Just In
- 10 hrs ago ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- 11 hrs ago Bajaj: ಮುಂಬರಲಿರುವ ಬಜಾಜ್ ಪಲ್ಸರ್ NS 400 ನಿರೀಕ್ಷಿತ ಬೆಲೆ, ವಿಶೇಷತೆಗಳು!
- 12 hrs ago Tata Punch: ಟಾಟಾ ಪಂಚ್ ಕಾರು ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- 13 hrs ago 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
Don't Miss!
- Movies Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅತಿ ಕಡಿಮೆ ಅವಧಿಯಲ್ಲಿ ಹೊಸ ದಾಖಲೆ ನಿರ್ಮಿಸಿದ ಟಾಟಾ ಪಂಚ್ ಮೈಕ್ರೊ ಎಸ್ಯುವಿ!
ಹೊಸ ಪಂಚ್ ಮೈಕ್ರೊ ಎಸ್ಯುವಿ ಕಾರು ಮಾದರಿಯೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ನೆಕ್ಸಾನ್ ನಂತರ ಎರಡನೇ ಅತಿ ಹೆಚ್ಚು ಬೇಡಿಕೆಯ ಕಾರು ಮಾದರಿಯಾಗಿ ಹೊರಹೊಮ್ಮಿದೆ.
ಪಂಚ್ ಕಾರು ಮಾದರಿಯು ವಿಶೇಷ ಫೀಚರ್ಸ್, ಬಜೆಟ್ ಬೆಲೆ ಮತ್ತು ಅತ್ಯುತ್ತಮ ಎಂಜಿನ್ ಆಯ್ಕೆಯೊಂದಿಗೆ ಮೈಕ್ರೊ ಎಸ್ಯುವಿ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರು ಬಿಡುಗಡೆಯಾದ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 32 ಸಾವಿರಕ್ಕೂ ಹೆಚ್ಚು ಯುನಿಟ್ ವಿತರಣೆಗೊಂಡಿವೆ. ಕಳೆದ ವರ್ಷದ ಅಕ್ಟೋಬರ್ ಕೊನೆಯಲ್ಲಿ ವಿತರಣೆ ಆರಂಭಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು 70 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ನೊಂದಿಗೆ ಇದುವರೆಗೆ 32 ಸಾವಿರ ಯುನಿಟ್ ವಿತರಣೆ ಪೂರ್ಣಗೊಳಿಸಿದೆ.
ಪಂಚ್ ಕಾರಿನ ಮೂಲಕ ಟಾಟಾ ಮೋಟಾರ್ಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಶೇ.10ರಷ್ಟು ಪಾಲು ಹೊಂದುವ ವಿಶ್ವಾಸದಲ್ಲಿದ್ದು, ಹೊಸ ಕಾರು ಮುಂಬರುವ ದಿನಗಳಲ್ಲಿ ಮತಹತ್ವದ ಬದಲಾವಣೆಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.
ಹೊಸ ಪಂಚ್ ಕಾರು ಮಾದರಿಯು ತಾಂತ್ರಿಕ ಅಂಶಗಳಿಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್ಗಳೊಂದಿಗೆ ಎರಡು ಎಡಿಷನ್ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಹೊಸ ಕಾರು ಮೈಕ್ರೊ ಎಸ್ಯುವಿ ಮಾದರಿಗಳಿಗೆ ಮಾತ್ರವಲ್ಲದೆ ಹ್ಯಾಚ್ಬ್ಯಾಕ್ ಕಾರು ಮಾದರಿಗಳಿಗೂ ಭರ್ಜರಿ ಪೈಪೋಟಿ ನೀಡುತ್ತಿದೆ.
ಪಂಚ್ ಕಾರು ಪ್ಯೂರ್, ಅಡ್ವೆಂಚರ್, ಅಕಾಂಪ್ಲಿಶೆಡ್ ಮತ್ತು ಕ್ರಿಯೆಟಿವ್ ಎನ್ನುವ ನಾಲ್ಕು ವೆರಿಯೆಂಟ್ಗಳೊಂದಿಗೆ ಸ್ಟ್ಯಾಂಡರ್ಡ್ ಮತ್ತು ಕಾಜಿರಂಗ ಎಡಿಷನ್ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ವಿವಿಧ ಮಾದರಿಗಳ ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಹೊಸ ಕಾರು ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 5.64 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9.49 ಲಕ್ಷ ಬೆಲೆ ಹೊಂದಿದೆ.
ಹೊಸ ಪಂಚ್ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಐಪಿಎಲ್ ವಿಶೇಷತೆಗಾಗಿ ಕಾಜಿರಂಗ ಎಡಿಷನ್ ಬಿಡುಗಡೆ ಮಾಡಿದ್ದು, ಸೀಮಿತ ಅವಧಿಗೆ ಖರೀದಿಗೆ ಲಭ್ಯವಿರುವ ಕಾಜಿರಂಗ ಮಾದರಿಯು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.59 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು 9.49 ಲಕ್ಷ ಬೆಲೆ ಹೊಂದಿದೆ.
ಕಾಜಿರಂಗ ಆವೃತ್ತಿಗಳಿಗೆ ಮೆಟೆರಿಯಲ್ ಬ್ರೋಂಜ್ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಬಣ್ಣದ ಜೊತೆಗೆ ಕಾರಿನ ಹಿಂಬದಿಯ ಟೈಲ್ಗೇಟ್, ವ್ಹೀಲ್, ಫೆಂಡರ್ಗಳು ಮತ್ತು ಇಂಟಿರಿಯರ್ನಲ್ಲಿ ರೈನೊ ಬ್ಯಾಜ್ಡ್ ಜೊತೆಗೆ ಕಾರಿನ ಇಂಟಿರಿಯರ್ನಲ್ಲಿ ರೈನೊ ಮೋಟಿಫ್ ಜೋಡಿಸಲಾಗಿದೆ. ಹೊಸ ಆವೃತ್ತಿಗಳು ಆಕರ್ಷಕ ಬಣ್ಣದ ಆಯ್ಕೆ ಜೊತೆಗೆ ಕೆಲವು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇನ್ನುಳಿದಂತೆ ಎಲ್ಲಾ ತಾಂತ್ರಿಕ ಸೌಲಭ್ಯಗಳು ಸಾಮಾನ್ಯ ಮಾದರಿಯಲ್ಲಿರುವಂತೆಯೇ ಇರಲಿವೆ.
ಪಂಚ್ ಕಾರಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯ ಪ್ಯೂರ್ ವೆರಿಯೆಂಟ್ ಆರಂಭಿಕ ಮಾದರಿಯಾಗಿ ಮಾರಾಟಗೊಳ್ಳಲಿದ್ದರೆ ಕ್ರಿಯೆಟಿವ್ ಮಾದರಿಯು ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಬೆಸ್ ವೆರಿಯೆಂಟ್ನಲ್ಲೂ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ಗಳನ್ನು ನೀಡಿದೆ.
ಸೆಗ್ಮೆಂಟ್ ಬೆಸ್ಟ್ ಫಿಚರ್ಸ್ಗಳೊಂದಿಗೆ ಅತ್ಯುತ್ತಮ ಎಂಜಿನ್ ಆಯ್ಕೆ ಹೊಂದಿರುವ ಟಾಟಾ ಪಂಚ್ ಕಾರಿನಲ್ಲಿ ಕಂಪನಿಯು 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಪರಿಚಯಿಸಿದೆ. 1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆಯೊಂದಿಗೆ 83 ಬಿಎಚ್ಪಿ ಉತ್ಪಾದನಾ ಗುಣಹೊಂದಿದೆ.
ಹೊಸ ಕಾರು 3840 ಎಂಎಂ ಉದ್ದ, 1800 ಎಂಎಂ ಅಗಲ ಮತ್ತು 1635 ಎಂಎಂ ಎತ್ತರದೊಂದಿಗೆ 2450 ಎಂಎಂ ವ್ಹೀಲ್ ಬೇಸ್, 187 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ನೊಂದಿಗೆ ಪ್ರತಿ ಮಾದರಿಯಲ್ಲೂ ಕಂಪನಿಯು ಅತ್ಯುತ್ತಮ ಫೀಚರ್ಸ್ ಹೊಂದಿದೆ.
ಪ್ಯೂರ್ ಮಾದರಿಯಲ್ಲಿ ಕಂಪನಿಯು ಡ್ಯುಯಲ್ ಏರ್ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಸ್ಯಾವಿ ಕಂಟ್ರೋಲ್, ಆರ್ಪಿಎಎಸ್, ಸೆಂಟ್ರೇಲ್ ಲಾಕಿಂಗ್ ಜೊತೆ ಕೀ, ಐಎಸಿ ಮತ್ತು ಇಎಸ್ಎಸ್ ಟೆಕ್ನಾಲಜಿ, ಫ್ರಂಟ್ ಪವರ್ ವಿಂಡೋ, ಟಿಲ್ಟ್ ಸ್ಟೀರಿಂಗ್, 90 ಡಿಗ್ರಿ ಡೋರ್ ಓಪನ್, ರಿಯರ್ ಪ್ಲ್ಯಾಟ್ ಫ್ಲೊರ್, ಬ್ಲ್ಯಾಕ್ ಒಡಿಹೆಚ್, ಹ್ಯುಮಿನಿಟಿ ಕ್ರೊಮ್ ಲೈನ್, ಪೆಟೆಂಡ್ ಬಂಪರ್, ಡೋರ್, ವೀಲ್ಹ್ ಆರ್ಚ್, ಸಿಲ್ ಕ್ಲಾಡಿಂಗ್ ಜೋಡಣೆ ಮಾಡಿದೆ.
ಅಡ್ವೆಂಚರ್ ಮಾದರಿಯಲ್ಲಿ 4 ಇಂಚಿನ ಇನ್ಪೋಟೈನ್ಮೆಂಟ್ ಸಿಸ್ಟಂ, 4 ಸ್ಪೀಕರ್ಸ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಯುಎಸ್ಬಿ ಚಾರ್ಜಿಂಗ್ ಫೋರ್ಟ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಿಕೊಳ್ಳಬಹುದಾದ ರಿಯರ್ ವ್ಯೂ ಮಿರರ್, ಆಲ್ ಪವರ್ ವಿಂಡೋ, ಫಾಲೋ ಮಿ ಹೋಂ ಹೆಡ್ಲ್ಯಾಂಪ್, ಆಂಟಿ ಗ್ಲೆರ್ ಐಆರ್ಎಂವಿ, ಸೆಂಟ್ರಲ್ ರಿಮೋಟ್ ಲಾಕಿಂಗ್ ಜೊತೆ ಫ್ಲಿಪ್ ಕೀ, ಫುಲ್ ವ್ಹೀಲ್ ಕವರ್ ಮತ್ತು ಬಾಡಿ ಕಲರ್ ರಿಯರ್ ವ್ಯೂ ಮಿರರ್ ನೀಡಲಾಗಿದೆ.
ಅಕಾಂಪ್ಲಿಶೆಡ್ ಆವೃತ್ತಿಯಲ್ಲಿ ಹೊಂದಾಣಿಕೆ ಮಾಡಬಹುದಾದ 7 ಇಂಚಿನ ಹರ್ಮನ್ ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್ ಪ್ಲೇ, 4 ಸ್ಪೀಕರ್ಸ್ ಮತ್ತು 2 ಟ್ವಿಟರ್, ರಿಯರ್ ವ್ಯೂ ಕ್ಯಾಮೆರಾ, ಎಲ್ಇಡಿ ಟೈಲ್ ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್, ಆರ್15 ಹೈಪರ್ ಸ್ಟೈಲ್ ವ್ಹೀಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಒನ್ ಟಚ್ ಡೋರ್ ವಿಂಡೋ ಡೌನ್, ಕ್ರೂಸ್ ಕಂಟ್ರೋಲ್, ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ಸಿಟಿವಿ ಮಾದರಿಯಾಗಿ ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯವಿದೆ.
ಹೈ ಎಂಡ್ ಮಾದರಿಯಲ್ಲಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್, ಎಲ್ಇಡಿ ಡಿಆರ್ಎಲ್ಎಸ್, ಆರ್16 ಡೈಮಂಡ್ ಕಟ್ ಅಲಾಯ್ ವ್ಹೀಲ್, ರೂಫ್ ರೈಲ್ಸ್, 7 ಇಂಚಿನ ಟಿಎಫ್ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಹೆಡ್ಲ್ಯಾಂಪ್, ರೈನ್ ಸೆನ್ಸಿಂಗ್ ವೈಪರ್, ಆಟೋ ಫೋಡ್ಲಿಂಗ್ ರಿಯರ್ ವ್ಯೂ ಮಿರರ್, ಆಟೋಮ್ಯಾಟಿಕ್ ಎಸಿ ಕಂಟ್ರೋಲ್ ಸಿಸ್ಟಂ, ಕೂಲ್ಡ್ ಗ್ಲೊ ಬಾಕ್ಸ್, ರಿಯರ್ ವೈಪರ್ ಪ್ಲಸ್ ವಾಷ್, ರಿಯರ್ ಡಿಫಾಗರ್, ಪೆಡಲ್ ಲ್ಯಾಂಪ್ಸ್, ಹಿಂಬದಿಯ ಆಸನದಲ್ಲಿ ಆರ್ಮ್ ರೆಸ್ಟ್ ಮತ್ತು ಲೆದರ್ ಕೊಟಿಂಗ್ ಹೊಂದಿರುವ ಸ್ಟೀರಿಂಗ್ ಮತ್ತು ಗೇರ್ ನಾಬ್ ನೀಡಲಾಗಿದೆ.
ಹೊಸ ಕಾರು ಮುಂಭಾಗದಲ್ಲಿ ಮಾತ್ರವಲ್ಲ ಹಿಂಭಾಗದಲ್ಲಿ ಮತ್ತು ಸೈಡ್ ಪ್ರೊಫೈಲ್ನಲ್ಲೂ ಅತ್ಯುತ್ತಮ ಡಿಸೈನ್ ಹೊಂದಿದ್ದು, ಟೊರಾರ್ನಾಡೊ ಬ್ಲ್ಯೂ, ಟೊಪಿಕಲ್ ಮಿಸ್ಟ್, ಡೇ ಟೋನಾ ಗ್ರೆ, ಮಿಟಿಯೊರ್ ಬ್ರೊನ್ಜ್, ಆಟೊಮಿಕ್ ಆರೇಂಜ್, ಆರ್ಕಸ್ ವೈಟ್ ಮತ್ತು ಕ್ಯಾಲಿಪ್ಸೊ ರೆಡ್ ಸೇರಿ ಪ್ರಮುಖ ಏಳು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ನಂತರ ಎಲ್ಲಾ ಕಾರು ಮಾದರಿಗಳಲ್ಲೂ ಗರಿಷ್ಠ ಸುರಕ್ಷಾ ಫೀಚರ್ಸ್ಗಳೊಂದಿಗೆ ಅಭಿವೃದ್ದಿಗೊಳಿಸಿದ್ದು, ಇದೀಗ ಹೊಸದಾಗಿ ಬಿಡುಗಡೆಯಾಗಿರುವ ಪಂಚ್ ಮೈಕ್ರೊ ಎಸ್ಯುವಿ ಮಾದರಿಯಲ್ಲೂ ಸಹ ಗರಿಷ್ಠ ಮಟ್ಟದ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿದೆ.