ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಪಂಚ್ ಮೈಕ್ರೊ ಎಸ್‌ಯುವಿಗಾಗಿ ಕ್ಯಾಮೋ ಎಡಿಷನ್ ಪರಿಚಯಿಸಿದ್ದು, ಹೊಸ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಳಲ್ಲಿ ಖರೀದಿಗೆ ಲಭ್ಯವಿದೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಹೊಸ ಪಂಚ್ ಕ್ಯಾಮೋ ಎಡಿಷನ್ ಮಧ್ಯಮ ಕ್ರಮಾಂಕದ ಸ್ಟ್ಯಾಂಡರ್ಡ್ ಮಾದರಿಗಳನ್ನು ಆಧರಿಸಿ ಬಿಡುಗಡೆಗೊಂಡಿದ್ದು, ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಕಾಂಪ್ಲಿಶೆಡ್ ಮತ್ತು ಅಕಾಂಪ್ಲಿಶೆಡ್ ರಿದಮ್ ವೆರಿಯೆಂಟ್‌ಗಳನ್ನು ಹೊಂದಿದೆ. ಇದರಲ್ಲಿ ಆರಂಭಿಕ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 6.85 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.63 ಲಕ್ಷ ಬೆಲೆ ಹೊಂದಿದೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಪಂಚ್ ಕ್ಯಾಮೋ ಎಡಿಷನ್‌ನಲ್ಲಿರುವ ಅಡ್ವೆಂಚರ್, ಅಡ್ವೆಂಚರ್ ರಿದಮ್, ಅಕಾಂಪ್ಲಿಶೆಡ್ ಮತ್ತು ಅಕಾಂಪ್ಲಿಶೆಡ್ ರಿದಮ್ ವೆರಿಯೆಂಟ್‌ಗಳು ಮ್ಯಾನುವಲ್ ಜೊತೆ ಆಟೋಮ್ಯಾಟಿಕ್ ಮಾದರಿಗಳನ್ನು ಸಹ ಹೊಂದಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತ ಹೊಸ ಕ್ಯಾಮೋ ಎಡಿಷನ್ ರೂ. 15 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿವೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಆಕರ್ಷಕ ಫಾಲಿಯೆಜ್ ಗ್ರೀನ್ ಬಣ್ಣದೊಂದಿಗೆ ಕೆಲವು ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿರುವ ಕ್ಯಾಮೋ ಎಡಿಷನ್ ಡ್ಯುಯಲ್ ಟೋನ್ ಆಯ್ಕೆ ಹೊಂದಿದ್ದು, ಫಿಯಾನೋ ಬ್ಲ್ಯಾಕ್ ಮತ್ತು ಪ್ರಿಸ್ಟೈನ್ ವೈಟ್ ಟಾಪ್ ರೂಫ್‌ ಪಡೆದುಕೊಂಡಿದೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಫಾಲಿಯೆಜ್ ಗ್ರೀನ್ ಬಣ್ಣದೊಂದಿಗೆ ಹೊಸ ಕಾರು ಮಾದರಿಯು ಮುಂಭಾಗದಲ್ಲಿ ಕ್ರೋಮ್ ಸೌಲಭ್ಯ ಹೊಂದಿದ್ದು, ಹೊಸದಾಗಿ ಸಿಲ್ವರ್ ಸ್ಕೀಡ್ ಪ್ಲೇಟ್ ಪಡೆದುಕೊಂಡಿದೆ. ಜೊತೆಗೆ ಕಾರಿನ ಎರಡು ಬದಿಯಲ್ಲಿ ಕ್ಯಾಮೋ ಬ್ಯಾಡ್ಜ್ ನೀಡಲಾಗಿದ್ದು, 16 ಇಂಚಿನ ಬ್ಲ್ಯಾಕ್ ಔಟ್ ಅಲಾಯ್ ವ್ಹೀಲ್ ಪಡೆದುಕೊಂಡಿದೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಹಾಗೆಯೇ ಹೊಸ ಕಾರಿನ ಒಳಭಾಗದಲ್ಲೂ ಪ್ರಮುಖ ಬದಲಾವಣೆಗಳನ್ನು ನೀಡಲಾಗಿದ್ದು, ಮಿಲಟರಿ ಗ್ರೀನ್ ಶೇಡ್ ಹೊಂದಿರುವ ಡ್ಯಾಶ್‌ಬೋರ್ಡ್ ಸ್ಪೋರ್ಟಿ ಲುಕ್ ನೀಡುತ್ತದೆ. ಹೊಸ ಮಾದರಿಯ ಆಸನಗಳು ಕೂಡಾ ಗ್ರೀನ್ ಶೇಡ್ ಪಡೆದುಕೊಂಡಿದ್ದು, ಇನ್ನುಳಿದ ಎಲ್ಲಾ ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಮುಂದುವರಿಸಲಾಗಿದೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಕ್ಯಾಮೋ ಎಡಿಷನ್‌ನಲ್ಲೂ 7 ಇಂಚಿನ ಹರ್ಮನ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, ಅಂಡ್ರಾಯಿಡ್ ಆಟೋ, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವ್ಹೀಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಿಕ್ ಪವರ್ಡ್ ರಿಯರ್ ವ್ಯೂ ಕ್ಯಾಮೆರಾ, ಆಟೋ ಫ್ಲೊಡಿಂಗ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವಾರು ವೈಶಿಷ್ಟ್ಯತೆಗಳನ್ನು ಸೇರಿಸಲಾಗಿದೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಪಂಚ್ ಕಾರು ಕ್ಯಾಮೋ ಎಡಿಷನ್ ಹೊರತುಪಡಿಸಿ ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ಸ್ಟ್ಯಾಂಡರ್ಡ್ ವೆರಿಯೆಂಟ್‌ಗಳೊಂದಿಗೆ ಈ ಹಿಂದಿನಂತೆ ಮಾರಾಟಗೊಳ್ಳಲಿದ್ದು, ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.93 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.49 ಲಕ್ಷ ಬೆಲೆ ಹೊಂದಿದೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಪಂಚ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಾಗಿ ಪ್ಯೂರ್ ವೆರಿಯೆಂಟ್ ಮಾರಾಟಗೊಳ್ಳುತ್ತಿದ್ದರೆ ಕ್ರಿಯೆಟಿವ್ ಮಾದರಿಯು ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದು, ಬೆಸ್ ವೆರಿಯೆಂಟ್‌ನಲ್ಲೂ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಿದೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಸೆಗ್ಮೆಂಟ್ ಬೆಸ್ಟ್ ಫಿಚರ್ಸ್‌ಗಳೊಂದಿಗೆ ಅತ್ಯುತ್ತಮ ಎಂಜಿನ್ ಆಯ್ಕೆ ಹೊಂದಿರುವ ಟಾಟಾ ಪಂಚ್ ಕಾರಿನಲ್ಲಿ ಕಂಪನಿಯು 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಪರಿಚಯಿಸಿದೆ. 1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಹೊಸ ಕಾರು 3840 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1635 ಎಂಎಂ ಎತ್ತರದೊಂದಿಗೆ 2450 ಎಂಎಂ ವ್ಹೀಲ್ ಬೇಸ್, 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಪ್ರತಿ ಮಾದರಿಯಲ್ಲೂ ಕಂಪನಿಯು ಅತ್ಯುತ್ತಮ ಫೀಚರ್ಸ್‌ ಹೊಂದಿದೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಸ್ಟ್ಯಾಂಡರ್ಡ್ ಫೀಚರ್ಸ್‌ಗಳೊಂದಿಗೆ ಪಂಚ್ ಕಾರಿನಲ್ಲಿ ಹಲವಾರು ಸ್ಪೋರ್ಟಿ ಬಿಡಿಭಾಗಗಳನ್ನು ಹೊಂದಿರುವ ಬಿಡಿಭಾಗಗಳು ಲಭ್ಯವಿದ್ದು, ಹೊಸ ಕಾರು ಮಾದರಿಗೆ ಮತ್ತಷ್ಟು ಸ್ಪೋರ್ಟಿ ನೀಡುವ ಉದ್ದೇಶದಿಂದ ಆಕ್ಸೆಸರಿಸ್ ಪ್ಯಾಕೇಜ್ ನೀಡುತ್ತಿದೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಹೆಡ್‌ಲ್ಯಾಂಪ್ ಗಾರ್ನಿಶ್ ಕ್ರೋಮ್, ಫ್ರಂಟ್ ಬಂಪರ್ ಗಾರ್ನಿಶ್, ಫಾಗ್ ಲ್ಯಾಂಪ್ ಗಾರ್ನಿಶ್, ಡೋರ್ ವಿಜರ್, ವಿಂಡೋ ಫ್ರೆಮ್ ಕಿಟ್, ರಿಯರ್ ವ್ಯೂ ಕ್ಯಾಮೆರಾ ಕ್ರೊಮ್, ಟೈಲ್ ಲೈಟ್ ಗಾರ್ನಿಶ್, ಮಷಿನ್ ಕಟ್ ಅಲಾಯ್ ವ್ಹೀಲ್, ಮಡ್ ಫ್ಲಾಪ್ಸ್, ರಿಯರ್ ರಿಫ್ಲೆಕ್ಟರ್ ಗಾರ್ನಿಶ್ ನೀಡಲಾಗಿದೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಜೊತೆಗೆ ಟೈಲ್ ಗೇಟ್ ಗಾರ್ನಿಶ್, ಸ್ಕಫ್ ಪ್ಲೇಟ್, 3ಡಿ ಮ್ಯಾಟ್ಸ್, 7ಡಿ ಮ್ಯಾಟ್ಸ್, ಡಿಸ್‌ಪ್ಲೇ ಹೊಂದಿರುವ ರಿವರ್ಸ್ ಕ್ಯಾಮೆರಾ, ಮ್ಯಾಗ್ನೆಟಿಕ್ ಸನ್‌ಶೆಡ್, 3ಡಿ ಟ್ರಂಕ್ ಮ್ಯಾಟ್, ಪಾರ್ಸಲ್ ಟ್ರೇ ಆಕ್ಸೆಸರಿಸ್ ಲಭ್ಯವಿವೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಆಕ್ಸೆಸರಿಸ್ ಪ್ಯಾಕೇಜ್ ಮೂಲಕ ಟಾಟಾ ಪಂಚ್ ಮಾದರಿಗೆ ಉತ್ತಮ ಹೊರನೋಟ ನೀಡಲಿದ್ದು, ಹೊಸ ಆಕ್ಸೆಸರಿಸ್ ಮಾದರಿಗೆ ಪ್ರತ್ಯೇಕ ಶುಲ್ಕ ಅನ್ವಯಿಸಲಿದೆ. ಇದನ್ನು ಹೊರತುಪಡಿಸಿದ ಪಂಚ್ ಮಾದರಿಯಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳಿವೆ.

ಆಕರ್ಷಕ ಬಣ್ಣದೊಂದಿಗೆ ಬಿಡುಗಡೆಗೊಂಡ ಟಾಟಾ ಪಂಚ್ ಕ್ಯಾಮೋ ಎಡಿಷನ್

ಪಂಚ್ ಮೈಕ್ರೊ ಎಸ್‌ಯುವಿ ಕಾರು ಮಾದರಿಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ನಂತರ ಟಾಟಾ ನಿರ್ಮಾಣದ ಎರಡನೇ ಅತಿ ಹೆಚ್ಚು ಬೇಡಿಕೆಯ ಕಾರು ಮಾದರಿಯಾಗಿ ಹೊರಹೊಮ್ಮುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

Most Read Articles

Kannada
English summary
Tata punch camo edition launched price features engine details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X