ಆಕರ್ಷಕ ಬೆಲೆಯಲ್ಲಿ ರೇಂಜ್‌ ರೋವರ್‌ನಂತೆ ಮಾಡಿಫೈಗೊಂಡ ಮಾರುತಿ ವಿಟಾರಾ ಬ್ರೆಝಾ!

ಹೆಚ್ಚು ಕಾರು ಕ್ರೇಜ್‌ ಹೊಂದಿರುವವರು ತಮ್ಮ ಕಾರುಗಳನ್ನು ತಮಗೆ ಬೇಕಾದ ರೀತಿಯಲ್ಲಿ ನವೀಕರಣಗೊಳಿಸಿ ಮೂಲ ಕಾರು ಮಾದರಿಯನ್ನೇ ಬದಲಿಸಿ ಬಿಡುವುದನ್ನು ಆಗಾಗ ನೋಡುತ್ತಿರುತ್ತೇವೆ. ಕೆಲವೊಮ್ಮೆ ತಮ್ಮ ನೆಚ್ಚಿನ ಐಷಾರಾಮಿ ಕಾರುಗಳನ್ನು ಖರೀದಿಸಲು ಹಣವಿಲ್ಲದವರು ಇರುವ ಕಾರುಗಳನ್ನೇ ನವೀಕರಣಗೊಳಿಸಿ ಐಷಾರಾಮಿ ಕಾರುಗಳಂತೆ ಡಿಸೈನ್‌ ಮಾಡಿಸುತ್ತಾರೆ. ಇಂತಹ ಒಂದು ಉದಾಹರಣೆಯನ್ನೇ ಇಲ್ಲೂ ನೋಡಬಹುದು.

ಮಾರುತಿ ಬ್ರೆಜಾವನ್ನು ರೇಂಜ್‌ ರೋವರ್‌ನಂತೆ ವಿನ್ಯಾಸಗೊಳಿಸಿದ ಮಾಲೀಕ

ಮಾರುತಿ ಸುಜುಕಿ ವಿಟಾರಾ ಬ್ರೆಝಾ ಒಂದು ಕಾಲದಲ್ಲಿ ಹೆಚ್ಚು ಕೈಗೆಟುಕುವ ಸಣ್ಣ ಕಾರುಗಳಿಗೆ ಜನಪ್ರಿಯವಾಗಿದ್ದ ಮಾದರಿ. ಇದು ಭಾರತೀಯ ಮಾರುಕಟ್ಟೆಯಲ್ಲಿ ಈಗಲೂ ಜನಪ್ರಿಯ ವಾಹನವೂ ಹೌದು. ಈ ವಾಹನವನ್ನು ಖರೀದಿಸಿರುವ ಗ್ರಾಹಕನೊಬ್ಬ ತನಗೆ ಇಷ್ಟವಾದ ರೇಂಜ್ ರೋವರ್ ಇವೊಕ್ ಮಾದರಿಯೆತೆ ಬ್ರೆಝಾವನ್ನು ಮಾಡಿಫೈ ಮಾಡಿಸಿದ್ದಾರೆ. ಆದರೆ ಅದು ಸಂಪೂರ್ಣ ಪ್ರಮಾಣದಲ್ಲಿ ರೇಂಜ್‌ ರೋವರ್‌ ಮಾದರಿಯೆಂತೆ ಪೂರ್ಣ ವಿನ್ಯಾಸ ಬಾರದಿದ್ದರೂ ನೋಡುಗರನ್ನು ಆಕರ್ಷಿಸುತ್ತಿದೆ.

ಮಾರುತಿ ಬ್ರೆಜಾವನ್ನು ರೇಂಜ್‌ ರೋವರ್‌ನಂತೆ ವಿನ್ಯಾಸಗೊಳಿಸಿದ ಮಾಲೀಕ

ಸುಮಾರು 10 ಲಕ್ಷ ರೂ.(ಮಿಡ್-ಸ್ಪೆಕ್ ವೇರಿಯಂಟ್) ವೆಚ್ಚವಾಗುವ ವಿಟಾರಾ ಬ್ರೆಝಾವನ್ನು ಈ ಇವೊಕ್-ಪ್ರೇರಿತ ಮಾದರಿಯಲ್ಲಿ ವಿನ್ಯಾಸಗೊಳಿಸಲು 6,00,000 ರೂ.ವರೆಗೆ ವೆಚ್ಚವಾಗಿದೆ. ಇದರ ನವೀಕರಣಗಳು ಸಂಪೂರ್ಣವಾಗಿ ರೇಂಜ್‌ ರೋವರ್‌ಗೆ ನೀಡಲಾದ ಲುಕ್‌ನಲ್ಲಿ ಶೇ.70 ರಷ್ಟು ಹೋಲುತ್ತಿದೆ. ಇನ್ನು ಕಾಂಪ್ಯಾಕ್ಟ್‌ ಎಸ್‌ಯುವಿಯ ಫ್ರೇಮ್, ಎಂಜಿನ್ ಮತ್ತು ಇತರ ಆಂತರಿಕ ಘಟಕಗಳಿಗೆ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.

ಮಾರುತಿ ಬ್ರೆಜಾವನ್ನು ರೇಂಜ್‌ ರೋವರ್‌ನಂತೆ ವಿನ್ಯಾಸಗೊಳಿಸಿದ ಮಾಲೀಕ

ಬ್ರೆಝಾ ನಿರ್ದಿಷ್ಟ ಮುಂಭಾಗದ ಗ್ರಿಲ್ ಅನ್ನು ತೆರವುಗೊಳಿಸಿ ರೇಂಜ್ ರೋವರ್ ಇವೊಕ್-ಪ್ರೇರಿತ ಕಪ್ಪು ಗ್ರಿಲ್‌ನೊಂದಿಗೆ ಬದಲಾಯಿಸಲಾಗಿದೆ. ಈ ಮೂಲಕ ಬೇಸಿಕ್ ಪ್ರೊಫೈಲ್ ಮೇಕ್ ಓವರ್‌ನ ಯಾವುದೇ ಸಣ್ಣ ಅಂಶವನ್ನು ಇದರಲ್ಲಿ ಕೈ ಬಿಟ್ಟಿಲ್ಲ. ಹೆಡ್‌ಲೈಟ್‌ಗಳು ಮತ್ತು ಬಂಪರ್ ಇವೊಕ್ ಮಾದರಿಯಲ್ಲೇ ಹಗಲಿನ ರನ್ನಿಂಗ್ ಲೈಟ್‌ಗಳನ್ನು (ಡಿಆರ್‌ಎಲ್‌) ಇದರಲ್ಲಿ ಅಳವಡಿಸಲಾಗಿದೆ. ಜೊತೆಗೆ ಸಿಲ್ವರ್-ಫಿನಿಶ್ಡ್‌ ಸ್ಕಿಡ್ ಪ್ಲೇಟ್ ಅನ್ನು ಕೂಡ ರೇಂಜ್ ರೋವರ್ ಇವೊಕ್‌ನಂತೆಯೇ ವಿನ್ಯಾಸಗೊಳಿಸಲಾಗಿದೆ.

ಮಾರುತಿ ಬ್ರೆಜಾವನ್ನು ರೇಂಜ್‌ ರೋವರ್‌ನಂತೆ ವಿನ್ಯಾಸಗೊಳಿಸಿದ ಮಾಲೀಕ

ಈ ಮಾರುತಿ ಸುಜುಕಿ ವಿಟಾರಾ ಬ್ರೆಝಾ ನೇರ-ಕಟ್ ಫೆಂಡರ್ ಅನ್ನು ಒಳಗೊಂಡಿರುವದರಿಂದ ರೇಂಜ್‌ ರೋವರ್ ಇವೊಕ್-ಪ್ರೇರಿತ ಕರ್ವ್ಡ್‌ ಫೆಂಡರ್ ಕಟ್ ಮತ್ತು ಬಾನೆಟ್ ವಿನ್ಯಾಸವನ್ನು ನೋಡಬಹುದು. ಸೈಡ್ ಪ್ರೊಫೈಲ್ ಪ್ರಮುಖ ಅಲಾಯ್ ವೀಲ್‌ಗಳು ಮತ್ತು ರೆಡ್‌-ಪೇಂಟೆಡ್ ಕ್ಯಾಲಿಪರ್‌ಗಳೊಂದಿಗೆ ಪರಿಚಿತ ಬ್ರೆಜಾ ನೋಟವನ್ನು ಈ ವಿನ್ಯಾಸದಲ್ಲಿ ನೋಡಬಹುದು.

ಮಾರುತಿ ಬ್ರೆಜಾವನ್ನು ರೇಂಜ್‌ ರೋವರ್‌ನಂತೆ ವಿನ್ಯಾಸಗೊಳಿಸಿದ ಮಾಲೀಕ

ಅಲ್ಲದೇ ಟೈಲ್ ಲೈಟ್‌ಗಳು, ಫ್ಲಾಟ್ ಬೂಟ್ ಡೋರ್ ಮತ್ತು ಸ್ಪೋರ್ಟಿ ಸ್ಪಾಯ್ಲರ್‌ನೊಂದಿಗೆ ಎವೊಕ್ ಲುಕ್ ಅನ್ನು ತರಲು ಬೂಟ್ ಪ್ರದೇಶವನ್ನು ಮರುವಿನ್ಯಾಸಗೊಳಿಸಲಾಗಿದೆ. ಮೇಲಿನ ರೂಫ್‌ ಮತ್ತು ಪಿಲ್ಲರ್‌ಗಳಿಗೆ ಕಪ್ಪು ಬಣ್ಣ ಬಳಿಯಲಾಗಿದೆ.

ಮಾರುತಿ ಬ್ರೆಜಾವನ್ನು ರೇಂಜ್‌ ರೋವರ್‌ನಂತೆ ವಿನ್ಯಾಸಗೊಳಿಸಿದ ಮಾಲೀಕ

ಜೊತೆಗೆ ಬಂಪರ್‌ನ ಕೆಳಗಿನ ಅರ್ಧಭಾಗವು ಡ್ಯುಯಲ್ ಎಕ್ಸಾಸ್ಟ್ ಓಪನಿಂಗ್‌ಗಳೊಂದಿಗೆ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಡಿಸೈನ್‌ ಅನ್ನು ಹೊರಾಂಗಣಕ್ಕೆ ಮಾತ್ರವಲ್ಲದೇ ಒಳಾಂಗಣದಲ್ಲೂ ಮಾಡಲಾಗಿದೆ.

ಮಾರುತಿ ಬ್ರೆಜಾವನ್ನು ರೇಂಜ್‌ ರೋವರ್‌ನಂತೆ ವಿನ್ಯಾಸಗೊಳಿಸಿದ ಮಾಲೀಕ

ಸಿಲ್ವರ್ ಡೋರ್ ಹ್ಯಾಂಡಲ್‌ಗಳು, ಏರ್ ವೆಂಟ್‌ಗಳು ಮತ್ತು ಸ್ಟೀರಿಂಗ್ ವೀಲ್ ಸೇರಿದಂತೆ ಹಲವನ್ನು ರೇಂಜ್ ರೋವರ್ ಅನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ. ಈ ಇನ್ಸರ್ಟ್‌ಗಳನ್ನು ಹೊರತುಪಡಿಸಿ ಡ್ಯಾಶ್ ಬೋರ್ಡ್, ಡೋರ್ ಕವರ್‌ಗಳು ಮತ್ತು ಸೀಟ್‌ಗಳಲ್ಲಿ ರೆಡ್‌ ಶೇಡ್‌ ಅನ್ನು ನೀಡಲಾಗಿದೆ.

ಮಾರುತಿ ಬ್ರೆಜಾವನ್ನು ರೇಂಜ್‌ ರೋವರ್‌ನಂತೆ ವಿನ್ಯಾಸಗೊಳಿಸಿದ ಮಾಲೀಕ

ಈ ಮಾದರಿಯು ರೇಂಜ್ ರೋವರ್‌ನಿಂದ ಪ್ರೇರಿತವಾಗಿದ್ದರೂ ಕಾರ್‌ನ ಹಲವು ಘಟಕಗಳು ಮಾರುತಿ ವಿಟಾರಾ ಬ್ರೆಜಾದ ಸ್ಟಾಕ್ ಮಾದರಿಯಲ್ಲೇ ಇರುತ್ತವೆ. ಈ ಕಾರು 1.3 ಲೀಟರ್, ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 90ಎಚ್‌ಪಿ ಗರಿಷ್ಠ ವಿದ್ಯುತ್ ಮತ್ತು 200 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ 5-ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್‌ ಜೋಡಣೆ ಹೊಂದಿದೆ.

ಮಾರುತಿ ಬ್ರೆಜಾವನ್ನು ರೇಂಜ್‌ ರೋವರ್‌ನಂತೆ ವಿನ್ಯಾಸಗೊಳಿಸಿದ ಮಾಲೀಕ

ಪ್ರಸ್ತುತ ಮಾರುಕಟ್ಟೆಯಲ್ಲಿ ವಿಟಾರಾ ಬ್ರೆಝಾ ಮಾದರಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್‌ ಆಯ್ಕೆ ನೀಡುತ್ತಿದ್ದು, ಇದು ಉತ್ತಮ ಇಂಧನ ದಕ್ಷತೆ ಹೊಂದಿದೆ. ಹೊಸ ತಲೆಮಾರಿನ ಆವೃತ್ತಿಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಎನ್‌ಜಿ ಮಾದರಿಯನ್ನು ಪರಿಚಯಿಸಲಾಗುತ್ತಿದ್ದು, ಸಿಎನ್‌ಜಿ ಆಯ್ಕೆ ಹೊಂದಿರುವ ಮೊದಲ ಎಸ್‌ಯುವಿ ಮಾದರಿಯಾಗಲಿದೆ.

ಮಾರುತಿ ಬ್ರೆಜಾವನ್ನು ರೇಂಜ್‌ ರೋವರ್‌ನಂತೆ ವಿನ್ಯಾಸಗೊಳಿಸಿದ ಮಾಲೀಕ

ಜನಪ್ರಿಯ ಕಾರು ಮಾದರಿಗಳಾದ ಆಲ್ಟೊ, ವ್ಯಾಗನ್‌ಆರ್, ಸೆಲೆರಿಯೊ, ಎಸ್ ಪ್ರೆಸ್ಸೊ, ಇಕೋ ಮತ್ತು ಎರ್ಟಿಗಾ ಮಾದರಿಯಲ್ಲಿ ಸಿಎನ್‌ಜಿ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಮೊದಲ ಬಾರಿಗೆ ಸಿಎನ್‌ಸಿ ಕಾರುಗಳ ಮಾರಾಟದಲ್ಲಿ ದೊಡ್ಡ ಮಟ್ಟದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 2020-21ರ ಅವಧಿಯ ಒಟ್ಟು ಕಾರು ಮಾರಾಟ ಪ್ರಮಾಣದಲ್ಲಿ ಸಿಎನ್‌ಜಿ ಕಾರುಗಳನ್ನು ಮಾರಾಟವು ಶೇ.30ರಷ್ಟು ಮುನ್ನಡೆ ಸಾಧಿಸಿದೆ.

Image Courtesy: Gafu Edits

Article Published On: Monday, March 14, 2022, 13:15 [IST]
English summary
The owner who Spends 6 Lakh To Convert His Maruti Brezza SUV Into RR Evoque
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+