ದೇಶದ ಈ ಇಬ್ಬರು ಪ್ರಸಿದ್ಧ ಉದ್ಯಮಿಗಳಿಗೆ ಎಲೆಕ್ಟ್ರಿಕ್ ಕಾರುಗಳೆಂದ್ರೆ ಇಷ್ಟವಿಲ್ಲವಂತೆ: ಯಾಕೆ ಗೊತ್ತಾ?
ಜೆಟ್ ಏರ್‌ವೇಸ್ ಸಿಇಒ ಸಂಜೀವ್ ಕಪೂರ್ ಮತ್ತು ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರಿಗೆ ಎಲೆಕ್ಟ್ರಿಕ್ ಕಾರ್ ಫ್ರಂಟ್ ಗ್ರಿಲ್ ಅಂದ್ರೆ ಇಷ್ಟವಿಲ್ಲವಂತೆ. ಇಬ್ಬರೂ ಈ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ಅನ್ನು ಬಳಸಿಕೊಂಡಿದ್ದಾರೆ.

ಜೆಟ್ ಏರ್‌ವೇಸ್ ಸಿಇಒ ಸಂಜೀವ್ ಕಪೂರ್ ಎಲೆಕ್ಟ್ರಿಕ್ ವಾಹನಗಳ ಫ್ರಂಟ್‌ಗ್ರಿಲ್ ಬಗ್ಗೆ ಹೇಳಿದ್ದು, ಬಹುಶಃ ಇದುವರೆಗೂ ಇವಿಗಳ ಗ್ರಿಲ್ ಬಗ್ಗೆ ಹೇಳುತ್ತಿರುವುದು ನಾನೇ ಆಗಿರಬಹುದು, ಎಲೆಕ್ಟ್ರಿಕ್ ಕಾರುಗಳ ಈ ಗ್ರಿಲ್ ಕಡೆಮೆ ಅಥವಾ ಪ್ಲಾಸ್ಟಿಕ್ ಗ್ರಿಲ್‌ಗಳಿಗೆ ಪೇಂಟ್ ಮಾಡಿದ ಮುಂಭಾಗದ ತುದಿಗಳು ಆಟಿಕೆಗಳಂತೆ ಕಾಣುತ್ತಿವೆ. ಸಾಂಪ್ರದಾಯಿಕ ಗ್ರಿಲ್‌ಗಳನ್ನು ಏಕೆ ಉಳಿಸಿಕೊಳ್ಳಬಾರದು? ಎಂದು ಪೋಸ್ಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ, ನಿಮ್ಮ ಮಾತನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ಮರುಟ್ವೀಟ್ ಮಾಡಿದ್ದಾರೆ. ವಿಜಯ್ ಶೇಖರ್ ಶರ್ಮಾ ಎಲೆಕ್ಟ್ರಿಕ್ ವಾಹನಗಳ ಅಭಿಮಾನಿಯಂತೆ ತೋರುತ್ತಿದೆ. ಏಕೆಂದರೆ ಅವರು ಈ ಹಿಂದಿನ ಟ್ವೀಟ್‌ಗಳಲ್ಲಿ ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಅವರನ್ನು ತ್ವರಿತವಾಗಿ ಭಾರತದಲ್ಲಿ ತಮ್ಮ ವಾಹನಗಳನ್ನು ಪರಿಚಯಿಸಲು ಒತ್ತಾಯಿಸಿದ್ದರು.

ಟೆಸ್ಲಾ ಮಾಡೆಲ್ 3 ಎಲೆಕ್ಟ್ರಿಕ್ ಕಾರನ್ನು ಮುಂಗಡವಾಗಿ ಬುಕ್ ಮಾಡಿದ ಸಾವಿರಾರು ಭಾರತೀಯರಲ್ಲಿ ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಕೂಡ ಒಬ್ಬರಾಗಿದ್ದಾರೆ. ಭಾರತದಲ್ಲಿ ಬ್ರ್ಯಾಂಡ್ ಅನ್ನು ಪ್ರಾರಂಭಿಸಲು ಅಮೇರಿಕನ್ ವಾಹನ ತಯಾರಕರು ನಿರಾಕರಿಸಿದ್ದರಿಂದ ವಿಜಯ್ ಶೇಖರ್ ಶರ್ಮಾ ನಿರಾಶೆಗೊಂಡಿದ್ದಾರೆ.

ಗ್ರಿಲ್ ಏಕೆ ಹೀಗಿದೆ?
1. ಏರೋಡೈನಾಮಿಕ್ಸ್
ಎಲೆಕ್ಟ್ರಿಕ್ ಕಾರುಗಳಲ್ಲಿ ಬ್ಯಾಟರಿ ವ್ಯಾಪ್ತಿಯನ್ನು ಹೆಚ್ಚಿಸಲು ವಾಹನ ತಯಾರಕರು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಾರೆ. ಉತ್ತಮ ಏರೋಡೈನಾಮಿಕ್ಸ್ ಅನ್ನು ಖಚಿತಪಡಿಸಿಕೊಳ್ಳುವುದು ಕೂಡ ಇದರ ಒಂದು ಭಾಗವಾಗಿದೆ. ಕಳಪೆ ಏರೋಡೈನಾಮಿಕ್ಸ್ ಎಂದರೆ ಕ್ರೂಸಿಂಗ್ ವೇಗದಲ್ಲಿ ಹೆಚ್ಚಿನ ಎಳೆತವಿರುತ್ತದೆ.

ಹೆಚ್ಚಿನ ಎಳೆತವೆಂದರೆ ಎಲೆಕ್ಟ್ರಿಕ್ ಮೋಟರ್‌ಗೆ ಹೆಚ್ಚಿನ ಕೆಲಸ ಮತ್ತು ಬ್ಯಾಟರಿಯ ವೇಗವನ್ನು ಕುಗ್ಗಿಸುತ್ತದೆ. ಆದ್ದರಿಂದ, ಎಲೆಕ್ಟ್ರಿಕ್ ಕಾರಿನ ವಿನ್ಯಾಸವು ಅತ್ಯಂತ ಏರೋಡೈನಾಮಿಕ್ ಆಗಿರುವುದು ಬಹಳ ಮುಖ್ಯ. ಮುಂಭಾಗದ ಗ್ರಿಲ್ ಅನ್ನು ಕಡಿಮೆ ಅಥವಾ ಖಾಲಿಯಾಗಿಸುವುದರಿಂದ ವಾಹನ ತಯಾರಕರು ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚು ಏರೋಡೈನಾಮಿಕ್ ಆಗಿಸಲು ಸಹಾಯ ಮಾಡುತ್ತದೆ.

ವೆಚ್ಚ ಉಳಿತಾಯ
ಡೀಸೆಲ್, ಪೆಟ್ರೋಲ್, ಸಿಎನ್‌ಜಿ ಮತ್ತು ಎಲ್‌ಪಿಜಿಯಂತಹ ಇಂಧನಗಳಿಂದ ಚಾಲಿತವಾಗಿರುವ ಸಾಂಪ್ರದಾಯಿಕ ಕಾರುಗಳು ಎಂಜಿನ್‌ಗಳನ್ನು ಹೊಂದಿದ್ದರೆ, ಎಲೆಕ್ಟ್ರಿಕ್ ಕಾರುಗಳು ಎಂಜಿನ್ ಹೊಂದಿರುವುದಿಲ್ಲ. ಇದರರ್ಥ ಮುಂಭಾಗದಲ್ಲಿ ಯಾವುದೇ ರೇಡಿಯೇಟರ್ ಇರುವುದಿಲ್ಲ, ಹಾಗಾಗಿ ಇದಕ್ಕೆ ತಂಪಾಗಿಸುವ ಅಗತ್ಯವಿರುವುದಿಲ್ಲ.

ಆದ್ದರಿಂದ ಎಲೆಕ್ಟ್ರಿಕ್ ಕಾರುಗಳು ಮುಂಭಾಗದ ಗ್ರಿಲ್ ಅನ್ನು ಪಡೆಯದಿದ್ದರೂ ನಡೆಯುತ್ತದೆ. ಆಟೋ ಉದ್ಯಮದಲ್ಲಿ ಉಳಿಸಿದ ಪ್ರತಿ ರೂಪಾಯಿಯು ನಿರ್ಣಾಯಕವಾಗಿರುತ್ತದೆ. ವಾಹನ ತಯಾರಕರು ಯಾವಾಗಲೂ ವೆಚ್ಚವನ್ನು ಕಡಿಮೆ ಮಾಡಲು ಹೊಸ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಮುಂಭಾಗದ ಗ್ರಿಲ್ ಅನ್ನು ತೆಗೆದುಹಾಕುವುದು ಅಂತಹ ಒಂದು ಮಾರ್ಗವೆಂದೇ ಹೇಳಬಹುದು.

ವಿಸ್ತಾರವಾದ ಮುಂಭಾಗದ ಗ್ರಿಲ್ ಸ್ಥಳವನ್ನು ಖಾಲಿಯಾಗಿಸುವುದು ಸಾಕಷ್ಟು ಅಗ್ಗವಾಗಿಸುತ್ತದೆ. ಹೆಚ್ಚಿನ ಎಲೆಕ್ಟ್ರಿಕ್ ಕಾರುಗಳಲ್ಲಿ, ಸಾಂಪ್ರದಾಯಿಕ ಗ್ರಿಲ್‌ಗಳ ಬದಲಿಗೆ ಗ್ಲೋಸ್ಡ್ ಬ್ಲಾಂಕಿಂಗ್ ಪ್ಲೇಟ್‌ಗಳನ್ನು ಬಳಸಲಾಗುತ್ತದೆ. ಇದು EV ಗಳ ಮುಂಭಾಗದ ವಿನ್ಯಾಸವನ್ನು ಕಡಿಮೆ ಮಾಡುತ್ತದೆ.

ಭಾರತದಲ್ಲಿ ಟಾಟಾ ನೆಕ್ಸಾನ್ EV, ಟಿಗೋರ್ EV, ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು MG ZS ನಂತಹ ಕಾರುಗಳು ಮುಂಭಾಗದ ಗ್ರಿಲ್‌ಗಳನ್ನು ಖಾಲಿ ಮಾಡಿವೆ. ಇವೇ ಬ್ರಾಂಡ್‌ಗಳ ಪೆಟ್ರೋಲ್ ಕಾರುಗಳೆಲ್ಲವೂ ಸಾಂಪ್ರದಾಯಿಕ ಗ್ರಿಲ್‌ಗಳನ್ನು ಹೊಂದಿವೆ.

ಮುಂಭಾಗದ ಗ್ರಿಲ್ ವಿನ್ಯಾಸ ಏಕೆ ಮುಖ್ಯ?
ಮುಂಭಾಗದ ಗ್ರಿಲ್ ಪ್ರತಿಯೊಂದು ICE ಕಾರಿನಲ್ಲಿ ಸಾಕಷ್ಟು ವಿಸ್ತಾರವಾದ ವಿನ್ಯಾಸವನ್ನು ಪಡೆಯುವ ಅಂಶವಾಗಿದೆ. ಹೆಚ್ಚಾಗಿ ರಸ್ತೆಯ ಮೇಲೆ ಸಂಚರಿಸಬೇಕಾದರೆ ಅವುಗಳ ಲುಕ್ ಅನ್ನು ಹೆಚ್ಚಿಸುತ್ತವೆ. ಈ ಗ್ರಿಲ್‌ಗಳನ್ನು ಖಾಲಿ ಮಾಡುವುದರಿಂದ ಮುಂಭಾಗದ ವಿನ್ಯಾಸದ ವಿಷಯದಲ್ಲಿ ಕಾರುಗಳು ಲುಕ್ ಕಳೆದುಕೊಳ್ಳುತ್ತವೆ.

ಮುಂಭಾಗದ ಗ್ರಿಲ್ ಇಲ್ಲದೆ BMW ಹೇಗಿರುತ್ತದೆ ಎಂದು ಊಹಿಸಿಕೊಳ್ಳುವುದು ಕೂಡ ತುಂಬಾ ಕಷ್ಟ. ಲಂಬವಾದ 7 ಸ್ಲ್ಯಾಟ್ ಗ್ರಿಲ್ ಇಲ್ಲದ ಜೀಪ್ ಅಥವಾ ಗ್ರಿಲ್ ಇಲ್ಲದ ರೇಂಜ್ ರೋವರ್‌ಗಳನ್ನು ಯಾರೂ ಊಹಿಸಲಾಗುವುದಿಲ್ಲ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
EV ಕಾರುಗಳಲ್ಲಿ ಕಡಿಮೆ ಗ್ರಿಲ್ ವಿನ್ಯಾಸವನ್ನು ಒಪ್ಪಿಕೊಂಡು ಎಲೆಕ್ಟ್ರಿಕ್ ಕಾರ್ ಮಾಲೀಕರು ಸದ್ಯಕ್ಕೆ ರಾಜಿಯಾಗಬೇಕು ಅಷ್ಟೇ. ಇಲ್ಲದಿದ್ದರೇ EV ಖರೀದಿದಾರರು ಕಾಲ್ಪನಿಕ ಗ್ರಿಲ್ ವಿನ್ಯಾಸಗಳೊಂದಿಗೆ ಬರಲು ವಾಹನ ತಯಾರಕರನ್ನು ಒತ್ತಾಯಿಸಬೇಕಿದೆ. ಇದು ದೊಡ್ಡ ಕೆಲಸವೇನಲ್ಲ ಖಂಡಿತವಾಗಿಯೂ ಏರೋಡೈನಾಮಿಕ್ಸ್‌ನಲ್ಲಿ ರಾಜಿ ಮಾಡಿಕೊಳ್ಳದೆ ಆಸಕ್ತಿದಾಯಕ ಗ್ರಿಲ್ ವಿನ್ಯಾಸವನ್ನು ಮಾಡಬಹುದು.


Click it and Unblock the Notifications