ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಟಾಟಾ ಮೋಟಾರ್ಸ್ ಕಂಪನಿಯು ಸಫಾರಿ ಎಸ್‌ಯುವಿಯಲ್ಲಿ ಹೊಸದಾಗಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಪರಿಚಯಿಸಿದ್ದು, ಹೊಸ ವೆರಿಯೆಂಟ್‌ಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 17.96 ಲಕ್ಷ ಬೆಲೆ ಹೊಂದಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಎಸ್‌ಯುವಿ ಮಾದರಿಗಳಲ್ಲಿ ನಿರಂತರವಾಗಿ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹ್ಯಾರಿಯರ್ ಜೊತೆಗೆ ಸಫಾರಿ ಮಾದರಿಯಲ್ಲಿ ಹೊಸದಾಗಿ ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಎಕ್ಸ್ಎಂಎಸ್ ವೆರಿಯೆಂಟ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ ಎಕ್ಸ್ಎಂಎಎಸ್ ಮಾದರಿಯು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಸಫಾರಿ ಎಕ್ಸ್ಎಂಎಸ್ ಮ್ಯಾನುವಲ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 17.96 ಲಕ್ಷ ಬೆಲೆ ಹೊಂದಿದ್ದರೆ ಎಕ್ಸ್ಎಂಎಎಸ್ ಆಟೋಮ್ಯಾಟಿಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 19.26 ಲಕ್ಷ ಬೆಲೆ ಹೊಂದಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಹೊಸ ವೆರಿಯೆಂಟ್‌ಗಳಲ್ಲಿ ಕಂಪನಿಯು ಹೊಸದಾಗಿ ಹಲವು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಿದ್ದು, ಎಕ್ಸ್ಎಂಎಎಸ್ ಮತ್ತು ಎಕ್ಸ್ಎಂಎಸ್ ವೆರಿಯೆಂಟ್ ಖರೀದಿಸುವ ಗ್ರಾಹಕರಿಗೆ ಪನರೊಮಿಕ್ ಸನ್‌ರೂಫ್, 17 ಇಂಚಿನ ಅಲಾಯ್ ವ್ಹೀಲ್‌ಗಳು, ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, 8 ಸ್ಪೀಕರ್ಸ್ ಮ್ಯೂಸಿಕ್ ಸಿಸ್ಟಂ, ಪಾರ್ಕಿಂಗ್ ಕ್ಯಾಮೆರಾ, ಅಂಡ್ರಾಯಿಡ್ ಆಟೋ ಜೊತೆ ಆ್ಯಪಲ್ ಕಾರ್‌ಪ್ಲೇ ಸೌಲಭ್ಯಗಳನ್ನು ನೀಡಲಾಗಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಸನ್‌ರೂಫ್ ಬಯಸುತ್ತಿದ್ದ ಗ್ರಾಹಕರಿಗೆ ಕಂಪನಿಯು ಇದೀಗ ಮಧ್ಯಮ ಕ್ರಮಾಂಕದಲ್ಲಿ ಪರಿಚಯಿಸಿದ್ದು, ಇದರ ಹೊರತಾಗಿ ಹೊಸ ಮಾದರಿಯಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ತರಲಾಗುತ್ತಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಇನ್ನು 2021ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ನ್ಯೂ ಜನರೇಷನ್ ಸಫಾರಿ ಮಾದರಿಯು ಕಳೆದ ಒಂದೂವರೆ ವರ್ಷದಲ್ಲಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹ್ಯಾರಿಯರ್ ಮಾದರಿಯನ್ನು ಆಧರಿಸಿರುವ ಹೊಸ ಸಫಾರಿಯು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಅತ್ಯುತ್ತಮ ಬೆಲೆ ಪಡೆದುಕೊಂಡಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಒಮೆಗಾ ಪ್ಲ್ಯಾಟ್‌ಫಾರ್ಮ್‌ನಿಂದಾಗಿ ಟಾಟಾ ಹೊಸ ಕಾರಿಗೆ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯುತ್ತಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಸಫಾರಿ ಎಸ್‌ಯುವಿ ಸದ್ಯ ಸ್ಟ್ಯಾಂಡರ್ಡ್, ಡಾರ್ಕ್ ಮತ್ತು ಅಡ್ವೆಂಚರ್ ಪೆರಸೊನಾ ಆವೃತ್ತಿಗಳನ್ನು ಹೊಂದಿದ್ದು, ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 15.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23.56 ಲಕ್ಷ ಬೆಲೆ ಹೊಂದಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಮೂರು ಮಾದರಿಗಳಲ್ಲೂ ಒಂದೇ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಸಫಾರಿ ಎಸ್‌ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಅಡ್ವೆಂಚರ್ ಆವೃತ್ತಿಯಲ್ಲಿ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಕಂಪನಿಯು ಆಫ್ ರೋಡ್ ಪರ್ಫಾಮೆನ್ಸ್‌ಗಾಗಿ 4x4 ಡ್ರೈವ್ ಸಿಸ್ಟಂ ಮಾದರಿಯನ್ನು ಸಹ ಪರಿಚಯಿಸುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಕಾರು ಮಾದರಿಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಿರಂತರವಾಗಿ ಬದಲಾವಣೆ ತರುತ್ತಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳ ಮಾರಾಟವು ಸಾಕಷ್ಟು ಏರಿಕೆ ಕಾಣುತ್ತಿದ್ದು, ಮಧ್ಯಮ ಗಾತ್ರದ ಎಸ್‌ಯುವಿಯಲ್ಲಿ ಎಕ್ಸ್‌ಯುವಿ700 ಸದ್ಯ ಮುಂಚೂಣಿಯಲ್ಲಿದ್ದರೆ ಪ್ರತಿಸ್ಪರ್ಧಿಯಾದ ಸಫಾರಿ ಕೂಡಾ ಉತ್ತಮ ಬೇಡಿಕೆ ಹೊಂದಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಎಕ್ಸ್‌ಯುವಿ700 ಮಾದರಿಗೆ ಹೆಚ್ಚಿನ ಬೇಡಿಕೆಯಿದ್ದರೂ ಪ್ರತಿಸ್ಪರ್ಧಿ ಮಾದರಿಯಾಗಿರುವ ಸಫಾರಿ ಎಸ್‌ಯುವಿಯ ಬೇಡಿಕೆ ಅನುಪಾತ ಸಾಕಷ್ಟು ಕಡಿಮೆಯಿದ್ದು, ಎಕ್ಸ್‌ಯುವಿ700 ಮಾದರಿಯಲ್ಲಿ ಫೀಚರ್ಸ್‌ಗಳನ್ನು ಸಫಾರಿಯಲ್ಲಿ ಬಯಸುವ ಗ್ರಾಹಕರು ಸಂಖ್ಯೆ ಕೂಡಾ ಹೆಚ್ಚಳವಾಗುತ್ತಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಹೀಗಾಗಿ ಎಕ್ಸ್‌ಯುವಿ700 ಮಾದರಿಗೆ ಪೈಪೋಟಿಯಾಗಿ ಕಂಪನಿಯು ಸಫಾರಿ ಫೇಸ್‌ಲಿಫ್ಟ್ ಮಾದರಿಯನ್ನು ಹೊಸ ತಂತ್ರಜ್ಞಾನ ಪ್ರೇರಣೆಯೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಫೇಸ್‌ಲಿಫ್ಟ್ ಆವೃತ್ತಿಯು ಎಡಿಎಎಸ್(ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ) ಸೌಲಭ್ಯದೊಂದಿಗೆ 4x4 ಡ್ರೈವ್ ಸಿಸ್ಟಂ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಹೊಸ ಪ್ರೀಮಿಯಂ ಫೀಚರ್ಸ್ ಒಳಗೊಂಡ ಟಾಟಾ ಸಫಾರಿ ಎಕ್ಸ್ಎಂಎಎಸ್, ಎಕ್ಸ್ಎಂಎಸ್ ವೆರಿಯೆಂಟ್‌ಗಳು ಬಿಡುಗಡೆ

ಜೊತೆಗೆ ಹೊಸ ಕಾರಿನಲ್ಲಿ ಕಂಪನಿಯು ಮರುವಿನ್ಯಾಸಗೊಳಿಸಲಾದ ಫ್ರಂಟ್ ಎಲ್ಇಡಿ ಹೆಡ್‌ಲ್ಯಾಂಡ್ ಡಿಸೈನ್, ಫ್ರಂಟ್ ಗ್ರಿಲ್ ಮತ್ತು ಟೈಲ್ ಲ್ಯಾಂಪ್ ಸೌಲಭ್ಯಗಳನ್ನು ನೀಡಲಿದ್ದು, ಒಳಭಾಗದಲ್ಲಿ 360 ಡಿಗ್ರಿ ಕ್ಯಾಮೆರಾ ಸೌಲಭ್ಯಕ್ಕಾಗಿ ದೊಡ್ಡದಾದ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ನೀಡಬಹುದಾಗಿದೆ.

Most Read Articles

Kannada
English summary
Tata safari xms xmas variants launched features details
Story first published: Friday, September 16, 2022, 22:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X