ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಟಾಟಾ ಗ್ರೂಪ್‌ನ ರಕ್ಷಣಾ ವಿಭಾಗವಾದ ಟಾಟಾ ಅಡ್ವಾನ್ಸ್ ಸಿಸ್ಟಮ್ಸ್, ಭಾರತೀಯ ಸೇನೆಗೆ ಯುದ್ಧ ವಲಯಗಳಲ್ಲಿ ಬಳಸಲು ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್‌ಗಳನ್ನು ಪೂರೈಸಿದೆ. ಕಂಪನಿಯು ಈ ವಾಹನಗಳ ಬೆಂಗಾವಲಿನ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಮಾಹಿತಿಯ ಪ್ರಕಾರ, ಟಾಟಾ ಅಡ್ವಾನ್ಸ್ ಸಿಸ್ಟಮ್ಸ್‌ನಿಂದ 10 ವಾಹನಗಳನ್ನು ಭಾರತೀಯ ಸೇನೆಗೆ ತಲುಪಿಸಲಾಗಿದೆ. ಇವು ಆಧುನಿಕ ತಂತ್ರಜ್ಞಾನ ಹಾಗೂ ಬಲಿಷ್ಟ್ ಬಾಡಿಯನ್ನು ಹೊಂದಿರುವುದರ ಜೊತೆಗೆ ವಿಶ್ವದ ಅತ್ಯಂತ ಸುರಕ್ಷತೆ ಒದಗಿಸುವ ವಾಹನಗಳಲ್ಲಿ ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳು ಟಾಪ್‌ನಲ್ಲಿವೆ ಎಂದು ಕಂಪನಿ ಹೇಳಿಕೊಂಡಿದೆ.

ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್ ಎಂದರೇನು?

ಕ್ವಿಕ್ ರಿಯಾಕ್ಷನ್ ಫೈಟಿಂಗ್ ವೆಹಿಕಲ್‌ಗಳು ಬುಲೆಟ್ ಪ್ರೂಫ್ ವಾಹನಗಳಾಗಿದ್ದು, ಯುದ್ಧದ ಸಮಯದಲ್ಲಿ ಸೈನ್ಯವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲು ಬಳಸಲಾಗುತ್ತದೆ. ಬುಲೆಟ್‌ಗಳು ಈ ವಾಹನಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಅಲ್ಲದೇ ಈ ವಾಹನಗಳು ಲ್ಯಾಂಡ್ ಮೈನ್‌ಗಳಿಂದಲೂ ರಕ್ಷಿಸುತ್ತವೆ.

ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಈ ವಾಹನಗಳ ಒಳಗೆ ಕುಳಿತುಕೊಳ್ಳುವ ಸೈನಿಕರಿಗೆ ಗ್ರೆನೇಡ್ ಸ್ಫೋಟಗೊಂಡರೂ ಯಾವುದೇ ಹಾನಿಯಾಗುವುದಿಲ್ಲ. ಎದುರಾಳಿಗಳನ್ನು ಹೊಡದುರುಳಿಸುವಲ್ಲಿ ಸಮರ್ಥವಾಗಿ ಎದುರಿಸಬಲ್ಲದು. ಹಾಗಾಗಿಯೇ ಟಾಟಾ ಮೋಟಾರ್ಸ್‌ನ ಈ ಉತ್ಪನ್ನಗಳಿಗೆ ವಿದೇಶಗಳಲ್ಲಿಯೂ ಹೆಚ್ಚು ಬೇಡಿಕೆಯಿದ್ದು, ಭಾರತದಲ್ಲಿ ತಯಾರಾದ ಈ ಫೈಟಿಂಗ್ ವೆಹಿಕಲ್‌ಗಳನ್ನು ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಭಾರತದಿಂದ ಶಾಂತಿಪಾಲನಾ ಕಾರ್ಯಾಚರಣೆಗೆ ಸೇರುವ ಸೈನಿಕರು ಸಹ ಈ ವಾಹನಗಳನ್ನು ಬಳಸುತ್ತಾರೆ. ಈ ಕ್ವಿಕ್ ರಿಯಾಕ್ಷನ್ ವಾಹನಗಳು 4X4 ಡ್ರೈವ್‌ಟ್ರೇನ್ ಸಾಮರ್ಥ್ಯದೊಂದಿಗೆ ಬರುತ್ತವೆ, ಇದು ಒರಟಾದ ಭೂಪ್ರದೇಶಗಳನ್ನು (ಆಫ್‌ರೋಡ್) ಸುಲಭವಾಗಿ ಏರಲು ಅನುವು ಮಾಡಿಕೊಡುತ್ತದೆ. ಎಂತಹ ವಾತಾವರಣವಿದ್ದರೂ ಸುನಾಯಾಸವಾಗಿ ಮುನ್ನುಗ್ಗಬಲ್ಲವು.

ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಟಾಟಾ ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳು ಲೆವೆಲ್-4 ಬ್ಲಾಸ್ಟ್ ಪ್ರೊಟೆಕ್ಷನ್‌ನೊಂದಿಗೆ ಬರುತ್ತವೆ. ಈ ವಾಹನಗಳು 14 ರಿಂದ 21 ಕೆಜಿಯಷ್ಟು ಸ್ಫೋಟವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಈ ವಾಹನಗಳಲ್ಲಿ ಚಾಲಕ ಸೇರಿದಂತೆ 14 ಯೋಧರು ಪ್ರಯಾಣಿಸಬಹುದು. ಯುದ್ಧ ವಲಯದಲ್ಲಿ ಬೇಕಾದರೆ ಈ ವಾಹನಗಳ ಮೇಲೆ ಮೆಷಿನ್ ಗನ್‌ಗಳನ್ನು ಅಳವಡಿಸಬಹುದು.

ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಶಕ್ತಿಯುತ ಎಂಜಿನ್

ಟಾಟಾ ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳು ಶಕ್ತಿಯುತವಾದ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು ಗರಿಷ್ಠ 240 Bhp ಶಕ್ತಿಯನ್ನು ಹೊರಹಾಕುತ್ತದೆ. ಈ ವಾಹನಗಳು ಗರಿಷ್ಠ 2 ಟನ್ ಭಾರವನ್ನು ಸಾಗಿಸಬಲ್ಲವು. ಎಲ್ಲಾ ರೀತಿಯ ರಸ್ತೆಗಳಲ್ಲಿ ಓಡಿಸಲು ಅವುಗಳಲ್ಲಿ ಆಲ್-ಟೆರೈನ್ ಟೈರ್‌ಗಳನ್ನು ಅಳವಡಿಸಲಾಗಿದೆ.

ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಇತ್ತೀಚೆಗೆ ಭಾರತೀಯ ಸೇನೆಯು ಲಡಾಖ್‌ನ ಗಡಿಯನ್ನು ಮೇಲ್ವಿಚಾರಣೆ ಮಾಡಲು ಮೇಡ್-ಇನ್-ಇಂಡಿಯಾ ಪದಾತಿ ದಳದ ಯುದ್ಧ ವಾಹನಗಳನ್ನು ನಿಯೋಜಿಸಿತ್ತು. ಲಡಾಖ್ ಗಡಿಯಲ್ಲಿ ಸೇನೆಯ ಚಟುವಟಿಕೆಗಳನ್ನು ಹೆಚ್ಚಿಸಲು ಮತ್ತು ನೆರವಿನ ವಿತರಣೆಯನ್ನು ವೇಗಗೊಳಿಸಲು ಈ ವಾಹನಗಳನ್ನು ಸೇರ್ಪಡೆಗೊಳಿಸಲಾಗಿದೆ.

ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಈ ವಾಹನಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಟಾಟಾ ಗ್ರೂಪ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಭಾರತೀಯ ನಿರ್ಮಿತ ವಾಹನಗಳನ್ನು ಸೇನೆಗೆ ಪೂರೈಸುವ 50,000 ಕೋಟಿ ರೂ.ಗಳ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಬೆಂಗಳೂರು ಮೂಲದ ಎಲೆಕ್ಟ್ರಿಕ್ ಡರ್ಟ್ ಬೈಕ್

ಬೆಂಗಳೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟಪ್ ಕಂಪನಿಯಾದ ಬ್ಯಾರೆಲ್ ಮೋಟಾರ್ಸ್ (Barrel Motors) ಶೀಘ್ರದಲ್ಲೇ ಭಾರತೀಯ ಸೇನೆಯ ಅಗತ್ಯತೆಗಳನ್ನು ಪೂರೈಸುವ ಕೆಲವು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಇತ್ತೀಚೆಗೆ ಹೇಳಿದೆ.

ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಇದನ್ನು ವೆಲೋಕ್-ಇ ಎಲೆಕ್ಟ್ರಿಕ್ ಬೈಕ್ ಎಂದು ಹೆಸರಿಸಿದ್ದು, ಗಡಿಯ ಪಕ್ಕದ ಪ್ರದೇಶಗಳಲ್ಲಿ ಗಸ್ತು ತಿರುಗಲು ಬಳಸಲಾಗುವುದು. ಲಡಾಖ್ ಮತ್ತು ಸಿಯಾಚಿನ್‌ನ ಕಠಿಣ ಹವಾಮಾನದಲ್ಲೂ ಈ ಬೈಕ್ ಅನ್ನು ಬಳಸಬಹುದು. ಬ್ಯಾರೆಲ್ ಮೋಟಾರ್ಸ್‌ನ ವೆಲೋಕ್-ಇ ಎಲೆಕ್ಟ್ರಿಕ್ ಬೈಕ್ ಕೆಲವು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ.

ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಇದರಲ್ಲಿ, ಮೊದಲ ರೂಪಾಂತರವು ಸ್ಟ್ರೀಟ್ ಬೈಕ್ ಆಗಿದ್ದು, ಎರಡನೆಯ ರೂಪಾಂತರವು ಹೆಚ್ಚು ಶಕ್ತಿಶಾಲಿ ಆಫ್-ರೋಡ್ ಬೈಕ್ ಆಗಿ ಹೊರಹೊಮ್ಮಲಿದೆ. ಬ್ಯಾರೆಲ್ ಮೋಟಾರ್ಸ್ ಈ ಎಲೆಕ್ಟ್ರಿಕ್ ಬೈಕ್ ಅನ್ನು ವೆಲೋಕ್-ಇ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಪ್ರಸ್ತುತ ಕಂಪನಿಯು ಈ ಬೈಕಿನ ಮಾದರಿಯನ್ನು ಪರೀಕ್ಷಿಸುತ್ತಿದ್ದು, ಪರೀಕ್ಷಾ ಪ್ರಕ್ರಿಯೆ ಮುಗಿದ ಬಳಿಕ ಮಾರುಕಟ್ಟೆಯ ಅಗತ್ಯಕ್ಕೆ ಅನುಗುಣವಾಗಿ ಬೈಕ್ ಉತ್ಪಾದನೆ ಆರಂಭಿಸಲಾಗುವುದು.

ಭಾರತೀಯ ಸೇನೆಗೆ ಬಲ ಹೆಚ್ಚಿಸಿದ ಟಾಟಾ: 10 ಕ್ವಿಕ್ ರಿಯಾಕ್ಷನ್ ಫೈಟಿಂಗ್ ವಾಹನಗಳ ಪೂರೈಕೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪ್ರಸ್ತುತ ಯುದ್ಧ ವಾಹನಗಳಿಗಾಗಿ ರಷ್ಯಾ ಮತ್ತು ಅಮೆರಿಕದಲ್ಲಿ ತಯಾರಾದ ವಾಹನಗಳ ಮೇಲೆ ಭಾರತೀಯ ಸೇನೆಯು ಹೆಚ್ಚು ಅವಲಂಬನೆಯಾಗಿದೆ. ಆದರೆ, ಈಗ ಮೇಡ್-ಇನ್-ಇಂಡಿಯಾ ಅಭಿಯಾನದ ಅಡಿಯಲ್ಲಿ ದೇಶದ ಹಲವು ಕಂಪನಿಗಳು ಸೇನೆಯ ಅವಶ್ಯಕತೆಗಳನ್ನು ಪೂರೈಸಲು ಮುಂದೆ ಬರುತ್ತಿವೆ. ಪ್ರಸ್ತುತ ಟಾಟಾ, ಮಹೀಂದ್ರಾ, ಭಾರತ್ ಫೋರ್ಸ್, ಕಲ್ಯಾಣಿ ಮತ್ತು ಲಾರ್ಸೆನ್ ಆಂಡ್ ಟೂಬ್ರೊ ಕಂಪನಿಗಳು ಸೇನೆಗಾಗಿ ಹಗುರವಾದ ಮತ್ತು ಭಾರವಾದ ಯುದ್ಧ ವಾಹನಗಳನ್ನು ತಯಾರಿಸುತ್ತಿವೆ.

Most Read Articles

Kannada
English summary
Tata strengthens Indian Army Supply of 10 Quick Reaction Fighting Vehicles
Story first published: Wednesday, July 27, 2022, 11:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X