ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ವಿತರಣೆಗೆ ಚಾಲನೆ ನೀಡಿದ ಟೊಯೊಟಾ

ಟೊಯೊಟಾ ಇಂಡಿಯಾ ಕಂಪನಿಯು ತನ್ನ ಹೊಸ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯಾದ ಹೈಲಕ್ಸ್ ಬಿಡುಗಡೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, ಇದೀಗ ಬುಕಿಂಗ್ ಪ್ರಕ್ರಿಯೆಗೆ ಅನುಗುಣವಾಗಿ ಹೊಸ ವಾಹನದ ವಿತರಣೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ವಿತರಣೆಗೆ ಚಾಲನೆ ನೀಡಿದ ಟೊಯೊಟಾ

ಹೊಸ ಪಿಕ್ಅಪ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎರಡು ಮಾದರಿಗಳಿಗೂ ಗ್ರಾಹಕರಿಂದ ಉತ್ತಮ ಬೇಡಿಕೆ ಹರಿದುಬಂದಿದೆ. ಸದ್ಯಕ್ಕೆ ಕಂಪನಿಯು ನಿಗದಿತ ಸಂಖ್ಯೆಯಲ್ಲಿ ಮಾತ್ರ ವಿತರಣೆ ಮಾಡುವ ಯೋಜನೆ ಹೊಂದಿದ್ದು, ಈ ಹಿನ್ನಲೆಯಲ್ಲಿ ಖರೀದಿಗೆ ಲಭ್ಯವಿದ್ದ ಎಲ್ಲಾ ಮಾದರಿಗಳು ಈಗಾಗಲೇ ಸಂಪೂರ್ಣವಾಗಿ ಮಾರಾಟಗೊಂಡಿವೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ವಿತರಣೆಗೆ ಚಾಲನೆ ನೀಡಿದ ಟೊಯೊಟಾ

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಹೊಸ ಮಾದರಿಯಾಗಿರುವುದರಿಂದ ಕಂಪನಿಯು ಸದ್ಯ ನಿಗದಿತ ಸಂಖ್ಯೆಯಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದು, ಗ್ರಾಹಕರ ಬೇಡಿಕೆ ಆಧರಿಸಿ ಮುಂದಿನ ವರ್ಷದಿಂದ ಮಾರಾಟ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ವಿತರಣೆಗೆ ಚಾಲನೆ ನೀಡಿದ ಟೊಯೊಟಾ

ಹೊಸ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ 4x4 ಸ್ಟ್ಯಾಂಡರ್ಡ್ ಮತ್ತು 4x4 ಹೈ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, 4x4 ಸ್ಟ್ಯಾಂಡರ್ಡ್ ಮಾದರಿಯು ಕೇವಲ ಮ್ಯಾನುವಲ್ ಆವೃತ್ತಿ ಖರೀದಿಗೆ ಲಭ್ಯವಿದ್ದರೆ 4x4 ಹೈ ಮಾದರಿಯಲ್ಲಿ ಕಂಪನಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳಲ್ಲಿ ಖರೀದಿಗೆ ಲಭ್ಯವಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ವಿತರಣೆಗೆ ಚಾಲನೆ ನೀಡಿದ ಟೊಯೊಟಾ

ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ 4x4 ಸ್ಟ್ಯಾಂಡರ್ಡ್ ಮ್ಯಾನುವಲ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 34 ಲಕ್ಷ ಬೆಲೆ ಹೊಂದಿದ್ದರೆ 4x4 ಹೈ ಮ್ಯಾನುವಲ್ ಮಾದರಿಯು ರೂ. 35.80 ಲಕ್ಷ ಮತ್ತು 4x4 ಹೈ ಆಟೋಮ್ಯಾಟಿಕ್ ಮಾದರಿಯು ರೂ. 36.80 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ವಿತರಣೆಗೆ ಚಾಲನೆ ನೀಡಿದ ಟೊಯೊಟಾ

ಹೊಸ ಪಿಕ್ಅಪ್‌ನಲ್ಲಿ ಟೊಯೊಟಾ ಕಂಪನಿಯು ಫಾರ್ಚೂನರ್ ಮಾದರಿಯಲ್ಲಿರುವ 2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ ಆಯ್ಕೆಯೊಂದಿಗೆ ಬಿಡುಗಡೆಯಾಗಿದ್ದು, 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ವಿತರಣೆಗೆ ಚಾಲನೆ ನೀಡಿದ ಟೊಯೊಟಾ

4x4 ಡ್ರೈವ್‌ಟ್ರೈನ್‌ನೊಂದಿಗೆ ಮ್ಯಾನುವಲ್ ಮಾದರಿಯು 204 ಬಿಎಚ್‌ಪಿ, 420 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದರೆ ಆಟೋಮ್ಯಾಟಿಕ್ ಮಾದರಿಯು 204 ಬಿಎಚ್‌ಪಿ, 500 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಗಮನಾರ್ಹವಾದ ರಸ್ತೆ ಉಪಸ್ಥಿತಿಯೊಂದಿಗೆ ಆನ್ ರೋಡ್ ಮತ್ತು ಆಫ್ ರೋಡ್ ಎರಡರಲ್ಲೂ ಗಮನಸೆಳೆಯಲಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ವಿತರಣೆಗೆ ಚಾಲನೆ ನೀಡಿದ ಟೊಯೊಟಾ

ಹೈಲಕ್ಸ್ ಪಿಕ್ಅಪ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಎಂಪಿವಿ ಮತ್ತು ಫಾರ್ಚೂನರ್ ಎಸ್‌ಯುವಿ ನಡುವಿನ ಸ್ಥಾನ ಹೊಂದಿದ್ದು, ಹೊಸ ಇನೋವೆಟಿವ್ ಮಲ್ಟಿ ಪರ್ಪಸ್ ವೆಹಿಕಲ್(ಐಎಂವಿ2) ಆರ್ಕಿಟೆಕ್ಚರ್ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ವಿತರಣೆಗೆ ಚಾಲನೆ ನೀಡಿದ ಟೊಯೊಟಾ

ಹೈಲಕ್ಸ್ ಮಾದರಿಯು ದೊಡ್ಡ ಆಯಾಮದೊಂದಿಗೆ ವಿಶಾಲವಾದ ಟ್ರೆಪೆಜಾಯಿಡಲ್ ಗ್ರಿಲ್, ದೊಡ್ಡದಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, 18-ಇಂಚಿನ ಮಿಶ್ರಲೋಹದ ಚಕ್ರಗಳು, ಸೈಡ್-ಸ್ಟೆಪ್‌ಗಳು ಮತ್ತು ಇ-ಆಕಾರದ ಎಲ್‌ಇಡಿ ಸಿಗ್ನೇಚರ್‌ನೊಂದಿಗೆ ಲಂಬವಾದ ಟೈಲ್ ಲೈಟ್, ಹೆಚ್ಚಿನ ಮಟ್ಟದ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಕಸ್ಟಮೈಸೇಶನ್‌ಗಾಗಿ ಬಿಡಿಭಾಗಗಳ ದೀರ್ಘವಾದ ಪಟ್ಟಿಯನ್ನೇ ಹೊಂದಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ವಿತರಣೆಗೆ ಚಾಲನೆ ನೀಡಿದ ಟೊಯೊಟಾ

ಜೊತೆಗೆ ಹೊಸ ಪಿಕ್ಅಪ್ ಮಾದರಿಯು ಸಂಪೂರ್ಣ ಬ್ಲ್ಯಾಕ್ ಕ್ಯಾಬಿನ್ ಹೊಂದಿದ್ದು, 8 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಯುನಿಟ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್-ಜೋನ್ ಸ್ವಯಂಚಾಲಿತ ಎಸಿ ಯುನಿಟ್, ಸ್ವಯಂಚಾಲಿತ ರೈನ್ ವೈಪರ್‌ಗಳು, ಪುಶ್-ಬಟನ್ ಸ್ಟಾಪ್/ಸ್ಟಾರ್ಟ್ ಸೇರಿದಂತೆ ಪ್ರಮುಖ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ವಿತರಣೆಗೆ ಚಾಲನೆ ನೀಡಿದ ಟೊಯೊಟಾ

ಟೊಯೊಟಾ ಕಂಪನಿಯ ಹೊಸ ಪಿಕ್ಅಪ್ ಮಾದರಿಯಲ್ಲಿ ಪ್ರೀಮಿಯಂ ಫೀಚರ್ಸ್ ಜೊತೆ ಸುರಕ್ಷತಾ ವೈಶಿಷ್ಟ್ಯತೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಮುಂಭಾಗ ಮತ್ತು ಎರಡು ಬದಿಗಳಲ್ಲೂ ಒಟ್ಟು ಏಳು ಏರ್‌ಬ್ಯಾಗ್‌‌ಗಳು, ಎಬಿಡಿ, ಇಬಿಡಿ, ಹಿಲ್ ಅಸಿಸ್ಟ್ ಕಂಟ್ರೋಲ್, ಮುಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್‌ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹೆಚ್ಚಿನ ವೇಗದಲ್ಲಿ ಸ್ಟೀರಿಂಗ್ ಅನ್ನು ಭಾರವಾಗಿಸುವ ವೇರಿಯಬಲ್ ಫ್ಲೋ ಕಂಟ್ರೋಲ್, ಇಕೋ ಮತ್ತು ಪವರ್ ಡ್ರೈವಿಂಗ್ ಮೋಡ್‌ಗಳು, ಟೈರ್ ಆಂಗಲ್ ಮಾನಿಟರ್ ಸೇರಿದಂತೆ ಪ್ರಮುಖ ಫೀಚರ್ಸ್‌ಗಳಿವೆ.

ಭಾರತದಲ್ಲಿ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ವಿತರಣೆಗೆ ಚಾಲನೆ ನೀಡಿದ ಟೊಯೊಟಾ

ಇದರೊಂದಿಗೆ ಹೊಸ ಪಿಕ್ಅಪ್ ಮಾದರಿಗಾಗಿ ಟೊಯೊಟಾ ಕಂಪನಿಯು 3 ವರ್ಷ ಅಥವಾ 1 ಲಕ್ಷ ಕಿ.ಮೀ ಮೇಲೆ ಸ್ಟ್ಯಾಂಡರ್ಡ್ ವಾರಂಟಿ ಘೋಷಣೆ ಮಾಡಿದ್ದು, ಹೊಸ ಪಿಕ್ಅಪ್ ಮಾದರಿಯು ಎಮೊಷನಲ್ ರೆಡ್, ಗ್ರೆ ಮೆಟಾಲಿಕ್, ವೈಟ್ ಪರ್ಲ್ ಸಿಎಸ್, ಸಿಲ್ವರ್ ಮೆಟಾಲಿಕ್ ಮತ್ತು ಸೂಪರ್ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

Article Published On: Tuesday, May 10, 2022, 11:44 [IST]
English summary
Toyota hilux pick up truck delivered started in india details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+