Just In
- 20 min ago
ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ
- 2 hrs ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 2 hrs ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 2 hrs ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
Don't Miss!
- News
ಶ್ರೀರಾಮುಲು-ಸಂತೋಷ್ ಲಾಡ್ ಆಲಿಂಗನ: ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿಯನ್ನು ಹಣಿಯಲು ಹೊಸ ತಂತ್ರ?
- Technology
ಭಾರತಕ್ಕೆ ಎಂಟ್ರಿ ಕೊಟ್ಟ ಒಪ್ಪೋ ರೆನೋ 8T 5G! ಕ್ಯಾಮೆರಾ ಹೇಗಿದೆ? ವಿಶೇಷತೆ ಏನು?
- Finance
Union Budget: ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಏರಿಕೆ
- Lifestyle
ಗಂಡಾಗಿ ಬದಲಾಗಿದ್ದ ಮಂಗಳಮುಖಿ ಜಿಹಾದ್ ಈಗ ಗರ್ಭಿಣಿ: 8 ತಿಂಗಳ ಗರ್ಭಿಣಿ ಈ ಜಿಹಾದ್
- Sports
ಗದ್ದೆಯೇ ಕ್ರಿಕೆಟ್ ಮೈದಾನ: ಶುಭಮನ್ ಗಿಲ್ ವಿಕೆಟ್ ಪಡೆದವರಿಗೆ ಸಿಗ್ತಿತ್ತು 100 ರುಪಾಯಿ ಬಹುಮಾನ
- Movies
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಡುಗಡೆಗೆ ಸಜ್ಜಾದ ಹೊಸ ಫೀಚರ್ಸ್ ಹೊಂದಿರುವ ಟಾಟಾ ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಸ್ಪೆಷಲ್ ಎಡಿಷನ್
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಮಾದರಿಗಳಿಗಾಗಿ ಶೀಘ್ರದಲ್ಲಿಯೇ ವಿಶೇಷ ಆವೃತ್ತಿಯೊಂದನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ. ವಿಶೇಷ ಆವೃತ್ತಿ ಬಿಡುಗಡೆಗೂ ಮುನ್ನ ಕಂಪನಿಯು ಟೀಸರ್ ಸಹ ಪ್ರಕಟಿಸಿದ್ದು, ಹೊಸ ಮಾದರಿಗಳಲ್ಲಿ ಹಲವಾರು ವಿಶೇಷ ಫೀಚರ್ಸ್ ಸೇರ್ಪಡೆಗೊಳಿಸುವ ಸುಳಿವು ನೀಡಿದೆ.

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ಕಂಪನಿಯು ಇದೀಗ ಎಸ್‌ಯುವಿ ಮಾದರಿಗಳಲ್ಲಿ ವಿಶೇಷ ಆವೃತ್ತಿಯನ್ನು ಪರಿಚಯಿಸಲು ಮುಂದಾಗಿದೆ.

ನೆಕ್ಸಾನ್, ನೆಕ್ಸಾನ್ ಎಲೆಕ್ಟ್ರಿಕ್, ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳಲ್ಲಿ ಈಗಾಗಲೇ ವಿವಿಧ ವಿಶೇಷ ಆವೃತ್ತಿಗಳ ಮಾರಾಟ ಹೊಂದಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಹೊಸ ಸೌಲಭ್ಯ ಒಳಗೊಂಡಿರುವ ಪ್ರೀಮಿಯಂ ಎಡಿಷನ್ ಬಿಡುಗಡೆಗೆ ಮುಂದಾಗಿದೆ.

ಟೀಸರ್‌ನಲ್ಲಿ ಲಭ್ಯವಾಗಿರುವ ಮಾಹಿತಿ ಪ್ರಕಾರ ನೆಕ್ಸಾನ್ ಮತ್ತು ನೆಕ್ಸಾನ್ ಇವಿ ಮಾದರಿಗಳಲ್ಲಿ ಕಂಪನಿಯು ವಿಶೇಷ ಆವೃತ್ತಿಯೊಂದಿಗೆ ವೈಟ್ ರೂಫ್‌ನೊಂದಿಗೆ ಲೆದರ್ ಸೀಟುಗಳು, ಡೋರ್ ಟ್ರಿಮ್‌ಗಳಲ್ಲಿ ಲೆದರ್ ಕೊಟಿಂಗ್ ಮತ್ತು ಪ್ರೀಮಿಯಂ ನೋಟವನ್ನು ಹೆಚ್ಚಿಸಲು ಸಾಫ್ಟ್ ಟಚ್ ಪ್ಲಾಸ್ಟಿಕ್ ಅನ್ನು ಸಹ ಬಳಸಬಹುದಾಗಿದೆ.

ಮತ್ತೊಂದೆಡೆ ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳಲ್ಲೂ ಲೆದರ್ ಸೀಟ್‌ಗಳನ್ನು ನೀಡಬಹುದಾಗಿದ್ದು, ಡ್ಯಾಶ್‌ಬೋರ್ಡ್ ಮತ್ತು ಡೋರ್ ಟ್ರಿಮ್‌ನಲ್ಲಿ ಲೆದರ್ ಕೊಟಿಂಗ್ ಅನ್ನು ನೀಡಲಿರುವ ಟಾಟಾ ಮೋಟಾರ್ಸ್ ಕಂಪನಿಯು ಪ್ರೀಮಿಯಂ ನೋಟವನ್ನು ಹೆಚ್ಚಿಸಲು ಸಾಫ್ಟ್ ಟಚ್ ಪ್ಲಾಸ್ಟಿಕ್ ಬಳಕೆ ಮಾಡಲಿದೆ.

ಕಂಪನಿಯ ಈ ಹಿಂದಿನ ಟೀಸರ್ ಬಿಡುಗಡೆಯ ಸಂದರ್ಭದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಹ್ಯಾರಿಯರ್ ಮತ್ತು ಸಫಾರಿ ಮಾದರಿಯ ಪೆಟ್ರೋಲ್ ಆವೃತ್ತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿತ್ತು. ಆದರೆ ಹೊಸ ಟೀಸರ್ ಮೂಲಕ ಕಂಪನಿಯು ತನ್ನ ಪ್ರಮುಖ ಎಸ್‌ಯುವಿಗಳಿಗೆ ಸ್ಪೆಷಲ್ ಎಡಿಷನ್ ಪರಿಚಯಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

ವಿಶೇಷ ಬಣ್ಣದ ಆಯ್ಕೆ ಹೊಂದಿರುವ ಟಾಟಾ ವಿಶೇಷ ಆವೃತ್ತಿಗಳು ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿ ಬೆಲೆ ಹೊಂದಿರಲಿದ್ದು, ಮುಂಬರುವ ಹಬ್ಬದ ಋತುಗಳಿಗೆ ಮುನ್ನ ಮಾರುಕಟ್ಟೆ ಪ್ರವೇಶಿಸಲಿವೆ.

ಇದರೊಂದಿಗೆ ಟಾಟಾ ಮೋಟಾರ್ಸ್ ಕಂಪನಿಯು ಸಫಾರಿ ಫೇಸ್‌ಲಿಫ್ಟ್ ಮತ್ತು ಹ್ಯಾರಿಯರ್ ನವೀಕೃತ ಮಾದರಿಯಲ್ಲಿ ಹೊಸ ಪೆಟ್ರೋಲ್ ಆವೃತ್ತಿಯನ್ನು ಸಹ ಪರಿಚಯಿಸುವ ಯೋಜನೆಯಲ್ಲಿದ್ದು, ಪೆಟ್ರೋಲ್ ಮಾದರಿಗಾಗಿ ಕಂಪನಿಯು ಕಳೆದ ವರ್ಷದಿಂದಲೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದೆ.

2021ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ನ್ಯೂ ಜನರೇಷನ್ ಸಫಾರಿ ಮಾದರಿಯು ಕಳೆದ ಒಂದೂವರೆ ವರ್ಷದಲ್ಲಿ ಹಲವಾರು ಹೊಸ ಬದಲಾವಣೆಗಳೊಂದಿಗೆ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಹ್ಯಾರಿಯರ್ ಮಾದರಿಯನ್ನು ಆಧರಿಸಿರುವ ಹೊಸ ಸಫಾರಿಯು 6 ಸೀಟರ್ ಮತ್ತು 7 ಸೀಟರ್ ಸೌಲಭ್ಯದೊಂದಿಗೆ ಅತ್ಯುತ್ತಮ ಬೆಲೆ ಪಡೆದುಕೊಂಡಿದೆ.

ಸದ್ಯಕ್ಕೆ ಡೀಸೆಲ್ ಮಾದರಿಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳು ಪೆಟ್ರೋಲ್ ಮಾದರಿಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರು ಕೂಡಾ ಹಲವಾರು ಕಾರಣಗಳಿಂದ ಪೆಟ್ರೋಲ್ ಮಾದರಿಗಳತ್ತ ಮುಖಮಾಡುತ್ತಿರುವ ಹೊಸ ಮಾದರಿಯ ಬಿಡುಗಡೆ ಯೋಜನೆಗೆ ಪ್ರಮುಖ ಕಾರಣವಾಗಿದೆ.

ಇನ್ನು ಒಮೆಗಾ ಪ್ಲ್ಯಾಟ್‌ಫಾರ್ಮ್‌ನಿಂದಾಗಿ ಟಾಟಾ ಹೊಸ ಕಾರುಳಿಗೆ ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯುತ್ತಿವೆ.

ಇದಲ್ಲಿ ಸಫಾರಿ ಎಸ್‌ಯುವಿ ಸದ್ಯ ಸ್ಟ್ಯಾಂಡರ್ಡ್, ಡಾರ್ಕ್ ಮತ್ತು ಅಡ್ವೆಂಚರ್ ಪೆರಸೊನಾ ಆವೃತ್ತಿಗಳನ್ನು ಹೊಂದಿದ್ದು, ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 15.35 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 23.56 ಲಕ್ಷ ಬೆಲೆ ಹೊಂದಿದೆ.

ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ, ಎಕ್ಸ್‌ಟಿ ಪ್ಲಸ್, ಎಕ್ಸ್‌ಜೆಡ್, ಎಕ್ಸ್‌ಜೆಡ್ ಪ್ಲಸ್ ಮತ್ತು ಎಕ್ಸ್‌ಜೆಡ್ ಪ್ಲಸ್ ಅಡ್ವೆಂಚರ್ ಪೆರಸೊನಾ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಮೂರು ಮಾದರಿಗಳಲ್ಲೂ ಒಂದೇ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.

ಸಫಾರಿ ಎಸ್‌ಯುವಿಯಲ್ಲಿ ಆರು ಸ್ಪೀಡ್ ಮ್ಯಾನುವಲ್ ಅಥವಾ ಆರು ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ 2.0-ಲೀಟರ್ ಕ್ರಿಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ 168-ಬಿಎಚ್‌ಪಿ ಮತ್ತು 350-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಅಡ್ವೆಂಚರ್ ಆವೃತ್ತಿಯಲ್ಲಿ ಗ್ರಾಹಕರ ಬೇಡಿಕೆಗೆ ಅನುಸಾರವಾಗಿ ಕಂಪನಿಯು ಆಫ್ ರೋಡ್ ಪರ್ಫಾಮೆನ್ಸ್‌ಗಾಗಿ 4x4 ಡ್ರೈವ್ ಸಿಸ್ಟಂ ಮಾದರಿಯನ್ನು ಸಹ ಪರಿಚಯಿಸುತ್ತಿದ್ದು, ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹೊಸ ಕಾರು ಮಾದರಿಗಳಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಿರಂತರವಾಗಿ ಬದಲಾವಣೆ ತರುತ್ತಿದೆ.