ಪಂಚ್ ಕಾರು ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
ಮೈಕ್ರೊ ಎಸ್‌ಯುವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಹೊಂದಿರುವ ಪಂಚ್ ಕಾರು ಮಾದರಿಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದೆ.
ಹೊಸ ಆಕ್ಸೆಸರಿಸ್ ಪ್ಯಾಕೇಜ್ ಮೈಕ್ರೊ ಎಸ್‌ಯುವಿ ಮಾದರಿಗಾಗಿ ಹಲವಾರು ಸ್ಪೋರ್ಟಿ ಹೊಂದಿರುವ ಬಿಡಿಭಾಗಗಳು ಲಭ್ಯವಿವೆ.

ಪಂಚ್ ಮಾದರಿಯ ಮೂಲಕ ಮೈಕ್ರೊ ಎಸ್‌ಯುವಿ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರು ಮಾದರಿಗೆ ಮತ್ತಷ್ಟು ಸ್ಪೋರ್ಟಿ ನೀಡುವ ಉದ್ದೇಶದಿಂದ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ಹೊಸ ಆಕ್ಸೆಸರಿಸ್ ಪ್ಯಾಕೇಜ್ ಅನ್ನು ಗ್ರಾಹಕರು ಹೆಚ್ಚುವರಿ ದರ ಪಾವತಿಸಿ ಖರೀದಿಸಬಹುದು.

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಹೆಡ್‌ಲ್ಯಾಂಪ್ ಗಾರ್ನಿಶ್ ಕ್ರೋಮ್, ಫ್ರಂಟ್ ಬಂಪರ್ ಗಾರ್ನಿಶ್, ಫಾಗ್ ಲ್ಯಾಂಪ್ ಗಾರ್ನಿಶ್, ಡೋರ್ ವಿಜರ್, ವಿಂಡೋ ಫ್ರೆಮ್ ಕಿಟ್, ರಿಯರ್ ವ್ಯೂ ಕ್ಯಾಮೆರಾ ಕ್ರೊಮ್, ಟೈಲ್ ಲೈಟ್ ಗಾರ್ನಿಶ್, ಮಷಿನ್ ಕಟ್ ಅಲಾಯ್ ವ್ಹೀಲ್, ಮಡ್ ಫ್ಲಾಪ್ಸ್, ರಿಯರ್ ರಿಫ್ಲೆಕ್ಟರ್ ಗಾರ್ನಿಶ್ ನೀಡಲಾಗಿದೆ.

ಜೊತೆಗೆ ಟೈಲ್ ಗೇಟ್ ಗಾರ್ನಿಶ್, ಸ್ಕಫ್ ಪ್ಲೇಟ್, 3ಡಿ ಮ್ಯಾಟ್ಸ್, 7ಡಿ ಮ್ಯಾಟ್ಸ್, ಡಿಸ್‌ಪ್ಲೇ ಹೊಂದಿರುವ ರಿವರ್ಸ್ ಕ್ಯಾಮೆರಾ, ಮ್ಯಾಗ್ನೆಟಿಕ್ ಸನ್‌ಶೆಡ್, 3ಡಿ ಟ್ರಂಕ್ ಮ್ಯಾಟ್, ಪಾರ್ಸಲ್ ಟ್ರೇ ಆಕ್ಸೆಸರಿಸ್ ಲಭ್ಯವಿವೆ.

ಆಕ್ಸೆಸರಿಸ್ ಪ್ಯಾಕೇಜ್ ಮೂಲಕ ಟಾಟಾ ಪಂಚ್ ಮಾದರಿಗೆ ಉತ್ತಮ ಹೊರನೋಟ ನೀಡಲಿದ್ದು, ಹೊಸ ಆಕ್ಸೆಸರಿಸ್ ಮಾದರಿಗೆ ಪ್ರತ್ಯೇಕ ಶುಲ್ಕ ಅನ್ವಯಿಸಲಿದೆ. ಇದನ್ನು ಹೊರತುಪಡಿಸಿದ ಪಂಚ್ ಮಾದರಿಯಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳಿವೆ.

ಪಂಚ್ ಮೈಕ್ರೊ ಎಸ್‌ಯುವಿ ಕಾರು ಮಾದರಿಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ನೆಕ್ಸಾನ್ ಕಂಪ್ಯಾಕ್ಟ್ ಎಸ್‌ಯುವಿ ನಂತರ ಟಾಟಾ ನಿರ್ಮಾಣದ ಎರಡನೇ ಅತಿ ಹೆಚ್ಚು ಬೇಡಿಕೆಯ ಕಾರು ಮಾದರಿಯಾಗಿ ಹೊರಹೊಮ್ಮುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.
ಕಳೆದ ವರ್ಷ ಅಕ್ಟೋಬರ್ ಕೊನೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಪಂಚ್ ಕಾರು ಮಾದರಿಯು ಇದುವರೆಗೆ 1.50 ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ ಬುಕ್ಕಿಂಗ್ ಪಡೆದುಕೊಂಡಿದ್ದು, ಇದುವರೆಗೆ ಸುಮಾರು 1 ಲಕ್ಷ ಯುನಿಟ್ ವಿತರಣೆ ಉತ್ಪಾದನೆ ಪೂರ್ಣಗೊಳಿಸಲಾಗಿದೆ. ಟಾಟಾ ಕಂಪನಿಯ ಇತ್ತೀಚಿನ ಮಾಹಿತಿ ಪ್ರಕಾರ ಪಂಚ್ ಕಾರು 1 ಲಕ್ಷ ಯುನಿಟ್ ಉತ್ಪಾದನೆ ಪೂರ್ಣಗೊಳ್ಳುವ ಮೂಲಕ ಗ್ರಾಹಕರಿಗೆ ವಿತರಣೆ ಮಾಡಿರುವುದಾಗಿ ಹೇಳಿಕೊಂಡಿದೆ.

ಪಂಚ್ ಕಾರು ಮಾದರಿಯು ವಿಶೇಷ ಫೀಚರ್ಸ್, ಬಜೆಟ್ ಬೆಲೆ ಮತ್ತು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಮೈಕ್ರೊ ಎಸ್‌ಯುವಿ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಬಿಡುಗಡೆಯಾದ ಕೇವಲ ಹತ್ತು ತಿಂಗಳ ಅವಧಿಯಲ್ಲಿ 1 ಲಕ್ಷ ಯುನಿಟ್ ವಿತರಣೆಯಾಗಿದೆ.

ಪಂಚ್ ಕಾರಿನ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಉತ್ತಮ ಪಾಲು ದಾಖಲಿಸುತ್ತಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಮತಹತ್ವದ ಬದಲಾವಣೆಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಹೊಸ ಪಂಚ್ ಕಾರು ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಎರಡು ವಿಶೇಷ ಆವೃತ್ತಿಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮೈಕ್ರೊ ಎಸ್‌ಯುವಿ ಮಾದರಿಗಳಿಗೆ ಮಾತ್ರವಲ್ಲದೆ ಹ್ಯಾಚ್‌ಬ್ಯಾಕ್ ಕಾರು ಮಾದರಿಗಳಿಗೂ ಭರ್ಜರಿ ಪೈಪೋಟಿ ನೀಡುತ್ತಿದೆ.

ಪಂಚ್ ಕಾರು ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್‌ಗಳೊಂದಿಗೆ ಸ್ಟ್ಯಾಂಡರ್ಡ್ ಮತ್ತು ಕಾಜಿರಂಗ ಎಡಿಷನ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ವಿವಿಧ ಮಾದರಿಗಳ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.93 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.49 ಲಕ್ಷ ಬೆಲೆ ಹೊಂದಿದೆ.

ಪಂಚ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಾಗಿ ಪ್ಯೂರ್ ವೆರಿಯೆಂಟ್ ಮಾರಾಟಗೊಳ್ಳುತ್ತಿದ್ದರೆ ಕ್ರಿಯೆಟಿವ್ ಮಾದರಿಯು ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳುತ್ತಿದ್ದು, ಬೆಸ್ ವೆರಿಯೆಂಟ್‌ನಲ್ಲೂ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ನೀಡಿದೆ.

ಸೆಗ್ಮೆಂಟ್ ಬೆಸ್ಟ್ ಫಿಚರ್ಸ್‌ಗಳೊಂದಿಗೆ ಅತ್ಯುತ್ತಮ ಎಂಜಿನ್ ಆಯ್ಕೆ ಹೊಂದಿರುವ ಟಾಟಾ ಪಂಚ್ ಕಾರಿನಲ್ಲಿ ಕಂಪನಿಯು 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಪರಿಚಯಿಸಿದೆ. 1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

ಹೊಸ ಕಾರು 3840 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1635 ಎಂಎಂ ಎತ್ತರದೊಂದಿಗೆ 2450 ಎಂಎಂ ವ್ಹೀಲ್ ಬೇಸ್, 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಪ್ರತಿ ಮಾದರಿಯಲ್ಲೂ ಕಂಪನಿಯು ಅತ್ಯುತ್ತಮ ಫೀಚರ್ಸ್ ಹೊಂದಿದೆ.


Click it and Unblock the Notifications