ವೈರಲ್ ವಿಡಿಯೋ: ಕೆಲಸದಾಕೆಗೆ ಹ್ಯುಂಡೈ ಎಲಂಟ್ರಾ ಕಾರನ್ನು ಗಿಫ್ಟ್ ನೀಡಿ ಅಚ್ಚರಿಗೊಳಿಸಿದ ಮನೆ ಮಾಲೀಕ!

ಕುಟುಂಬವೊಂದರ ನಡುವಿನ ಆರೋಗ್ಯಕರ ಕ್ಷಣವನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಜಾದಿನಗಳು ಮತ್ತು ಕ್ರಿಸ್‌ಮಸ್ ಹಬ್ಬದ ಉತ್ಸಾಹದಲ್ಲಿ, ಈ ಕುಟುಂಬವು ತಮ್ಮ ಮನೆ ಕೆಲಸದಾಕೆಗೆ ಸಾಮಾನ್ಯ ಉಡುಗೊರೆಗಳನ್ನು ಹಂಚಿಕೊಳ್ಳುವ ಬದಲು ಹೊಸ ಕಾರನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ. ಇದೇ ವೇಳೆ ಮಹಿಳೆಯ ಖುಷಿಯನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ.

ಸಾಮಾನ್ಯವಾಗಿ ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿ ಕ್ರಿಸ್ ಮಸ್ ಬಂತೆಂದರೆ ಸಾಕು ಗಿಫ್ಟ್‌ಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವುದನ್ನು ನೊಡಬಹುದು. ಹಾಗೆಯೇ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದು ಕ್ರಿಸ್ ಮಸ್ ಗಿಫ್ಟ್ ಕುರಿತಾದ ವಿಡಿಯೋ ಆಗಿದ್ದು, ಇದರಲ್ಲಿ ಕಾಣಿಸಿಕೊಂಡ ಮಹಿಳೆ ಹಾಗೂ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 85 ಸಾವಿರಕ್ಕೂ ಹೆಚ್ಚು ಲೈಕ್‌ಗಳು, 3 ಸಾವಿರಕ್ಕೂ ಹೆಚ್ಚು ಕಮೆಂಟ್‌ಗಳು ಬಂದಿವೆ.

ವಿದೇಶಗಳಲ್ಲಿ ಮನೆ ಕೆಲಸದವರನ್ನು ಹೌಸ್ ಕೀಪರ್ ಎಂದು ಕರೆಯಲಾಗುತ್ತದೆ. ನಮ್ಮ ಭಾರತದಲ್ಲೂ ಹೀಗೆ ಕರೆಯಲಾಗುತ್ತದಾದರೂ ತುಂಬಾನೆ ಕಡಿಮೆ. ಇವರಿಗೆ ತಿಂಗಳಿಗಿಷ್ಟು ಸಂಬಳ ಕೊಡುವುದು ನಮಗೆ ತಿಳಿದೇ ಇದೆ. ಆದರೆ ಸಂಬಳದ ಜೊತೆಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ಕೊಡುವುದು ಅಚ್ಚರಿ ಎನಿಸಬಹುದು. ಹೌದು Instagram ನಲ್ಲಿ @stephollman ಎಂಬ ಅಕೌಂಟ್‌ನಿಂದ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಕೆಲಸದಾಕೆಗೆ ಹ್ಯುಂಡೈ ಎಲಂಟ್ರಾ ಕಾರನ್ನು ಗಿಫ್ಟ್ ನೀಡಿ ಅಚ್ಚರಿಗೊಳಿಸಲಾಗಿದೆ.

ಇನ್ನು ಈ ವಿಡಿಯೋ ಪೋಸ್ಟ್ ಮಾಡಿದ ವ್ಯಕ್ತಿ, ನನ್ನ ಮಕ್ಕಳು ಅವರು ಸ್ವೀಕರಿಸಬಹುದಾದ ಯಾವುದೇ ಉಡುಗೊರೆಗಿಂತ ಇದು ಉತ್ತಮವಾಗಿದೆ ಎಂದು ಹೇಳಿದ್ದಾರೆ. ಹ್ಯಾಪಿ ಹಾಲಿಡೇಸ್ ಫ್ರೆಂಡ್ಸ್ ಎಂದು ಪೋಸ್ಟ್ ಕೆಳಗೆ ಬರೆದುಕೊಂಡಿದ್ದಾರೆ. ಅಂದರೆ ಆ ಕೆಲಸದಾಕೆ ಮನೆ ಮಾಲೀಕನಿಂದ ಪಡೆಯಬಹುದಾದ ಗಿಫ್ಟ್‌ಗಳಲ್ಲಿ ಈ ಹ್ಯುಂಡೈ ಎಲಂಟ್ರಾಗಿಂತ ದೊಡ್ಡ ಬಹುಮಾನ ಮತ್ತೊಂದಿಲ್ಲ ಎಂಬುದು ಈ ವಾಖ್ಯದ ಅರ್ಥವಾಗಿರಬಹುದು. ಈ ವರೆಗೆ ಪಡೆದ ಗಿಫ್ಟ್‌ಗಳಲ್ಲಿ ಇದೇ ನನ್ನ ದುಬಾರಿ ಗಿಫ್ಟ್ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.

ವಿಡಿಯೋವನ್ನು ಪರಿಶೀಲಿಸಿದರೆ ಮನೆಯೊಂದರಿಂದ ಹೊರಬರುವ ಕೆಲಸದಾಕೆಗೆ ಬಾಲಕನೊಬ್ಬ ಕಾರಿನ ಕೀಯನ್ನು ನೀಡುತ್ತಾನೆ. ಕೂಡಲೆ ಆ ಮಹಿಳೆಗೆ ಏನೂ ಅರ್ಥ ಆಗದೇ ಇದು ನನಗೇ ಎಂದು ಪ್ರಶ್ನಿಸುತ್ತಾಳೆ. ಹೌದು ಎಂದ ಕೂಡಲೇ ಗಳಗಳನೇ ಅತ್ತು, ತನ್ನ ಮಾಲೀಕನನ್ನು ತಬ್ಬಿಕೊಳ್ಳುವುದನ್ನು ನೋಡಬಹುದು. ಬಳಿಕ ಕಾರಿನ ಬಳಿ ತೆರಳಿ ಒಳಗೆ ಕುಳಿತು ಕಾರನ್ನು ಪರಿಶೀಲಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಆಕೆಯ ಪ್ರತಿಕ್ರಿಯೆ ಹಲವರ ಮನಗೆದ್ದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ನೆಟ್ಟಿಗರು ಮಾಲೀಕ ಕುಟುಂಬವನ್ನು ಹಾಡಿಹೊಗಳುತ್ತಿದ್ದಾರೆ. ಮನೆ ಕೆಲಸದವರನ್ನು ಹೀಗೂ ಭಾವಿಸಬಹುದೇ ಎಂಬುದು ನಿಮ್ಮನ್ನು ನೋಡಿ ಹಲವರು ತಿಳಿಯಬೇಕು ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕಾರಿನ ಬಗ್ಗೆ ಹೇಳುವುದಾದರೆ ಹ್ಯುಂಡೈ ಎಲಂಟ್ರಾ ಎಂಬುದು ಕಂಪನಿಯು ಭಾರತದಲ್ಲಿ ಈ ಕಾರಿಗೆ ನೀಡಲಾಗಿರುವ ಹೆಸರಾಗಿದೆ. ಇದೇ ಕಾರನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಅವಾಂಟೆ ಎಂದು ಮಾರಾಟ ಮಾಡಲಾಗುತ್ತದೆ. ಇದನ್ನು 2018 ರಿಂದ 2020 ರ ನಡುವೆ ನಿರ್ಮಿಸಲಾಗಿದೆ.

ಈ ಕಾರು 1.6-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಂಡಿದ್ದು, 124 ಎಚ್‌ಪಿ ಪವರ್ ಉತ್ಪಾದಿಸಬಲ್ಲ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ದೊಂದಿಗೆ ಬರುತ್ತದೆ. ಅವಾಂಟೆ ಎಲ್ಇಡಿ ಡಿಆರ್ಎಲ್ ಮತ್ತು ಹ್ಯಾಲೊಜೆನ್ ಪ್ರೊಜೆಕ್ಟರ್‌ಗಳೊಂದಿಗೆ ತೀಕ್ಷ್ಣವಾದ ಬಾಹ್ಯ ವಿನ್ಯಾಸವನ್ನು ಹೊಂದಿದೆ. ಈ ಸೆಡಾನ್ ಒಳಗೆ Apple CarPlay ಮತ್ತು Android Auto ಜೊತೆಗೆ 7-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಅನ್ನು ನೀಡಲಾಗುತ್ತದೆ. ಒಟ್ಟಾರೆಯಾಗಿ ಈ ಕಾರು ಮಧ್ಯಮ ಪ್ರೀಮಿಯಂ ವಿಭಾಗಕ್ಕೆ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
English summary
The owner surprised the worker with a Hyundai Elantra car as a gift
Story first published: Saturday, December 17, 2022, 12:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X