ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ದೇಶಿಯ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಪ್ರಮುಖ ಎಸ್‌ಯುವಿ ಕಾರು ಮಾದರಿಗಳಿಗಾಗಿ ಕಾಜಿರಂಗ ಎಡಿಷನ್ ಪರಿಚಯಿಸಿದ್ದು, ಹೊಸ ಕಾರುಗಳು ವಿನೂತನ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿವೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ಟಾಟಾ ಮೋಟಾರ್ಸ್ 2022ರ ಐಪಿಎಲ್‌ನ ಅಧಿಕೃತ ಪ್ರಾಯೋಜಕತ್ವ ವಹಿಸಿರುವ ಹಿನ್ನಲೆಯಲ್ಲಿ ತನ್ನ ಪ್ರಮುಖ ಎಸ್‌ಯುವಿ ಮಾದರಿಗಳಲ್ಲಿ ಕಾಜಿರಂಗ ಸ್ಪೆಷಲ್ ಎಡಿಷನ್ ಪರಿಚಯಿಸಿದ್ದು, ಪಂಚ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲಿ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ಜನಪ್ರಿಯ ಐಪಿಎಲ್‌ ಸರಣಿಯಲ್ಲಿ ಸತತ ನಾಲ್ಕನೇ ವರ್ಷವೂ ಪ್ರಾಯೋಜಕತ್ವ ವಹಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಈ ಬಾರಿಯ ಐಪಿಎಲ್‌ನಲ್ಲಿ ಹೊಚ್ಚ ಹೊಸ ಪಂಚ್ ಕಾರು ಮಾದರಿಯನ್ನು ಪ್ರದರ್ಶನಗೊಳಿಸಲು ನಿರ್ಧರಿಸಿದ್ದು, ಪ್ರಾಯೋಜಕತ್ವ ವಿಶೇಷತೆಗಾಗಿ ಟಾಟಾ ಕಂಪನಿಯು ಪಂಚ್ ಕಾರಿನಲ್ಲಿ ಕಾಜಿರಂಗ ಎನ್ನುವ ವಿಶೇಷ ಆವೃತ್ತಿಯನ್ನು ಅಭಿವೃದ್ದಿಪಡಿಸಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ಐಪಿಎಲ್‌ನಲ್ಲಿ ಪ್ರದರ್ಶನಗೊಳ್ಳುವ ಹೊಸ ಪಂಚ್ ಕಾಜಿರಂಗ ಆವೃತ್ತಿಯನ್ನು ಟೂರ್ನಿ ಮುಕ್ತಾಯದ ನಂತರ ಹರಾಜುಗೊಳಿಸಲಿರುವ ಟಾಟಾ ಮೋಟಾರ್ಸ್ ಕಂಪನಿಯು ಹರಾಜು ಪ್ರಕ್ರಿಯೆಯಿಂದ ಬಂದ ಹಣವನ್ನು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಂರಕ್ಷಣಾ ಅಭಿವೃದ್ದಿ ಕಾರ್ಯಗಳಿಗೆ ದೇಣಿಗೆ ನೀಡಲು ನಿರ್ಧರಿಸಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ಈ ಮೊದಲು ಪಂಚ್ ಕಾರು ಮಾದರಿಗಾಗಿ ಮಾತ್ರ ಕಾಜಿರಂಗ ಆವೃತ್ತಿಯನ್ನು ಪರಿಚಯಿಸಲು ನಿರ್ಧರಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಇನ್ನುಳಿದ ಎಸ್‌ಯುವಿ ಮಾದರಿಗಳಿಗೂ ಹೊಸ ಆವೃತ್ತಿಗಳಾದ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ಹೊಸ ಆವೃತ್ತಿ ಪರಿಚಯಿಸಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ವಿಶೇಷ ಕಾರು ಮಾದರಿಗಳ ಮೂಲಕ ಅಳಿವಿಂಚಿನಲ್ಲಿರುವ ಒಂದು ಕೊಂಬಿನ ಘೆಂಡಾಮೃಗಗಳ ಸಂರಕ್ಷಣೆಗೆ ಸಹಕಾರ ನೀಡಲು ಭಾರೀ ಪ್ರಮಾಣ ದೇಣಿಗೆ ಸಂಗ್ರಹಿಸಲು ನಿರ್ಧರಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಪಂಚ್ ಫ್ಯಾನ್ ಮಾಡೆಲ್‌ನಲ್ಲಿ ಕಾರಿನಲ್ಲಿ ಹೊಸ ಆವೃತ್ತಿಯನ್ನು ಅಭಿವೃದ್ದಿಪಡಿಸಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ಪಂಚ್ ಕಾರಿನಲ್ಲಿ ಒಂದು ಯುನಿಟ್ ಕಾಜಿರಂಗ ಎಡಿಷನ್ ಮಾದರಿಯ್ನು ಫ್ಯಾನ್ ಮಾಡೆಲ್ ಆಗಿ ಹರಾಜು ಮಾಡಲಿರುವ ಟಾಟಾ ಮೋಟಾರ್ಸ್ ಕಂಪನಿಯು ಇನ್ನುಳಿದ ಮಾದರಿಗಳಲ್ಲಿನ ಕಾಜಿರಂಗ ಆವೃತ್ತಿಗಳನ್ನು ಸಾಮಾನ್ಯ ಕಾರು ಮಾದರಿಯೆಂತೆ ಮಾರಾಟಗೊಳಿಸಲಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ಹೀಗಾಗಿ ಪಂಚ್ ಕಾರಿನಲ್ಲಿ ಒಂದೇ ಯುನಿಟ್ ಕಾಜಿರಂಗ ಮಾದರಿಯು ಮಾತ್ರ ಹೆಚ್ಚಿನ ಬೆಲೆಗೆ ಹರಾಜುಗೊಳ್ಳಬಹುದೆಂಬ ನೀರಿಕ್ಷೆಗಳಿದ್ದು, ಇನ್ನುಳಿದ ಕಾರು ಮಾದರಿಗಳಲ್ಲಿ ಪರಿಚಯಿಸಲಾಗುವ ಕಾಜಿರಂಗ ಮಾದರಿಗಳು ಟಾಪ್ ಎಂಡ್ ಮಾದರಿಯನ್ನು ಆಧರಿಸಿ ನಿರ್ಮಾಣಗೊಳ್ಳಲಿವೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

2020ರಲ್ಲಿ ಭೀಕರ ಪ್ರವಾಹದ ಪರಿಣಾಮ ಹೆಚ್ಚಿನ ಮಟ್ಟದ ಹಾನಿಗೊಳಗಾಗಿದ್ದ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಅಭಿವೃದ್ದಿ ಕಾರ್ಯಗಳಿಗೆ ಸಹಾಯಹಸ್ತ ಚಾಚಲು ವಿಶೇಷ ಕಾರು ಮಾದರಿಯನ್ನು ಅಭಿವೃದ್ದಿಪಡಿಸಿ ಹರಾಜು ಪ್ರಕ್ರಿಯೆ ನಡೆಸಲು ನಿರ್ಧರಿಸಿದ್ದು, ಹೈ ಎಂಡ್ ಮಾದರಿಗಳನ್ನು ಆಧರಿಸಿ ನಿರ್ಮಾಣವಾಗಿರುವ ಕಾಜಿರಂಗ ಆವೃತ್ತಿಗಳು ವಿಶೇಷ ಬಣ್ಣದ ಆಯ್ಕೆ ಮತ್ತು ಲೊಗೊ ಮೂಲಕ ಆಕರ್ಷಕ ವಿನ್ಯಾಸ ಹೊಂದಿವೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ಕಾಜಿರಂಗ ಎಡಿಷನ್ ಹೊಂದಿರುವ ಪಂಚ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.59 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು 9.49 ಲಕ್ಷ ಬೆಲೆ ಹೊಂದಿದ್ದರೆ ನೆಕ್ಸಾನ್ ಕಾಜಿರಂಗ ಎಡಿಷನ್ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11.79 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 13.74 ಲಕ್ಷ ಬೆಲೆ ಹೊಂದಿವೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ಹ್ಯಾರಿಯರ್ ಕಾಜಿರಂಗ ಎಡಿಷನ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20.41 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 21.71 ಲಕ್ಷಕ್ಕೆ ದರ ನಿಗದಿಪಡಿಸಿದ್ದರೆ ಸಫಾರಿ ಕಾಜಿರಂಗ ಮಾದರಿಯು ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 21 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 22.40 ಲಕ್ಷ ಬೆಲೆ ಹೊಂದಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ಕಾಜಿರಂಗ ಆವೃತ್ತಿಗಳಿಗೆ ಮೆಟೆರಿಯಲ್ ಬ್ರೋಂಜ್ ಬಣ್ಣದ ಆಯ್ಕೆ ನೀಡಲಾಗಿದ್ದು, ಹೊಸ ಬಣ್ಣದ ಜೊತೆಗೆ ಕಾರಿನ ಹಿಂಬದಿಯ ಟೈಲ್‌ಗೇಟ್, ವ್ಹೀಲ್, ಫೆಂಡರ್‌ಗಳು ಮತ್ತು ಇಂಟಿರಿಯರ್‌ನಲ್ಲಿ ರೈನೊ ಬ್ಯಾಜ್ಡ್ ಜೊತೆಗೆ ಕಾರಿನ ಇಂಟಿರಿಯರ್‌ನಲ್ಲಿ ರೈನೊ ಮೋಟಿಫ್ ಜೋಡಿಸಲಾಗಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ಹೊಸ ಆವೃತ್ತಿಗಳು ಆಕರ್ಷಕ ಬಣ್ಣದ ಆಯ್ಕೆ ಜೊತೆಗೆ ಕೆಲವು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಇನ್ನುಳಿದಂತೆ ಎಲ್ಲಾ ತಾಂತ್ರಿಕ ಸೌಲಭ್ಯಗಳು ಸಾಮಾನ್ಯ ಮಾದರಿಯಲ್ಲಿರುವಂತೆಯೇ ಇರಲಿವೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ಸಫಾರಿ ಮತ್ತು ಹ್ಯಾರಿಯರ್ ಎಸ್‌ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ವಿನೂತನ ಫೀಚರ್ಸ್ ಹೊಂದಿರುವ ಟಾಟಾ ಕಾಜಿರಂಗ ಎಡಿಷನ್ ಕಾರುಗಳು ಬಿಡುಗಡೆ

ಟಾಟಾ ಪಂಚ್ ಕಾರಿನಲ್ಲಿ ಕಂಪನಿಯು 1.2-ಲೀಟರ್ ರಿವೊಟ್ರಾನ್ ತ್ರಿ ಸಿಲಿಂಡರ್ ನ್ಯಾಚುರಲ್ ಆಸ್ಪೆರೆಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದರೆ ನೆಕ್ಸಾನ್ ಮಾದರಿಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ 40ಕ್ಕೂ ಹೆಚ್ಚು ವಿವಿಧ ವೆರಿಯೆಂಟ್ ಹೊಂದಿದೆ.

Most Read Articles

Kannada
English summary
Tata punch nexon harrier safari kaziranga editions launched details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X