2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳಲಿರುವ ಟಾಪ್ 5 ಎಸ್‌ಯುವಿಗಳು
ಆಟೋಮೊಬೈಲ್ ಉದ್ಯಮಿಗಳು ಈ ವರ್ಷ ಹಲವು ಹೊಸ ವಾಹನಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಜನವರಿ 2023ರಲ್ಲಿ ಏಷ್ಯಾದ ಅತಿದೊಡ್ಡ ಆಟೋ ಎಕ್ಸ್‌ಪೋ ದೆಹಲಿಯಲ್ಲಿ ನಡೆಯಲಿದೆ. ಬಹಳಷ್ಟು ವಾಹನ ತಯಾರಕರು, ತಮ್ಮ ಹೊಸ ವಾಹನಗಳನ್ನು ಅನಾವರಣಗೊಳಿಸಲು ಕಾಯುತ್ತಿದ್ದಾರೆ. ಅಲ್ಲಿ ಪ್ರಮುಖವಾಗಿ ಬಿಡುಗಡೆಯಾಗಲಿರುವ ಎಸ್‌ಯುವಿಗಳ ಕುರಿತಂತೆ ಇಲ್ಲಿದೆ ಮಾಹಿತಿ.
ಮಾರುತಿ ಜಿಮ್ನಿ 5 ಡೋರ್:
ಈಗಾಗಲೇ ಮಾರುತಿ 5 ಡೋರ್ ಜಿಮ್ನಿಯನ್ನು ಹಲವು ಬಾರಿ ಪರೀಕ್ಷಿಸಲಾಗಿದ್ದು, ಇತ್ತೀಚೆಗೆ ಲೇಹ್‌ನಲ್ಲಿ ಪರೀಕ್ಷೆ ನಡೆಸುವಾಗ ಕಂಡುಬಂದಿತ್ತು. ಮಾರುತಿ ಸುಜುಕಿ ಜಿಮ್ನಿ ಮಹೀಂದ್ರಾ ಥಾರ್ ಮತ್ತು ಫೋರ್ಸ್ ಗೂರ್ಖಾಗೆ ತೀವ್ರ ಪೈಪೋಟಿ ನೀಡುತ್ತದೆ. ಜಿಮ್ನಿ 5 ಡೋರ್, 3-ಡೋರ್ ಜಿಮ್ನಿಗಿಂತ ಹೆಚ್ಚಿಗೆ ಸ್ಟೈಲಿಂಗ್ ಆಗಿ ಇರಲಿದ್ದು, 5 ಡೋರ್ ಆವೃತ್ತಿಯು 5-ಟ್ವಿನ್-ಸ್ಪೋಕ್ ಅಲಾಯ್ ವೀಲ್ ಗಳ ಜೊತೆಗೆ ದೊಡ್ಡದಾದ ಬಂಪರ್, ಎರಡು ತುದಿಗಳಲ್ಲಿ ಫಾಗ್ ಲೈಟ್ಸ್ ಮತ್ತು ಟೈಲ್ ಗೇಟ್-ಮೌಂಟೆಡ್ ಸ್ಪೇರ್ ವೀಲ್ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಒಳಾಂಗಣ ವೈಶಿಷ್ಠ್ಯಗಳ ಬಗ್ಗೆ ಹೇಳುವುದಾದರೆ, ಈ ಎಸ್‌ಯುವಿಯು ದೊಡ್ಡ ಟಚ್‌ಸ್ಕ್ರೀನ್, ವೈರ್‌ಲೆಸ್ ಆಪಲ್ ಕಾರ್ಪ್ಲೇ/ಆಂಡ್ರಾಯ್ಡ್ ಆಟೋ, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಚಾರ್ಜಿಂಗ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳನ್ನು ಹೊಂದಿರಲಿದೆ. ಮಾರುತಿ ಜಿಮ್ನಿ, 1.5-ಲೀಟರ್, 4-ಸಿಲ್, NA ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 100 bhp ಪವರ್ ಮತ್ತು 130 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ 5-ಡೋರ್ ಜಿಮ್ನಿ 4x4 ಸಿಸ್ಟಮ್ ನಲ್ಲಿಯೇ ಖರೀದಿಗೆ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್:
2023ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಈ ಕಾರನ್ನು ಇತ್ತೀಚೆಗೆ ದೇಶದ ರಸ್ತೆಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಈಗಾಗಲೇ ಹೊಸ ಎಸ್‌ಯುವಿಯ ವಿನ್ಯಾಸದ ಬಗ್ಗೆ ಹೇಳುವುದು ಕಷ್ಟ. ಮರು-ವಿನ್ಯಾಸಗೊಳಿಸಲಾದ ಹೆಡ್‌ಲ್ಯಾಂಪ್ ಸೆಟಪ್ ಹಾಗೂ ಅಲಾಯ್ ವೀಲ್ ಗಳು ಅನ್ನು ಹೊಂದಿರಲಿದೆ. ಇಷ್ಟೇಅಲ್ಲದೆ, ವಿಹಂಗಮ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ, ಹೆಡ್-ಅಪ್ ಡಿಸ್ಪ್ಲೇ ಮತ್ತು ADAS ತಂತ್ರಜ್ಞಾನದಂತಹ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳು ಇರಲಿವೆಯಂತೆ.
ಈ ಹೊಸ ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಎಸ್‌ಯುವಿ,1.4-ಲೀಟರ್ ಟರ್ಬೊ-ಪೆಟ್ರೋಲ್ ಜೊತೆಗೆ 6-ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಸಿಟಿ, 1.5-ಲೀಟರ್ ಎನ್‌ಎ ಪೆಟ್ರೋಲ್ ಜೊತೆಗೆ 6 -ಸ್ಪೀಡ್ MT, CVT ಮತ್ತು 6-ಸ್ಪೀಡ್ iMT ಮತ್ತು 1.5-ಲೀಟರ್ ಡೀಸೆಲ್ ಜೊತೆಗೆ 6-ಸ್ಪೀಡ್ MT ಮತ್ತು 6-ಸ್ಪೀಡ್ AT ಅನ್ನು ಒಳಗೊಂಡಿರಲಿದೆ. ಸದ್ಯ ಮಾರುಕಟ್ಟೆಯಲ್ಲಿ ಇರುವ ಕಿಯಾ ಸೆಲ್ಟೋಸ್ ಬೆಲೆ ರೂ.10.19 ಲಕ್ಷದಿಂದ ರೂ.18.45 ಲಕ್ಷದವರೆಗೆ (ಎಕ್ಸ್ ಶೋ ರೂಂ ದೆಹಲಿ) ಇದೆ. ಹೊಸ ಕಾರಿನ ಬೆಲೆ ಕನಿಷ್ಠ ರೂ.50,000 ದುಬಾರಿಯಾಗಬಹುದೆಂದು ಹೇಳಲಾಗಿದೆ.
ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್:
ನವೀಕರಿಸಿದ ಹುಂಡೈ ಕ್ರೆಟಾವನ್ನು ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿವ ನಿರೀಕ್ಷೆಯಿದೆ. ಹ್ಯುಂಡೈನ ಪ್ಯಾರಾಮೆಟ್ರಿಕ್ ಜ್ಯುವೆಲ್ ಗ್ರಿಲ್‌ನೊಂದಿಗೆ LED DRLಗಳನ್ನು ಒಳಗೊಂಡಿದ್ದು, ಒಳಾಂಗಣವು 10.25-ಇಂಚಿನ ಡಿಜಿಟಲ್ ಇನ್ಸ್ರುಮೆಂಟ್ ಕ್ಲಸ್ಟರ್, 8-ಇಂಚಿನ ಟಚ್‌ಸ್ಕ್ರೀನ್ ಹೆಡ್ ಯುನಿಟ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ವೈರ್‌ಲೆಸ್ ಚಾರ್ಜಿಂಗ್, ಪನೋರಮಿಕ್ ಸನ್‌ರೂಫ್, BOSE ಸ್ಪೀಕರ್‌ಗಳು, ಏರ್ ಪ್ಯೂರಿಫೈಯರ್ ಮತ್ತು ವೆಂಟಿಲೇಟೆಡ್ ಸೀಟ್‌ಗಳನ್ನು ಹೊಂದಿದೆ. 6-ಏರ್‌ಬ್ಯಾಗ್‌ಗಳು, ಫಾರ್ವರ್ಡ್ ಕೊಲಿಷನ್ ಅಸಿಸ್ಟ್, ಲೇನ್ ಫಾಲೋಯಿಂಗ್ ಅಸಿಸ್ಟ್, ಲೇನ್ ಕೀಪಿಂಗ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಕೊಲಿಶನ್ ಅಸಿಸ್ಟ್ ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಟಾಟಾ ಹ್ಯಾರಿಯರ್:
ಟಾಟಾ ಹ್ಯಾರಿಯರ್ ಎಸ್‌ಯುವಿಯನ್ನು 2019ರಲ್ಲಿ ಚೊಚ್ಚಲ ಬಾರಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಅದರ ವಿನ್ಯಾಸ ಹಾಗೂ ಪ್ರೀಮಿಯಂ ಲುಕ್ ಭಾರತೀಯ ಗ್ರಾಹಕರನ್ನು ತನ್ನತ್ತ ಸೆಳೆಯಿತು. ಬಿಡುಗಡೆಯಾದಾಗಿನಿಂದ ಈ ಕಾರು ಹಲವಾರು ಬಣ್ಣದ ಆಯ್ಕೆಗಳನ್ನು ಪಡೆದುಕೊಂಡಿದೆ. ಈಗಾಗಲೇ ನೂತನ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಕಾರಿನ ವಿನ್ಯಾಸ ಹಾಗೂ ವೈಶಿಷ್ಟ್ಯಗಳ ಬಗ್ಗೆ ಹೇಳುವುದು ಕಷ್ಟ. ಪ್ರಮುಖವಾಗಿ ADAS ವೈಶಿಷ್ಟ್ಯಗಳನ್ನು ಸೂಚಿಸುವ ಫ್ರಂಟ್ ರಾಡಾರ್ ಅನ್ನು ಸಹ ಹೊಂದಿದೆ. ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಇತರ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು ಹೊಂದಿರಲಿದೆಯಂತೆ.
ಹ್ಯಾರಿಯರ್ ಹಳೇಯ ಮಾದರಿಯಂತೆ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿರಬಹುದು. ಇದರಲ್ಲಿಯು ಫಿಯೆಟ್-ಸೌರ್ಸ್ಡ್ 2.0-ಲೀಟರ್ ಟರ್ಬೊ-ಡೀಸೆಲ್ ಜೊತೆಗೆ 6-ಸ್ಪೀಡ್ ಎಂಟಿ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಇರಲಿದೆ. ಅಲ್ಲದೆ, ಹೊಸ ಟಾಟಾ ಹ್ಯಾರಿಯರ್‌ಗೆ ಹೊಸ 1.5-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ಹ್ಯಾರಿಯರ್, ಎಂಜಿ ಹೆಕ್ಟರ್, ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಸ್ಕೋಡಾ ಕುಶಾಕ್, ವೋಕ್ಸ್‌ವ್ಯಾಗನ್ ಟೈಗನ್, ಎಂಜಿ ಆಸ್ಟರ್, ಟೊಯೊಟಾ ಹೈರೈಡರ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾಗೆ ಪೈಪೋಟಿ ನೀಡಲಿದೆ.
ಮಾರುತಿ ಬಲೆನೊ ಕ್ರಾಸ್:
ಈ ಕಾರನ್ನು ದೇಶದ ರಸ್ತೆಗಳಲ್ಲಿ ಹಲವು ಬಾರಿ ಪರೀಕ್ಷೆ ನಡೆಸಲಾಗಿದೆ. ಆಗ ಕೆಲವು ಚಿತ್ರಗಳು ಸೋರಿಕೆಯಾಗಿದ್ದು, ಅದರಲ್ಲಿ ಮುಂಭಾಗದ ಗ್ರಿಲ್ ಹೆಚ್ಚು ದೊಡ್ಡದಾಗಿ ಮತ್ತು ಅಗಲವಾಗಿ ಕಾಣುತ್ತದೆ.ಪವರ್‌ಟ್ರೇನ್ ಕುರಿತು ಹೇಳುವುದಾದರೆ ಬಲೆನೊ ಕ್ರಾಸ್ ಹಳೇಯ ಬಲೆನೊದಂತೆ 1.2-ಲೀಟರ್ 4 ಸಿಲಿಂಡರ್ ನ್ಯಾಚುರಲ್-ಆಸ್ಪಿರೇಟೆಡ್ K12C ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಹೊಂದುವ ನಿರೀಕ್ಷೆಯಿದ್ದು, ಈ ಎಂಜಿನ್ 90 bhp ಪವರ್ ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 5-ಸ್ಪೀಡ್ ಮ್ಯಾನ್ಯುವಲ್ ಅಥವಾ AMTನೊಂದಿಗೆ ಖರೀದಿಗೆ ಲಭ್ಯವಾಗಬಹುದು.


Click it and Unblock the Notifications








