ಟೊಯೊಟಾದ CNG ಎಸ್‌ಯುವಿ ಅರ್ಬನ್ ಕ್ರೂಸರ್ ಹೈರೈಡರ್ ಶೀಘ್ರ ಮಾರುಕಟ್ಟೆಗೆ: ಬೆಲೆ ಎಷ್ಟಿರಬಹುದು?

ಪೆಟ್ರೋಲ್ ಮತ್ತು ಡೀಸೆಲ್‌ ದರಗಳು ಗಗನಕ್ಕೇರುತ್ತೇವೆ. ಕಳೆದ ಒಂದು ವರ್ಷದಲ್ಲಿ ಸಿಎನ್‌ಜಿ ಕಾರುಗಳು ಅಪಾರ ಜನಪ್ರಿಯತೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಗಳಿಸಿವೆ. ಕೆಲವು ವರ್ಷಗಳ ಹಿಂದೆಯೇ ಎಂಟ್ರಿ-ಲೆವೆಲ್ ಕಾಂಪ್ಯಾಕ್ಟ್ ಕಾರುಗಳಿಗೆ ಸಿಎನ್‌ಜಿ ಕಿಟ್ ಅಳವಡಿಕೆ ಮಾಡಲಾಗುತ್ತಿದೆ. ಸದ್ಯ ಹೆಚ್ಚಿನ ಪ್ರೀಮಿಯಂ ಕಾರುಗಳಿಗೆ ಸಹ ಇದನ್ನು ವಾಹನ ತಯಾರಕರು ಪರಿಗಣಿಸುತ್ತಿದ್ದಾರೆ.

ಸಿಎನ್‌ಜಿ ಆಯ್ಕೆಯೊಂದಿಗೆ ನೀಡಲಾಗುವ ಅಂತಹ ಒಂದು ಪ್ರೀಮಿಯಂ ಕಾರು, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಆಗಿದೆ. ಟೊಯೊಟಾ ಕಂಪನಿ ಈ ತಿಂಗಳಿನಲ್ಲಿಯೇ ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಇದು ಸಿಎನ್‌ಜಿ ಇಂಧನದಿಂದ ಚಾಲಿತಗೊಳ್ಳಿರುವ ಭಾರತದಲ್ಲಿನ ಟೊಯೊಟಾದ ಮೊದಲ ಎಸ್‌ಯುವಿಯು ಆಗಿದೆ ಎಂದು ಹೇಳಬಹುದು. ಆದ್ದರಿಂದ ಇದರ ಮೇಲೆ ಗ್ರಾಹಕರಿಗೆ ನಿರೀಕ್ಷೆಗಳು ಸಾಕಷ್ಟು ಹೆಚ್ಚಾಗಿದ್ದು, ಖರೀದಿ ಮಾಡಲು ಕಾತರದಿಂದ ಕಾಯುತ್ತಿದ್ದಾರೆ.

ಟೊಯೊಟಾದ CNG ಎಸ್‌ಯುವಿ ಹೈರೈಡರ್ ಶೀಘ್ರ ಮಾರುಕಟ್ಟೆಗೆ

ಅರ್ಬನ್ ಕ್ರೂಸರ್ ಹೈರೈಡರ್ ಸಿಎನ್‌ಜಿ ಮೈಲ್ಡ್-ಹೈಬ್ರಿಡ್ (ನಿಯೋಡ್ರೈವ್) ಆವೃತ್ತಿಯೊಂದಿಗೆ ಲಭ್ಯವಿರುತ್ತದೆ ಎಂದು ಟೊಯೊಟಾ ಈಗಾಗಲೇ ಬಹಿರಂಗಪಡಿಸಿದೆ. ಇದು 1.5-ಲೀಟರ್ ನ್ಯಾಚುರಲ್-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ ಅನ್ನು ಹೊಂದಿದೆ. ಇದು 103 ಪಿಎಸ್ ಪವರ್ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. CNG ಮೋಡ್‌ನಲ್ಲಿ, ಪವರ್ ಮತ್ತು ಟಾರ್ಕ್ ಉತ್ಪಾದನೆಯು ಕ್ರಮವಾಗಿ 88 PS ಮತ್ತು 122 Nm ಇರುತ್ತದೆ ಎಂದು ಹೇಳಬಹುದು.

ಪೆಟ್ರೋಲ್-ಸಿಎನ್‌ಜಿ ಹೈರೈಡರ್ ಅನ್ನು 5 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಖರೀದಿಗೆ ಸಿಗಲಿದೆ. ಈ ಕಾರಿಗೆ ಇಂಧನ ದಕ್ಷತೆ ಕುರಿತು ಹೇಳುವುದಾದರೆ, 1 ಕೆಜಿ CNG ಇಂಧನದಿಂದ 26.1 ಕಿ.ಮೀ ಮೈಲೇಜ್ ನೀಡಲಿದೆ. ಇದು ಖರೀದಿದಾರರಿಗೆ ಇಂಧನ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದರೇ ತಪ್ಪಾಗುವುದಿಲ್ಲ. ಕಂಪನಿಯು ಸಿಎನ್‌ಜಿ ಕಿಟ್ ಅನ್ನು ಅರ್ಬನ್ ಕ್ರೂಸರ್ ಹೈರೈಡರ್ ಎರಡು-ಮೀಡ್ ಲೆವೆಲ್ ರೂಪಾಂತರಗಳೊಂದಿಗೆ ನೀಡಲಾಗುವುದು ಎಂದು ದೃಢಪಡಿಸಿದೆ. ಆವುಗಳೆಂದರೆ, ಎಸ್ ಮತ್ತು ಜಿ.

ಸದ್ಯದ ಪ್ರಕಾರ, ಅರ್ಬನ್ ಕ್ರೂಸರ್ ಹೈರೈಡರ್ ಎಸ್ ಮೈಲ್ಡ್-ಹೈಬ್ರಿಡ್ ಬೆಲೆ ರೂ.12.28 ಲಕ್ಷ ಇದೆ. ಆದರೆ, ಜಿ. ಮ್ಯಾನುಯಲ್ ವರ್ಷನ್ ಟ್ರಿಮ್ ಬೆಲೆ 14.34 ಲಕ್ಷ (ಎರಡು ಬೆಲೆಗಳು, ಎಕ್ಸ್ ಶೋ ರೂಂ). ಸಿಎನ್‌ಜಿ ರೂಪಾಂತರಗಳು ಪೆಟ್ರೋಲ್ ಮಾದರಿಗಳಿಗಿಂತ ಸುಮಾರು 90,000 - 1 ಲಕ್ಷ ಅಧಿಕವೇ ಇರುತ್ತದೆ. ಏಕೆಂದರೆ, ಇವು ಅಧಿಕ ಕಡಿಮೆ ವೆಚ್ಚದಲ್ಲಿ ಅಧಿಕ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುವುದು ಗಮನಾರ್ಹ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹಲವು ಸಿಎನ್‌ಜಿ ಚಾಲಿತ ಕಾರುಗಳಿದ್ದು, ಅವುಗಳಲ್ಲಿ ಮಾರುತಿ ಸುಜುಕಿ ಕಂಪನಿ ಕಾರುಗಳು ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿವೆ. ಮಾರುತಿ ಸುಜುಕಿ XL6 ಸಿಎನ್‌ಜಿ, ಕಾರಿನ ಬೆಲೆ ರೂ.12.24 ಲಕ್ಷ ಇದ್ದು, ಈ ಕಾರು, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ಎಂಜಿನ್ ಪುಶ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್ ಸೇರಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೆ ಮಾರುತಿ ಸುಜುಕಿ ಬಲೆನೊ ಸಿಎನ್‌ಜಿ ಡೆಲ್ಟಾ ಮತ್ತು ಝೀಟಾ ರೂಪಾಂತರಗಳನ್ನು ಹೊಂದಿದ್ದು, ಕ್ರಮವಾಗಿ ರೂ.8.28 ಲಕ್ಷ ಮತ್ತು ರೂ.9.21 ಲಕ್ಷ ಬೆಲೆಯಿದೆ.

ಟೊಯೊಟಾ ಗ್ಲ್ಯಾನ್ಜಾ ಸಿಎನ್‌ಜಿ ಕಾರು ನೋಡಲು ಬಲೆನೊ ಸಿಎನ್‌ಜಿಯಂತೆಯೇ ಇದ್ದು, ರೂ.8.43 ಲಕ್ಷದಿಂದ ರೂ.9.46 ಲಕ್ಷ ಬೆಲೆಯನ್ನು ಹೊಂದಿದ್ದು, ಸಿಎನ್‌ಜಿ ಮೋಡ್‌ನಲ್ಲಿ 77 ಪಿಎಸ್ ಗರಿಷ್ಠ ಪವರ್ ಮತ್ತು 98.5 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 30.61 ಕಿ.ಮೀ/ಕೆಜಿ ಇಂಧನ ದಕ್ಷತೆ ಹೊಂದಿದೆ. ಟಾಟಾ ಟಿಯಾಗೊ ಎನ್‌ಆರ್‌ಜಿ ಸಿಎನ್‌ಜಿಯನ್ನು ಕಳೆದ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ರೂ.7.40 ಲಕ್ಷಕ್ಕೆ ಲಾಂಚ್ ಮಾಡಲಾಗಿತ್ತು. ಸಿಎನ್‌ಜಿ ಮೋಡ್‌ನಲ್ಲಿ ಈ ಕಾರಿನ ಎಂಜಿನ್ 73.4 PS ಪವರ್ ಮತ್ತು 95 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Monday, December 19, 2022, 17:26 [IST]
English summary
Toyota cng suv urban cruiser highrider to hit the market soon
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+