ಇದೇ ಕಾರಣಕ್ಕೆ ಟೊಯೊಟಾ ಕಾರುಗಳಿಗೆ ಸಖತ್ ಬೇಡಿಕೆ...20 ಲಕ್ಷ ಕಿ.ಮೀ ಓಟ, ಇಂದಿಗೂ ಜಬರ್ದಸ್ತ್ ಕಂಡಿಷನ್

ಭಾರತದಲ್ಲಿ ಹಲವು ದೇಶೀಯ ಹಾಗೂ ವಿದೇಶಿ ಕಾರ್ ಬ್ರಾಂಡ್‌ಗಳಿದ್ದರೂ ಟೊಯೊಟಾ ಕಂಪನಿಯ ಕಾರುಗಳಿಗೆ ಮಾತ್ರ ಪ್ರತ್ಯೇಕ ಅಭಿಮಾನಿಗಳಿದ್ದಾರೆ. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಟೊಯೊಟಾ ಕಾರುಗಳು ಗ್ರಾಹಕರಲ್ಲಿ ಉತ್ತಮ ಹೆಸರು ಗಳಿಸಿವೆ. ಉತ್ತಮ ಪರ್ಫಾಮೆನ್ಸ್ ಜೊತೆಗೆ ಮಾಲೀಕರಿಗೆ ಅಷ್ಟು ಸುಲಭವಾಗಿ ಸಮಸ್ಯೆಗಳನ್ನು ತರುವುದಿಲ್ಲ ಎಂಬುದು ಮಾಲೀಕರ ಅನುಭವದ ಮಾತಾಗಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ ಈ ಕಂಪನಿಯ ಕಾರುಗಳು ಯಾವುದೇ ತೊಂದರೆ ನೀಡದೆ ಹಲವಾರು ಲಕ್ಷ ಕಿಲೋಮೀಟರ್ ಓಡುತ್ತವೆ. ಈ ಹಿಂದೆಯೂ ಭಾರತದಲ್ಲಿ ಹಲವರು ಮಾಲೀಕರಿಗೆ ತಮ್ಮ ಟೊಯೊಟಾ ಕಾರುಗಳು ಬಹು ಲಕ್ಷ ಕಿ.ಮೀ ದೂರ ಯಾವುದೇ ಸಮಸ್ಯೆ ಇಲ್ಲದೆ ಉತ್ತಮ ಸರ್ವಿಸ್ ನೀಡಿರುವ ಹಲವು ಉದಾಹರಣೆಗಳು ಇವೆ. ಭಾರತದಲ್ಲಿ ಟೊಯೊಟಾ ಇನ್ನೋವಾ ಕಾರೊಂದು ಈ ಹಿಂದೆ 10 ಲಕ್ಷ ಕಿಲೋಮೀಟರ್‌ಗಿಂತಲೂ ಹೆಚ್ಚು ಕ್ರಮಿಸಿರುವ ಬಗ್ಗೆ ವರದಿಯಾಗಿ ಸಖತ್ ವೈರಲ್ ಆಗಿತ್ತು.

ಇದೇ ಕಾರಣಕ್ಕೆ ಟೊಯೊಟಾ ಕಾರುಗಳಿಗೆ ಸಖತ್ ಬೇಡಿಕೆ...20 ಲಕ್ಷ ಕಿ.ಮೀ ಓಟ, ಇಂದಿಗೂ ಜಬರ್ದಸ್ತ್ ಕಂಡಿಷನ್

ಇದೀಗ ಆ ದಾಖಲೆಯನ್ನು ಮುರಿದು ಟೊಯೊಟಾ ಕೊರೊಲಾ ಕಾರು 20 ಲಕ್ಷ ಕಿಲೋಮೀಟರ್ ಗೂ ಹೆಚ್ಚು ಕ್ರಮಿಸಿದೆ ಎಂಬ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದೆ. ನ್ಯೂಜಿಲೆಂಡ್ ನಲ್ಲಿ ಈ ಬಗ್ಗೆ ವರಿಯಾಗಿದ್ದು, 1993ರ ಮಾಡೆಲ್‌ನ ನ್ಯೂಜಿಲೆಂಡ್‌ನ ಟೊಯೊಟಾ ಕೊರೊಲಾ ಇತ್ತೀಚೆಗೆ 20 ಲಕ್ಷ ಕಿಲೋಮೀಟರ್‌ಗಳ ಮೈಲಿಗಲ್ಲನ್ನು ದಾಟಿ ದಾಖಲೆ ನಿರ್ಮಿಸಿದೆ. ಕ್ರೀಮ್ ಹೆಬ್ಲಿ ಎಂಬುವವರು ಸುಮಾರು 30 ವರ್ಷದ ಈ ಟೊಯೊಟಾ ಕೊರೊಲಾದ ಮಾಲೀಕರಾಗಿದ್ದಾರೆ.

ವರದಿಗಳ ಪ್ರಕಾರ 20 ಲಕ್ಷ ಕಿಲೋಮೀಟರ್ ದಾಟಿದರೂ ಈ ಟೊಯೊಟಾ ಕೊರೊಲಾ ಕಾರಿನ ಎಂಜಿನ್ ಸುಸ್ಥಿತಿಯಲ್ಲಿದೆ. ಹಾಗಾಗಿ ಈ ಕಾರನ್ನು ಮುಂದಿನ ವರ್ಷವೂ ಓಡಿಸಲಾಗುವುದು ಎಂದು ಕ್ರೀಮ್ ಹೆಬ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ರೀಮ್ ಹೆಬ್ಲಿ ನ್ಯೂಜಿಲೆಂಡ್‌ನಲ್ಲಿ ಪತ್ರಿಕೆ ವಿತರಣಾ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಾರೆ. ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಿಂದ ಈ ಅದ್ಭುತ ಕಾರನ್ನು ಖರೀದಿಸಿರುವುದಾಗಿ ಅವರು ಹೇಳಿದ್ದಾರೆ.

2000 ರಲ್ಲಿ, ಕ್ರೀಮ್ ಹೆಬ್ಲಿ ಈ ಕಾರನ್ನು ತನ್ನದಾಗಿಸಿಕೊಂಡರು. ಆಗ ಈ ಕಾರು 80 ಸಾವಿರ ಕಿಲೋಮೀಟರ್ ಓಡಿತ್ತು. ಇದೀಗ 20 ಲಕ್ಷ ಕಿಲೋಮೀಟರ್ ದಾಟಿ ದಾಖಲೆ ನಿರ್ಮಿಸಿದೆ. ಟೊಯೊಟಾ ಕೊರೊಲಾ ಯಾವುದೇ ಪ್ರಮುಖ ಸಮಸ್ಯೆಗಳನ್ನು ಉಂಟುಮಾಡದೆ ಈ ಮೈಲಿಗಲ್ಲನ್ನು ದಾಟಿದೆ. ಆದರೆ ನಿಯಮಿತವಾಗಿ ಈ ಕಾರನ್ನು ಕ್ರೀಮ್ ಹೆಬ್ಲಿ ಸರ್ವಿಸ್ ಮಾಡಿಸಿದ್ದಾರೆ. ಹಾಗೆಯೇ ಕ್ರೀಮ್ ಹೆಬ್ಲಿ ಈ ಕಾರನ್ನು ಖರೀದಿಸಿ 22 ವರ್ಷಗಳಾಗಿವೆ, ಸದ್ಯ ಕ್ರೀಮ್ ಹೆಬ್ಲಿ ಅವರಿಗೆ 72 ವರ್ಷ ವಯಸ್ಸಾಗಿದೆ.

ಅವರು ಬರೋಬ್ಬರು 22 ವರ್ಷಗಳಿಂದ ಕಾರನ್ನು ನಿಯಮಿತವಾಗಿ ಸರ್ವಿಸ್ ಮಾಡಿಸಿ ಉತ್ತಮವಾಗಿ ನೊಡಿಕೊಂಡಿದ್ದಾರೆ. ಅಲ್ಲದೆ ಅವರು ಕಾರಿನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ. ಕಾಲಕಾಲಕ್ಕೆ ವೀಲ್ ಬೇರಿಂಗ್‌ಗಳು ಮತ್ತು ಕ್ಯಾಂಬೆಲ್ಟ್‌ಗಳನ್ನು ಮಾತ್ರ ಬದಲಾಯಿಸಲಾಗಿದೆ. ಒಂದೇ ಕಾರನ್ನು ನಿರಂತರವಾಗಿ ಓಡಿಸುವುದರಿಂದ ಯಾವುದೇ ರೀತಿಯ ಆಯಾಸ ಉಂಟಾಗುವುದಿಲ್ಲ ಎಂದು ಕ್ರೀಮ್ ಹೆಬ್ಲಿ ಹೇಳಿದ್ದಾರೆ. ಈ ಟೊಯೊಟಾ ಕೊರೊಲಾ ಕಾರಿನಲ್ಲಿ ಲಾಂಗ್-ಡ್ರೈವ್ ಕೂಡ ಹಲವು ಬಾರಿ ಹೋಗಿದ್ದೇನೆ ಎಂದು ಮಾಲೀಕ ಹೇಳಿಕೊಂಡಿದ್ದಾರೆ.

ಕಾರಿನ ವಿಶೇಷತೆಗಳು
ಕ್ರೀಮ್ ಹೆಬ್ಲಿಯ ಟೊಯೊಟಾ ಕೊರೊಲಾ 1.8 ಲೀಟರ್ ಇನ್‌ಲೈನ್ 4 ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ಗರಿಷ್ಠ 115 ಎಚ್‌ಪಿ ಪವರ್ ಮತ್ತು 156 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ. ಯಾವುದೇ ದೊಡ್ಡ ಸಮಸ್ಯೆಗಳಿಲ್ಲದೆ ಕಾರು 20 ಲಕ್ಷ ಕಿಲೋಮೀಟರ್ ಓಡುವುದು ಅಷ್ಟು ಸುಲಭದ ವಿಷಯವಲ್ಲ. ಇದೇ ಕಾರಣ್ಕಕೆ ಗ್ರಾಹಕರು ಟೊಯೊಟಾ ಕಾರುಗಳನ್ನು ಹೆಚ್ಚಾಗಿ ನಂಬುತ್ತಾರೆ.

ಆದರೆ ಕ್ರೀಮ್ ಹೆಬ್ಲಿಯಂತೆ ಕಾರುಗಳನ್ನು ನಿಯಮಿತವಾಗಿ ಸರ್ವಿಸ್ ಮಾಡಬೇಕಾಗುತ್ತದೆ. ಆಗ ಮಾತ್ರ ಕಾರು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಬಹಿರಂಗಪಡಿಸುತ್ತದೆ. ಇನ್ನು ಟೊಯೊಟಾ ಕೊರೊಲಾ ಕಾರಿನ ಬಗ್ಗೆ ಹೇಳುವುದಾದರೆ ಅತಿ ಹೆಚ್ಚು ಮಾರಾಟವಾಗುವ ಕಾರಾಗಿ ಗುರ್ತಿಸಿಕೊಂಡಿದೆ. ನೀವು ಹಿಂದೆಂದೂ ಈ ಕಾರಿನ ಬಗ್ಗೆ ಕೇಳಿಲ್ಲದಿದ್ದರೆ, ಇದರ ಬಗ್ಗೆ ಒಂದು ಉತ್ತಮ ಉದಾಹರಣೆ ನೀಡಬಹುದು. ಇದನ್ನು ನಮ್ಮ ದೇಶಿಯ ಹಿಂದೂಸ್ತಾನ್ ಅಂಬಾಸಿಡರ್ ಜೊತೆಗೆ ಹೋಲಿಕೆ ಮಾಡಬಹುದು.

ಆ ಮಟ್ಟಿಗೆ ಇದೊಂದು ಐತಿಹಾಸಿಕ ಕಾರಾಗಿ ಹೆಸರು ಮಾಡಿದೆ. ಟೊಯೊಟಾ ಕೊರೊಲಾ ಉತ್ಪಾದನೆಯು 1966 ರಲ್ಲಿ ಪ್ರಾರಂಭವಾಯಿತು. ಹಿಂದೂಸ್ತಾನ್ ಅಂಬಾಸಿಡರ್ ಅನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಟೊಯೊಟಾ ಕೊರೊಲಾ ಮಾತ್ರ ಇನ್ನೂ ಉತ್ಪಾದನೆಯಲ್ಲಿದೆ. ಅಂದರೆ ಈ ಕಾರು ಕಾಲ ಕಾಲಕ್ಕೆ ನವೀಕರಣಗೊಂಡು ಹೊಸ ಜನ್ ಮಾದರಿಯಾಗಿ ಮಾರುಕಟ್ಟೆಯಲ್ಲಿ ಇಂದಿಗೂ ಮುಂದುವರಿಯುತ್ತಿದೆ. ಇನ್ನು ಟೊಯೊಟಾ ಇತ್ತೀಚೆಗೆ ಇನ್ನೋವಾ ಹೈಕ್ರಾಸ್ ಅನ್ನು ಅನಾವರಣಗೊಳಿಸಿದ್ದು, ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಡ್ರೈವ್‌ಸ್ಪಾರ್ಕ್ ವೆಬ್ ತಾಣಕ್ಕೆ ಭೇಟಿ ನೀಡಿ.

Article Published On: Wednesday, December 14, 2022, 13:38 [IST]
English summary
This is why there is a strong demand for Toyota cars
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+