ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಟೊಯೊಟಾ ಇಂಡಿಯಾ ಕಂಪನಿಯು ಹೊಸ ವರ್ಷದ ಆರಂಭದಲ್ಲಿ ತನ್ನ ಪ್ರಮುಖ ಕಾರುಗಳ ಬೆಲೆ ಮಾಡಿರುವುದಾಗಿ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಹೊಸ ಕಾರುಗಳ ಬೆಲೆ ಹೆಚ್ಚಳದೊಂದಿಗೆ ಕಂಪನಿಯು ಸಂಕ್ರಾಂತಿ ವಿಶೇಷವಾಗಿ ಇನೋವಾ ಕ್ರಿಸ್ಟಾ ಮಾದರಿಯಲ್ಲಿ ಎರಡು ಹೊಸ ವೆರಿಯೆಂಟ್ ಬಿಡುಗಡೆ ಮಾಡಿದೆ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟೊಯೊಟಾ ಕಂಪನಿಯು ತನ್ನ ಪ್ರಮುಖ ಕಾರುಗಳ ಬೆಲೆಯಲ್ಲಿ ಶೇ.1ರಿಂದ ಶೇ.2 ರಷ್ಟು ಬೆಲೆ ಹೆಚ್ಚಿಸಿದ್ದು, ಬೆಲೆ ಹೆಚ್ಚಳದೊಂದಿಗೆ ಕಂಪನಿಯು ಇನೋವಾ ಕ್ರಿಸ್ಟಾ ಎಂಪಿವಿ ಮಾದರಿಯಲ್ಲಿ ಎರಡು ಹೊಸ ಬೆಸ್ ವೆರಿಯೆಂಟ್‌ಗಳನ್ನು ಬಿಡುಗಡೆ ಮಾಡಿದೆ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಇನೋವಾ ಕ್ರಿಸ್ಟಾ ಎಂಪಿವಿ ಮಾದರಿಯು ಜಿ, ಜಿ ಪ್ಲಸ್, ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ದರಪಟ್ಟಿಯಲ್ಲಿ ಇನೋವಾ ಕ್ರಿಸ್ಟಾ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 16.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 25.32 ಲಕ್ಷ ಬೆಲೆ ಹೊಂದಿದೆ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಟೊಯೊಟಾ ಕಂಪನಿಯು ಇನೋವಾ ಕ್ರಿಸ್ಟಾ ಮಾದರಿಯಲ್ಲಿ ಈ ಹಿಂದಿನ ಮಾದರಿಗಳೊಂದಿಗೆ ಹೊಸದಾಗಿ ಎರಡು ಬೆಸ್ ವೆರಿಯೆಂಟ್ ಬಿಡುಗಡೆ ಮಾಡಿದ್ದು, ಹೊಸ ವೆರಿಯೆಂಟ್ ಪೆಟ್ರೋಲ್ ಮ್ಯಾನುವಲ್ ಆಯ್ಕೆಯೊಂದಿಗೆ 7 ಸೀಟರ್ ಮತ್ತು 8 ಸೀಟರ್ ಮಾದರಿಗಳನ್ನು ಒಳಗೊಂಡಿದೆ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಹೊಸದಾಗಿ ಬಿಡುಗಡೆಯಾಗಿರುವ ಜಿಎಕ್ಸ್ ಬೆಸ್ ಪೆಟ್ರೋಲ್ ಮ್ಯಾನುವಲ್ 7 ಸೀಟರ್ ಮಾದರಿಯು ರೂ. 16.89 ಲಕ್ಷಕ್ಕೆ ಮತ್ತು 8 ಸೀಟರ್ ಮಾದರಿಯು ರೂ. 16.94 ಲಕ್ಷ ಬೆಲೆ ಹೊಂದಿದೆ. ಬೆಸ್ ವೆರಿಯೆಂಟ್‌ಗಳನ್ನು ಈ ಹಿಂದಿನ ಬೆಸ್ ವೆರಿಯೆಂಟ್‌ಗಳಿಂತಲೂ ರೂ. 25 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ಬೆಲೆ ಇಳಿಕೆಗಾಗಿ ಹೊಸ ಮಾದರಿಗಳಲ್ಲಿ ಸ್ಟ್ಯಾಂಡರ್ಡ್ ಫೀಚರ್ಸ್ ಹೊರತುಪಡಿಸಿ ಪ್ರಮುಖ ಪ್ರೀಮಿಯಂ ಫೀಚರ್ಸ್‌ಗಳನ್ನು ಕೈಬಿಡಲಾಗಿದೆ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಆದರೆ ಸ್ಟ್ಯಾಂಡರ್ಡ ಜಿಎಕ್ಸ್ ಮಾದರಿಯು ಮಾತ್ರ ಆರಂಭಿಕವಾಗಿ ರೂ.17.30 ಲಕ್ಷ ಬೆಲೆಯೊಂದಿಗೆ ಪ್ರಮುಖ ಪ್ರೀಮಿಯಂ ಫೀಚರ್ಸ್ ಉಳಿಸಿಕೊಂಡಿದ್ದು, ಬೆಲೆ ಹೆಚ್ಚಳ ನಂತರ ಇನೋವಾ ಕ್ರಿಸ್ಟಾ ಕಾರಿನ ಬೆಲೆಯು ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 12 ಸಾವಿರದಿಂದ ರೂ.33 ಸಾವಿರ ದುಬಾರಿಯಾಗಿದೆ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಬೆಲೆ ಹೆಚ್ಚಳ ಪಟ್ಟಿಯಲ್ಲಿ ಇನೋವಾ ಕ್ರಿಸ್ಟಾ ಲಿಮಿಟೆಡ್ ಎಡಿಷನ್ ಕೂಡಾ ದುಬಾರಿಯಾಗಿದ್ದು, ಜಿಎಕ್ಸ್ ಮಾದರಿಯನ್ನು ಆಧರಿಸಿರುವ ಲಿಮಿಟೆಡ್ ಎಡಿಷನ್ ಗ್ರಾಹಕರ ಬೇಡಿಕೆಯೆಂತೆ 7 ಸೀಟರ್ ಮತ್ತು 8 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಹೊಸ ಫೀಚರ್ಸ್ ಅಳವಡಿಕೆ ನಂತರ ಫೇಸ್‌ಲಿಫ್ಟ್ ಕಾರಿನ ಬೆಲೆಯು ವೆರಿಯೆಂಟ್‌ಗಳಿಗೆ ಅನುಗುಣವಾಗಿ ಹಲವು ಹೊಸ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸ ಕಾರಿನಲ್ಲಿ ಪ್ರಮುಖ ಬದಲಾವಣೆಗಾಗಿ ಕ್ರೊಮ್ ಸೌಲಭ್ಯ ಹೊಂದಿರುವ ಪಿಯಾನೊ ಬ್ಲ್ಯಾಕ್ ಬಣ್ಣದ ಟ್ರಾಪೆಜೊಡಿಯಲ್ ಫ್ರಂಟ್ ಗ್ರಿಲ್ ಮತ್ತು ಹೊಸ ವಿನ್ಯಾಸ ಫ್ರಂಟ್ ಬಂಪರ್ ಪ್ರಮುಖ ಆಕರ್ಷಣೆಯಾಗಿದೆ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಹಾಗೆಯೇ ಹೊಸ ಕಾರಿನಲ್ಲಿ ಬ್ಯಾನೆಟ್ ಹೊಂದಿಕೊಂಡಂತೆ ಫ್ರಂಟ್ ಗ್ರಿಲ್‌ನೊಳಗೆ ಸೇರ್ಪಡೆಯಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್, ಡೈಮಂಡ್ ಕಟ್ ಅಲಾಯ್ ವೀಲ್ಹ್ ಮತ್ತು ಹೊಸದಾದ ಬಣ್ಣದ ಆಯ್ಕೆ ಪಡೆದುಕೊಂಡಿದ್ದು, ಹೊಸ ಬಣ್ಣದ ಆಯ್ಕೆಯನ್ನು ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲ್ ಶೈನ್ ಎಂದು ಹೆಸರಿಸಿದೆ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಇದು ಕಾರಿನ ಪ್ರೀಮಿಯಂ ಸೌಲಭ್ಯಗಳಿಗೆ ಪೂರಕವಾದ ಹೊಸ ಬಣ್ಣ ಆಯ್ಕೆಯಾಗಿದ್ದು, ಹೊರಭಾಗದಂತೆ ಒಳಭಾಗದಲ್ಲೂ ಪ್ರಮುಖ ಬದಲಾವಣೆಗಳಾಗಿವೆ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಹೊಸ ಫೇಸ್‌ಲಿಫ್ಟ್ ಕಾರಿನಲ್ಲಿ ಈ ಬಾರಿ ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ ಸರ್ಪೋಟ್ ಮಾಡುವ ಸ್ಮಾರ್ಟ್ ಪ್ಲೇಕಾಸ್ಟ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದ್ದು, ಟಾಪ್ ಎಂಡ್ ಮಾದರಿಯಾದ ಜೆಡ್ಎಕ್ಸ್ ಆವೃತ್ತಿಯಲ್ಲಿ ಹೆಚ್ಚುವರಿಯಾಗಿ ಕ್ಯಾಮೆಲ್ ಟಾನ್ ಕಲರ್ ಲೆದರ್ ಸೀಟುಗಳನ್ನು ನೀಡಿರುವುದು ಪ್ರೀಮಿಯಂ ಲುಕ್ ಹೆಚ್ಚಿಸಿದೆ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಫೇಸ್‌ಲಿಫ್ಟ್ ಕಾರಿನ ಮುಂಭಾಗದ ವಿನ್ಯಾಸ ಮತ್ತು ಒಳಭಾಗದಲ್ಲಿ ಕೆಲವು ಪ್ರೀಮಿಯಂ ಫೀಚರ್ಸ್ ಹೊರತುಪಡಿಸಿ ಕಾರಿನ ಹಿಂಭಾಗದ ವಿನ್ಯಾಸವನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಎಂಜಿನ್ ಆಯ್ಕೆಯು ಕೂಡಾ ಯಾವುದೇ ಬದಲಾವಣೆ ಪಡೆದುಕೊಂಡಿಲ್ಲ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಬಿಎಸ್-6 ಎಮಿಷನ್ ಜಾರಿ ನಂತರ ಪರಿಚಯಿಸಲಾದ ಎಂಜಿನ್ ಮಾದರಿಯೇ ಇದೀಗ 2022ರ ಮಾದರಿಯಲ್ಲೂ ಜೋಡಿಸಲಾಗಿದ್ದು, ಇನೋವಾ ಕ್ರಿಸ್ಟಾ ಕಾರಿನಲ್ಲಿ ಗ್ರಾಹಕರು 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ.

ಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾಬೆಲೆ ಏರಿಕೆಯೊಂದಿಗೆ ಮತ್ತೆರಡು ಹೊಸ ವೆರಿಯೆಂಟ್ ಪಡೆದುಕೊಂಡ ಟೊಯೊಟಾ ಇನೋವಾ ಕ್ರಿಸ್ಟಾ

ಹೊಸ ಎಮಿಷನ್ ನಂತರ 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿರುವ ಟೊಯೊಟಾ ಕಂಪನಿಯು 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರ ಮಾರಾಟ ಮಾಡುತ್ತಿದ್ದು, ಪ್ರತಿ ವೆರಿಯೆಂಟ್‌ನಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದೆ.

Most Read Articles

Kannada
English summary
Toyota innova crysta mpv price hike and get to two new variants
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X