8 ಸ್ಕಾರ್ಪಿಯೋ ಕಾರುಗಳನ್ನು ಖರೀದಿಸಿ ಟ್ರೋಲ್‌ಗೆ ಗುರಿಯಾದ ತೆಲುಗು ನಟ ಪವನ್ ಕಲ್ಯಾಣ್
ಸಿನಿಮಾ ನಟರು, ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು ತಮ್ಮ ಸುರಕ್ಷತೆಗಾಗಿ ಅವರು ಪ್ರಯಾಣಿಸುವ ವಾಹನಗಳಲ್ಲಿ ಹೆಚ್ಚು ಭದ್ರತಾ ವೈಶಿಷ್ಟ್ಯಗಳು ಒಳಗೊಂಡಿರುವ ವಾಹನಗಳನ್ನು ಖರೀದಿಸುತ್ತಾರೆ. ಜೊತೆಗೆ ತಮ್ಮ ರಕ್ಷಣೆಗಾಗಿ ಇರುವ ಬಾಡಿ ಗಾರ್ಡ್‌ಗಳಿಗೂ ವಿಶೇಷ ವಾಹನಗಳಿರುತ್ತವೆ. ಪ್ರಯಾಣದ ವೇಳೆ ಯಾವುದೇ ದಾಳಿ ನಡೆಯದಂತೆ ಇವರು ರಕ್ಷಣೆ ನೀಡುತ್ತಾರೆ.

ಮುಖ್ಯವಾಗಿ ಮುಖ್ಯಮಂತ್ರಿ, ಪ್ರಧಾನಮಂತ್ರಿಯಂತಹವರ ರಕ್ಷಣೆಗೆ ಹೆಚ್ಚಿನ ಭದ್ರತೆಯಿರುತ್ತದೆ. ಅಂತೆಯೇ ವಿರೋಧ ಪಕ್ಷದ ನಾಯಕರಿಗೂ ಭದ್ರತೆ ಒದಗಿಸಲಾಗುತ್ತದೆ. ಇತ್ತೀಚೆಗೆ ಸಿನಿಮಾ ನಟ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ 'ಪವನ್ ಕಲ್ಯಾಣ್' ಕೂಡ ತನ್ನ ಬೆಂಗಾವಲು ಪಡೆಗಾಗಿ ಹೊಸ ವಾಹನಗಳನ್ನು ಖರೀದಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ.

ಆಂಧ್ರಪ್ರದೇಶದಲ್ಲಿ ಜನಸೇನಾ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿ ನೀಡಿರುವ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಮಹೀಂದ್ರಾ ಕಂಪನಿಯ 8 ಸ್ಕಾರ್ಪಿಯೋ ವಾಹನಗಳನ್ನು ಖರೀದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಬಗೆ ಬಗೆಯ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಪವನ್ ಕಲ್ಯಾಣ್ ಒಂದೇ ಬಾರಿಗೆ 8 ಮಹೀಂದ್ರಾ ಸ್ಕಾರ್ಪಿಯೋ ವಾಹನಗಳನ್ನು ಖರೀದಿಸುವ ಮೂಲಕ ವಿಮರ್ಶೆಗಳು ಹೆಚ್ಚಾಗಿ ಬರುತ್ತಿವೆ. ಕೆಲವು ಕಡೆ ಪವನ್ ತನ್ನ ಬಳಿ ಇಎಮ್ಐ ಪಾವತಿಸಲು ಕೂಡ ಹಣವಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಇಷ್ಟು ಹಣ ಹೇಗೆ ಬರುತ್ತಿದೆ ಎಂದು ಕೇಳುತ್ತಿದ್ದಾರೆ.

ಓರ್ವ ನೆಟ್ಟಿಗ ಟೀಕಿಸುತ್ತಾ... ಪವನ್ ಕಲ್ಯಾಣ್ ತನ್ನ ಜನಸೇನಾ ಪಕ್ಷವನ್ನು ಮುನ್ನಡೆಸಲಾಗದೆ ಬಿಜೆಪಿ ಮತ್ತು ಟಿಡಿಪಿಯಲ್ಲಿ ಸೇರ್ಪಡೆಯಾಗುತ್ತಾರಾ ಎಂದು ಕಮೆಂಟ್ ಹಾಕಿದ್ದಾನೆ. ಮತ್ತೊಬ್ಬ ಟಿಡಿಪಿ ಅಥವಾ ಬಿಜೆಪಿ ನೀಡಿದ ಪಂಡ್ಸ್ ನಿಂದ ಕಾರುಗಳನ್ನು ಖರೀದಿಸಿರುತ್ತಾರೆ ಎಂದು ಹೇಳಿದ್ದಾನೆ. ಈ ರೀತಿ ಸಾಮಾಜಿಕ ಮಾಧ್ಯಮದಲ್ಲಿ ಪವನ್ ಕಲ್ಯಾಣ್ ಮೇಲೆ ವಿಮರ್ಶೆಗಳು ಹೆಚ್ಚಾಗಿವೆ.

ಪವನ್ ಕಲ್ಯಾಣ್ ಆಂಧ್ರದಲ್ಲಿ ಜನಸೇನಾ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಭಾಗವಾಗಿ ಮುಂಬರುವ ದಿನಗಳಲ್ಲಿ ಪಕ್ಷದ ಪ್ರಚಾರಕ್ಕೆ ಈ ವಾಹನಗಳನ್ನು ಬಳಸಲಾಗುವುದು. ಇದರಲ್ಲಿ ಪವನ್ ಕಲ್ಯಾಣ್ ಜೊತೆಗೆ ಹಿರಿಯ ನಾಯಕರು ಕೂಡ ಪ್ರಯಾಣಿಸುತ್ತಾರೆ. ಒಟ್ಟಾರೆ ಎಲ್ಲಾ ಕಾರುಗಳ ಬೆಲೆ ರೂ. 1.5 ಕೋಟಿ ವರೆಗೆ ಇರುತ್ತದೆ.

ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ ವಿಷಯಕ್ಕೆ ಬಂದರೆ, ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾದ ವಾಹನಗಳಲ್ಲಿ ಸ್ಕಾರ್ಪಿಯೋ ಕೂಡ ಒಂದು. ಈ ವಾಹನವು ಎಸ್‌ಯುವಿ ಆಗಿದ್ದು ಉತ್ತಮ ಪ್ರಯಾಣದ ಅನುಭವದ ಜೊತೆಗೆ ಈ ಕಾರಿಗೆ ಆಫ್‌ರೋಡ್‌ನಲ್ಲೂ ನಿಭಾಯಿಸಬಲ್ಲ ಸಾಮರ್ಥ್ಯವಿದೆ.

ಇದೇ ಕಾರಣದಿಂದಾಗಿ ಬಹಳಷ್ಟು ರಾಜಕೀಯ ನಾಯಕರು ಮಹೀಂದ್ರಾ ಸ್ಕಾರ್ಪಿಯೋಗಳನ್ನು ಹೆಚ್ಚಾಗಿ ಬಳಸುತ್ತಾರೆ. ಮಹೀಂದ್ರಾ ಸ್ಕಾರ್ಪಿಯೋ ಬಹಳ ದೃಢವಾದ ವಾಹನವಾಗಿದ್ದು, ಉತ್ತಮ ವಿನ್ಯಾಸವನ್ನು ಸಹ ಹೊಂದಿದೆ. ಇದೀಗ ಬರುತ್ತಿರುವ ಹೊಸ ಮಾದರಿಗಳು ಆಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ.

ಈ ಮಹೀಂದ್ರಾ ಸ್ಕಾರ್ಪಿಯೋನಲ್ಲಿ 7-ಸ್ಲಾಟ್ ಫ್ರಂಟ್ ಗ್ರಿಲ್ ಹಾಗೂ ಬ್ರಾಂಡ್ ಲೋಗೋವನ್ನು ಕಾಣಬಹುದು. ಇದರಲ್ಲಿ ಅದ್ಭುತವಾದ ಬಂಪರ್, ಎರಡೂ ಕಡೆ ಹೆಡ್ ಲ್ಯಾಂಪ್ ಮತ್ತು ಫ್ಯಾಗ್ ಲೈಟ್ಸ್ ಸಹ ಇದೆ. ಜೊತೆಗೆ ವಿಶಾಲವಾದ ಏರ್ ಇಂಟೇಕರ್, ರೂಫ್ ರೈಲ್ಸ್ ಅನ್ನು ಇದರಲ್ಲಿ ನೀಡಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೋದ ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, ಇದರಲ್ಲಿನ ಡ್ಯಾಶ್ ಬೋರ್ಡ್ ಅತ್ಯಂತ ಆಕರ್ಷಕವಾಗಿದೆ. ಡ್ಯಾಶ್ ಬೋರ್ಡ್ ಮಧ್ಯದಲ್ಲಿ ಜಿಪಿಎಸ್ ನ್ಯಾವಿಗೇಷನ್ ಸಪೋರ್ಟ್ ಮಾಡುವ 6-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಕೂಡ ಇದೆ. ಜೊತೆಗೆ ಡೈನಾಮಿಕ್ ಅಸಿಸ್ಟ್, ರಿಯಾರ್ ಪಾರ್ಕಿಂಗ್ ಕ್ಯಾಮೆರಾ, ಸಿಂಗಲ್ ಟಚ್ ಚೇಂಜ್ ಇಂಡಿಕೇಟರ್, ಹತ್ತು ವಿಭಿನ್ನ ಭಾಷೆಗಳಲ್ಲಿ ಜಿಪಿಎಸ್ ನ್ಯಾವಿಗೇಷನ್ ಮತ್ತು ಇತರ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

2017ರ ಮಹೀಂದ್ರಾ ಸ್ಕಾರ್ಪಿಯೋ 2.2-ಲೀಟರ್ ಡೀಸಲ್ ಎಂಜನ್‌ನೊಂದಿಗೆ ಬರುತ್ತದೆ. ಇದು 3750 ಆರ್‌ಪಿಎಂ ನಲ್ಲಿ 136.78 ಬಿಎಚ್‌ಪಿ ಪವರ್ ಮತ್ತು 1800 - 2800 ಆರ್‌ಪಿಎಮ್‌ನಲ್ಲಿ ಎನ್‌ಎಂ ಟಾರ್ಕ್ ನೀಡುತ್ತದೆ. ಒಟ್ಟಾರೆಯಾಗಿ ಇದು ಉತ್ತಮ ಕಾರ್ಯನಿರ್ವಹಣೆಯನ್ನು ಒದಗಿಸುತ್ತದೆ.

ಪರ್ಲ್ ವೈಟ್, ನಾಪೋಲಿ ಬ್ಲಾಕ್, ಮೊಲ್ಟೆನ್ ರೆಡ್, ಸಿಲ್ವರ್ ಮತ್ತು ಡೈಮೆಂಡ್ ವೈಟ್ ಎಂಬ 5 ಕಲರ್ ಆಪ್ಸನ್ ನಲ್ಲಿ ಸ್ಕಾರ್ಪಿಯೋ ಲಭ್ಯವಿದೆ. 'ಮಹೀಂದ್ರಾ ಸ್ಕಾರ್ಪಿಯೋ'ನ ಆರಂಭಿಕ ಬೆಲೆಯು ರೂ. 13.18 ಲಕ್ಷವಿದ್ದು, ಅದೇ ಸಮಯದಲ್ಲಿ ಡೀಐ ಟಾಪ್ ವೆರಿಯಂಟ್ ಬೆಲೆ ರೂ. 18.14 ಲಕ್ಷವಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಒಟ್ಟಿನಲ್ಲಿ ಪವನ್ ಕಲ್ಯಾಣ್ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ತನ್ನ ಹವಾ ಪಸರಿಸಲು ಶ್ರಮಿಸುತ್ತಿರುವಂತೆ ಕಾಣುತ್ತಿದೆ. 2014 ರಲ್ಲಿ ಪಕ್ಷವನ್ನು ಸ್ಥಾಪಿಸಿ ಇತರ ಪಕ್ಷಗಳನ್ನು ಬೆಂಬಲಿಸಿದ ಪವನ್ ಕಲ್ಯಾಣ್ ನಂತರ 2019 ರಲ್ಲಿ ಸ್ಪರ್ಧಿಸಿದರು ಆದರೆ ಜನಸೇನಾ ಕೇವಲ 1 ಸ್ಥಾನವನ್ನು ಗಳಿಸಿತು. ಆದರೆ, ಈ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಗೆಲ್ಲಲು ಸಾಧ್ಯವಾಗಲಿಲ್ಲ. ಒಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಕಣಕ್ಕಿಳಿದು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications