ಭಾರತದಲ್ಲಿ 2023ರಲ್ಲಿ 5, 10 ಲಕ್ಷದ ನಡುವೆ ಸಿಗಲಿರುವ ಟಾಪ್ ಕಾರುಗಳಿವು..
ಭಾರತೀಯ ಆಟೋಮೊಬೈಲ್ ಉದ್ಯಮವು ಕೊರೋನಾ ಸೋಂಕಿನ ಕರಿನೆರಳಿನಿಂದ ಹೊರಬಂದು ಅತ್ಯಂತ ಯಶಸ್ವಿವಾಗಿ ಮುನ್ನುಗ್ಗುತ್ತಿದೆ. 2022ರಲ್ಲಿ ವಾಹನ ಮಾರಾಟವು ಅತ್ಯುತ್ತಮ ಫಲಿತಾಂಶಗಳನ್ನು ನೀಡಿದೆ. ಅನೇಕ ತಯಾರಕರು ದೇಶದ ಮಾರುಕಟ್ಟೆಯಲ್ಲಿ ತಮ್ಮ ಸಾರ್ವಕಾಲಿಕ ಮಾರಾಟ ದಾಖಲೆಯನ್ನು ಮುರಿದಿದ್ದು, ಉತ್ತಮ ರೀತಿಯಲ್ಲಿ ಪ್ರಗತಿಯನ್ನು ದಾಖಲಿಸಿದ್ದಾರೆ ಎಂದು ಹೇಳಬಹುದು.
ಇದು ಕೇವಲ ಸಣ್ಣ ಕಾರುಗಳು ಮತ್ತು ಎಸ್‌ಯುವಿಗಳಲ್ಲದೇ ಐಷಾರಾಮಿ ಮತ್ತು ಪೋರ್ಷೆನಂತಹ ಸ್ಪೋರ್ಟ್ಸ್ ಕಾರು ತಯಾರಕರು ಭಾರತದಲ್ಲಿ ತಮ್ಮ ಹಿಂದಿನ ಅತ್ಯುತ್ತಮ ಮಾರಾಟ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ. ಕಾರು ತಯಾರಕ ಕಂಪನಿಗಳು, ಇಷ್ಟೇ ವೇಗದಲ್ಲಿ 2023ರಲ್ಲೂ ಸಾಗಲು ಬಯಸುತ್ತಿದ್ದಾರೆ. ಜವನರಿ 2023ರಲ್ಲಿ ಆಟೋ ಎಕ್ಸ್‌ಪೋ ಸಹ ನಡೆಯಲಿದ್ದು, ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಹೊಸ ಕಾರುಗಳ ಸಂಖ್ಯೆಯು 2022ಕ್ಕಿಂತ ಹೆಚ್ಚಿರಬಹುದು. ಇಲ್ಲಿ ಮುಂದಿನ ವರ್ಷ ದೇಶದಲ್ಲಿ ಖರೀದಿಗೆ ಸಿಗಬಹುದಾದ 5-10 ಲಕ್ಷ ರೂ. ನಡುವೆ ಇರುವ ಟಾಪ್ ಕಾರುಗಳ ಬಗ್ಗೆ ತಿಳಿಸಿಕೊಡಲಾಗಿದೆ.

ಹುಂಡೈ ಗ್ರಾಂಡ್ i10 ನಿಯೋಸ್:
ಹ್ಯುಂಡೈ ಇಂಡಿಯಾದ ಒಂದು ಸಣ್ಣ ಹ್ಯಾಚ್‌ಬ್ಯಾಕ್ ಈ ಗ್ರಾಂಡ್ i10 ನಿಯೋಸ್ ಆಗಿದೆ ಎಂದು ಹೇಳಬಹುದು. ಇದು ದೇಶದಲ್ಲಿ ಮಾರಾಟವಾಗುವ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಹ್ಯುಂಡೈ ಈ ಕಾರಿನ ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸುವ ಸಾಧ್ಯತೆಯಿದ್ದು, ಇದು 2023ರ ಆರಂಭದಲ್ಲಿ ಮಾರುಕಟ್ಟೆಗೆ ಬರಬಹುದು. ಹುಂಡೈ ಗ್ರಾಂಡ್ ಐ10 ನಿಯೋಸ್ ಫೇಸ್‌ಲಿಫ್ಟ್‌ನ ಅಂದಾಜು ಆರಂಭಿಕ ಬೆಲೆ 6 ಲಕ್ಷ ರೂ ಇರಬಹುದು.
ಮಾರುತಿ ಸುಜುಕಿ ಸ್ವಿಫ್ಟ್:
ಭಾರತದ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಸ್ವಿಫ್ಟ್‌ಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಇದು ದೇಶದಲ್ಲಿ ಮಾರುತಿ ಸುಜುಕಿ ಕಂಪನಿಯ ಅತ್ಯಂತ ಯಶಸ್ವಿ ಉತ್ಪನ್ನವಾಗಿದೆ. ಸ್ವಿಫ್ಟ್‌ನ ಪ್ರಸ್ತುತ ಮಾದರಿಯನ್ನು ಇಂಡಿಯನ್ ಆಟೋ ಎಕ್ಸ್‌ಪೋ 2018ರಲ್ಲಿ ಪರಿಚಯಿಸಲಾಯಿತು. ಮುಂಬರುವ ಇಂಡಿಯನ್ ಆಟೋ ಎಕ್ಸ್‌ಪೋ 2023ರಲ್ಲಿ ಮಾರುತಿ ಸುಜುಕಿಯ ಹೊಸ ತಲೆಮಾರಿನ ಸ್ವಿಫ್ಟ್‌ನ ಫೇಸ್‌ಲಿಫ್ಟ್ ಅನ್ನು ಅನಾವರಣ ಮಾಡಬಹುದು. ಇದರ ಅಂದಾಜು ಆರಂಭಿಕ ಬೆಲೆ 6 ಲಕ್ಷ ರೂ. ಇರಬಹುದು.
ಹುಂಡೈನ ಮೈಕ್ರೋ ಸುವಾಹ್:
ಹ್ಯುಂಡೈ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಮೈಕ್ರೋ ಎಸ್‌ಯುವಿಯೊಂದನ್ನು ಪರೀಕ್ಷೆ ನಡೆಸಿತ್ತು. ಇದು ಟಾಟಾ ಪಂಚ್‌ಗಳಿಗೆ ಭಾರೀ ಮಟ್ಟದಲ್ಲಿ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಪರೀಕ್ಷೆ ವೇಳೆ ಕಂಡು ಬಂದ ಈ ಮೈಕ್ರೋ ಎಸ್‌ಯುವಿ ಅಂತರಾಷ್ಟ್ರೀಯವಾಗಿ ಮಾರಾಟವಾಗುವ ಹುಂಡೈ ಕ್ಯಾಸ್ಪರ್‌ನ ಆವೃತ್ತಿಯಾಗಿದೆ ಎಂದು ನಿರೀಕ್ಷಿಸಲಾಗಿದ್ದು, ಇದರ ಹೆಸರನ್ನು ಭಾರತೀಯ ಮಾರುಕಟ್ಟೆಯಲ್ಲಿ ಮರು-ನಾಮಕರಣ ಮಾಡಬಹುದು. ಈ ಮೈಕ್ರೋ ಎಸ್‌ಯುವಿಯು 6.5 ಲಕ್ಷದ ಆರಂಭಿಕ ಬೆಲೆಯನ್ನು ಹೊಂದಿರಬಹುದು.
ಸಿಟ್ರೊಯೆನ್ ಎಸಿ 3:
ಈ ವರ್ಷದ ಆರಂಭದಲ್ಲಿ ಸಿಟ್ರೊಯೆನ್ ತನ್ನ ಎರಡನೇ ಕಾರು ಸಿ3 ಅನ್ನು ದೇಶದಲ್ಲಿ ಬಿಡುಗಡೆ ಮಾಡಿತ್ತು, ನಂತರ ಕಂಪನಿಯು ಅದರ ಎಲೆಕ್ಟ್ರಿಕ್ ಆವೃತ್ತಿಯನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ನಂತರ ಅದನ್ನು ಮುಂದೂಡಿಲಾಯಿತು. ಆದ್ದರಿಂದ ಸಿ3ನ ಎಲೆಕ್ಟ್ರಿಕ್ ಆವೃತ್ತಿಯು 2023ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು,.ಸೋಷಿಯಲ್ ಮೀಡಿಯಾದಲ್ಲಿ ಸಿಟ್ರೊಯೆನ್ ಇಂಡಿಯಾದ ಇತ್ತೀಚಿನ ಪೋಸ್ಟ್ ಮುಂಬರುವ ಕಾರಿನ ಹೆಸರನ್ನು ಸಹ ಬಹಿರಂಗಪಡಿಸಿದೆ. ಅದನ್ನು 'eC3' ಎಂದು ಕರೆಯಲಾಗಿದ್ದು, ಟಾಟಾ Tiago EVಗೆ ಪೈಪೋಟಿ ನೀಡಲಿದ್ದು, ಅದರ ಬೆಲೆ 10 ಲಕ್ಷಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ.
ಹೋಂಡಾ ಸಬ್-4M ಎಸ್‌ಯುವಿ & ಹೋಂಡಾ ಬ್ರಿಯೋ:
ಮುಂದಿನ ವರ್ಷ ಹೋಂಡಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಸಬ್-4M ಎಸ್‌ಯುವಿಯನ್ನು ಪರಿಚಯಿಸಲು ಯೋಜಿಸುತ್ತಿದ್ದು, ಈ ಎಸ್‌ಯುವಿ ಬೆಲೆ ಸುಮಾರು 8 ಲಕ್ಷ ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ದೇಶದ ಕಾರು ಮಾರುಕಟ್ಟೆಯಲ್ಲಿ ಪ್ರಸ್ತುತ ಶೇಕಡ 40ರಷ್ಟು ಎಸ್‌ಯುವಿಗಳು ಮತ್ತು ಶೇಕಡ 40ರಷ್ಟು ಹ್ಯಾಚ್‌ಬ್ಯಾಕ್ ಮಾರಾಟವಾಗುತ್ತಿವೆ. ಇದರ ಮೇಲೆ ಕಣ್ಣಿಟ್ಟಿರುವ ಹೋಂಡಾ ಸಣ್ಣ ಹ್ಯಾಚ್‌ಬ್ಯಾಕ್ 'ಬ್ರಿಯೋ' ಪರಿಚಯಿಸಲು ಮುಂದಾಗಿದೆ. ಇದರ ಆರಂಭಿಕ ಬೆಲೆ 5 ಲಕ್ಷ ರೂ. ಇರಬಹುದು.
ಟೊಯೊಟಾ ಬೆಲ್ಟಾ ಸೆಡಾನ್:
ಟೊಯೋಟಾ ಮತ್ತು ಮಾರುತಿ ಸುಜುಕಿ ನಡುವಿನ ಒಪ್ಪಂದದ ಭಾಗವಾಗಿ ಕಂಪನಿಗಳು ತಮ್ಮ ಉತ್ಪನ್ನದ ತಂತ್ರಜ್ಞಾನಗಳು, ಪ್ಲಾಟ್‌ಫಾರ್ಮ್ ಮತ್ತು ಪವರ್‌ಟ್ರೇನ್ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಟೊಯೊಟಾ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪ್ರಸಿದ್ಧ ಮಾರುತಿ ಸುಜುಕಿ ಸಿಯಾಜ್ ಆಧಾರಿತ ಸೆಡಾನ್ ಅನ್ನು ಅಭಿವೃದ್ಧಿಪಡಿಸಿದೆ. ಅದಕ್ಕೆ ಟೊಯೊಟಾ ಬೆಲ್ಟಾ ಎಂದು ಹೆಸರಿಸಿದ್ದು, ಟೊಯೊಟಾ 2023ರಲ್ಲಿ ಭಾರತೀಯ ಮಾರುಕಟ್ಟೆಗೆ ಈ ಸೆಡಾನ್ ಅನ್ನು ಪರಿಚಯಿಸುವ ಸಾಧ್ಯತೆಯಿದೆ. ಇದರ ಆರಂಭಿಕ ಬೆಲೆ 9 ಲಕ್ಷ ರೂ. ಇರಲಿದೆ.


Click it and Unblock the Notifications








