ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಭಾರತದಲ್ಲಿ ಟಾಟಾ ಉತ್ಪನ್ನಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಟಾಟಾ ಉತ್ಪನ್ನಗಳು ವಿಶ್ವಾಸಾರ್ಹವಾಗಿರುತ್ತವೆ, ಗ್ರಾಹಕರಿಗೆ ವಂಚನೆ ಮಾಡುವುದಿಲ್ಲ ಎಂಬುದು ಈಗಾಗಲೇ ಹಲವಾರು ಬಾರಿ ಸಾಭೀತಾಗಿದೆ. ಟಾಟಾದವರು ವಾಹನ ಉದ್ಯಮದಲ್ಲೂ ಪ್ರಮಾಣಿತ ಉತ್ಪನ್ನಗಳನ್ನು ನೀಡುತ್ತಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜೀಯಾಗುವುದಿಲ್ಲ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಹಾಗಾಗಿಯೇ ಭಾರತೀಯರು ಟಾಟಾ ಕಾರುಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ದೇಶದಲ್ಲಿ ಮೂರು ಟಾಟಾ ಕಾರುಗಳು ಪ್ರತಿ ತಿಂಗಳು ಅತಿಹೆಚ್ಚು ಮಾರಾಟವನ್ನು ದಾಖಲಿಸುತ್ತವೆ. ಈ ಮೂರು ಕಾರುಗಳನ್ನು ಭಾರತೀಯರು ಹೆಚ್ಚಾಗಿ ಖರೀದಿಸಲು ಏಕೆ ಇಷ್ಟಪಡುತ್ತಾರೆ ಎಂಬುದರ ಕುರಿತ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಕಳೆದ ಕೆಲವು ತಿಂಗಳುಗಳಲ್ಲಿ ಟಾಟಾ ಮೋಟಾರ್ಸ್ ಉತ್ಪನ್ನಗಳ ಬೇಡಿಕೆಯು ಹಲವಾರು ಪಟ್ಟು ಹೆಚ್ಚಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಕಂಪನಿಯ ನೆಕ್ಸಾನ್ ಮಾದರಿಯು ಜನರಲ್ಲಿ ಭಾರೀ ಬೇಡಿಕೆಯನ್ನು ಗಿಟ್ಟಿಸಿಕೊಂಡಿದೆ. ಇದಾದ ಬಳಿಕ ಪಂಚ್, ಟಿಯಾಗೊ ಸೇರಿದಂತೆ ಇತ್ತೀಚಿನ ಕಾರು ಮಾದರಿಗಳು ಜನರಿಂದ ಸ್ವಾಗತಿಸಲ್ಪಡುತ್ತಿವೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಈ ಮೂರು ಮಾದರಿಗಳು ಕಂಪನಿಯ ಹೆಚ್ಚು ಮಾರಾಟವಾಗುವ ಮಾದರಿಗಳಾಗಿದ್ದು, ಆಗಸ್ಟ್ 2022 ರಲ್ಲಿ ಭಾರೀ ಮಾರಾಟವನ್ನು ಟಾಟಾ ಮೋಟಾರ್ಸ್ ದಾಖಲಿಸಿದೆ. ಆಗಸ್ಟ್ 2021 ರ ತಿಂಗಳಿಗೆ ಹೋಲಿಸಿದರೆ ಈ ಬಾರಿಯ ಮಾರಾಟದಲ್ಲಿ ಭಾರೀ ಸುಧಾರಣೆ ಕಂಡಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಟಾಟಾ ನೆಕ್ಸನ್

ಟಾಟಾ ಮೋಟಾರ್ಸ್ ಭಾರತದಲ್ಲಿ ನಾಲ್ಕು SUV ಮಾದರಿಗಳನ್ನು ನೀಡುತ್ತದೆ. ಅವುಗಳೆಂದರೆ ಪಂಚ್, ನೆಕ್ಸನ್, ಹ್ಯಾರಿಯರ್ ಮತ್ತು ಸಫಾರಿ. ಈ ಪೈಕಿ ಟಾಟಾ ನೆಕ್ಸಾನ್ ಕಾರು ಮಾದರಿ ಭಾರತೀಯರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಪ್ರತಿ ತಿಂಗಳು ಖರೀದಿಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯರು ಈ ಕಾರಿಗೆ ಅದ್ಧೂರಿ ಸ್ವಾಗತ ನೀಡುತ್ತಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಇದನ್ನು ದೃಢೀಕರಿಸುವ ಸಲುವಾಗಿ, ಆಗಸ್ಟ್ 2022 ರಲ್ಲಿ ನೆಕ್ಸಾನ್ ನಂಬಲಾಗದ ಮಾರಾಟದ ಬೆಳವಣಿಗೆಯನ್ನು ಸಾಧಿಸಿದೆ. ಆಗಸ್ಟ್ 2022 ರಲ್ಲಿ 15,085 ಯೂನಿಟ್ ನೆಕ್ಸಾನ್ ಕಾರುಗಳನ್ನು ಮಾರಾಟ ಮಾಡಲಾಗಿದೆ. ಇದು ಆಗಸ್ಟ್ 2021 ಕ್ಕಿಂತ ಶೇ 51 ರಷ್ಟು ಹೆಚ್ಚಿನ ಮಾರಾಟದ ಅಂಕಿ ಅಂಶವಾಗಿದೆ. ನೆಕ್ಸಾನ್ ಕಳೆದ ವರ್ಷ ಆಗಸ್ಟ್‌ನಲ್ಲಿ ಕೇವಲ 10,006 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಭಾರತದ ಅತಿ ಹೆಚ್ಚು ಮಾರಾಟವಾಗುವ ವಾಹನ ತಯಾರಕರ ಪಟ್ಟಿಯಲ್ಲಿ ಹಿಂದೆ ಬಿದ್ದಿದ್ದ ಟಾಟಾ ಮೋಟಾರ್ಸ್ ಇದೀಗ ಟಾಟಾ ನೆಕ್ಸಾನ್‌ಗೆ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ಅಗ್ರಸ್ಥಾನಕ್ಕೆ ಏರಿದೆ. ಈ ವಾಹನವು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳಲ್ಲಿ ಲಭ್ಯವಿದೆ. ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಈ ಕಾರನ್ನು ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ನೀಡುವ ನಿರೀಕ್ಷೆಯಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಟಾಟಾ ಪಂಚ್

ಪಂಚ್ ಎಂಬುದು ಟಾಟಾ ಮೋಟಾರ್ಸ್‌ನ ಇತ್ತೀಚಿನ ಬಿಡುಗಡೆಯಾಗಿದೆ. ಕಂಪನಿಯು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಕಾರನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿತು. ಬಿಡುಗಡೆಯಾದ ಅತ್ಯಂತ ಕಡಿಮೆ ಅವಧಿಯಲ್ಲಿ (ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ) ಒಂದು ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಪಂಚ್ ಕಾರ್ ಆಗಸ್ಟ್ ನಲ್ಲಿಯೇ ಗುಣಮಟ್ಟದ ಮಾರಾಟವನ್ನು ಮಾಡಿದೆ. ಈ ಅದ್ಭುತ ಬೆಳವಣಿಗೆಯಿಂದಾಗಿ ಪಂಚ್ ಕಂಪನಿಯ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ಪಂಚ್ ಒಂದು ಮೈಕ್ರೋ SUV ಕಾರಾಗಿದ್ದು, ಇದು ಕೈಗೆಟುಕುವ ಕಾರಿನಂತೆಯೂ ಕಾಣುತ್ತದೆ. ಇದರಿಂದಾಗಿ ಪಂಚ್ ಕಾರಿನ ಮಾರಾಟ ಹೆಚ್ಚಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಸಂಕ್ಷಿಪ್ತವಾಗಿ ಹೇಳುವುದಾದರೆ, ಟಾಟಾ ಪಂಚ್ ಆಗಸ್ಟ್ 2022 ರಲ್ಲಿ 12,006 ಘಟಕಗಳನ್ನು ಮಾರಾಟ ಮಾಡಿದೆ. ಈ ವಾಹನವು ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಇಗ್ನಿಸ್‌ನಂತಹ ಸಣ್ಣ ಕಾರುಗಳೊಂದಿಗೆ ಸ್ಪರ್ಧಿಸುತ್ತದೆ. ಇದರ ಆರಂಭಿಕ ಬೆಲೆ ರೂ. 5.93 ಲಕ್ಷವಿದೆ. ಇದು ಎಕ್ಸ್ ಶೋರೂಂ ಬೆಲೆ ಮಾತ್ರ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಟಾಟಾ ಟಿಯಾಗೊ

ಪೆಟ್ರೋಲ್ ಮತ್ತು CNG ಮೋಟಾರ್ ಆಯ್ಕೆಗಳೊಂದಿಗೆ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿರುವ ಕಾರು ಮಾದರಿಗಳಲ್ಲಿ ಟಿಯಾಗೋ ಒಂದಾಗಿದೆ. ಟಾಟಾ ಮೋಟಾರ್ಸ್ ಈ ಕಾರನ್ನು ನೆಕ್ಸಾನ್‌ನಂತಹ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈಗಾಗಲೇ ಉತ್ತಮ ಮಾರಾಟದ ಬೆಳವಣಿಗೆಯನ್ನು ದ್ವಿಗುಣಗೊಳಿಸಲು ಟಿಯಾಗೋದ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸಲು ಟಾಟಾ ಮೋಟಾರ್ಸ್ ಸಿದ್ದತೆ ನಡೆಸುತ್ತಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಆಗಸ್ಟ್ 2022 ರಲ್ಲಿ ಟಿಯಾಗೋ ಕಾರುಗಳ 7,209 ಯುನಿಟ್‌ಗಳು ಮಾರಾಟವಾಗಿವೆ. ಇದು ಕಳೆದ ಆಗಸ್ಟ್ 2021 ಕ್ಕಿಂತ ಶೇ 27 ರಷ್ಟು ಹೆಚ್ಚು ಮಾರಾಟವಾಗಿದೆ. ಇದೇ ಕಾರು ಮಾದರಿಯು ಆಗಸ್ಟ್ 2021 ರಲ್ಲಿ ಕೇವಲ 5,658 ಯುನಿಟ್‌ಗಳನ್ನು ಮಾರಾಟ ಮಾಡಿರುವುದು ಗಮನಾರ್ಹವಾಗಿದೆ. ಈ ಹ್ಯಾಚ್ ಬ್ಯಾಕ್ ಕಾರು ಏಕಾಏಕಿ ಬಹುಪಟ್ಟು ಏರಿಕೆ ಕಂಡಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಅಂದಹಾಗೆ, ಕಾರಿನ ಕೈಗೆಟಕುವ ಬೆಲೆಯು ಈ ಕಾರಿನ ಜನಪ್ರಿಯತೆ ಹೆಚ್ಚಾಗಲು ಒಂದು ಕಾರಣವಾದರೂ, ಅದರ ಸುರಕ್ಷತೆ ಕೂಡ ಮತ್ತೊಂದು ಪ್ರಮುಖ ಕಾರಣವಾಗಿದೆ. ಕಾರಿನ ಸುರಕ್ಷತೆಯ ರೇಟಿಂಗ್‌ನಲ್ಲಿ ಟಿಯಾಗೋ ಐದರಲ್ಲಿ ನಾಲ್ಕು ಸ್ಟಾರ್‌ಗಳನ್ನು ಗಳಿಸಿದೆ. ಇಂತಹ ಅತ್ಯುತ್ತಮ ಗುಣಮಟ್ಟದಿಂದಾಗಿ ಮಾರಾಟವು ಬೆಳೆಯಲು ಪ್ರಾರಂಭಿಸಿದೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಟಾಟಾ ಮೋಟಾರ್ಸ್‌ನ ಟಾಪ್ 3 ಕಾರುಗಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕ್ಸಾನ್ ಮತ್ತು ಪಂಚ್ ಕಾರು ಮಾದರಿಗಳು ಟಾಟಾ ಟಿಯಾಗೊಗಿಂತ ಅತ್ಯಂತ ಸುರಕ್ಷಿತ ಕಾರುಗಳಾಗಿದ್ದು, ಈ ಎರಡೂ ಕಾರು ಮಾದರಿಗಳು ಟಿಯಾಗೋಗಿಂತ ಸುರಕ್ಷಿತವಾಗಿವೆ. ಈ ಎರಡೂ ಕಾರುಗಳು ಸುರಕ್ಷತಾ ರೇಟಿಂಗ್‌ನಲ್ಲಿ ಐದು ಸ್ಟಾರ್‌ಗಳಲ್ಲಿ ಐದು ಅಂಕಗಳನ್ನು ಗಳಿಸಿವೆ ಎಂಬುದು ಗಮನಿಸಬೇಕಾದ ಸಂಗತಿ.

Most Read Articles

Kannada
English summary
Top 3 best selling cars of Tata Motors in India
Story first published: Saturday, September 10, 2022, 16:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X