Just In
- 42 min ago
ಆಕರ್ಷಕದ ವಿನ್ಯಾಸದಲ್ಲಿ ಹ್ಯುಂಡೈ ಐಯಾನಿಕ್ ಎಲೆಕ್ಟ್ರಿಕ್ ಕಾರು ಅನಾವರಣ
- 1 hr ago
ಮಳೆಯಲ್ಲಿ ಬೈಕ್ ಚಾಲನೆ ಮಾಡುವ ಸವಾರರು ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ
- 1 hr ago
ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ವೆನ್ಯೂ ಎನ್-ಲೈನ್
- 2 hrs ago
ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಹೊಸ ಟೊಯೊಟಾ ಹೈರೈಡರ್ ಎಸ್‌ಯುವಿ
Don't Miss!
- Finance
ಡಾಲರ್ ಎದುರು ಮತ್ತೆ ಸಾರ್ವಕಾಲಿತ ಕುಸಿತ ಕಂಡ ರೂಪಾಯಿ
- Sports
Ind vs Eng 5ನೇ ಟೆಸ್ಟ್: ತನ್ನ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹನುಮ ವಿಹಾರಿ ಹೇಳಿದ್ದೇನು?
- News
ಹೆಂಡತಿಯಿಂದ ಡೈವೋರ್ಸ್ ನಿರಾಕರಣೆ, ಮಾವನಿಗೆ ಬೆಂಕಿಯಿಟ್ಟ ಭೂಪ..!
- Movies
ದಿವ್ಯಾಗೆ ಸತ್ಯ ಹೇಳಿ ಸಿಕ್ಕಿ ಬಿದ್ದ ಬಾಲ!
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Lifestyle
ಫಸ್ಟ್ ಟೈಮ್ ಪ್ರೆಗ್ನೆನ್ಸಿ?ನೀವು ತಿಳಿಯಲೇಬೇಕಾದ ಸಂಗತಿಗಳಿವು
- Education
Kolar District Court Recruitment 2022 : 32 ಜವಾನ ಮತ್ತು ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ವಾರದ ಸುದ್ದಿಗಳು: ಟಾಟಾ ಅವಿನ್ಯಾ ಇವಿ ಅನಾವರಣ, ಬಿಡುಗಡೆಯಾಗಲಿದೆ ಹ್ಯುಂಡೈ ಐಯಾನಿಕ್ 5 ಇವಿ..
ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಇವಿ ಕಾರುಗಳ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಈ ವಾರದ ಪ್ರಮುಖ ಆಟೋಮೊಬೈಲ್ ಸುದ್ದಿಗಳಲ್ಲಿ ಟಾಟಾ ಅವಿನ್ಯಾ ಕಾನ್ಸೆಪ್ಟ್ ಅನಾವರಣ ಮತ್ತು ಪ್ರಮುಖ ಕಾರುಗಳ ಬಿಡುಗಡೆ ಸುದ್ದಿಗಳಿದ್ದು, ಕೆಳಗಿನ ಸ್ಲೈಡ್‌ಗಳಲ್ಲಿ ಮತ್ತಷ್ಟು ಮಾಹಿತಿಗಳೊಂದಿಗೆ ಒಂದೊಂದಾಗಿ ನೋಡೋಣ.

ಟಾಟಾ ಅವಿನ್ಯಾ ಇವಿ ಕಾನ್ಸೆಪ್ಟ್ ಅನಾವರಣ
ಹೊಸ ಟಾಟಾ ಅವಿನ್ಯಾ ಕಾನ್ಸೆಪ್ಟ್ ಇವಿ ಕಾರು ಎಸ್‌ಯುವಿ ವಿನ್ಯಾಸವನ್ನು ಪಡೆದುಕೊಂಡಿದ್ದು, ಇದು ಆಕರ್ಷಕ ಮತ್ತು ಸ್ಪೋರ್ಟಿಯಾಗಿ ಕಾಣುತ್ತದೆ. ಕಾನ್ಸೆಪ್ಟ್ ಕರ್ವ್ ಇವಿ ಕಾರು ಮಾದರಿಗಿಂತಲೂ ಸುಧಾರಿತ ಅಂಶಗಳನ್ನು ಒಳಗೊಂಡಿರುವ ಹೊಸ ಕಾನ್ಸೆಪ್ಟ್ ಕಾರು ಇವಿ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿದ್ದು, ಹೊಸ ಕಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಮೂಲಕ ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ಖಾತ್ರಿಪಡಿಸುತ್ತದೆ.

ಮೂರನೇ ತಲೆಮಾರಿನ ಹೊಸ ಇವಿ ಕಾರು ಮಾದರಿಗಳಾಗಿ ಕಂಪನಿಯು ತನ್ನ ಸುಧಾರಿತ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಬಳಕೆ ಮಾಡಲಿದ್ದು, ಹೊಸ ಪ್ಲಾಟ್‌ಫಾರ್ಮ್ ಆಧರಿಸಿರುವ ಹೊಸ ಕಾರುಗಳು 2026ರ ವೇಳೆಗೆ ಮಾರುಕಟ್ಟೆ ಪ್ರವೇಶಿಸಲಿವೆ.

ಸದ್ಯ ಒಂದೇ ತಲೆಮಾರಿನ ಇವಿ ಕಾರುಗಳನ್ನು ಮಾರಾಟ ಮಾಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು 2024ರಿಂದ ಎರಡನೇ ತಲೆಮಾರಿನ ಕಾರುಗಳನ್ನು ಮತ್ತು 2026ರಿಂದ ಮೂರನೇ ತಲೆಮಾರಿನ ಕಾರುಗಳನ್ನು ರಸ್ತೆಗಿಳಿಸಲಿದೆ.

ಟೆಸ್ಲಾ ಕಾರು ಬಿಡುಗಡೆ ಯೋಜನೆಗೆ ಖಡಕ್ ಸಲಹೆ ನೀಡಿದ ಕೇಂದ್ರ ಸಚಿವ
ಅಮೆರಿಕಾದ ಜನಪ್ರಿಯ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಟೆಸ್ಲಾ ಕಳೆದ ಕೆಲವು ತಿಂಗಳುಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಕಾರನ್ನು ಬಿಡುಗಡೆ ಮಾಡುವ ಕಸರತ್ತು ನಡೆಸುತ್ತಿದ್ದು, ತೆರಿಗೆ ವಿಚಾರವಾಗಿ ಕೇಂದ್ರ ಸರ್ಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದೆ.

ಟೆಸ್ಲಾ ಕಂಪನಿಯು ಭಾರತದಲ್ಲಿಯೇ ತನ್ನ ಕಾರ್ಖಾನೆ, ಮಳಿಗೆಗಳನ್ನು ಸ್ಥಾಪಿಸಲು, ಕಾರುಗಳನ್ನು ಮಾರಾಟ ಮತ್ತು ರಫ್ತು ಯೋಜನೆ ಕೈಗೊಂಡರೆ ಸ್ವಾಗತಿಸುವುದಾಗಿ ಸ್ಪಷ್ಟಪಡಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಚೀನಾದಲ್ಲಿರುವ ತನ್ನ ಉತ್ಪಾದನಾ ಘಟಕದಿಂದ ಕಾರುಗಳನ್ನು ಆಮದು ಮಾಡಿಕೊಂಡ ಭಾರತದಲ್ಲಿ ಮಾರಾಟಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಬಿಡುಗಡೆಯಾಗಲಿದೆ ಐಯಾನಿಕ್ 5 ಎಲೆಕ್ಟ್ರಿಕ್ ಕಾರು
ಹ್ಯುಂಡೈ ಕಂಪನಿಯು ಬಿಡುಗಡೆ ಮಾಡಲಿರುವ ಆರು ಹೊಸ ಎಲೆಕ್ಟ್ರಿಕ್ ಕಾರುಗಳ ಪೈಕಿ ಐಯಾನಿಕ್ 5 ಕ್ರಾಸ್ಓವರ್ ಎಸ್‌ಯುವಿ ಮಾದರಿಯು ಕೂಡಾ ಒಂದಾಗಿದ್ದು, ಹೊಸ ಕಾರು ಮಾದರಿಯನ್ನು ಹ್ಯುಂಡೈ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗೆ ಪರಿಚಯಿಸುತ್ತಿದೆ.

ಪ್ರತಿ ಚಾರ್ಜ್‌ಗೆ 488 ಕಿ.ಮೀ ಮೈಲೇಜ್ ಪ್ಯಾಕ್‌ನೊಂದಿಗೆ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳಿಗೆ ಸಮನಾದ ಫೀಚರ್ಸ್ ಹೊಂದಿರವ ಹೊಸ ಐಯಾನಿಕ್ 5 ಕಾರು ಭಾರತದಲ್ಲಿ ರೂ.35 ಲಕ್ಷದಿಂದ ರೂ.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಈ ವರ್ಷದ ಮೂರನೇ ತ್ರೈಮಾಸಿಕ ಅವಧಿಗೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಸ್ಕೋಡಾ ಕುಶಾಕ್ ಹೊಸ ವೆರಿಯೆಂಟ್
ಪ್ರೀಮಿಯಂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲಿ ಸದ್ಯ ಹೊಸ ಸಂಚಲನಕ್ಕೆ ಕಾರಣವಾಗಿರುವ ಕುಶಾಕ್ ಕಾರು ಮಾದರಿಯು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಮಧ್ಯಮ ಕ್ರಮಾಂಕದಲ್ಲಿರುವ ಆಂಬಿಷನ್ ಮಾದರಿಯಲ್ಲಿ ಕ್ಲಾಸಿಕ್ ವೆರಿಯೆಂಟ್ ಬಿಡುಗಡೆ ಮಾಡಿದೆ.

ಕುಶಾಕ್ ಆಂಬಿಷನ್ ಕ್ಲಾಸಿಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಮ್ಯಾನುವಲ್ ಮಾದರಿಗೆ ರೂ. 12.69 ಲಕ್ಷ ಮತ್ತು ಆಟೋಮ್ಯಾಟಿಕ್ ಮಾದರಿಗೆ ರೂ. 14.09 ಲಕ್ಷ ನಿಗದಿಪಡಿಸಿದ್ದು, ಹೊಸ ಮಾದರಿಗಳಲ್ಲಿ 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರ ನೀಡಲಾಗಿದೆ.

ಹೊಸ ಟೈರ್ ಪರಿಚಯಿಸಿದ ಬ್ರಿಡ್ಜ್‌ಸ್ಟೋನ್
ಟೈರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಜಪಾನ್ ಮೂಲದ ಬ್ರಿಡ್ಜ್‌ಸ್ಟೋನ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಮಾದರಿಯ ಟೈರ್ ಉತ್ಪಾದಿಸುತ್ತಿದ್ದು, ಕಂಪನಿಯು ಇತ್ತೀಚೆಗೆ ತನ್ನ ಹೊಸ ಟೈರ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ಕಂಪನಿಯ ಹೊಸ ಡ್ರೈವ್ ಗಾರ್ಡ್ ಪ್ಲಸ್ ಕಾರ್ ಟೈರ್‌ಗಳು ಆಟೋ ಉದ್ಯಮದಲ್ಲಿ ಹೊಸ ಭರವಸೆ ಹುಟ್ಟುಹಾಕಿದ್ದು, ಟ್ಯೂಬ್ ಲೆಸ್ ವೈಶಿಷ್ಟ್ಯತೆಯೊಂದಿಗೆ ಪಂಚರ್ ಆದ ನಂತರವೂ ಸುಮಾರು 80 ಕಿಲೋ ಮೀಟರ್ ವರೆಗೆ ಯಾವುದೇ ತೊಂದರೆ ಇಲ್ಲದೆ ಕಾರು ಚಾಲನೆ ಮಾಡಬಹುದಾದ ಟೈರ್ ಅಭಿವೃದ್ದಿಪಡಿಸಿದೆ.

ಬ್ರಿಡ್ಜ್‌ಸ್ಟೋನ್ ಕಂಪನಿಯು ಹೊಸ ಟೈರ್ ಅನ್ನು ಪಂಚರ್ ಗಾರ್ಡ್ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳಿಸಿದ್ದು, ಎಲ್ಲಾ ರೀತಿಯ ರಸ್ತೆಗಳಲ್ಲೂ ಮತ್ತು ಹವಾಮಾನದಲ್ಲೂ ಇದು ಚಾಲನೆಗೆ ಸೂಕ್ತವಾಗಿದೆ ಎಂದಿದೆ. ಪ್ರಸ್ತುತ ಈ ಹೊಸ ಟೈರ್ ಯುಎಸ್ ಮತ್ತು ಕೆನಡಾದಲ್ಲಿ ಗ್ರಾಹಕರಿಗೆ ಮಾತ್ರ ಖರೀದಿಗೆ ಲಭ್ಯವಿದ್ದು, ಮುಂಬರುವ ದಿನಗಳಲ್ಲಿ ವಿಶ್ವಾದ್ಯಂತ ಮಾರಾಟಕ್ಕೆ ಲಭ್ಯವಿರಲಿವೆ.

ಟಾಟಾ ಹ್ಯಾರಿಯರ್ ಹೊಸ ಬಣ್ಣದ ಆಯ್ಕೆ
ಟಾಟಾ ಕಂಪನಿಯ ಹೊಸ ದರಪಟ್ಟಿಯಲ್ಲಿ ಹ್ಯಾರಿಯರ್ ಕಾರು ಮಾದರಿಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 9,600 ರಿಂದ ರೂ.18,400 ತನಕ ಬೆಲೆ ಹೆಚ್ಚಳ ಪಡೆದುಕೊಂಡಿದ್ದು, ಹ್ಯಾರಿಯರ್ ಮಾದರಿಯಲ್ಲಿ ಇದೀಗ ರಾಯಲ್ ಬ್ಲ್ಯೂ ಮತ್ತು ಟೊಪಿಕಲ್ ಮಿಸ್ಟ್ ಎನ್ನುವ ಎರಡು ಹೊಸ ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ.

ಕಾರುಗಳ ಮಾರಾಟದಲ್ಲಿ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿರುವ ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಬಿಡುಗಡೆಯಾಗಲಿರುವ ಟಾಟಾ ಹೊಸ ಕಾರುಗಳಲ್ಲಿ ಹ್ಯಾರಿಯರ್ ಪೆಟ್ರೋಲ್ ಮಾದರಿಯು ಸಹ ಪ್ರಮುಖವಾಗಿದೆ.

ಎಲೆಕ್ಟ್ರಿಕ್ ಬಸ್ ಟೆಂಡರ್ ಪಡೆದುಕೊಂಡ ಟಾಟಾ
ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ದೇಶದ ಬೃಹತ್ ಟೆಂಡರ್‌ವೊಂದನ್ನು ತನ್ನದಾಗಿಸಿಕೊಂಡಿದೆ. ಬೃಹತ್ ಒಪ್ಪಂದವು ಸುಮಾರು 5,000 ಕೋಟಿ ರೂ. ಮೌಲ್ಯದ್ದಾಗಿದ್ದು, CESL (ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್) ನಿಂದ ಅತಿದೊಡ್ಡ ಪೂರೈಕೆ ಬೇಡಿಕೆ ಅನ್ನು ಸ್ವೀಕರಿಸಿದೆ.

CESL ಇತ್ತೀಚೆಗೆ 5,450 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಟೆಂಡರ್ ಅನ್ನು ಘೋಷಿಸಿತು. ಇದಕ್ಕಾಗಿ ಹಲವು ಪ್ರಮುಖ ವಾಹನ ತಯಾರಕರು ಅರ್ಜಿ ಸಲ್ಲಿಸಿದ್ದರು. ಆದರೆ ಇತರೆ ಕಂಪನಿಗಳು ಟಾಟಾ ಮೋಟಾರ್ಸ್‌ಗಿಂತಲೂ ಕಡಿಮೆ ಮೌಲ್ಯದ ಅರ್ಜಿ ಸಲ್ಲಿಸದ ಕಾರಣ ಈ ಬೃಹತ್ ಆರ್ಡರ್ ಈಗ ಟಾಟಾ ಮೋಟಾರ್ಸ್ ಪಾಲಾಗಿದೆ. ಹೊಸ ಯೋಜನೆ ಅಡಿಯಲ್ಲಿ ಸಿಇಎಸ್ಎಲ್ ಸಂಸ್ಥೆಯು ದೆಹಲಿ, ಬೆಂಗಳೂರು, ಕೋಲ್ಕತ್ತಾ, ಹೈದರಾಬಾದ್ ಮತ್ತು ಸೂರತ್‌ನ ಐದು ಪ್ರಮುಖ ನಗರಗಳಲ್ಲಿ 5,450 ಬಸ್‌ಗಳನ್ನು ನಿಯೋಜಿಸಲಿದೆ.