ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ಟೊಯೊಟಾ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಹೈಲಕ್ಸ್ ಪಿಕ್ಅಪ್ ಮಾದರಿಯನ್ನು ಅನಾವರಣಗೊಳಿಸಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಪಿಕ್ಅಪ್ ಬಿಡುಗಡೆಗೂ ಮುನ್ನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ಹೊಸ ಹೈಲಕ್ಸ್ ಪಿಕ್ಅಪ್ ಮಾದರಿಯನ್ನು ಅನಾವರಣಗೊಳಿಸಿ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿರುವ ಟೊಯೊಟಾ ಕಂಪನಿಯು ಮಾರ್ಚ್ ಆರಂಭದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದು, ಆಸಕ್ತ ಗ್ರಾಹಕರಿಗಾಗಿ ಕಂಪನಿಯು ಆಕ್ಸೆಸರಿಸ್ ಪ್ಯಾಕೇಜ್ ಘೋಷಣೆ ಮಾಡಿದೆ. ವಿವಿಧ ಹೆಚ್ಚುವರಿ ಫೀಚರ್ಸ್‌ವುಳ್ಳ ಆಕ್ಸೆಸರಿಸ್ ಪ್ಯಾಕೇಜ್‌ ಮೂಲಕ ಪಿಕ್ಅಪ್ ಮಾದರಿಯು ಮತ್ತಷ್ಟು ಬಲಿಷ್ಠ ವಿನ್ಯಾಸ ಪಡೆದುಕೊಳ್ಳಲಿದ್ದು, ಟೊಯೊಟಾ ನಿರ್ಮಾಣದ ಎಲ್ಲಾ ಡೀಲರ್ಸ್‌ಗಳನ್ನು ಖರೀದಿಗೆ ಲಭ್ಯವಿರಲಿದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ಟೊಯೊಟಾ ಹೊಸ ಹೈಲಕ್ಸ್ ಮಾದರಿಯಲ್ಲಿ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್‌ಗಳ ಹೊರತಾಗಿಯೂ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಆಕ್ಸೆಸರಿಸ್ ಪ್ಯಾಕೇಜ್ ಮೂಲಕ ಖರೀದಿಸಬೇಕಿದ್ದು, ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಕೆಲವು ಪ್ರಮುಖ ಫೀಚರ್ಸ್‌ಗಳು ದುಬಾರಿ ಬೆಲೆ ಹೊಂದಿರಲಿವೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ಟೆಂಟ್ ಜೊತೆ ಕ್ಯಾನೊಪಿ

ಆಫ್ ರೋಡ್ ಮೂಲಕ ನಿಯಮಿತವಾಗಿ ಕ್ಯಾಂಪಿಂಗ್ ಮಾಡುವವರಿಗಾಗಿ ಟೊಯೊಟಾ ಕಂಪನಿಯು ಹೊಸ ಪಿಕ್ಅಪ್ ಮಾದರಿಗೆ ಹೊಂದುವಂತೆ ಮೇಲಾವರಣದೊಂದಿಗೆ ಟೆಂಟ್ ಅನ್ನು ನೀಡುತ್ತಿದೆ. ಚಿತ್ರದಲ್ಲಿ ಕಾಣುವಂತೆ ಟೆಂಟ್ ಅನ್ನು ಪಿಕ್ಅಪ್ ಮಾದರಿಯ ಪೂರ್ಣ ಛಾವಣಿಯ ಮೇಲೆ ಸ್ಥಾಪಿಸಲಾಗುವುದಿಲ್ಲ. ಬದಲಾಗಿ ಪಿಕ್ಅಪ್ ಮಾದರಿಯ ಬೂಟ್ ಕವರಿಂಗ್ ಆವರಿಸುವಂತೆ ಮೇಲಾವರಣದ ಮೇಲೆ ಮಾತ್ರವೇ ಟೆಂಟ್ ಮಾಡಿಕೊಳ್ಳುವ ಸೌಲಭ್ಯವನ್ನು ನೀಡುತ್ತದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ರೋಲ್ ಬಾರ್ ಮತ್ತು ಓವರ್ ಫೆಂಡರ್

ಪಿಕ್ಅಪ್ ಮಾದರಿಯ ಬೂಟ್ ಸ್ಪೆಸ್ ಅಥವಾ ಲೋಡಿಂಗ್ ಬೆಡ್ ಅನ್ನು ಮುಚ್ಚದೆ ಇರಿಸಲು ಉದ್ದೇಶಿಸಿರುವವರು ರೋಲ್ ಬಾರ್ ಮತ್ತು ಓವರ್ ಫೆಂಡರ್ ಜೋಡಣೆ ಮಾಡಿಸಬಹುದು. ಇದು ಪಿಕ್ಅಪ್ ಮಾದರಿಗೆ ಆಕರ್ಷಕ ಲುಕ್ ನೀಡುವುದರ ಜೊತೆ ಯಾವುದೇ ಅಪಘಾತದ ಸಂದರ್ಭದಲ್ಲಿ ಹೆಚ್ಚುವರಿ ಸುರಕ್ಷತೆಯನ್ನು ನೀಡುತ್ತದೆ. ಜೊತೆಗೆ ಅಪಘಾತಗಳ ಸಂದರ್ಭದಲ್ಲಿ ವಾಹನವನ್ನು ಉರುಳುವುದನ್ನು ತಡೆಯುವುದಲ್ಲದೆ ಬಾಡಿ ಪ್ಯಾನಲ್‌ಗಳನ್ನು ಕುಸಿಯದಂತೆ ತಡೆಯುತ್ತದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ಟೊನ್ಯೂ ಕವರ್

ಹೈಲಕ್ಸ್ ಜೊತೆಗೆ ಟೊನ್ಯೂ ಕವರ್ ಅನ್ನು ಆಕ್ಸೆಸರಿಸ್ ಪ್ಯಾಕೇಜ್ ನಲ್ಲಿ ಅಗತ್ಯ ಗ್ರಾಹಕರ ಆಯ್ಕೆಯಾಗಿ ನೀಡಿದೆ. ಇದು ಮೂಲಭೂತವಾಗಿ ಸಂಪೂರ್ಣ ಲೋಡಿಂಗ್ ಬೆಡ್ ಅನ್ನು ಆವರಿಸಲಿದ್ದು, ಸೈಕಲ್ ಹೊಂದಿರುವವರಿಗೆ ಆಧಾರವಾಗಿಯೂ ಇದನ್ನು ಬಳಸಬಹುದು. ಹಾಗೆಯೇ ಲೋಡಿಂಗ್ ಬೆಡ್‌ನಲ್ಲಿ ನೀರು, ಕೊಳಕು ಮತ್ತು ಅನಗತ್ಯ ವಸ್ತುಗಳ ಸಂಗ್ರಹವನ್ನು ತಪ್ಪಿಸಲು ನೇರವಾಗುತ್ತದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ಟೈಲ್‌ಗೇಟ್ ಅಸಿಸ್ಟ್ ಮತ್ತು ಫ್ರಂಟ್ ಅಂಡರ್ ರನ್

ಟೈಲ್‌ಗೇಟ್ ಅಸಿಸ್ಟ್ ಸೌಲಭ್ಯವು ಬೂಟ್/ಟೈಲ್‌ಗೇಟ್‌ಗಾಗಿ ಹೈಡ್ರಾಲಿಕ್ ಸ್ಟ್ರಟ್‌ಗಳನ್ನು ನೀಡಲಿದ್ದು, ಇದರಿಂದ ಅದು ಸರಾಗವಾಗಿ ತೆರೆಯಲು ಮತ್ತು ಮುಚ್ಚಲು ಅನುಕೂಲಕರವಾಗಿದೆ. ಹಾಗೆಯೇ ಫ್ರಂಟ್ ಅಂಡರ್ ರನ್ ಸೌಲಭ್ಯವು ಸ್ಟೈಲಿಂಗ್ ಉದ್ದೇಶಗಳಿಗಾಗಿ ಬಳಕೆಯಾಗಲಿದ್ದು, ವಾಹನಕ್ಕೆ ಮುಂಭಾಗದಿಂದ ಬಲಿಷ್ಠ ನೋಟ ನೀಡಲು ಸಹಕಾರಿಯಾಗಿದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ವೈರ್‌ಲೆಸ್ ಚಾರ್ಜರ್ ಮತ್ತು ಟಿಪಿಎಂಸಿ

ಹೈಲಕ್ಸ್ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ವೈರ್‌ಲೈಸ್ ಚಾರ್ಜರ್ ಸೌಲಭ್ಯವು ಆಯ್ಕೆ ರೂಪದಲ್ಲಿ ನೀಡಲಾಗಿದೆ. ವೈರ್‌ಲೆಸ್ ಚಾರ್ಜರ್ ಸಾಮಾನ್ಯ ಕಾರುಗಳಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದರೂ ಟೊಯೊಟಾ ಕಂಪನಿ ಮಾತ್ರ ವೈರ್‌ಲೆಸ್ ಚಾರ್ಜರ್ ಅನ್ನು ಆಯ್ಕೆ ರೂಪದಲ್ಲಿ ನೀಡಿದೆ. ಜೊತೆಗೆ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಕೂಡಾ ಹೊಸ ಪಿಕ್ಅಪ್ ಮಾದರಿಯಲ್ಲಿ ಆಯ್ಕೆ ರೂಪದಲ್ಲಿ ನೀಡಲಾಗಿದ್ದು, ಇದು ಟೈರ್‌ಗಳಲ್ಲಿ ಪ್ರೆಷರ್ ಮಾಹಿತಿಯನ್ನು ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮೂಲಕ ಮಾಹಿತಿ ನೀಡುತ್ತದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ಇದರ ಜೊತೆಗೆ ಒಳಭಾಗದಲ್ಲಿ ಇನ್ನು ಹೆಚ್ಚಿನ ಪ್ರೀಮಿಯಂ ಫೀಚರ್ಸ್ ಬಯಸುವ ಗ್ರಾಹಕರಿಗೆ ಕಂಪನಿಯು ಹಲವಾರು ಮಾರ್ಪಾಡುಗಳನ್ನು ಅಧಿಕೃತವಾಗಿ ಬದಲಾಯಿಸಿ ಕೊಡಲಿದ್ದು, ಆಫ್-ರೋಡ್ ಕಾರು ಚಾಲನೆಗೆ ಮತ್ತಷ್ಟು ಥ್ರೀಲ್ ನೀಡಲಿದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ಮಧ್ಯಮ ಗಾತ್ರದ ಪಿಕ್ಅಪ್ ಎಸ್‌ಯುವಿ ಮಾದರಿಯಲ್ಲೇ ಬಲಿಷ್ಠ ಎಂಜಿನ್ ಆಯ್ಕೆ ಮತ್ತು ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೈಲಕ್ಸ್ ಮಾದರಿಯು ಸಹ ವಿದೇಶಿ ಮಾರುಕಟ್ಟೆಯಲ್ಲಿ ವಿವಿಧ ಎಂಜಿನ್ ಮಾದರಿಯೊಂದಿಗೆ ಉತ್ತಮ ಬೇಡಿಕೆ ಹೊಂದಿದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ಹೊಸ ಹೈಲಕ್ಸ್ ಪಿಕ್ಅಪ್ ಮಾದರಿಯು ಇಸುಝ ಡಿ-ಮ್ಯಾಕ್ಸ್ ವಿ-ಕ್ರಾಸ್ ಮಾದರಿಗೆ ಪೈಪೋಟಿಯಾಗಿ ಬಿಡುಗಡೆಗೆ ಸಿದ್ದವಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಪಿಕ್ಅಪ್‌ನಲ್ಲಿ ಟೊಯೊಟಾ ಕಂಪನಿಯು ಫಾರ್ಚೂನರ್ ಮಾದರಿಯಲ್ಲಿರುವ 2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ ಆಯ್ಕೆಯೊಂದಿಗೆ ಬಿಡುಗಡೆ ಮಾಡುತ್ತಿದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್‌ ಮಾದರಿಯು 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದು, 4x4 ಡ್ರೈವ್‌ಟ್ರೈನ್‌ನೊಂದಿಗೆ ಮ್ಯಾನುವಲ್ ಮಾದರಿಯು 204 ಬಿಎಚ್‌ಪಿ, 420 ಎನ್ಎಂ ಟಾರ್ಕ್ ಮತ್ತು ಆಟೋಮ್ಯಾಟಿಕ್ ಮಾದರಿಯು 204 ಬಿಎಚ್‌ಪಿ, 500 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸದ್ಯ ಹೈಲಕ್ಸ್ ಮಾದರಿಯು ವಿವಿಧ ಎಂಜಿನ್ ಆಯ್ಕೆಗಳೊಂದಿಗೆ 40ಕ್ಕೂ ವೆರಿಯೆಂಟ್‌ಗಳಲ್ಲಿ ಮಾರಾಟಗೊಳ್ಳುತ್ತಿದ್ದು, ಭಾರತದಲ್ಲಿ ಹೊಸ ಮಾದರಿಯನ್ನು ರೂ.25 ಲಕ್ಷದಿಂದ ರೂ. 30 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಗಾಗಿ ಕೆಲವು ಕೆಲವು ವೆರಿಯೆಂಟ್‌ನೊಂದಿಗೆ ಮಾತ್ರ ಬಿಡುಗಡೆಯಾಗುತ್ತಿದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ಹೊಸ ಹೈಲಕ್ಸ್ ಪಿಕ್ಅಪ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಎಂಪಿವಿ ಮತ್ತು ಫಾರ್ಚೂನರ್ ಎಸ್‌ಯುವಿ ನಡುವಿನ ಸ್ಥಾನದಲ್ಲಿ ಮಾರಾಟಗೊಳ್ಳಲಿದ್ದು, ಇನೋವೆಟಿವ್ ಮಲ್ಟಿ ಪರ್ಪಸ್ ವೆಹಿಕಲ್(ಐಎಂವಿ2) ಆರ್ಕಿಟೆಕ್ಚರ್ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಂಡಿರುವ ಪಿಕ್ಅಪ್ ಮಾದರಿಯು ಸ್ಥಳೀಯವಾಗಿ ಅಭಿವೃದ್ದಿಗೊಂಡ ಶೇ.30 ಬಿಡಿಭಾಗಗಳನ್ನು ಪಡೆದುಕೊಂಡಿದೆ.

ಹೈಲಕ್ಸ್ ಪಿಕ್ಅಪ್ ಮಾದರಿಗೆ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಟೊಯೊಟಾ

ಹೊಸ ಪಿಕ್ಅಪ್ ಮಾದರಿಗಾಗಿ ಟೊಯೊಟಾ ಕಂಪನಿಯು ಭಾರತದಲ್ಲಿ 3 ವರ್ಷ ಅಥವಾ 1 ಲಕ್ಷ ಕಿ.ಮೀ ಮೇಲೆ ಸ್ಟ್ಯಾಂಡರ್ಡ್ ವಾರಂಟಿ ನೀಡಲು ನಿರ್ಧರಿಸಿದ್ದು, ಹೊಸ ಪಿಕ್ಅಪ್ ಮಾದರಿಯು ಎಮೊಷನಲ್ ರೆಡ್, ಗ್ರೆ ಮೆಟಾಲಿಕ್, ವೈಟ್ ಪರ್ಲ್ ಸಿಎಸ್, ಸಿಲ್ವರ್ ಮೆಟಾಲಿಕ್ ಮತ್ತು ಸೂಪರ್ ವೈಟ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota hilux pickup official accessories revealed ahead of launch
Story first published: Thursday, January 27, 2022, 21:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X