Just In
- 7 hrs ago
ಕ್ರ್ಯಾಶ್ ಟೆಸ್ಟ್ನಲ್ಲಿ ಗರಿಷ್ಠ ರೇಟಿಂಗ್ ಪಡೆದುಕೊಂಡ ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು
- 8 hrs ago
ಕೇವಲ 40 ಸಾವಿರ ರೂ. ಬೆಲೆಗೆ ಬಿಡುಗಡೆಯಾಗಿದೆ 100 ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್
- 9 hrs ago
ಎರ್ಟಿಗಾದಲ್ಲಿ ಹೊಸ ಸಿಎನ್ಜಿ ರೂಪಾಂತರಗಳನ್ನು ಪರಿಚಯಿಸಲು ಸಜ್ಜಾದ ಮಾರುತಿ ಸುಜುಕಿ
- 9 hrs ago
ಏಪ್ರಿಲ್ ತಿಂಗಳ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಯಮಹಾ ಎಂಟಿ-15 ಬೈಕ್
Don't Miss!
- Sports
IPL 2022: ಕೆಎಲ್ ರಾಹುಲ್ ಹೋರಾಟ ವ್ಯರ್ಥ, ಲಕ್ನೋಗೆ ಮಣ್ಣು ಮುಕ್ಕಿಸಿದ ಆರ್ಸಿಬಿ ಟ್ರೋಫಿ ಕನಸು ಜೀವಂತ
- News
ವಿಮಾನ ಇಂಧನ ತೆರಿಗೆ ಕಡಿತ ಮಾಡುತ್ತಾ ಕೇಂದ್ರ ಸರ್ಕಾರ?
- Movies
ಹಿಜಾಬ್ ಧರಿಸಿ ಮುಸ್ಲಿಂ ಮಹಿಳೆಯರ ಪಾತ್ರ ಮಾಡುತ್ತಿರುವ ಸ್ಟಾರ್ ನಟಿಯರಿವರು
- Lifestyle
12 ಲಕ್ಷ ಖರ್ಚು ಮಾಡಿದ ನಾಯಿಯಾದ ಜಪಾನಿನ ವ್ಯಕ್ತಿ!
- Finance
ಮೇ 25ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Technology
ಅಪ್ಲಿಕೇಶನ್ ಡೆವಲಪರ್ಗಳಿಗೆ ಮತ್ತೊಮ್ಮೆ ಸಂದೇಶ ಕಳುಹಿಸಿದ ಆಪಲ್ ಕಂಪೆನಿ!
- Education
ESIC MTS 2022 : ಫೇಸ್ I ಫಲಿತಾಂಶ ಮತ್ತು ಫೇಸ್ II ಪ್ರವೇಶ ಪತ್ರ ಪ್ರಕಟ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಡ್ವೆಂಚರ್ ಪೆರಸೊನಾ ಸಫಾರಿ ಮಾದರಿಯಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳನ್ನು ಗ್ರಾಹಕರ ಬೇಡಿಕೆಯೆಂತೆ ನಿರಂತರವಾಗಿ ಹೊಸ ಬದಲಾವಣೆಗಳೊಂದಿಗೆ ಉನ್ನತೀಕರಿಸುತ್ತಿದ್ದು, ಕಂಪನಿಯು ತನ್ನ ಎಸ್‌ಯುವಿ ಮಾದರಿಯಾದ ಸಫಾರಿ ಎಸ್‌ಯುವಿಯಲ್ಲಿ ಹೊಸ ಬಣ್ಣದ ಆಯ್ಕೆ ನೀಡಿದೆ.

ಸಫಾರಿ ಎಸ್‌ಯುವಿಯಲ್ಲಿ ಡಾರ್ಕ್ ಎಡಿಷನ್ ಬಿಡುಗಡೆಯ ನಂತರ ಇದೀಗ ಅಡ್ವೆಂಚರ್ ಪೆರಸೊನಾ ಆವೃತ್ತಿಯಲ್ಲಿ ಹೊಸ ಫೀಚರ್ಸ್‌ನೊಂದಿಗೆ ಉನ್ನತೀಕರಿಸಿದ್ದು, ಕಳೆದ ತಿಂಗಳು ಹೊಸ ಕಾರಿನ ಎರಡನೇ ಸಾಲಿನ ಆಸನಗಳಲ್ಲೂ ಏರ್ ವೆಂಟಿಲೆಟೆಡ್ ಸೌಲಭ್ಯವನ್ನು ನೀಡಿದ್ದ ಟಾಟಾ ಕಂಪನಿಯು ಇದೀಗ ಹೊಸ ಬಣ್ಣದ ಆಯ್ಕೆ ನೀಡಿದೆ.

ಟಾಟಾ ಕಂಪನಿಯು ಅಡ್ವೆಂಚರ್ ಪೆರಸೊನಾ ಸಫಾರಿ ಮಾದರಿಯಲ್ಲಿ ಹೊಸ ಆರ್ಕಸ್ ವೈಟ್ ಬಣ್ಣದ ಆಯ್ಕೆ ನೀಡಲಾಗಿದ್ದು, ಆಕರ್ಸ್ ವೈಟ್ ಜೊತೆಗೆ ಸಫಾರಿ ಮಾದರಿಯಲ್ಲಿ ಈಗಾಗಲೇ ವಿವಿಧ ಏಳು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಕಳೆದ ತಿಂಗಳು ಅಡ್ವೆಂಚರ್ ಪೆರಸೊನಾ ಆವೃತ್ತಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಎರಡನೇ ಸಾಲಿನ ಆಸನಗಳಲ್ಲೂ ಏರ್ ವೆಂಟಿಲೆಟೆಡ್ ಸೌಲಭ್ಯವನ್ನು ನೀಡಿದ್ದು, ಕಾರು ಪ್ರಯಾಣದ ವೇಳೆ ಸೀಟುಗಳನ್ನು ತಂಪಾಗಿ ಇಡಲು ಇದು ಉಪಯುಕ್ತವಾದ ವೈಶಿಷ್ಟ್ಯವಾಗಿದೆ.

ಟಾಟಾ ಮೋಟಾರ್ಸ್ ಕಂಪನಿಯು 7 ಆಸನಗಳ ಎಸ್‌ಯುವಿಯಲ್ಲಿ ನೀಡಿರುವ ಹೊಸ ವೈಶಿಷ್ಟ್ಯತೆಯು ಪ್ರತಿಸ್ಪರ್ಧಿಯಾದ ಮಹೀಂದ್ರಾ ಎಕ್ಸ್‌ಯುವಿ700 ಮಾದರಿಯಲ್ಲೂ ಕೂಡಾ ಲಭ್ಯವಿಲ್ಲ. ಫ್ರಂಟ್ ಸೀಟ್‌ಗಳಲ್ಲಿ ಈಗಾಗಲೇ ಪ್ರಮುಖ ಕಾರು ಕಂಪನಿಗಳು ಈ ವೈಶಿಷ್ಟ್ಯತೆ ನೀಡುತ್ತಿದ್ದರೂ ಟಾಟಾ ಕಂಪನಿಯು ಸಫಾರಿ ಮಾದರಿಗಾಗಿ ಎರಡನೇ ಸಾಲಿನಲ್ಲೂ ಈ ಹೊಸ ವೈಶಿಷ್ಟ್ಯತೆಯನ್ನು ನೀಡಿರುವುದು ಅತ್ಯುತ್ತಮ ಆಯ್ಕೆಯಾಗಿದೆ.

ಸಫಾರಿ ಕಾರಿನ ಅಡ್ವೆಂಚರ್ ಪೆರಸೊನಾ ಮಾದರಿಯ ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ಎ ಪ್ಲಸ್ ರೂಪಾಂತರಗಳು ಎರಡು ಸಾಲಿನಲ್ಲೂ ವೆಂಟಿಲೆಟೆಡ್ ಆಸನಗಳನ್ನು ಹೊಂದಿರಲಿದ್ದು, ಪ್ರೀಮಿಯಂ ಬೆಲೆಯ ಕಾರಿಗೆ ಇದು ಗಮನಾರ್ಹ ವೈಶಿಷ್ಟ್ಯತೆಯಾಗಿದೆ.

ನ್ಯೂ ಜನರೇಷನ್ ಸಫಾರಿ ಕಾರು ಕಳೆದ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯ ನಂತರ ಇದುವರೆಗೆ ಸುಮಾರು 20 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದ್ದು, ಹೊಸ ಪ್ರಮುಖ ಮೂರು ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಹೊಸ ಕಾರು ಸ್ಟ್ಯಾಂಡರ್ಡ್, ಅಡ್ವೆಂಚರ್ ಪೆರಸೊನಾ, ಗೋಲ್ಡ್ ಮತ್ತು ಡಾರ್ಕ್ ಎಡಿಷನ್‌ಗಳನ್ನು ಹೊಂದಿದ್ದು, ಕಂಪನಿಯು ಇದೀಗ ಅಡ್ವೆಂಚರ್ ಪೆರಸೊನಾ ಮಾದರಿಯಲ್ಲಿ ಪ್ರೀಮಿಯಂ ಫೀಚರ್ಸ್ ಸೇರ್ಪಡೆ ಮಾಡಿದೆ.

ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 14.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23.40 ಲಕ್ಷ ಬೆಲೆ ಹೊಂದಿದ್ದು, ಹೆಚ್ಚಿನ ವೈಶಿಷ್ಟ್ಯತೆಗಳನ್ನು ಹೊಂದಿರುವ ಅಡ್ವೆಂಚರ್ ಪೆರಸೊನಾ ಸಫಾರಿ ಮಾದರಿಯು ಆರಂಭಿಕವಾಗಿ ರೂ. 20.99 ಲಕ್ಷದಿಂದ 22.40 ಲಕ್ಷ ಬೆಲೆ ಹೊಂದಿದೆ.

ಸಫಾರಿ ಎಸ್‌ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ.

ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ವೆರಿಯೆಂಟ್‌ಗಳೊಂದಿಗೆ ಸಫಾರಿ ಕಾರು ಖರೀದಿಗೆ ಲಭ್ಯವಿದ್ದು, ಹೊಸ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಮತ್ತು 7 ಸೀಟರ್ ಆಯ್ಕೆ ಪಡೆದುಕೊಂಡಿದೆ.

ಹೊಸ ಕಾರಿನ ಬೆಸ್ ಮಾದರಿಗಳಲ್ಲೂ ಟಾಟಾ ಕಂಪನಿಯು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ರೋಲ್ ಓವರ್ ಮಿಟಿಗೇಷನ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್ಹ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಸೌಲಭ್ಯಗಳನ್ನು ನೀಡಿದೆ.

ಮಧ್ಯಮ ಆವೃತ್ತಿಗಳಲ್ಲಿ ಆರಂಭಿಕ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳೊಂದಿಗೆ ಟೈರ್ ಪ್ರೆಷರ್ ಮಾನಿಟರ್, ಆಟೋ ಡಿಮ್ಮಿಂಗ್ ಇನ್‌ಸೈಡ್ ರಿಯರ್ ವ್ಯೂ ಮಿರರ್, 18-ಇಂಚಿನ ಅಲಾಯ್ ವೀಲ್ಹ್, ಆಟೋ ಕ್ಲೈಮೆಟ್ ಕಂಟ್ರೋಲ್, ಆಟೋ ಹೆಡ್‌ಲೈಟ್ಸ್ ಮತ್ತು ವೈಪರ್ಸ್, ಪವರ್ ಫೋಲ್ಡಿಂಗ್ ಮತ್ತು ಹೊಂದಾಣಿಕೆ ಮಾಡಬಹುದಾದ ವಿಂಗ್ ಮಿರರ್, ಕೀ ಲೆಸ್ ಎಂಟ್ರಿ, ಆ್ಯಂಬಿಯೆಂಟ್ ಮೋಡ್ ಮತ್ತು ಐರಾ ಕಾರ್ ಕನೆಕ್ಟ್ ಟೆಕ್ನಾಲಜಿ ನೀಡಲಾಗಿದೆ.

ಟಾಪ್ ಎಂಡ್‌ನಲ್ಲಿರುವ ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಆವೃತ್ತಿಗಳಲ್ಲಿ ಆರಂಭಿಕ ಮಾದರಿಗಳಲ್ಲಿನ ಹಲವು ಫೀಚರ್ಸ್‌ನೊಂದಿಗೆ ಪನೊರಮಿಕ್ ಸನ್‌ರೂಫ್, ಸೈಡ್ ಕರ್ಟೈನ್ ಏರ್‌ಬ್ಯಾಗ್, ಹಿಲ್ ಡಿಸೆಂಟ್ ಕಂಟ್ರೋಲ್, ಟೈರೈನ್ ರೆಸ್ಪಾನ್ಸ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಮಷಿನ್ ಕಟ್ ಅಯಾಲ್ ವೀಲ್ಹ್, ಜೆಕ್ಸಾನ್ ಹೆಚ್‌ಡಿಐ ಹೆಡ್‌ಲೈಟ್ಸ್, ಫ್ರಂಟ್ ಫಾಗ್ ಲೈಟ್ಸ್, ಕಾರ್ನರಿಂಗ್ ಫಂಕ್ಷನ್, ಟೆರೈನ್ ರೆನ್ಪಾನ್ಸ್ ಮೋಡ್, 8.8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಲಾಗಿದೆ.

ಜೊತೆಗೆ 7 ಇಂಚಿನ ಡಿಜಿಟಲ್ ಡಿಸ್‌ಪ್ಲೇ, 9 ಜೆಬಿಎಲ್ ಸ್ಪೀಕರ್ಸ್ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟ್ ಮತ್ತು ಹೈ ಎಂಡ್ ಮಾದರಿಯಲ್ಲಿ ಮಾತ್ರ ಪನೊರಮಿಕ್ ಸನ್‌ರೂಫ್ ಸೌಲಭ್ಯ ನೀಡಲಾಗಿದ್ದು, ಅಡ್ವೆಂಚರ್ ಆವೃತ್ತಿಯಲ್ಲಿ ಗ್ರಾಹಕರ ಬೇಡಿಕೆಯ ಅನುಸಾರವಾಗಿ ಕಂಪನಿಯು ಆಫ್ ರೋಡ್ ಪರ್ಫಾಮೆನ್ಸ್‌ಗಾಗಿ 4x4 ಡ್ರೈವ್ ಸಿಸ್ಟಂ ಮಾದರಿಯನ್ನು ಸಹ ಪರಿಚಯಿಸುವ ಯೋಜನೆಯಲ್ಲಿದೆ.