ಸಿಂಗಲ್ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ಜಪಾನಿನ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ಹೊಸ ಬಿಝಡ್ 3 (bZ3 EV) ಎಲೆಕ್ಟ್ರಿಕ್ ಕಾರನ್ನು ಬಹಿರಂಗಪಡಿಸಿದೆ. ಈ ಹೊಸ ಟೊಯೋಟಾ bZ3 ಜಪಾನಿನ ಕಾರು ತಯಾರಕರ bZ ಶ್ರೇಣಿಯ ಎರಡನೇ EV ಆಗಿದ್ದು, ಇದರಲ್ಲಿ ಮೊದಲನೆಯದು bZ4X ಆಗಿದೆ.

600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ಪ್ರಸ್ತುತ ಚೀನೀ ಮಾರುಕಟ್ಟೆಗೆ ಸೀಮಿತವಾಗಿರುವ ಹೊಸ ಟೊಯೊಟಾ bZ3 ಕಾರನ್ನು ಚೀನೀ ಸಂಸ್ಥೆಗಳಾದ BYD (ಇವಿ ಕಾರು ತಯಾರಕ ಕಂಪನಿ) ಮತ್ತು FAW (ಫಸ್ಟ್ ಆಟೋಮೊಬೈಲ್ ವರ್ಕ್ಸ್) ಟೊಯೋಟಾ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಈ ಕಾರನ್ನು ಸ್ಟೈಲಿಷ್ ಡಿಸೈನ್ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ.

600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ವಿನ್ಯಾಸ, ಉತ್ಪಾದನೆ, ಎಂಜಿನಿಯರಿಂಗ್ ಮತ್ತು ಗುಣಮಟ್ಟ ನಿಯಂತ್ರಣ ವಿಭಾಗಗಳಿಂದ 100 ಕ್ಕೂ ಹೆಚ್ಚು ಟೊಯೊಟಾ ಎಂಜಿನಿಯರ್‌ಗಳು bZ3 ಕಾರಿನ ಅಭಿವೃದ್ಧಿಯಲ್ಲಿ ಕೆಲಸ ಮಾಡಿದ್ದಾರೆ. BYD ಮತ್ತು FAW ಎಂಜಿನಿಯರ್‌ಗಳು ಕೂಡ ಈ ಹೊಸ ಕಾರಿನ ನಿರ್ಮಾಣಕ್ಕಾಗಿ ಕೈಜೋಡಿಸಿದ್ದಾರೆ.

600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ಟೊಯೊಟಾ bZ3 ಅನ್ನು ವಿಶ್ವದ ಅತಿದೊಡ್ಡ EV ಮಾರುಕಟ್ಟೆಯಲ್ಲಿ FAW ಟೊಯೊಟಾ ಮಾರಾಟ ಮಾಡಲಿದೆ. ಈ ಮೂಲಕ ಇದು ಟೊಯೊಟಾ ಮತ್ತು ಚೀನೀ ಸಂಸ್ಥೆಯಾದ ಫಸ್ಟ್ ಆಟೋಮೊಬೈಲ್ ವರ್ಕ್ಸ್ ನಡುವಿನ ಜಂಟಿ ಉದ್ಯಮವಾಗಲಿದೆ.

600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ಈ ಹೊಸ ಕಾರಿಗಾಗಿ ಬ್ಲೇಡ್ LFP ಬ್ಯಾಟರಿ ಪ್ಯಾಕ್ ಅನ್ನು BYD ಒದಗಿಸಿದ್ದು, ಇದು ಚೀನಾ ಲೈಟ್-ಡ್ಯೂಟಿ ವೆಹಿಕಲ್ ಟೆಸ್ಟ್ ಸೈಕಲ್ (CLTC) ಪ್ರಕಾರ ಒಂದೇ ಚಾರ್ಜ್‌ನಲ್ಲಿ 600 ಕಿಲೋಮೀಟರ್‌ಗಿಂತಲೂ ಹೆಚ್ಚಿನ ಮೈಲೇಜ್ ನೀಡಲು ಸಹಾಯ ಮಾಡುತ್ತದೆ.

600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

BZ3 ಯ ಎಲೆಕ್ಟ್ರಿಕ್ ವ್ಯವಸ್ಥೆಯು BYD ಯ LFP ಬ್ಯಾಟರಿಗಳನ್ನು ಸಂಯೋಜಿಸುತ್ತದೆ. ಈ ಬ್ಯಾಟರಿಯು ಬೃಹತ್ ಮೈಲೇಜ್ ಸಾಧಿಸಲು ದೀರ್ಘಾವಧಿಯ HEV (Hybrid electric vehicle) ಅಭಿವೃದ್ಧಿಯ ಮೂಲಕ ತನ್ನ ಸ್ವಂತ ವ್ಯಾಪಕವಾದ ಎಲೆಕ್ಟ್ರಿಕ್ ತಂತ್ರಜ್ಞಾನಗಳನ್ನು ಒಳಗೊಂಡಿದೆ ಎಂದು ಟೊಯೋಟಾ ಹೇಳಿಕೊಂಡಿದೆ.

600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ಬ್ಯಾಟರಿ ರಚನೆ, ಕೂಲಿಂಗ್, ನಿಯಂತ್ರಣ ಮತ್ತು ಸುರಕ್ಷತಾ ಮಾನಿಟರಿಂಗ್ ಸಿಸ್ಟಮ್‌ಗಳನ್ನು bZ3 ಗಾಗಿ ಹೊಸದಾಗಿ ವಿನ್ಯಾಸಗೊಳಿಸಲಾಗಿದೆ. 10 ವರ್ಷಗಳ ನಂತರವೂ bZ3 ಬ್ಯಾಟರಿ ಪ್ಯಾಕ್ ತನ್ನ ಸಾಮರ್ಥ್ಯದ ಶೇ90 ರಷ್ಟನ್ನು ಉಳಿಸಿಕೊಳ್ಳುತ್ತದೆ ಎಂದು ಟೊಯೋಟಾ ಹೇಳಿದೆ.

600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

BYD ಹೊಸ ಟೊಯೋಟಾ bZ3 ಗೆ ಶಕ್ತಿ ನೀಡುವ 'TZ200-XS002' ಮೋಟಾರ್ ಅನ್ನು ಸಹ ಒದಗಿಸುತ್ತದೆ. ಈ ಮೋಟರ್‌ನ ಉಪಸ್ಥಿತಿಯನ್ನು ವರ್ಷದ ಆರಂಭದಲ್ಲಿ ಚೀನಾದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು bZ3 ಗಾಗಿ ಪಟ್ಟಿಮಾಡಿದೆ.

600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ಚೀನೀ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ಎಲೆಕ್ಟ್ರಿಕ್ ಮೋಟಾರ್ ಅನ್ನು bZ3 - 178 ಅಥವಾ 238hp ನಲ್ಲಿ ಎರಡು ಶಕ್ತಿಯ ಹಂತಗಳೊಂದಿಗೆ ನೀಡಲಾಗುವುದು ಎಂದು ಬಹಿರಂಗಪಡಿಸಿದೆ. ಎರಡೂ ರೂಪದಲ್ಲಿ bZ3 EV ಯ ಗರಿಷ್ಠ ವೇಗವು 160km/h ಗೆ ಸೀಮಿತವಾಗಿರುತ್ತದೆ.

600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ಇನ್ನು ಹೊಸ bZ3 ಉದ್ದಳತೆಗಳ ಬಗ್ಗೆಯು ಟೊಯೋಟಾ ಬಹಿರಂಗಪಡಿಸಿದೆ. ಈ ಕಾರು 4,725mm ಉದ್ದ, 1,835mm ಅಗಲ ಮತ್ತು 1,475mm ಎತ್ತರವನ್ನು ಹೊಂದಿದೆ. ಅಲ್ಲದೇ ಟೊಯೊಟಾ bZ3 ವ್ಹೀಲ್‌ಬೇಸ್ 2,880mm ಇದೆ. ಉಳಿದಂತೆ ಇದು e-TNGA EV ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ವಿನ್ಯಾಸದ ವಿಷಯದಲ್ಲಿ, bZ3 ಹ್ಯಾಮರ್‌ಹೆಡ್ ಶಾರ್ಕ್ ತರಹದ ಮುಂಭಾಗದ ವಿನ್ಯಾಸವನ್ನು ಹೊಂದಿದೆ, ಅದು bZ4x ನಲ್ಲಿಯೂ ಕಂಡುಬರುತ್ತದೆ. bZ3 ನ ಹೊರಭಾಗದಲ್ಲಿರುವ ಇತರ ವಿನ್ಯಾಸದ ವೈಶಿಷ್ಟ್ಯಗಳು ಫ್ಲಾಟ್ ಡೋರ್ ಹ್ಯಾಂಡಲ್‌ಗಳು, ಅಲ್ಯೂಮಿನಿಯಂ ವೀಲ್‌ಗಳು ಮತ್ತು ಏರ್‌ ರೆಸಿಸ್ಟನ್ಸ್ ಅನ್ನು ಕಡಿಮೆ ಮಾಡಲು ಹಿಂಭಾಗದ ಬಂಪರ್ ಅನ್ನು ಒಳಗೊಂಡಿವೆ.

600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ಟೊಯೊಟಾ bZ3 ನ ಒಳಭಾಗವು ಎಲೆಕ್ಟ್ರಿಕ್ ಕಾರಿನ ಹೆಚ್ಚಿನ ಕಾರ್ಯಗಳನ್ನು ನಿಯಂತ್ರಿಸುವ ದೊಡ್ಡ ಫೋಟೋ-ಆಧಾರಿತ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಹೊಂದಿದೆ. ಚಾಲಕನ ಡಿಸ್ಪ್ಲೇ ಸ್ಟೀರಿಂಗ್ ವೀಲ್ ಹಿಂದಿನ ಡ್ಯಾಶ್ ಬೋರ್ಬ್ ಮೇಲೆ ಇರುತ್ತದೆ.

600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ಇನೋವಾ ಹೈಕ್ರಾಸ್ ಟೀಸರ್ ಬಿಡುಗಡೆ

ಮುಂಬರುವ ಇನೋವಾ ಹೈಕ್ರಾಸ್ ಕಾರಿನ ಟೀಸರ್ ಅನ್ನು ಕಂಪನಿಯು ಮೊದಲ ಬಾರಿಗೆ ಬಿಡುಗಡೆಗೊಳಿಸಿದೆ. ಇನೋವಾ ಹೈಕ್ರಾಸ್ ಕಾರಿನ ಟೀಸರ್ ಅನ್ನು ಕಂಪನಿಯು ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಿದೆ.

ಸಿಂಗಲ್ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ಈ ಹೊಸ ಟೊಯೊಟಾ ಇನೋವಾ ಹೈಕ್ರಾಸ್ ಕಾರು ಭಾರತೀಯ ಮಾರುಕಟ್ಟೆಯಲ್ಲಿಯೂ ಬಿಡುಗಡೆಯಾಗಲಿದೆ. ಟೀಸರ್ ಮುಂಬರುವ ಟೊಯೊಟಾ ಇನೋವಾ ಹೈಕ್ರಾಸ್‌ನ ಮುಂಭಾಗದ ವಿಭಾಗವನ್ನು ಸ್ಪಷ್ಟವಾಗಿ ಬಹಿರಂಗಪಡಿಸಿದೆ.

ಸಿಂಗಲ್ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ಟೀಸರ್ ನೋಡುವಾಗ ಮುಂಬರುವ ಟೊಯೊಟಾ ಇನ್ನೋವಾ ಹೈಕ್ರಾಸ್ ಟೊಯೊಟಾ ಕೊರೊಲ್ಲಾ ಕ್ರಾಸ್‌ನಂತಹ ಅಂತರರಾಷ್ಟ್ರೀಯ ಮಾದರಿಗಳ ಸ್ಟೈಲಿಂಗ್ ಸೂಚನೆಗಳೊಂದಿಗೆ ಹೆಚ್ಚು ವಿಕಸನಗೊಂಡ ಮುಂಭಾಗದ ಫಾಸಿಕವನ್ನು ಹೊಂದಿದೆ.

ಸಿಂಗಲ್ ಚಾರ್ಜ್‌ನಲ್ಲಿ 600 ಕಿ.ಮೀ ಮೈಲೇಜ್ ನೀಡುವ ಟೊಯೊಟಾ bZ3 ಎಲೆಕ್ಟ್ರಿಕ್ ಕಾರು ಅನಾವರಣ

ಹೆಚ್ಚು ಅಗ್ರೇಸಿವ್ ಸ್ಟೈಲಿಂಗ್ ನೊಂದಿಗೆ ಈ ಹೈಕ್ರಾಸ್ ಎಂಯುವಿ ಹೆಚ್ಚು ಕ್ರಾಸ್‌ಒವರ್‌ನಂತೆ ಕಾಣುತ್ತದೆ. ಅದರ ಜೊತೆಗೆ, ಟೊಯೊಟಾ ಇನೋವಾ ಹೈಕ್ರಾಸ್ ಸ್ಪೈ ಚಿತ್ರಗಳು ಬಹಿರಂಗವಾಗಿವೆ. ಇದರಲ್ಲಿ ಹೈಕ್ರಾಸ್ LED ಟೈಲ್ ಲ್ಯಾಂಪ್‌ಗಳು ಮತ್ತು 10-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ ಎಂದು ಬಹಿರಂಗಪಡಿಸುತ್ತದೆ.

Most Read Articles

Kannada
Read more on ಟೊಯೊಟಾ toyota
English summary
Toyota bZ3 electric car unveiled 600 km mileage on a single charge
Story first published: Tuesday, October 25, 2022, 15:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X