ್ ರೆಸ್ಟ್‌ನಲ್ಲಿ ಜೆಟ್ ಎಡಿಷನ್ ಎಂಬ್ರಾಯಿಡರಿ ಹಾಗೂ ಸೀಟ್ ಗಳಲ್ಲಿ ಕಂಚಿನ ಬಣ್ಣದ ದಾರವನ್ನು ಬಳಸಿರುವುದು ಐಷಾರಾಮಿ ಅನುಭವ ನೀಡಲಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಇದಲ್ಲದೆ ಹೊಸ ಮಾದರಿಗಳಲ್ಲಿ ಕಂಪನಿಯು ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ನೀಡಿದ್ದು, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಎಸ್‌ಯುವಿಗಳಲ್ಲಿ ಡ್ರೈವರ್ ಡೋಸ್ ಆಫ್ ಅಲರ್ಟ್, ಪ್ಯಾನಿಕ್ ಬ್ರೇಕ್ ಅಲರ್ಟ್, ಇಂಪ್ಯಾಕ್ಟ್ ಬ್ರೇಕಿಂಗ್, ಎರಡು ಮಾದರಿಗಳಲ್ಲೂ ಲಭ್ಯವಾಗುವಂತೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಜೊತೆಗೆ 4 ಡಿಸ್ಕ್ ಬ್ರೇಕ್‌ಗಳು ಸೇರಿದಂತೆ ಸುಧಾರಿತ ಇಎಸ್‌ಪಿ ಸೌಲಭ್ಯಗಳನ್ನು ನೀಡಲಾಗಿದೆ

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಈ ವೈಶಿಷ್ಟ್ಯಗಳು ಈಗಾಗಲೇ ಅಸ್ತಿತ್ವದಲ್ಲಿರುವ 14 ಸುರಕ್ಷತಾ ಸೌಲಭ್ಯಗಳೊಂದಿಗೆ ಬರಲಿದ್ದು,ಎರಡೂ ಎಸ್‌ಯುವಿಗಳಲ್ಲೂ ಇದೀಗ ಎಲ್ಲಾ ಸಾಲುಗಳಲ್ಲಿ ಸಿ ಟೈಪ್ ಯುಎಸ್‌ಬಿ ಚಾರ್ಜರ್ ಅನ್ನು ನೀಡಲಾಗಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಜೊತೆಗೆ ಸಫಾರಿಯಲ್ಲಿ ಮಾತ್ರ ಎರಡನೇ ಸಾಲು ಮತ್ತು ಕ್ಯಾಪ್ಟನ್ ಸೀಟ್‌ಗಳಲ್ಲಿ ಹೆಡ್ ರಿಸ್ಟ್ರಂಟ್ ಸೌಲಭ್ಯವನ್ನು ನೀಡಿರುವುದು ಉತ್ತಮವಾಗಿದ್ದು, ಎರಡೂ ಎಸ್‌ಯುವಿಗಳಲ್ಲೂ ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಏರ್ ಪ್ಯೂರಿಫೈಯರ್ ಮತ್ತು ವೈರ್‌ಲೆಸ್ ಚಾರ್ಜರ್ ಅನ್ನು ಸಹ ನೀಡಲಾಗಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಒಳಾಂಗಣ ಸೌಲಭ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ತ್ರಿ ಏರೋ ಆಯ್‌ಸ್ಟರ್ ವೈಟ್ ಸೀಟುಗಳನ್ನು ನೀಡಲಾಗಿದ್ದು, ಬೆನೆಕ್-ಕ್ಯಾಲಿಕೊ ಲೆದರ್ ಸೀಟ್ ಮತ್ತು ಬ್ರೊಂಜ್ ಆಕ್ಸೆಂಟ್‌ಗಳನ್ನು ಬದಲಾಯಿಸಲಾಗಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಇನ್ನು ನೆಕ್ಸಾನ್ ಜೆಟ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಟಾಪ್ ಎಂಡ್ ಮಾದರಿಯಲ್ಲಿನ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಹೊಸ ಆವೃತ್ತಿಯಲ್ಲಿ ವೆಂಟಿಲೇಟೆಡ್ ಸೀಟ್‌ಗಳು, ಟಿಲ್ಟ್ ಫಂಕ್ಷನ್‌ ಹೊಂದಿರುವ ಎಲೆಕ್ಟ್ರಿಕ್ ಸನ್‌ರೂಫ್, ಎಕ್ಯೂಐ ಡಿಸ್ಪ್ಲೇ ಹೊಂದಿರುವ ಏರ್ ಪ್ಯೂರಿಫೈಯರ್ ಅನ್ನು ಪಡೆಯುತ್ತದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಇದರಲ್ಲಿ ಹೊಸದಾಗಿ ವೈರ್‌ಲೆಸ್ ಚಾರ್ಜರ್ ಕೂಡಾ ಸೇರಿಸಲಾಗಿದ್ದು, ಹೊರಭಾಗ ಮತ್ತು ಒಳಭಾಗವನ್ನು ಹೊಸ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದರಿಂದಾಗಿ ಇದು ತುಂಬಾ ಆಕರ್ಷಕವಾಗಿ ಕಾಣಲಿದ್ದು, ಐಷಾರಾಮಿ ಡ್ರೈವ್ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಜೆಟ್ ಎಡಿಷನ್ ಬಿಡುಗಡೆ

ಇದರೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ಹಬ್ಬದ ಋತುವಿನಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಹೊಸ ಆವೃತ್ತಿಗಳು ಸಹಕಾರಿಯಾಗಲಿದ್ದು, ಹೊಸ ಮಾದರಿಗಳಿಗಾಗಿ ಕಂಪನಿಯು ಈಗಾಗಲೇ ಬುಕಿಂಗ್ ಆರಂಭಿಸಿದೆ.

Article Published On: Saturday, August 27, 2022, 16:09 [IST]
English summary
Tata nexon harrier and safari jet edition launched price features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+