Just In
- 1 hr ago
2023ರಿಂದ ಭಾರತದಲ್ಲಿ ಮಾರಾಟಗೊಳ್ಳಲಿದೆ ಜೈವಿಕ ಇಂಧನ ಒಳಗೊಂಡ ಇ20 ಪೆಟ್ರೋಲ್ ಮಾದರಿ
- 2 hrs ago
ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಲು ಹೊಸ ರೂಪದಲ್ಲಿ ಬರುತ್ತಿದೆ ಮಾರುತಿ ಆಲ್ಟೋ ಕೆ10
- 2 hrs ago
ಹೊಸ ಆಕ್ಟಿವಾ ಟೀಸರ್ ಬಿಟ್ಟು ನಿರೀಕ್ಷೆ ಹೆಚ್ಚಿಸಿದ ಹೋಂಡಾ: ಆಕ್ಟಿವಾ 7G ಆಗಿರಬಹುದೇ?
- 3 hrs ago
ಇವಿ ಸ್ಕೂಟರ್ಗಳ ಬೆಲೆ ನಿಯಂತ್ರಿಸಲು ಬೃಹತ್ ಯೋಜನೆಗೆ ಚಾಲನೆ ನೀಡಿದ ಓಲಾ ಎಲೆಕ್ಟ್ರಿಕ್
Don't Miss!
- Finance
ಪೇಟಿಎಂ ಷೇರು ಶೇಕಡ 6ರಷ್ಟು ಕುಸಿತ, ಕಾರಣವೇನು?
- Sports
ಆ ಒಂದು ಕ್ರಮಾಂಕಕ್ಕೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಿ: ಟೀಮ್ ಇಂಡಿಯಾಗೆ ಸಬಾ ಕರೀಮ್ ಸಲಹೆ
- News
ಬಿಜೆಪಿ ನಾಯಕರಿಗೆ 'ಈಗಲೇ ಬಿಟ್ಟು ಹೊರಡಿ' ಎಂಬ ಸಂದೇಶ ನೀಡುತ್ತಿದ್ದಾರೆ ನಿತೀಶ್ ಕುಮಾರ್
- Technology
ಭಾರತದಲ್ಲಿ ವಿವೋ V25 ಪ್ರೊ ಸ್ಮಾರ್ಟ್ಫೋನಿನ ಲಾಂಚ್ ಡೇಟ್ ಬಹಿರಂಗ!
- Movies
ರಶ್ಮಿಕಾ ಆಯ್ತು, ಅನನ್ಯಾ ಪಾಂಡೆ ಕಡೆ ವಾಲಿದ ವಿಜಯ್ ದೇವರಕೊಂಡ!
- Lifestyle
ವಿಶ್ವ ಆನೆ ದಿನ 2022: ಆನೆಗಳ ಕುರಿತ ಈ ಆಸಕ್ತಿಕರ ಸಂಗತಿಗಳು ಗೊತ್ತಿದೆಯೇ?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಟಾಟಾ ಟಿಯಾಗೋ ಕಾರು
ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಜನಪ್ರಿಯ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಟಾಟಾ ಕಾರುಗಳ ಬೇಡಿಕೆ ಹೆಚ್ಚಾಗಿದೆ. ಟಾಟಾದ ಟಿಯಾಗೋ ಹ್ಯಾಚ್‌ಬ್ಯಾಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ.

ಟಾಟಾ ಮೋಟಾರ್ಸ್ ಗುಜರಾತ್‌ನ ಸಾನಂದ್ ಮೂಲದ ಅಸೆಂಬ್ಲಿ ಲೈನ್‌ನಿಂದ 4,00,000ನೇ ಟಿಯಾಗೋ ಹ್ಯಾಚ್‌ಬ್ಯಾಕ್ ಅನ್ನು ಹೊರತಂದಿದೆ. ಕುತೂಹಲಕಾರಿಯಾಗಿ, ಟಾಟಾ ಟಿಯಾಗೊ ಈ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದ ಬ್ರ್ಯಾಂಡ್‌ನ ಮೊದಲ ಮಾದರಿಯಾಗಿದೆ. ಈ ಸಂದರ್ಭವನ್ನು ಆಚರಿಸುವ ಸಲುವಾಗಿ, ಕಂಪನಿಯು ದೇಶದಲ್ಲಿ #Tiago4ever ಅಭಿಯಾನವನ್ನು ಪರಿಚಯಿಸಿದೆ. ಹ್ಯಾಚ್‌ಬ್ಯಾಕ್ ಅನ್ನು ಮೊದಲ ಬಾರಿಗೆ 2016 ರ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು, ನಂತರ ಅದರ ಫೇಸ್‌ಲಿಫ್ಟ್ ಅನ್ನು ಜನವರಿ 2020 ರಲ್ಲಿ ಬಿಡುಗಡೆ ಮಾಡಲಾಯಿತು.

ವಾಹನ ತಯಾರಕರು ಜನವರಿ 2022 ರಲ್ಲಿ ಹ್ಯಾಚ್‌ಬ್ಯಾಕ್ ಮಾದರಿ ಸರಣಿಗೆ ಸಿಎನ್‌ಜಿ ರೂಪಾಂತರವನ್ನು ಸೇರಿಸಿದರು. ಪ್ರಸ್ತುತ, ಟಾಟಾ ಟಿಯಾಗೋ 1.2 ಲೀಟರ್ ನ್ಯಾಚುರಲ್ ಪೆಟ್ರೋಲ್‌ನೊಂದಿಗೆ ಲಭ್ಯವಿದೆ, ಇದು 86 ಬಿಹೆಚ್‍ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5-ಸ್ಫೀಡ್ ಮ್ಯಾನುವಲ್ ಮತ್ತು ಎಎಂಟಿ ಯುನಿಟ್ ಅನ್ನು ಒಳಗೊಂಡಿವೆ.

ಹ್ಯಾಚ್‌ಬ್ಯಾಕ್‌ನ ಆರಂಭಿಕ ಬೆಲೆಯು ರೂ.5.23 ಲಕ್ಷವಾಗಿದೆ. ಈ ಜನಪ್ರಿಯ ಟಾಟಾ ಟಿಯಾಗೋ ಕಾರಿನಲ್ಲಿ ಸ್ಪೀಕರ್‌ಗಳ ಆಡಿಯೋ ಸಿಸ್ಟಂ ಮತ್ತು ಸ್ಟೀಯರಿಂಗ್ ಮೌಂಟೆಡ್ ಫೋನ್ ಮತ್ತು ಆಡಿಯೋ ಕಂಟ್ರೋಲ್ ಗಳನ್ನು ಹೊಂದಿವೆ.

ಟಿಯಾಗೋ ಲಿಮಿಟೆಡ್ ಎಡಿಷನ್‌ನಲ್ಲಿ ಟಾಟಾ ಕಂಪನಿಯು 14-ಇಂಚಿನ ಹೊಸ ವಿನ್ಯಾಸದ ಅಲಾಯ್ ವೀಲ್ಹ್, ವಾಯ್ಸ್ ಕಮಾಂಡ್ ಸರ್ಪೊಟ್ ಮಾಡುವ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆನ್ ಬೋರ್ಡ್ ನ್ಯಾವಿಷನ್ ಸೌಲಭ್ಯವನ್ನು ಹೊಂದಿದೆ. ಇನ್ನು 2.5 ಇಂಚಿನ ಎಂಐಡಿ, ಟ್ಯಾಕೋಮೀಟರ್, ಟಿಲ್ಟ್ ಮತ್ತು ಪವರ್ ಸ್ಟೀರಿಂಗ್, ಮಲ್ಟಿ ಡ್ರೈವ್ ಮೋಡ್‌ಗಳು ನೀಡಿದೆ.

ಈ ಕಾರಿನಲ್ಲಿ ಇಂಟಿಗ್ರೇಟೆಡ್ ರಿಯರ್ ಹೆಡ್ ರೆಸ್ಟ್, ಎಬಿಎಸ್ ಜೊತೆ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್ಸ್, ಸ್ಪೀಡ್ ಅಲರ್ಟ್, ಡ್ಯುಯಲ್ ಏರ್‌ಬ್ಯಾಗ್ ಮತ್ತು ಹೆಚ್ಚಿನ ಸುರಕ್ಷತಾ ಫೀಚರ್ಸ್ ಗಳನ್ನು ಕೂಡ ನೀಡಲಾಗಿದೆ.

ಟಾಟಾ ಟಿಯಾಗೋ ಮಾದರಿಯು ಮ್ಯಾನುಯಲ್ ವೆರಿಯೆಂಟ್ ಗಳು ಮತ್ತು ಆಟೋಮ್ಯಾಟಿಕ್ ವೆರಿಯೆಂಟ್ ಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಟಾಟಾ ಟಿಯಾಗೋ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದಾದ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.

ಈ ಟಾಟಾ ಟಿಯಾಗೋ ಕಾರನ್ನು ಮೊದಲ ಬಾರಿಗೆ 2016 ರಲ್ಲಿ ಪರಿಚಯಿಸಲಾಯಿತು ಮತ್ತು ಇದು ಬ್ರ್ಯಾಂಡ್‌ಗಾಗಿ ಹೊಸ ವಿನ್ಯಾಸ ಭಾಷೆಯನ್ನು ಪರಿಚಯಿಸಿತು, ಇದನ್ನು ಟೀಗೊರ್ ಮತ್ತು ನೆಕ್ಸಾನ್‌ನಂತಹ ಇತರ ಮಾದರಿಗಳು ಅನುಸರಿಸುತ್ತವೆ.

ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರಾಟ ಮಳಿಗೆಗಳ ಹೆಚ್ಚಳದೊಂದಿಗೆ ಮಾರಾಟ ನಂತರದ ಸೇವಾ ಜಾಲವನ್ನು ಸಹ ವಿಸ್ತರಿಸುತ್ತಿದೆ. ಹೊಸ ಕಾರುಗಳ ನಂತರ ಗ್ರಾಹಕರ ಸೇವೆಗಳ ಕುರಿತಂತೆ ಗ್ರಾಹಕರಿಂದ ಅಸಮಾಧಾನದ ಬಗೆಗೆ ಗಮನಹರಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಗುಣಮಟ್ಟದ ಸೇವೆಗಳನ್ನು ಒದಗಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಈ ವರ್ಷಾಂತ್ಯಕ್ಕೆ ಕಂಪನಿಯು ತನ್ನ ಅಧಿಕೃತ ಸೇವಾ ಕೇಂದ್ರಗಳ ಸಂಖ್ಯೆಯನ್ನು 705ಕ್ಕೆ ಹೆಚ್ಚಿಸುವ ಗುರಿಹೊಂದಿದೆ.

ಹೊಸದಾಗಿ 160 ಅಧಿಕೃತ ಸೇವಾ ಕೇಂದ್ರಗಳೊಂದಿಗೆ 485 ನಗರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ವಾಹನಗಳು ಹೆಚ್ಚಿದಂತೆ ಅದಕ್ಕೆ ಪೂರಕವಾಗಿ ಸೇವಾ ಕೇಂದ್ರ ಕಾರ್ಯಕ್ಷಮತೆಯನ್ನು ಸುಧಾರಿಸುತ್ತಿದೆ. ಇದರ ಜೊತೆಗೆ ಕಂಪನಿಯು ಇಜೆಡ್‌ಸರ್ವ್(EzServe) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದು, ಇದು ವಿಶಿಷ್ಟವಾದ ಗ್ರಾಹಕ ಸ್ನೇಹಿ ದ್ವಿಚಕ್ರ ವಾಹನ ಆಧಾರಿತ ಸೇವೆಯಾಗಿದೆ. ಇದು ಗ್ರಾಹಕರಿಗೆ ಅವರ ಮನೆ ಬಾಗಿಲಿಗೆ ಸುರಕ್ಷಿತ ಮತ್ತು ತೊಂದರೆ-ಮುಕ್ತ ಸೇವಾ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇನ್ನು ಇಜೆಡ್‌ಸರ್ವ್ ಗ್ರಾಹಕರಿಗೆ ಹಲವಾರು ಪ್ರಯೋಜನಗಳನ್ನು ನೀಡಲಿದ್ದು, ಇದು ಅವರ ಆದ್ಯತೆಯ ಸ್ಥಳದಲ್ಲಿ ಸೇವೆ, ರಿಪೇರಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ.

ಪ್ರತಿಯೊಂದು ಇಜೆಡ್‌ಸರ್ವ್ ಘಟಕವು ಬೈಕ್‌ನ ಹಿಂಭಾಗದಲ್ಲಿ ಅಳವಡಿಸಲಾಗಿರುವ 3 ಯುಟಿಲಿಟಿ ಬಾಕ್ಸ್‌ಗಳನ್ನು ಒಳಗೊಂಡಿರುವ ಸಮಗ್ರ ಕಿಟ್‌ನೊಂದಿಗೆ ಬರುತ್ತದೆ. ಯುಟಿಲಿಟಿ ಬಾಕ್ಸ್‌ಗಳಲ್ಲಿ ಬಿಡಿಭಾಗಗಳು, ವ್ಯಾಕ್ಯೂಮ್ ಕ್ಲೀನರ್, ಜ್ಯಾಕ್ ಮತ್ತು ಜ್ಯಾಕ್ ಸ್ಟ್ಯಾಂಡ್ ಮತ್ತು ಹಲವಾರು ಸಣ್ಣ ಉಪಕರಣಗಳನ್ನು ಒಳಗೊಂಡಿರಲಿದ್ದು, ಯುನಿಕ್ ಐಡಿ ಕಾರ್ಡ್‌ಗಳ ಮೂಲಕ ಕಂಪನಿಯು ನುರಿತ ತಂತ್ರಜ್ಞರ ಸೇವೆಯನ್ನು ಖಚಿತಪಡಿಸುತ್ತದೆ. ಇನ್ನು ಟಾಟಾ ಮೋಟಾರ್ಸ್ ಕಂಪನಿಯು ಪ್ರಯಾಣಿಕರ ಕಾರು ಮಾರಾಟದಲ್ಲಿ ತಿಂಗಳಿನಿಂದ ತಿಂಗಳಿಗೆ ಹೆಚ್ಚಿನ ಮಟ್ಟದ ಬೆಳವಣಿಗೆ ಸಾಧಿಸುತ್ತಿದೆ.

ಟಾಟಾ ಟಿಯಾಗೋ ಎಂಟ್ರಿ ಲೆವೆಲ್ ಮಾದರಿಗಳಲ್ಲೇ ಅತಿಹೆಚ್ಚು ಸುರಕ್ಷಾ ಫೀಚರ್ಸ್‌ಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್‌ಗೆ 4 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಳ್ಳುವ ಮೂಲಕ ಗ್ರಾಹಕರ ಆಕರ್ಷಣೆ ಕಾರಣವಾಗಿದೆ. ಈ ಕಾರಿಗೆ ಭಾರೀ ಬೇಡಿಕೆ ಹರಿದುಬರುತ್ತಿರುವುದೇ ಪ್ರಮುಖ ಬದಲಾವಣೆಗಳಿಗೆ ಪ್ರಮುಖ ಕಾರಣವಾಗಿದೆ.