Just In
- 1 hr ago
ಇಂದಿನಿಂದ ಸ್ಕಾರ್ಪಿಯೋ-ಎನ್ ಕಾರು ಮಾದರಿಯ ಟೆಸ್ಟ್ ಡ್ರೈವ್ ಆರಂಭಿಸಿದ ಮಹೀಂದ್ರಾ
- 1 hr ago
ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್
- 2 hrs ago
ನೀವು ಖರೀದಿಸಬಹುದಾದ ಅತ್ಯುತ್ತಮ ಸೆಕೆಂಡ್ ಹ್ಯಾಂಡ್ ಆಟೋಮ್ಯಾಟಿಕ್ ಹ್ಯಾಚ್ಬ್ಯಾಕ್ ಕಾರುಗಳಿವು...
- 3 hrs ago
ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ಪ್ರಮುಖ ವೆರಿಯೆಂಟ್ಗಳನ್ನು ತೆಗೆದುಹಾಕಿದ ನಿಸ್ಸಾನ್
Don't Miss!
- Lifestyle
ನೀವು ಯಾವ ಭಂಗಿಯಲ್ಲಿ ಮಲಗುತ್ತೀರಾ ಅದೇ ಹೇಳುತ್ತೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತಾ!
- News
ಐಎಎಸ್, ಐಪಿಎಸ್ ಅಧಿಕಾರಿಗಳ ಬಂಧನದ ಹಿಂದೆ ಒಂದೇ ಕಾರಣ?
- Sports
ನತದೃಷ್ಟ ಪಂತ್: ಈತ ಶತಕ ಬಾರಿಸಿದರೆ ಭಾರತಕ್ಕೆ ಸೋಲು ಖಚಿತ ಎನ್ನುತ್ತಿವೆ ಅಂಕಿಅಂಶಗಳು!
- Movies
'ಸ್ಮೋಕಿಂಗ್ ಕಾಳಿ' ಪೋಸ್ಟರ್ ತೆಗೆದುಹಾಕಲು ಕೆನಡಾದ ಭಾರತೀಯ ಹೈಕಮಿಷನ್ ಕೋರಿಕೆ!
- Finance
ಎಲ್ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ
- Technology
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
- Education
AIFD Recruitment 2022 : 5 ಪ್ಯಾಧ್ಯಾಪಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಈ ನಟನ ಬಳಿಯಿವೆ 45ಕ್ಕೂ ಹೆಚ್ಚು ಐಷಾರಾಮಿ ಕಾರುಗಳು, ಆದರೆ ಬಳಸುವುದು ಮಾತ್ರ ಕೆಲವನ್ನು!
ಬಹುತೇಕ ಹಾಲಿವುಡ್ ನಟ, ನಟಿಯರಿಗೆ ಕಾರುಗಳೆಂದರೆ ಬಹಳ ಇಷ್ಟ. ಮಾರುಕಟ್ಟೆಯಲ್ಲಿನ ಬಹುತೇಕ ಐಷಾರಾಮಿ ಕಾರಗಳನ್ನು ತಮ್ಮ ಗ್ಯಾರೇಜಿನಲ್ಲಿ ಸಂಗ್ರಹಿಸಿಟ್ಟಿರುತ್ತಾರೆ. ಅವುಗಳನ್ನು ಕೊಳ್ಳುವುದರ ಜೊತೆಗೆ ತಮ್ಮಿಷ್ಟದಂತೆ ಮಾಡಿಫೈ ಮಾಡಿಕೊಂಡು ಬಳಸುತ್ತಾರೆ. ಅಂತಹ ನಟರಲ್ಲಿ ಪೈರೇಟ್ಸ್ ಆಫ್ ದಿ ಕೆರಿಬಿಯನ್ ಸಿನಿಮಾ ಖ್ಯಾತಿಯ ಜಾನಿ ಡೆಪ್ ಕೂಡ ಒಬ್ಬರು.

ಜಾನಿ ಡೆಪ್ ಪೈರೇಟ್ಸ್ ಆಫ್ ದಿ ಕೆರಿಬಿಯನ್ ಸಿನಿಮಾದಲ್ಲಿ ಕ್ಯಾಪ್ಟನ್ ಜ್ಯಾಕ್ ಸ್ಪ್ಯಾರೋ ಪಾತ್ರವನ್ನು ನಿರ್ವಹಿಸುವ ಮೂಲಕ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇತ್ತೀಚೆಗೆ, ನಟ ತನ್ನ ಮಾಜಿ ಪತ್ನಿ ಮತ್ತು ನಟಿ ಅಂಬರ್ ಹರ್ಡ್ ಅವರೊಂದಿಗಿನ ವಿವಾಧ ಕೋರ್ಟ್ ಮೆಟ್ಟಿಲೇರಿತ್ತು ಇದೊಂದು ಬಿಟ್ಟರೇ ಈ ವರೆಗೆ ಡೆಪ್ ಮೇಲೆ ಯಾವುದೇ ವಿವಾದಗಳಿಲ್ಲ.

ಇನ್ನು ಜಾನಿ ಡೆಪ್ ಸಿನಿಮಾಗಳಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಸಾವಿರಾರು ಕ್ಯಾನ್ಸರ್ ಪೀಡತ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ, ಅನಾಥಶ್ರಮಗಳಿಗೆ ದನ ಸಹಾಯದಂತಹ ಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಈ ಎಲ್ಲದರ ನಡುವೆ ಅವರ ಐಷಾರಾಮಿ ಜೀವನ ಕೂಡ ಯಾವಾಗಲೂ ಸುದ್ದಿಯಲ್ಲಿರುತ್ತದೆ.

ಜಾನಿ ಡೆಪ್ ಅವರ ಕಾರು ಸಂಗ್ರಹವೂ ಹಾಗೆಯೇ ಐಷಾರಾಮಿ ಕಾರುಗಳಿಂದ ತುಂಬಿಹೋಗಿದೆ. ಹೊಸ ತಲೆಮಾರಿನ ಸ್ಪೋರ್ಟ್ಸ್ ಕಾರುಗಳು, SUV ಗಳು ಮತ್ತು ಕೆಲವು ವಿಂಟೇಜ್ ಮಾದರಿಗಳ ದೊಡ್ಡ ಸಂಗ್ರಹವನ್ನು ಹೊಂದಿದೆ. ಜಾನಿ ಡೆಪ್ ಕನಿಷ್ಠ 45 ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು.

ಹೆಚ್ಚು ದುಬಾರಿ ವಸ್ತುಗಳ ಪೈಕಿ ಡೆಪ್ ಐಷಾರಾಮಿ ವಿಹಾರ ನೌಕೆಯನ್ನು ಸಹ ಹೊಂದಿದ್ದಾರೆ ಎಂಬುದು ಗಮನಾರ್ಹ. ಬನ್ನಿ ಹಾಗಾದರೆ ಜಾನಿ ಡೆಪ್ ಬಳಿಯಿರುವ ಕಾರ್ ಕಲೆಕ್ಷನ್ ಬಗ್ಗೆ ತಿಳಿದುಕೊಳ್ಳೋಣ.

ಷೆವರ್ಲೆ ಕಾರ್ವೆಟ್
1959ರ ಷೆವರ್ಲೆ ಕಾರ್ವೆಟ್ ಜಾನಿ ಡೆಪ್ ಅವರ ಪ್ರಮುಖ ವಾಹನಗಳಲ್ಲಿ ಒಂದಾಗಿದೆ, ಇದು ಕ್ಯಾಪ್ಟನ್ ಜ್ಯಾಕ್ ಸ್ಪ್ಯಾರೋವನ್ನು ಪೈರೇಟ್ಸ್ ಆಫ್ ದಿ ಕೆರಿಬಿಯನ್‌ಗೆ ಪರಿಚಯಿಸಿತು. ದಿ ರಮ್ ಡೈರಿಯಲ್ಲಿನ ಪಾತ್ರಕ್ಕಾಗಿ ಡೆಪ್‌ಗೆ ಚಲನಚಿತ್ರ ನಿರ್ಮಾಪಕ ಗ್ರಹಾಂ ಕಿಂಗ್ ಈ ಕಾರನ್ನು ಉಡುಗೊರೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

ಇ ವಿಂಟೇಜ್ ಕಾರನ್ನು ಸಾಮಾನ್ಯ ಸ್ಟೀಲ್ ಬಾಡಿ ಬದಲಿಗೆ ಫೈಬರ್ ಗ್ಲಾಸ್ ಪ್ಲಾಸ್ಟಿಕ್ ನಿಂದ ಮಾಡಲಾಗಿದೆ. ಇದು ಆಕರ್ಷಕವಾಗಿರುದರ ಜೊತೆಗೆ ಪ್ರಯಾಣದ ವೇಳೆ ಉತ್ತಮ ಚಾಲಾನಾ ಅನುಭವ ನೀಡುತ್ತದೆ. ಡೆಪ್ ಕಾರ್ ಕಲೆಕ್ಷನ್‌ನಲ್ಲಿ ಅವರಿಗೆ ತುಂಬಾ ಇಷ್ಟವಾದ ಮಾದರಿಗಳಲ್ಲಿ ಇದು ಒಂದು.

ಪೋರ್ಷೆ 911 ಕ್ಯಾರೆರಾ ಎಸ್
ಈ ಕಂಪನಿಯು ಎರಡು ವರ್ಷಗಳಿಗೆ ಮಾತ್ರ ಪೋರ್ಷೆ 911 ಕ್ಯಾರೆರಾ ಎಸ್ ಮಾದರಿಯ ಕಾರುಗಳನ್ನು ಉತ್ಪಾದಿಸಿದ್ದು, ಆ ಸಮಯದಲ್ಲಿ ಕೇವಲ 3,687 ಘಟಕಗಳನ್ನು ಮಾತ್ರ ಉತ್ಪಾದಿಸಿದೆ. ಇದು ಸೀಮಿತ ಮಾದರಿಯಾಗಿದ್ದು, ಜಾನಿ ಡೆಪ್ ಈ ಕಾರನ್ನು ಹೊಂದಿದ್ದಾರೆ.

1980 ರಲ್ಲಿ ಬಿಡುಗಡೆಯಾದ ಈ ಕಾರು 3.0-ಲೀಟರ್ ಎಂಜಿನ್‌ನಿಂದ ಚಾಲಿತವಾಗಿದ್ದು 200 bhp ಶಕ್ತಿಯನ್ನು ಉತ್ಪಾದಿಸುತ್ತದೆ. ಕ್ಯಾರೆರಾ ಎಸ್ ಅನ್ನು ಸಂಪೂರ್ಣವಾಗಿ ಲೆದರ್-ಪ್ರೇರಿತ, ಹೀದರ್-ಶೇಡೆಡ್ ಡ್ಯಾಶ್‌ಬೋರ್ಡ್‌ನಿಂದ ಮಾಡಲಾಗಿದೆ.

ರೋಲ್ಸ್ ರಾಯ್ಸ್ ರೈಟ್
ರೋಲ್ಸ್ ರಾಯ್ಸ್ ರೈಟ್ ಅನ್ನು $ 330,000 ಗೆ ಸ್ವಾಧೀನಪಡಿಸಿಕೊಂಡ ಮೊದಲ ಗ್ರಾಹಕರಲ್ಲಿ ಡೆಪ್ ಕೂಡ ಒಬ್ಬರು. ಅತ್ಯಂತ ಶಕ್ತಿಶಾಲಿ ರೋಲ್ಸ್ ರಾಯ್ಸ್ ಮಾದರಿಗಳಲ್ಲಿ ರೈಟ್ ಕೂಡ ಒಂದಾಗಿದೆ. ಈ ಕಾರು 6.6-ಲೀಟರ್ V12 ಎಂಜಿನ್‌ನಿಂದ ನಿರ್ಮಿತವಾಗಿದ್ದು, 591 bhp ಪವರ್ ಅನ್ನು ಉತ್ಪಾದಿಸುತ್ತದೆ.

ರೋಲ್ಸ್ ರಾಯ್ಸ್ ರೈಟ್ ಕೇವಲ 4.4 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ / ಗಂ ವೇಗವನ್ನು ಪಡೆದುಕೊಳ್ಳುತ್ತದೆ. ಜೊತೆಗೆ, ಈ ಐಷಾರಾಮಿ ವಾಹನವು ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೌಕರ್ಯವನ್ನು ಒದಗಿಸುವ ವೈಶಿಷ್ಟ್ಯಗಳಿಂದ ಸಮೃದ್ಧವಾಗಿದೆ.

ಫೆರಾರಿ 488 ಸ್ಪೈಡರ್
ಕುತೂಹಲಕಾರಿಯಾಗಿ, ಜಾನಿ ಡೆಪ್ ಅವರ ಗ್ಯಾರೇಜ್‌ನಲ್ಲಿ ವಿಂಟೇಜ್ ಮಾತ್ರವಲ್ಲದೆ ಸ್ಪೋರ್ಟ್ಸ್ ಕಾರುಗಳೂ ಇವೆ. ಇದರಲ್ಲಿ ಫೆರಾರಿ 488 ಸ್ಪೈಡರ್ ಕೂಡ ಒಂದು ಮಾದರಿಯಾಗಿದ್ದು, ಜಾನಿ ಡೆಪ್ ಅವರ ಫೇವರೆಟ್ ಮಾದರಿಯಾಗಿದೆ. ಈ ಕಾರು 3.9 ಲೀಟರ್ ಟರ್ಬೋಚಾರ್ಜ್ಡ್ ವಿ8 ಎಂಜಿನ್ ಪಡೆದುಕೊಂಡಿದೆ.

ಇದು ಸ್ಪೋರ್ಟ್ಸ್ ಕಾರ್ ಆಗಿದ್ದು, ಗರಿಷ್ಠ 661 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಫೆರಾರಿ 488 ಸ್ಪೈಡರ್ ಕೇವಲ 3 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ / ಗಂ ವೇಗವನ್ನು ಮತ್ತು ಕೇವಲ 5.7 ಸೆಕೆಂಡುಗಳಲ್ಲಿ 200 ಕಿ.ಮೀ / ಗಂ ವೇಗವನ್ನು ತಲುಪುತ್ತದೆ.

ಲಿಂಕನ್ ನ್ಯಾವಿಗೇಟರ್
ಲಿಂಕನ್ ನ್ಯಾವಿಗೇಟರ್ US ಮಾರುಕಟ್ಟೆಯಲ್ಲಿನ ಅತಿದೊಡ್ಡ SUV ಗಳಲ್ಲಿ ಒಂದಾಗಿದೆ. ಈ ವಾಹನದಲ್ಲಿ 3.5-ಲೀಟರ್ V6 ಎಂಜಿನ್ 450 bhp ವರೆಗೆ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ. ಮತ್ತೊಂದು ವೈಶಿಷ್ಟ್ಯವೆಂದರೆ ಇದು ಆಲ್-ವೀಲ್ ಡ್ರೈವ್‌ನೊಂದಿಗೆ ಬರುತ್ತದೆ.

ನ್ಯಾವಿಗೇಟರ್‌ನ ಗೇರ್‌ಬಾಕ್ಸ್ ಕಾರ್ಯಗಳನ್ನು 10-ಸ್ಪೀಡ್ ಸ್ವಯಂಚಾಲಿತ ಘಟಕದಿಂದ ನಿರ್ವಹಿಸಲಾಗುತ್ತದೆ. ಮತ್ತೊಂದು ವೈಶಿಷ್ಟ್ಯವೆಂದರೆ ಈ SUVಯು 8 ಮಂದಿ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. ಲಿಂಕನ್ ನ್ಯಾವಿಗೇಟರ್ ಲುಕ್‌ನಲ್ಲೂ ಕ್ಲಾಸಿಯಾಗಿದ್ದು, ನೋಡುಗರನ್ನು ಹೆಚ್ಚು ಆಕರ್ಷಿಸುತ್ತದೆ.

ಮರ್ಸಿಡಿಸ್ ಮೇಬ್ಯಾಕ್ S650 ಕ್ಯಾಬ್ರಿಯೊಲೆಟ್
ಡೆಪ್ ಒಡೆತನದ Mercedes Maybach S650 Cabriolet 2016 ರಲ್ಲಿ ಬಿಡುಗಡೆಯಾದ ಮಾದರಿಯಾಗಿದೆ. ಈ ಕಾರು ಹೆಚ್ಚು ಐಷಾರಾಮಿಯಾಗಿದ್ದು, ಹಲವು ವಿನೂತನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Mercedes Maybach S650 Cabriolet 6.0-ಲೀಟರ್ V12 ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 630 bhp ಮತ್ತು 863 Nm ಟಾರ್ಕ್ ಅನ್ನು ಉತ್ಪಾದಿಸಬಲ್ಲದು. ವಿನ್ಯಾಸ ಕೂಡ ಹಚ್ಚು ಐಷಾರಾಮಿಯಿಂದ ಕೂಡಿದ್ದು, ಸಿನಿಮಾ ಶೂಟ್‌ಗಳಿಗೆ ಡೆಪ್ ಈ ವಾಹನವನ್ನು ಹೆಚ್ಚಾಗಿ ಬಳಸುತ್ತಾರೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಜಾನಿಡೆಪ್ ಅವರ ಈ ಐಷಾರಾಮಿ ವಾಹನಗಳ ಪಟ್ಟಿಯಲ್ಲಿ ಇನ್ನೂ ಹಲವು ಕಾರುಗಳಿವೆ. ಆದರೆ ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗದ ಕಾರಣ ಲೇಖನದಲ್ಲಿ ತಿಳಿಸಿಲ್ಲ. ಡೆಪ್ ಬಳಿ ಇರುವ ಕಾರುಗಳಲ್ಲಿ ಬಹುತೇಕ ವಾಹನಗಳು ಗ್ಯಾರೇಜ್‌ಗೆ ಸೀಮಿತವಾಗಿರತ್ತವೆ. ಕೆಲವನ್ನು ಮಾತ್ರ ಅವರು ಬಳಸುವುದರಿಂದ ಉಳಿದೆಲ್ಲವು ಷೋಗಷ್ಟೇ ಸೀಮಿತವಾಗಿವೆ.