2022ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಅತ್ಯುತ್ತಮ ಸ್ಕೋರಿಂಗ್ ಪಡೆದ ಕಾರುಗಳಿವು...

ಕಳೆದ ಕೆಲವು ವರ್ಷಗಳಿಂದ ವಾಹನ ಖರೀದಿದಾರರು ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ಇದರಿಂದ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಕಾರುಗಳನ್ನು ಕೊಳ್ಳಲು ಆಸಕ್ತಿ ತೋರಿಸುತ್ತಾರೆ ಎಂದು ಹೇಳಬಹುದು. ಇಲ್ಲಿ 2022ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಪರೀಕ್ಷೆಯಲ್ಲಿ ಅತ್ಯುತ್ತಮ ಸ್ಟಾರ್ ರೇಟಿಂಗ್ ಪಡೆದ ಕಾರುಗಳ ಬಗ್ಗೆ ತಿಳಿಸಿಕೊಡಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್:
ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ವಾಹನವಾಗಿರುವ ಮಹೀಂದ್ರಾ ಕಂಪನಿಯ 'ಸ್ಕಾರ್ಪಿಯೊ ಎನ್' ಇತ್ತೀಚೆಗೆ ನಡೆಸಿದ ಗ್ಲೋಬಲ್ ಎನ್‌ಸಿಎಪಿ ಸುರಕ್ಷತಾ ಪರೀಕ್ಷೆಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಇದು ಅತ್ಯತ್ತಮ ವಾಹನವಾಗಿ ಹೊರಹೊಮ್ಮಿದೆ. ವಯಸ್ಕರ ರಕ್ಷಣೆ ವಿಭಾಗದ ಪರೀಕ್ಷೆಯಲ್ಲಿ 'ಸ್ಕಾರ್ಪಿಯೊ ಎನ್' 34 ಅಂಕಗಳಿಗೆ 29.25 ಅಂಕಗಳನ್ನು ಗಳಿಸಿದೆ. ಈ ಮೂಲಕ ವಯಸ್ಕರ ಸುರಕ್ಷತೆಯಲ್ಲಿ ಒಟ್ಟಾರೆಯಾಗಿ 5 ಸ್ಟಾರ್ ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಗಿದೆ.

2022ರಲ್ಲಿ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಅತ್ಯುತ್ತಮ ಸ್ಕೋರಿಂಗ್ ಪಡೆದ ಕಾರುಗಳಿವು...

ಮಕ್ಕಳ ರಕ್ಷಣೆ ವಿಭಾಗದ ಪರೀಕ್ಷೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೊ ಎನ್ ಕೊಂಚ ಕಡಿಮೆ ಅಂಕಗಳನ್ನು ಪಡೆದುಕೊಂಡಿದೆ ಎಂದು ಹೇಳಬಹುದು. 49 ಅಂಕಗಳಿಗೆ 28.93 ಅಂಕಗಳನ್ನು ಗಳಿಸಿದೆ. ಒಟ್ಟಾರೆಯಾಗಿ 3 ಸ್ಟಾರ್ ರೇಟಿಂಗ್ ಅನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದೆ. ಸ್ಕಾರ್ಪಿಯೋ ಎನ್, ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಅವುಗಳೆಂದರೇ, 2.2-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಮತ್ತು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್. ಇವೆರಡು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿವೆ.

ಸ್ಕೋಡಾ ಕುಶಾಕ್ & ವೋಕ್ಸ್‌ವ್ಯಾಗನ್ ಟೈಗನ್:
ಗ್ಲೋಬಲ್ ಎನ್‌ಸಿಎಪಿಯ ನವೀಕರಿಸಿದ ಪರೀಕ್ಷಾ ಪ್ರೋಟೋಕಾಲ್ ಅಡಿಯಲ್ಲಿ ಕುಶಾಕ್ ಮತ್ತು ಟೈಗನ್ ಪರೀಕ್ಷಿಸಲಾದ ಮೊದಲೆರಡು ಕಾರುಗಳಾಗಿವೆ. ಇದು ವಯಸ್ಕರ ರಕ್ಷಣೆ ವಿಭಾಗದ ಪರೀಕ್ಷೆಯಲ್ಲಿ 34 ಅಂಕಗಳಿಗೆ 29.64 ಅಂಕಗಳನ್ನು ಪಡೆದುಕೊಳ್ಳುವ ಮೂಲಕ 5 ಸ್ಟಾರ್ ರೇಟಿಂಗ್ ಅನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ. ಇದರ ಜೊತೆಗೆ ಮಕ್ಕಳ ರಕ್ಷಣೆ ವಿಭಾಗದ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಸ್ಕೋರ್ ಮಾಡಿದ್ದು, ಈ ಎರಡು ಕಾರುಗಳು 49 ಅಂಕಗಳಿಗೆ 42 ಅಂಕಗಳನ್ನು ಗಳಿಸಿದ್ದು, ಸುರಕ್ಷತೆ ವಿಚಾರದಲ್ಲಿ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿವೆ.

ನಿಸ್ಸಾನ್ ಮ್ಯಾಗ್ನೈಟ್:
ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ ನಿಸ್ಸಾನ್ ಮ್ಯಾಗ್ನೈಟ್ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ ಇದು 17 ಅಂಕಗಳಿಗೆ 11.85 ಅಂಕಗಳನ್ನು ಗಳಿಸುವ ಮೂಲಕ 4 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ 49 ಅಂಕಗಳಿಗೆ 24.88 ಅಂಕ ಪಡೆದು ಕೇವಲ 2 ಸ್ಟಾರ್ ರೇಟಿಂಗ್ ಅನ್ನು ಮಾತ್ರ ಗಳಿಸಿದೆ. ಒಟ್ಟಾರೆ ನಿಸ್ಸಾನ್ ಮ್ಯಾಗ್ನೈಟ್ ಮಾರುಕಟ್ಟೆಯಲ್ಲಿ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಕಾರುಗಳಲ್ಲಿ ಒಂದಾಗಿದೆ.

ರೆನಾಲ್ಟ್ ಕಿಗರ್:
ದೇಶೀಯ ಮಾರುಕಟ್ಟೆಯಲ್ಲಿ ರೆನಾಲ್ಟ್ ಕಂಪನಿಯ ಕಿಗರ್ ಸಹ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್‌ನಲ್ಲಿ, ರೆನಾಲ್ಟ್ ಕಿಗರ್ ವಯಸ್ಕರ ರಕ್ಷಣೆ ವಿಭಾಗದಲ್ಲಿ 17 ಅಂಕಗಳಿಗೆ 12.34 ಅಂಕಗಳನ್ನು ಪಡೆದುಕೊಳ್ಳುವ ಮೂಲಕ 4 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ ಇದು 49 ಅಂಕಗಳಿಗೆ 21.05 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಕೇವಲ 2 ಸ್ಟಾರ್ ರೇಟಿಂಗ್ ಗಳಿಸುವುದಕ್ಕೆ ಮಾತ್ರ ಶಕ್ತವಾಗಿದೆ.

ಹೋಂಡಾ ಸಿಟಿ 4ನೇ ಜನರೇಷನ್:
ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್ ನಲ್ಲಿ ಹೋಂಡಾ ಕಂಪನಿಯ 4ನೇ ತಲೆಮಾರಿನ ಹೋಂಡಾ ಸಿಟಿ ಕೂಡ 4 ಸ್ಟಾರ್ ರೇಟಿಂಗ್ ಗಳಿಸಿದೆ. ಇದು ವಯಸ್ಕರ ರಕ್ಷಣೆ ವಿಭಾಗದಲ್ಲಿ 17 ಅಂಕಗಳಿಗೆ 12.03 ಅಂಕಗಳನ್ನು ಪಡೆದುಕೊಂಡಿದ್ದು, 4 ಸ್ಟಾರ್ ರೇಟಿಂಗ್ ಗಳಿಸುವಲ್ಲಿ ಯಶಸ್ವಿಯಾಗಿದೆ. ಮಕ್ಕಳ ರಕ್ಷಣೆ ವಿಭಾಗದಲ್ಲಿ ಇದು 49 ಅಂಕಗಳಿಗೆ 38.27 ಗಳಿಸಿ, 4 ಸ್ಟಾರ್ ರೇಟಿಂಗ್ ಪಡೆದುಕೊಳ್ಳುವ ಮೂಲಕ ಇದು ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ.

ಕಾರುಗಳ ಸುರಕ್ಷತೆಗೆ ಬಗ್ಗೆ ಆಲೋಚನೆಗಳು:
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಾರು ಖರೀದಿಸುವ ಗ್ರಾಹಕರು ಬೆಲೆ, ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಮೈಲೇಜ್ ಜೊತೆಗೆ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಕಾರುಗಳನ್ನು ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಹಾಗಾಗಿ, ಮಾರುಕಟ್ಟೆಯಲ್ಲಿ ಇಂತಹ ಕಾರುಗಳಿಗೆ ಬೇಡಿಕೆಯು ಸಾಕಷ್ಟು ಹೆಚ್ಚಿದೆ. ಹಾಗಾಗಿ, ದೇಶಿಯ ಹಾಗೂ ವಿದೇಶಿ ವಾಹನ ತಯಾರಿಕ ಕಂಪನಿಗಳು ತಮ್ಮ ಕಾರುಗಳಲ್ಲಿ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸಲು ಪ್ರಯತ್ನ ಮಾಡುತ್ತಿರುತ್ತಾರೆ.

More from DriveSpark

Article Published On: Friday, December 23, 2022, 17:35 [IST]
English summary
The best scoring cars in the global ncap crash test in 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+