2022ರಲ್ಲಿ ಬಿಡುಗಡೆಯಾದ ಟಾಪ್ 5 ಕಾರು: ಯಾವುದು ಬೆಸ್ಟ್?

ಭಾರತದ ಮಾರುಕಟ್ಟೆಯಲ್ಲಿ 2022ರಲ್ಲಿ ಹಲವು ಕಾರು ಮತ್ತು ಮೋಟಾರ್‌ಸೈಕಲ್ ಲಾಂಚ್ ಆಗಿದ್ದವು. ಇವು ಗ್ರಾಹಕರನ್ನು ಸೆಳೆಯಲು ಯಶಸ್ವಿಯು ಆಗಿದ್ದವು. ಹಲವು ಇವಿಗಳು ತನ್ನದೇ ಆದ ಛಾಪು ಸಹ ಮೂಡಿಸಿದ್ದವು. ಇಲ್ಲಿ ಈ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಟಾಪ್ 5 ಕಾರುಗಳ ಬಗ್ಗೆ ತಿಳಿಸಿಕೊಡಲಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ ಎನ್:
2022ರ ಬಹುನಿರೀಕ್ಷಿತ ಕಾರು ಮಹೀಂದ್ರಾ ಸ್ಕಾರ್ಪಿಯೋ ಎನ್ ಕೂಡ ಒಂದಾಗಿದೆ. ಈ ಎಸ್‌ಯುವಿ ಸಾಲಿಡ್ ಪವರ್‌ಟ್ರೇನ್ ಆಯ್ಕೆಗಳನ್ನು ಹೊಂದಿದ್ದು, ಬಹಳಷ್ಟು ವೈಶಿಷ್ಟ್ಯಗಳೊಂದಿಗೆ ಮತ್ತು ಗ್ಲೋಬಲ್ NCAPನಿಂದ 5-ಸ್ಟಾರ್ ಸುರಕ್ಷತಾ ರೇಟಿಂಗ್‌ ಅನ್ನು ಪಡೆದುಕೊಂಡಿದೆ. ಇದರಿಂದ ಸ್ಕಾರ್ಪಿಯೊ ಎನ್ ಎಸ್‌ಯುವಿ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ. ಇದರ ಕೆಲವು ರೂಪಾಂತರಗಳಿಗಾಗಿ 16 ತಿಂಗಳುಗಳಿಗಿಂತ ಹೆಚ್ಚು ಅವಧಿ ಕಾಯಬೇಕಾಗಿದೆ. ಪ್ರಸ್ತುತ, ಹೊಸ ಮಹೀಂದ್ರಾ ಸ್ಕಾರ್ಪಿಯೊ ಎನ್ ಬೆಲೆ 11.99 ಲಕ್ಷದಿಂದ 21.65 ಲಕ್ಷದವರೆಗೆ (ಎಕ್ಸ್ ಶೋ ರೂಂ, ಭಾರತ) ಇದೆ.

2022ರಲ್ಲಿ ಬಿಡುಗಡೆಯಾದ ಟಾಪ್ 5 ಕಾರು: ಯಾವುದು ಬೆಸ್ಟ್?

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ:
ದೇಶೀಯ ಮಾರುಕಟ್ಟೆಗೆ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಬಿಡುಗಡೆಯೊಂದಿಗೆ, ಕಂಪನಿಯು ಸ್ಪರ್ಧಾತ್ಮಕ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಯನ್ನು ಪರಿಚಯಿಸಿತು. ಇದು ಇಂಡೋ-ಜಪಾನೀಸ್ ವಾಹನ ತಯಾರಕ ಕಂಪನಿಯಾಗಿರುವ ಮಾರುತಿ ಸುಜುಕಿ ನೇರವಾಗಿ ಹ್ಯುಂಡೈ ಕ್ರೆಟಾ ಎಸ್‌ಯುವಿಯೊಂದಿಗೆ ಪೈಪೋಟಿ ನೀಡಲು ಅವಕಾಶ ಮಾಡಿಕೊಟ್ಟಿತು. ಅಲ್ಲದೆ, ಈ ಎಸ್‌ಯುವಿಗೆ ಬೇಡಿಕೆಯು ಭಾರತದಲ್ಲಿ ಲಾಂಚ್ ಮಾಡಿದಾಗಿನಿಂದಲೂ ಸ್ಥಿರವಾಗಿ ಹೆಚ್ಚುತ್ತಿದೆ ಎಂದು ಹೇಳಬಹುದು.

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಆಲ್-ವೀಲ್-ಡ್ರೈವ್ ಆಯ್ಕೆಯೊಂದಿಗೆ ಬರುವ ಮೊದಲ ಎಸ್‌ಯುವಿ ಆಗಿದೆ. ಅತ್ಯುತ್ತಮ ವೈಶಿಷ್ಟ್ಯ ಹಾಗೂ ವಿನ್ಯಾಸಗಳನ್ನು ಹೊಂದಿದೆ. ಬೆಲೆಗೆ ಸಂಬಂಧಿಸಿದಂತೆ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಎಸ್‌ಯುವಿಯ ಬೇಸ್ 'ಸಿಗ್ಮಾ' ರೂಪಾಂತರವು ರೂ.10.45 ಲಕ್ಷ (ಎಕ್ಸ್ ಶೋ ರೂಂ, ಭಾರತ) ಆಗಿದೆ. ಆದರೆ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಟಾಪ್-ಸ್ಪೆಕ್ 'ಆಲ್ಫಾ ಪ್ಲಸ್' ರೂಪಾಂತರದ ಬೆಲೆ ರೂ.19.65 ಲಕ್ಷ ಇದೆ ಎಂದು ಹೇಳಬಹುದು.

ಮಹೀಂದ್ರಾ XUV300:
ಭಾರತದ ಮಾರುಕಟ್ಟೆಯಲ್ಲಿ ಮಹೀಂದ್ರಾ ಕಂಪನಿ ಅಂತಿಮವಾಗಿ ಬಹುನಿರೀಕ್ಷಿತ ಮಹೀಂದ್ರಾ XUV300 TurboSport ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಹೊರಭಾಗದಲ್ಲಿ ಹೆಚ್ಚು ಬದಲಾಗಿಲ್ಲವಾದರೂ, ಬಾನೆಟ್ ಅಡಿಯಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ಮಾಡಿದ್ದಾರೆ. ತನ್ನ ವಿಭಾಗದಲ್ಲಿ ಅತ್ಯಂತ ಬಲಿಷ್ಠ ಎಸ್‌ಯುವಿ ಆಗಿದೆ. ಮಹೀಂದ್ರಾ XUV300 1.2-ಲೀಟರ್, 3-ಸಿಲಿಂಡರ್, ಡೈರೆಕ್ಟ್-ಇಂಜೆಕ್ಷನ್, ಟರ್ಬೋಚಾರ್ಜ್ಡ್ ಎಂಜಿನ್ ಅನ್ನು ಸ್ಟ್ಯಾಂಡರ್ಡ್ ಮಾಡೆಲ್‌ನೊಂದಿಗೆ ಬಂದಿದ್ದರೂ, 128.2 bhp ಪವರ್ ಮತ್ತು 230 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಕಿಯಾ EV6:
ಭಾರತದಲ್ಲಿ ತನ್ನ ನಿರೀಕ್ಷಿತ ಖರೀದಿದಾರರನ್ನು ಹೊಂದುವುದರಲ್ಲಿ ಈ ಕಿಯಾ EV6 ಯಶಸ್ವಿಯಾಯಿತು. ಈ ಎಲೆಕ್ಟ್ರಿಕ್ ವಾಹನವು ಬಹಳ ಬೇಗ ಮಾರಾಟವಾಯಿತು. ಇದು ಕೆಲವು ಅತ್ಯಂತ ವೇಗದ ಸ್ಪೋರ್ಟ್ಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನಿಂತಿದೆ. ಇದಲ್ಲದೆ, ಕಿಯಾ EV6 ಭಾರತದಲ್ಲಿ ಕಂಪನಿಯ ಮೊದಲ ಮತ್ತು ಏಕೈಕ ಎಲೆಕ್ಟ್ರಿಕ್ ವಾಹನವಾಗಿದೆ. ಇದರ ಬೆಲೆ ರೂ.59.95 ಲಕ್ಷ (ಎಕ್ಸ್ ಶೋರೂಂ, ಭಾರತ) ಇದೆ.ಯಾ EV6 ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ 3.5 ಸೆಕೆಂಡುಗಳಲ್ಲಿ 100km/h ತಲುಪಲಿದ್ದು, 260km/h ಟಾಪ್ ಸ್ವೀಡ್ ಅನ್ನು ಹೊಂದಿದೆ.

ಟಾಟಾ ಟಿಯಾಗೊ EV:
ಭಾರತದ ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಕೇವಲ ಒಂದೇ ದಿನದಲ್ಲಿ 10,000 ಬುಕಿಂಗ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿತು. ಈ ಮೂಲಕ ಇವಿ ಹೊಸ ಬುಕಿಂಗ್ ನಲ್ಲಿ ತನ್ನದೇ ಆದ ದಾಖಲೆಯನ್ನು ನಿರ್ಮಿಸಿತು. ಟಾಟಾ ಟಿಯಾಗೊ ಇವಿ ಬೆಲೆ 8.49 ಲಕ್ಷ ರೂ (ಎಕ್ಸ್ ಶೋ ರೂಂ) ಇದೆ. ಟಿಯಾಗೊ ಎರಡು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದ್ದು, 19.2kWh ಬ್ಯಾಟರಿ ಪ್ಯಾಕ್ ಮತ್ತು 60 bhp ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟರ್, ಟಾಪ್ ಎಂಡ್ ರೂಪಾಂತರವು 74 bhp ಎಲೆಕ್ಟ್ರಿಕ್ ಮೋಟಾರ್, ದೊಡ್ಡ 24kWh ಬ್ಯಾಟರಿ ಪ್ಯಾಕ್‌ ಅನ್ನು ಹೊಂದಿದೆ.

ಈ ವರ್ಷ (2022) ಆಟೋಮೊಬೈಲ್ ಉದ್ಯಮವು ಉತ್ತಮವಾಗಿ ಪ್ರಗತಿ ದಾಖಲಿಸಿದೆ. ದೇಶದಲ್ಲಿ ಅನೇಕ ಅತ್ಯಾಕರ್ಷಕ ಕಾರು ಮತ್ತು ಮೋಟಾರ್‌ಸೈಕಲ್ ಬಿಡುಗಡೆ ಆಗುತ್ತಿವೆ. ಆದಾಗ್ಯೂ, ಮೇಲಿನ ಪಟ್ಟಿ ಮಾಡಲಾದ ಐದು ಕಾರುಗಳು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಪ್ರಭಾವ ಬೀರಿದೆ ಎಂದು ಹೇಳಬಹುದು. ಇಷ್ಟೇ ಅಲ್ಲದೆ, 2023 ಜನವರಿಯಲ್ಲಿ ದೆಹಲಿಯಲ್ಲಿ ಬಹುದೊಡ್ಡ ಆಟೋ ಎಕ್ಸ್ಪೋ ನಡೆಯಲಿದ್ದು, ಅಲ್ಲಿ ಮತ್ತಷ್ಟು ಹೊಸ, ಕಾರು, ಬೈಕ್ ಅನಾವರಣಗೊಳ್ಳುವ ಸಾಧ್ಯತೆಯಿದೆ.

More from DriveSpark

Article Published On: Friday, December 23, 2022, 11:35 [IST]
English summary
Top five cars launched in 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+