ಅಂತಿಮವಾಗಿ ಭಾರತದಲ್ಲಿ ಅನಾವರಣಗೊಂಡ ಬಹುನಿರೀಕ್ಷಿತ ಇನ್ನೋವಾ ಹೈಕ್ರಾಸ್ ಹೈಬ್ರಿಡ್

ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಈಗಾಗಲೇ ಅನಾವರಣಗೊಂಡಿರುವ ಟೊಯೊಟಾದ ಇತ್ತೀಚಿನ MPV 'ಇನ್ನೋವಾ ಜೆನಿಕ್ಸ್' ಇದೀಗ ಅಧಿಕೃತವಾಗಿ ಭಾರತೀಯ ಮಾರುಕಟ್ಟೆಯಲ್ಲಿ 'Toyota Innova Hycross' ರೂಪದಲ್ಲಿ ಅನಾವರಣಗೊಂಡಿದೆ. ದೇಶೀಯ ಮಾರುಕಟ್ಟೆಗೆ ಪ್ರವೇಶಿಸುವ ಮೊದಲು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ಇನ್ನೋವಾ ಹೈಕ್ರಾಸ್ ಇದೀಗ ತನ್ನ ಅಧಿಕೃತ ಅನಾವರಣದೊಂದಿಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿದೆ.

ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಉತ್ತಮ ವಿನ್ಯಾಸ ಮತ್ತು ಇತ್ತೀಚಿನ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದು ಇನ್ನೋವಾ ಕ್ರಿಸ್ಟಾಕ್ಕಿಂತ ಭಿನ್ನವಾಗಿ ಹೊಸ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ ತುಂಬಾ ಪ್ರೀಮಿಯಂ ಆಗಿ ಕಾಣುತ್ತಿದೆ. ಹೊಸ ಕಾರು ದೊಡ್ಡದಾದ ಮುಂಭಾಗದ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಡೇಟೈಮ್ ರನ್ನಿಂಗ್ ಲೈಟ್‌ಗಳು ಮತ್ತು ಮರುವಿನ್ಯಾಸಗೊಳಿಸಲಾದ ಮುಂಭಾಗ, ಹಿಂಭಾಗದ ಬಂಪರ್‌ಗಳನ್ನು ಒಳಗೊಂಡಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ವಿಶೇಷತೆಗಳು ಮತ್ತು ಆಯಾಮಗಳು
ಟೊಯೊಟಾ ಇನ್ನೋವಾ ಹೈಕ್ರಾಸ್ ಅನ್ನು ಶುದ್ಧ ಪೆಟ್ರೋಲ್ ಅಥವಾ ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ನೀಡಲಾಗುತ್ತದೆ. ಶುದ್ಧ ಪೆಟ್ರೋಲ್ ರೂಪಾಂತರದಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಸಾಂಪ್ರದಾಯಿಕ 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಪವರ್ ಪಡೆಯುತ್ತದೆ, ಇದು 172bhp ಮತ್ತು 205Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಹೊಸ ಇನ್ನೋವಾ ಹೈಕ್ರಾಸ್ ಹೈಬ್ರಿಡ್ 2.0-ಲೀಟರ್ ಅಟ್ಕಿನ್ಸನ್ ಸೈಕಲ್ ಎಂಜಿನ್‌ನೊಂದಿಗೆ ಬರುತ್ತದೆ.

ಹೊಸ ಇನ್ನೋವಾ ಹೈಕ್ರಾಸ್ ಹೈಬ್ರಿಡ್ 150bhp ಮತ್ತು 187bhp ಅನ್ನು ಉತ್ಪಾದಿಸುತ್ತದೆ. ಆದರೆ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ 111bhp ಮತ್ತು 205Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಗರಿಷ್ಠ ಸಿಸ್ಟಮ್ ಪವರ್ ಔಟ್‌ಪುಟ್ 184bhp ಗೆ ಸೀಮಿತವಾಗಿದೆ. ಎರಡೂ ಪವರ್‌ಟ್ರೇನ್‌ಗಳನ್ನು CVT ಸ್ವಯಂಚಾಲಿತ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದ್ದು, ಇದು ಫ್ರಂಟ್ ವೀಲ್‌ಗಳಿಗೆ ಪವರ್ ನೀಡುತ್ತದೆ. ಇನ್ನು ಹೊಸ Innova Hycross 21.1km/l ಮೈಲೇಜ್ ನೀಡುತ್ತದೆ.

ಇದು ಒಂದು ಪೆಟ್ರೋಲ್ ಟ್ಯಾಂಕ್‌ನಲ್ಲಿ ಸಾಮರ್ಥ್ಯದಲ್ಲಿ 1,097km ವ್ಯಾಪ್ತಿಯನ್ನು ನೀಡುತ್ತದೆ. ಹೊಸ Innova Hycross ಕೇವಲ 9.5 ಸೆಕೆಂಡುಗಳಲ್ಲಿ 0-100km/h ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಇದು ಹೈಬ್ರಿಡ್ ಆಗಿರುವ ಕಾರಣ ಹಳೆಯ ಇನ್ನೋವಾ ಕ್ರಿಸ್ಟಾಗೆ ಹೋಲಿಸಿಕೊಂಡರೇ ಮಾಲಿನ್ಯ, ಮೈಲೇಜ್, ಪರ್ಫಾಮೆನ್ಸ್ ಎಲ್ಲಾ ವಿಧಗಳಲ್ಲೂ ಇದು ಉತ್ತಮ ಸಮರ್ಥ ಎಸ್‌ಯುವಿಯಾಗಿದೆ. ಇನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಯಾದಾಗ ಉತ್ತಮ ಬೇಡಿಕೆಯೊಂದಿಗೆ ಬುಕಿಂಗ್‌ಗಳು ಗರಿದೆರಲಿವೆ ಎಂದು ಕಂಪನಿ ಆಶಿಸಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯಗಳು
ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ ಹೆಚ್ಚು ಮಸಲ್ (ಸ್ನಾಯು) SUV-ಪ್ರೇರಿತ ವಿನ್ಯಾಸಕ್ಕಾಗಿ ಅದರ ಹಿಂದಿನ MPV ನೋಟವನ್ನು ಕೈಬಿಟ್ಟಿದೆ. ಮುಂಭಾಗದ ಮಧ್ಯದಲ್ಲಿ ದೊಡ್ಡ ಟೊಯೋಟಾ ಬ್ಯಾಡ್ಜ್ನೊಂದಿಗೆ ಹೆಕ್ಸಾಗೊನಲ್ ಗ್ರಿಲ್ ಅನ್ನು ಹೊಂದಿದೆ. ಗ್ರಿಲ್ ಸ್ಪೋರ್ಟಿ ಲುಕ್‌ನಲ್ಲಿ ದಪ್ಪನಾದ ಕ್ರೋಮ್‌ನೊಂದಿಗೆ ಸುತ್ತುವರೆದಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಮುಂಭಾಗದ ಬಂಪರ್ ಪ್ರತಿ ಬದಿಯಲ್ಲಿ ಟ್ರಯಾಂಗಲ್ ಕಟೌಟ್‌ಗಳನ್ನು ಹೊಂದಿದೆ, ಇದು ಎಲ್‌ಇಡಿ ಡಿಆರ್‌ಎಲ್‌ಗಳಿಗೆ ಹೋಸ್ಟ್ ಮಾಡುತ್ತದೆ.

ಜೊತೆಗೆ ಟರ್ನ್ ಸಿಗ್ನಲ್‌ಗಳಾಗಿಯೂ ಕಾರ್ಯನಿರ್ವಹಿಸುತ್ತದೆ. ಹೈಕ್ರಾಸ್‌ನ ಬದಿಗಳಲ್ಲಿ ಉದ್ದವಾದ ಹಿಂಭಾಗದ ಬಾಗಿಲುಗಳು ಮತ್ತು ಹೊಸ 10-ಸ್ಪೋಕ್ ಅಲಾಯ್ ವೀಲ್‌ಗಳನ್ನು ಹೊಂದಿದೆ. ಹೊಸ ಇನ್ನೋವಾ ಹೈಕ್ರಾಸ್ ಹಿಂಭಾಗದ ವಿಭಾಗದಲ್ಲಿ ಸ್ಪೋರ್ಟ್ಸ್ ವ್ರ್ಯಾಪ್‌ರೌಂಡ್ ಟೈಲ್‌ಲೈಟ್‌ಗಳು ಮತ್ತು ಮೇಲ್ಛಾವಣಿಗೆ ಇಂಟಿಗ್ರೇಟೆಡ್ ಸ್ಪಾಯ್ಲರ್ ಅಳವಡಿಸಲಾಗಿದೆ. ಈ ಮೂಲಕ ಹಿಂಭಾಗವು ಹೊಸ ವಿನ್ಯಾಸದೊಂದಗೆ ಹೆಚ್ಚು ಆಕರ್ಷಣೀಯ ನೋಟವನ್ನು ಪಡೆದುಕೊಳ್ಳುವ ಮೂಲಕ ಹೊಸ ಕಾರಿನ ಆಗಮನ ನಿರೀಕ್ಷೆ ಹೆಚ್ಚಿಸಿದೆ.

ಇನ್ನು ಇಂಟೀರಿಯರ್ ಕುರಿತು ಮಾತನಾಡುವುದಾದರೆ ಒಳಗೆ ಹೆಜ್ಜೆ ಇಡುತ್ತಿದ್ದಂತೆ ಡಾರ್ಕ್ ಚೆಸ್ಟ್ನಟ್ ಸೀಟ್ ಅಪ್ಹೋಲ್ಸ್ಟರಿಯೊಂದಿಗೆ ಡ್ಯುಯಲ್-ಟೋನ್ ಥೀಮ್ ನಿಮ್ಮನ್ನು ಸ್ವಾಗತಿಸುತ್ತದೆ. ಬಹು-ಪದರದ ಡ್ಯಾಶ್ ಬೋರ್ಡ್ ದೊಡ್ಡ 10.1-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಗೆ ಬೆಂಬಲಿಸುತ್ತದೆ. ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಣ್ಣ 4.2-ಇಂಚಿನ MID ಸ್ಕ್ರೀನ್ ಅನ್ನು ಹೊಂದಿದ್ದು, ಇವೆಲ್ಲವೂ ಹೊಸ ಇನ್ನೋವಾ ಹೈಕ್ರಾಸ್‌ಗೆ ಪ್ರೀಮಿಯಂ ಲುಕ್ ನೀಡಿವೆ.

ಇತರ ವೈಶಿಷ್ಟ್ಯಗಳನ್ನು ನೋಡುವುದಾದರೆ, ಡ್ಯಾಶ್-ಮೌಂಟೆಡ್ ಗೇರ್ ಲಿವರ್, ದೊಡ್ಡ ಪನೋರಮಿಕ್ ಸನ್‌ರೂಫ್, ಆಂಬಿಯೆಂಟ್ ಲೈಟಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಎರಡನೇ ಸಾಲಿನ ಆಸನಗಳಿಗೆ ಒಟ್ಟೋಮನ್ ಫಂಕ್ಷನ್, 9-ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಮ್, ಮಲ್ಟಿ-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಪವರ್ ಟೈಲ್‌ಗೇಟ್ ಅನ್ನು ಹೊಂದಿದೆ. ಸುರಕ್ಷತಾ ವೈಶಿಷ್ಟ್ಯಗಳನ್ನು ನೋಡುವುದಾದರೆ ಹೊಸ ಇನ್ನೋವಾ 6 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆಗೆ ಇಬಿಡಿ, ಟ್ರಾಕ್ಷನ್ ಕಂಟ್ರೋಲ್ ಮತ್ತು ಇಎಸ್‌ಪಿ ಸೇರಿದಂತೆ ಲೇನ್ ಡಿಪಾರ್ಚರ್ ವಾರ್ನಿಂಗ್, ಬ್ಲೈಂಡ್ ಸ್ಪಾಟ್ ಮಾನಿಟರ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಎಡಿಎಎಸ್ ಸಿಸ್ಟಂಗಳ ಸೂಟ್ ಸೇರಿದಂತೆ ಹೆಚ್ಚಿನ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿದೆ.

Most Read Articles

Kannada
Read more on ಟೊಯೊಟಾ toyota
English summary
The much awaited Innova hycross hybrid has finally been unveiled in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X