Just In
Don't Miss!
- News
Breaking; ತುರ್ತಾಗಿ ಬನ್ನಿ, ಸಿದ್ದರಾಮಯ್ಯ, ಡಿಕೆಶಿಗೆ ಹೈಕಮಾಂಡ್ ಕರೆ
- Sports
ಕಿವೀಸ್ ವಿರುದ್ಧ ಸರಣಿ ಗೆದ್ದು ಭಾರತಕ್ಕೆ ಎಚ್ಚರಿಕೆ ಸಂದೇಶ ನೀಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್
- Movies
ಕೌಟುಂಬಿಕ ಸಮಸ್ಯೆ ಬದಿಗೊತ್ತಿ 'ಮಾವು-ಬೇವು' ಕಥೆ ಹೇಳಲು ಹೊರಟ ಸುಚೇಂದ್ರ ಪ್ರಸಾದ್!
- Lifestyle
ನಿಮ್ಮಿಬ್ಬರ ಸಂಬಂಧ ಹೀಗಿದ್ದರೆ ಒಟ್ಟಿಗಿದ್ದು ಪಡುವ ನರಕಕ್ಕಿಂತ ಗುಡ್ಬೈ ಹೇಳುವುದೇ ಬೆಸ್ಟ್!
- Finance
ಜೂ.27ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
UAS Dharwad Recruitment 2022 : ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ಜು.2ಕ್ಕೆ ನೇರ ಸಂದರ್ಶನ
- Technology
‘ಫಾಸ್ಟ್ಯಾಗ್' ನಲ್ಲಿರುವ ಹಣವನ್ನು ಕದಿಯಬಹುದಾ? ವೈರಲ್ ವೀಡಿಯೊದ ಅಸಲಿಯತೆ ಏನು?
- Travel
ನಾಡ ಹಬ್ಬ ಮೈಸೂರು ದಸರಾ - ನವರಾತ್ರಿ ಉತ್ಸವ 2022
ಭಾರತದಲ್ಲಿ ಬಹುನೀರಿಕ್ಷಿತ ಟೊಯೊಟಾ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಬಿಡುಗಡೆ
ಟೊಯೊಟಾ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಬಹುನೀರಿಕ್ಷಿತ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಪಿಕ್ಅಪ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ ಮಾದರಿಯನ್ನು ಟೊಯೊಟಾ ಕಂಪನಿಯು 4x4 ಸ್ಟ್ಯಾಂಡರ್ಡ್ ಮತ್ತು 4x4 ಹೈ ಎನ್ನುವ ಎರಡು ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, 4x4 ಸ್ಟ್ಯಾಂಡರ್ಡ್ ಮಾದರಿಯು ಕೇವಲ ಮ್ಯಾನುವಲ್ ಆವೃತ್ತಿ ಖರೀದಿಗೆ ಲಭ್ಯವಿದ್ದರೆ 4x4 ಹೈ ಮಾದರಿಯಲ್ಲಿ ಕಂಪನಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳು ಖರೀದಿಗೆ ಲಭ್ಯವಿದೆ.

ಹೈಲಕ್ಸ್ ಲೈಫ್‌ಸ್ಟೈಲ್ ಪಿಕ್ಅಪ್ 4x4 ಸ್ಟ್ಯಾಂಡರ್ಡ್ ಮ್ಯಾನುವಲ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 34 ಲಕ್ಷ ಬೆಲೆ ಹೊಂದಿದ್ದರೆ 4x4 ಹೈ ಮ್ಯಾನುವಲ್ ಮಾದರಿಯು ರೂ. 35.80 ಲಕ್ಷ ಮತ್ತು 4x4 ಹೈ ಆಟೋಮ್ಯಾಟಿಕ್ ಮಾದರಿಯು ರೂ. 36.80 ಲಕ್ಷ ಬೆಲೆ ಹೊಂದಿದೆ.

ಹೊಸ ಪಿಕ್ಅಪ್‌ನಲ್ಲಿ ಟೊಯೊಟಾ ಕಂಪನಿಯು ಫಾರ್ಚೂನರ್ ಮಾದರಿಯಲ್ಲಿರುವ 2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆ ಮಾಡಿದ್ದು, 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದೆ.

4x4 ಡ್ರೈವ್‌ಟ್ರೈನ್‌ನೊಂದಿಗೆ ಮ್ಯಾನುವಲ್ ಮಾದರಿಯು 204 ಬಿಎಚ್‌ಪಿ, 420 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದರೆ ಆಟೋಮ್ಯಾಟಿಕ್ ಮಾದರಿಯು 204 ಬಿಎಚ್‌ಪಿ, 500 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಗಮನಾರ್ಹವಾದ ರಸ್ತೆ ಉಪಸ್ಥಿತಿಯೊಂದಿಗೆ ಆನ್ ರೋಡ್ ಮತ್ತು ಆಫ್ ರೋಡ್ ಎರಡರಲ್ಲೂ ಗಮನಸೆಳೆಯಲಿದೆ.

ಟೊಯೊಟಾ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಆಧರಿಸಿ ಜಾಗತಿಕ ಮಾರುಕಟ್ಟೆಗಳಲ್ಲಿನ ಪ್ರಮುಖ ಕಾರು ಮಾದರಿಗಳನ್ನು ಭಾರತದಲ್ಲೂ ಬಿಡುಗಡೆ ಮಾಡುತ್ತಿದ್ದು, ಹೊಸ ಪಿಕ್ಅಪ್ ಮಾದರಿಯನ್ನು ಟೊಯೊಟಾ ಕಂಪನಿಯು ಬಿಡದಿ ಕಾರು ಉತ್ಪಾದನಾ ಘಟಕದಲ್ಲಿಯೇ ಉತ್ಪಾದನೆ ಆರಂಭಿಸಿದೆ.

ಹೈಲಕ್ಸ್ ಪಿಕ್ಅಪ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಎಂಪಿವಿ ಮತ್ತು ಫಾರ್ಚೂನರ್ ಎಸ್‌ಯುವಿ ನಡುವಿನ ಸ್ಥಾನ ಹೊಂದಿದ್ದು, ಹೊಸ ಇನೋವೆಟಿವ್ ಮಲ್ಟಿ ಪರ್ಪಸ್ ವೆಹಿಕಲ್(ಐಎಂವಿ2) ಆರ್ಕಿಟೆಕ್ಚರ್ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿದೆ.

ಹೈಲಕ್ಸ್ ಮಾದರಿಯು ದೊಡ್ಡ ಆಯಾಮದೊಂದಿಗೆ ವಿಶಾಲವಾದ ಟ್ರೆಪೆಜಾಯಿಡಲ್ ಗ್ರಿಲ್, ದೊಡ್ಡದಾದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, 18-ಇಂಚಿನ ಮಿಶ್ರಲೋಹದ ಚಕ್ರಗಳು, ಸೈಡ್-ಸ್ಟೆಪ್‌ಗಳು ಮತ್ತು ಇ-ಆಕಾರದ ಎಲ್‌ಇಡಿ ಸಿಗ್ನೇಚರ್‌ನೊಂದಿಗೆ ಲಂಬವಾದ ಟೈಲ್ ಲೈಟ್, ಹೆಚ್ಚಿನ ಮಟ್ಟದ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಕಸ್ಟಮೈಸೇಶನ್‌ಗಾಗಿ ಬಿಡಿಭಾಗಗಳ ದೀರ್ಘವಾದ ಪಟ್ಟಿಯನ್ನೇ ಹೊಂದಿದೆ.

ಜೊತೆಗೆ ಹೊಸ ಪಿಕ್ಅಪ್ ಮಾದರಿಯು ಸಂಪೂರ್ಣ ಬ್ಲ್ಯಾಕ್ ಕ್ಯಾಬಿನ್ ಹೊಂದಿದ್ದು, 8 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಯುನಿಟ್ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್-ಜೋನ್ ಸ್ವಯಂಚಾಲಿತ ಎಸಿ ಯುನಿಟ್, ಸ್ವಯಂಚಾಲಿತ ರೈನ್ ವೈಪರ್‌ಗಳು, ಪುಶ್-ಬಟನ್ ಸ್ಟಾಪ್/ಸ್ಟಾರ್ಟ್ ಸೇರಿದಂತೆ ಪ್ರಮುಖ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಟೊಯೊಟಾ ಕಂಪನಿಯ ಹೊಸ ಪಿಕ್ಅಪ್ ಮಾದರಿಯಲ್ಲಿ ಪ್ರೀಮಿಯಂ ಫೀಚರ್ಸ್ ಜೊತೆ ಸುರಕ್ಷತಾ ವೈಶಿಷ್ಟ್ಯತೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಮುಂಭಾಗ ಮತ್ತು ಎರಡು ಬದಿಗಳಲ್ಲೂ ಒಟ್ಟು ಏಳು ಏರ್‌ಬ್ಯಾಗ್‌ಗಳು, ಎಬಿಡಿ, ಇಬಿಡಿ, ಹಿಲ್ ಅಸಿಸ್ಟ್ ಕಂಟ್ರೋಲ್, ಮುಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್‌ಗಳು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಹೆಚ್ಚಿನ ವೇಗದಲ್ಲಿ ಸ್ಟೀರಿಂಗ್ ಅನ್ನು ಭಾರವಾಗಿಸುವ ವೇರಿಯಬಲ್ ಫ್ಲೋ ಕಂಟ್ರೋಲ್, ಇಕೋ ಮತ್ತು ಪವರ್ ಡ್ರೈವಿಂಗ್ ಮೋಡ್‌ಗಳು, ಟೈರ್ ಆಂಗಲ್ ಮಾನಿಟರ್ ಸೇರಿದಂತೆ ಪ್ರಮುಖ ಫೀಚರ್ಸ್‌ಗಳಿವೆ.

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸದ್ಯ ಹೈಲಕ್ಸ್ ಮಾದರಿಯು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ 40ಕ್ಕೂ ವೆರಿಯೆಂಟ್‌ಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಭಾರತದಲ್ಲಿ ಸದ್ಯಕ್ಕೆ ಮೂರು ವೆರಿಯೆಂಟ್‌ಗಳಲ್ಲಿ ಮಾತ್ರ ಪರಿಚಯಿಸಲಾಗಿದೆ.

1968ರಿಂದಲೇ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟಗೊಳ್ಳುತ್ತಿರುವ ಹೈಲಕ್ಸ್ ಪಿಕ್ಅಪ್ ಮಾದರಿಯು ಟೊಯೊಟಾ ಕಂಪನಿಯ ಯಶಸ್ವಿ ಕಾರು ಮಾದರಿಗಳಲ್ಲಿ ಒಂದಾಗಿದ್ದು, 180ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟಗೊಳ್ಳುತ್ತಿರುವ ಹೈಲಕ್ಸ್ ಪಿಕ್ಅಪ್ ಇದುವರೆಗೆ ಸುಮಾರು 2 ಕೋಟಿ ಯುನಿಟ್ ಮಾರಾಟ ದಾಖಲೆ ಹೊಂದಿದೆ.

ಮೊದಲ ತಲೆಮಾರಿನಿಂದಲೂ ಹೆಚ್ಚಿನ ಬೇಡಿಕೆ ಹೊಂದಿರುವ ಹೈಲಕ್ಸ್ ಮಾದರಿಯು ಕಾಲಾಂತರದಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಬದಲಾವಣೆಗಳೊಂದಿಗೆ ಬೇಡಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಇದೀಗ ಹೈಲಕ್ಸ್ ಮಾದರಿಯು ಅಧಿಕೃತವಾಗಿ ಭಾರತದಲ್ಲೂ ಲಗ್ಗೆಯಿಟ್ಟಿದೆ.

ಇದರೊಂದಿಗೆ ಹೊಸ ಪಿಕ್ಅಪ್ ಮಾದರಿಗಾಗಿ ಟೊಯೊಟಾ ಕಂಪನಿಯು 3 ವರ್ಷ ಅಥವಾ 1 ಲಕ್ಷ ಕಿ.ಮೀ ಮೇಲೆ ಸ್ಟ್ಯಾಂಡರ್ಡ್ ವಾರಂಟಿ ಘೋಷಣೆ ಮಾಡಿದ್ದು, ಹೊಸ ಪಿಕ್ಅಪ್ ಮಾದರಿಯು ಎಮೊಷನಲ್ ರೆಡ್, ಗ್ರೆ ಮೆಟಾಲಿಕ್, ವೈಟ್ ಪರ್ಲ್ ಸಿಎಸ್, ಸಿಲ್ವರ್ ಮೆಟಾಲಿಕ್ ಮತ್ತು ಸೂಪರ್ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.