20 ಲಕ್ಷದೊಳಗೆ ADAS ತಂತ್ರಜ್ಞಾನದೊಂದಿಗೆ ಮುಂಬರುವ ಟಾಪ್ 6 ಕಾರುಗಳು
ರಸ್ತೆ ಸುರಕ್ಷತೆಯ ದೃಷ್ಟಿಯಿಂದ ದೇಶದಲ್ಲಿ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ADAS (ಸುಧಾರಿತ ಚಾಲಕ-ಸಹಾಯ ವ್ಯವಸ್ಥೆ) ತಂತ್ರಜ್ಞಾನವನ್ನು ಅಳವಡಿಕೆ ಮಾಡುವುದನ್ನು ವಾಹನ ತಯಾರಕರು ಪ್ರಾರಂಭಿಸಿದ್ದಾರೆ. ಮೊದಲಿಗೆ ಈ ಆಧುನಿಕ ಸುರಕ್ಷತಾ ತಂತ್ರಜ್ಞಾನವು ಉನ್ನತ-ಮಟ್ಟದ ಐಷಾರಾಮಿ ಕಾರುಗಳಿಗೆ ಮಾತ್ರ ಸೀಮಿತವಾಗಿತ್ತು. ADASನೊಂದಿಗೆ ಮುಂಬರಲಿರುವ ಟಾಪ್ 6 ಕಾರುಗಳು ಇಲ್ಲಿವೆ.
ಹುಂಡೈ ಕ್ರೆಟಾ ಫೇಸ್‌ಲಿಫ್ಟ್:
ಎರಡನೇ ತಲೆಮಾರಿನ ಹ್ಯುಂಡೈ ಕ್ರೆಟಾ ಮಾರ್ಚ್ 2020ರಲ್ಲಿ ಮಾರುಕಟ್ಟೆಯಲ್ಲಿ ಎಂಟ್ರಿಕೊಟ್ಟಿತು. ಇದೀಗ ಅದು ಫೇಸ್‌ಲಿಫ್ಟ್ ರೂಪದಲ್ಲಿ ಮುಂಬರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳಲಿದೆ. ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ರಿಯರ್ ಕ್ರಾಸ್-ಟ್ರಾಫಿಕ್ ಡಿಕ್ಕಿ, ಬ್ಲೈಂಡ್ ಸ್ಪಾಟ್ ಮಾನಿಟರ್ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಹೊಸ ಕ್ರೆಟಾ, ADAS ತಂತ್ರಜ್ಞಾನದೊಂದಿಗೆ ಬರಲಿದೆ. ಈ ಕಾರು ಬೂಮರಾಂಗ್-ಆಕಾರದ LED ಟೈಲ್‌ಲೈಟ್‌ಗಳು, ಹೊಸದಾಗಿ ವಿನ್ಯಾಸಗೊಳಿಸಲಾದ 17-ಇಂಚಿನ ಅಲಾಯ್ ವೀಲ್ಸ್ ಅನ್ನು ಹೊಂದಿರಲಿದೆ.

ಈ ಕಾರು ವೈರ್‌ಲೆಸ್ Apple CarPlay, Android ಆಟೋ ಜೊತೆಗೆ ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು, ಇದು ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಪಡೆದುಕೊಂಡಿರಲಿದೆ. ಬಹುನಿರೀಕ್ಷಿತ ಕ್ರೆಟಾ, 1.5-ಲೀಟರ್ MPi ಪೆಟ್ರೋಲ್, 1.5-ಲೀಟರ್ CRDi ಡೀಸೆಲ್ ಮತ್ತು 1.4-ಲೀಟರ್ tGDi ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ iMT, 6-ಸ್ಪೀಡ್ IVT ಮತ್ತು 7-ಸ್ಪೀಡ್ DCT ಯುನಿಟ್ ಮೂಲಕ ಟ್ರಾನ್ಸ್ಮಿಷನ್ ಕೆಲಸಗಳನ್ನು ಮಾಡುತ್ತದೆ.
ಕಿಯಾ ಕಾರ್ನೀವಲ್:
ಫೇಸ್‌ಲಿಫ್ಟ್ ಕಿಯಾ ಕಾರ್ನಿವಲ್ ಅನ್ನು 2021ರಲ್ಲಿ ಜಾಗತಿಕವಾಗಿ ಅನಾವರಣಗೊಳಿಸಲಾಯಿತು. ಆದರೆ, ಅದರ ಭಾರತದಲ್ಲಿನ ಬಿಡುಗಡೆ ದಿನಾಂಕದ ಬಗ್ಗೆ ಕಾರು ತಯಾರಕರು ಇನ್ನೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಮುಂದಿನ ವರ್ಷದಲ್ಲಿ ಬರುವ ನಿರೀಕ್ಷೆಯಿದೆ. ಕಾರ್ನಿವಲ್ ಎಂಪಿವಿ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ) ತಂತ್ರಜ್ಞಾವನ್ನು ಹೊಂದಿದೆ. ಜೊತೆಯಲ್ಲಿ ಹೈ ಬೀಮ್ ಅಸಿಸ್ಟ್ (HBA), ಬ್ಲೈಂಡ್-ಸ್ಪಾಟ್ ಕೊಲಿಷನ್ ವಾರ್ನಿಗ್, (BCW) ಬ್ಲೈಂಡ್-ಸ್ಪಾಟ್ ಕೊಲ್ಲಿಸನ್-ಅವಾಯಿಡೆನ್ಸ್ (BCA), ಲೇನ್ ಕೀಪಿಂಗ್ ಅಸಿಸ್ಟ್ (LKA), ಲೇನ್ ಫಾಲೋಯಿಂಗ್ ಅಸಿಸ್ಟ್, ಸ್ಮಾರ್ಟ್ ಕ್ರೂಸ್ ಕಂಟ್ರೋಲ್ (SCC) ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ ಕಾರ್ನೀವಲ್ 5155ಎಂಎಂ ಉದ್ದ, 1995ಎಂಎಂ ಅಗಲ ಮತ್ತು 1775ಎಂಎಂ ಎತ್ತರವನ್ನು ಹೊಂದಿದ್ದು, ಜಾಗತಿಕವಾಗಿ, ಕಾರ್ನಿವಲ್ 3.5L V6 MPi ಪೆಟ್ರೋಲ್ ಎಂಜಿನ್ ಹೊಂದಿದೆ. ಅಲ್ಲದೆ, 2.2L ಸ್ಮಾರ್ಟ್ ಸ್ಟ್ರೀಮ್ ಮತ್ತು 3.5L GDi V6 ಸ್ಮಾರ್ಟ್ ಸ್ಟ್ರೀಮ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಭಾರತದಲ್ಲಿ, ಕಿಯಾ ಕಾರ್ನಿವಲ್ 200 bhp ಪವರ್ ಮತ್ತು 440 Nm ಟಾರ್ಕ್ ಉತ್ಪಾದಿಸುವ 2.2L ಡೀಸೆಲ್ ಮೋಟಾರ್‌ನೊಂದಿಗೆ ಸಿಗುವ ಸಾಧ್ಯತೆಯಿದ್ದು, 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಹೊಂದಿರಲಿದೆ.
ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್:
ಇತ್ತೀಚೆಗೆ ಕಿಯಾ ಸೆಲ್ಟೋಸ್‌ನ ಫೇಸ್‌ಲಿಫ್ಟ್ ಆವೃತ್ತಿಯನ್ನು ವಿದೇಶದಲ್ಲಿ ಬಿಡುಗಡೆ ಮಾಡಲಾಯಿತು. ಕಿಯಾ ಇಂಡಿಯಾ ದೇಶೀಯ ಮಾರುಕಟ್ಟೆಯಲ್ಲೂ ಫೇಸ್‌ಲಿಫ್ಟ್ ಆವೃತ್ತಿಯನ್ನು ಪರಿಚಯಿಸಲು ಸಿದ್ಧವಾಗುತ್ತಿದೆ. ಹೊಸದಾಗಿ ವಿನ್ಯಾಸಗೊಳಿಸಿದ ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ ಗಳನ್ನು ಗ್ರಿಲ್ ವಿಭಾಗಕ್ಕೂ ವಿಸ್ತರಿಸಲಾಗಿದೆ. ನವೀಕರಿಸಿದ ಕಿಯಾ ಸೆಲ್ಟೋಸ್ ಹ್ಯುಂಡೈ ಕ್ರೆಟಾದಂತೆಯೇ ADAS ವೈಶಿಷ್ಟ್ಯಗಳನ್ನು ಹೊಂದಿದ್ದು, ಈ ಎಸ್‌ಯುವಿ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿದೆ.
ಟಾಟಾ ಹ್ಯಾರಿಯರ್:
ಮರುಕಟ್ಟೆಗೆ ಟಾಟಾ ಹ್ಯಾರಿಯರ್ 2019ರಲ್ಲಿ ಚೊಚ್ಚಲ ಬಾರಿಗೆ ಪ್ರವೇಶಿಸಿತು. ಈಗಾಗಲೇ ಹಲವಾರು ಬಣ್ಣಗಳು ಮತ್ತು ಆವೃತ್ತಿಗಳನ್ನು ಹೊಂದಿದ್ದು, ಇದೀಗ ದೊಡ್ಡ ಫೇಸ್‌ಲಿಫ್ಟ್ ಆಗಿದೆ. ಎಲ್ಲಾ ಪ್ರಮುಖ ADAS ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇಷ್ಟೇಅಲ್ಲದೆ, ಈ ಎಸ್‌ಯುವಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್, ಟ್ರಾಫಿಕ್ ಸೈನ್ ರೆಕಗ್ನಿಷನ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಡ್ರೋಸಿನೆಸ್ ಅಲರ್ಟ್ ಸಿಸ್ಟಮ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಕಾರು 17-ಇಂಚಿನ ಅಲಾಯ್ ವೀಲ್ಸ್ ಗಳ ಹೊಸ ಸೆಟ್ ಅನ್ನು ಪಡೆದುಕೊಂಡಿದ್ದು, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುವ ನಿರೀಕ್ಷೆಯಿದ್ದು, 360-ಡಿಗ್ರಿ ಕ್ಯಾಮೆರಾ, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಬಹುದು. ನವೀಕರಿಸಿದ ಹ್ಯಾರಿಯರ್ ಅದೇ ಫಿಯೆಟ್-ಸೌರ್ಸ್ಡ್ 2.0-ಲೀಟರ್ ಡೀಸೆಲ್ ಎಂಜಿನ್ ಮೂಲಕ ಚಾಲಿತವಾಗಲಿದ್ದು, ಇದು 170 bhp ಪವರ್ ಮತ್ತು 350 Nm ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೆಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ.
ಟಾಟಾ ಸಫಾರಿ ಫೇಸ್‌ಲಿಫ್ಟ್
ಇತ್ತೀಚೆಗೆ ದೇಶದ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವ ಕಂಡುಬಂದಿದ್ದ ಟಾಟಾ ಸಫಾರಿ ಫೇಸ್‌ಲಿಫ್ಟ್, ADAS (ಅಡ್ವಾನ್ವೆಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ವೈಶಿಷ್ಟ್ಯ ಹೊಂದಿರುವ ಸಾಧ್ಯತೆಯಿದೆ. ಈ ಎಸ್‌ಯುವಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್, ಟ್ರಾಫಿಕ್ ಸೈನ್ ರೆಕಗ್ನಿಷನ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಡ್ರೋಸಿನೆಸ್ ಅಲರ್ಟ್ ಸಿಸ್ಟಮ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಟಾಟಾ ಮೋಟಾರ್ಸ್ ಹೊಸ 1.5-ಲೀಟರ್ ರೆವೊಟ್ರಾನ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ನವೀಕರಿಸಿದ ಸಫಾರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು.
ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್:
ನವೀಕರಿಸಿದ ಹುಂಡೈ ವೆರ್ನಾ ಇತ್ತೀಚೆಗೆ ಭಾರತದ ರಸ್ತೆಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿತು. LED DRLಗಳು, ಮುಂಭಾಗ ಮತ್ತು ಹಿಂಭಾಗದ ಎಲ್ಇಡಿ ಲೈಟಿಂಗ್ ಮತ್ತು ಡ್ಯುಯಲ್-ಟೋನ್ ಅಲಾಯ್ ವೀಲ್ಸ್ ಪಡೆಯುವ ನಿರೀಕ್ಷೆಯಿದ್ದು, ಹ್ಯುಂಡೈ ವೆರ್ನಾ ಫೇಸ್‌ಲಿಫ್ಟ್ ಕ್ರೆಟಾದಂತೆಯೇ ADAS ವೈಶಿಷ್ಟ್ಯಗಳನ್ನು ಹೊಂದಿರಬಹುದು. ಸೆಡಾನ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್, ರಿಯರ್ ಕ್ರಾಸ್-ಟ್ರಾಫಿಕ್ ಡಿಕ್ಕಿ, ಬ್ಲೈಂಡ್ ಸ್ಪಾಟ್ ಮಾನಿಟರ್ ಅನ್ನು ಸಹ ಹೊಂದಿರಲಿದೆ.


Click it and Unblock the Notifications








