ಟೊಯೊಟಾ ಇನ್ನೋವಾ ಹೈಕ್ರಾಸ್ Vs ಇನ್ನೋವಾ ಕ್ರಿಸ್ಟಾ: ವ್ಯತ್ಯಾಸವೇನು?

ಜಪಾನ್ ಕಾರು ತಯಾರಿಕಾ ಕಂಪನಿ 'ಟೊಯೊಟಾ'ದ ಕಾರುಗಳು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ.. ಅದರ ಆಕರ್ಷಕ ಲುಕ್‌ಗೆ ಎಲ್ಲರೂ ಫಿದಾ ಆಗುತ್ತಾರೆ. ಭಾರತೀಯ ಮಾರುಟ್ಟೆಯಲ್ಲಿ 'ಇನ್ನೋವಾ ಹೈಕ್ರಾಸ್' ಲಾಂಚ್ ಆಗಲಿದೆ.

ಅಂದಹಾಗೆ, ಬಿಡುಗಡೆ ಸಿದ್ದವಾಗಿರುವ ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಹಳೇಯ ಟೊಯೊಟಾ ಇನ್ನೋವಾ ಕ್ರಿಸ್ಟಾದ ಹೋಲಿಕೆ ಇಲ್ಲಿದೆ. ಹೊಸ ಇನ್ನೋವಾ ಹೈಕ್ರಾಸ್‌ನ ಡಿಸೈನ್, ಗಾತ್ರ, ವೀಲ್‌ಗಳು ಹಾಗೂ ಪವರ್‌ಟ್ರೇನ್‌ ಸೇರಿದಂತೆ ಅನೇಕ ವೈಶಿಷ್ಟಗಳ ಕುರಿತಂತೆ ವಿವರಗಳನ್ನು ನೀವು ತಿಳಿದುಕೊಳ್ಳಬಹುದು.

ವಿನ್ಯಾಸದ ಬಗ್ಗೆ ಹೇಳುವುದಾರೆ ಲಾಂಚ್ ಆಗಲಿರುವ ಟೊಯೊಟಾ ಇನ್ನೋವಾ ಹೈಕ್ರಾಸ್, ಇನ್ನೋವಾ ಕ್ರಿಸ್ಟಾದಂತೆ ಕಾಣುವುದಿಲ್ಲ. ಇನ್ನೋವಾ ಹೈಕ್ರಾಸ್ ಮಾದರಿಯನ್ನು MUVಗೆ ಬದಲು SUVಯಂತೆ ಕಾಣುವುವಂತೆ ಡಿಸೈನ್ ಮಾಡಲಾಗಿದೆ. ಇದಲ್ಲದೆ, ಚಪ್ಪಟೆಯಾಗಿ ಕಾಣುವಂತೆ ನೋಸ್ ಸೆಕ್ಷನ್ ಇದೆ. ಸ್ವಲ್ಪ ಉದ್ದವಾದ ಬಾನೆಟ್, ಫೇರ್ಡ್, ಸ್ಕ್ವೇರ್ಡ್-ಆಫ್ ವೀಲ್ ಆರ್ಚ್‌ಗಳು ಮತ್ತು ಆಲ್-ರೌಂಡ್ ಬ್ಯಾಕ್ ಕ್ಲಾಡಿಂಗ್‌ನಂತಹ ಡಿಸೈನ್ ಟೊಯೊಟಾ ಇನ್ನೋವಾ ಹೈಕ್ರಾಸ್ ಅನ್ನು ರಗಡ್ ಆಗಿ ಕಾಣುವಂತೆ ಮಾಡುತ್ತದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ ತುಂಬಾ ಸಿಂಪಲ್ ಆಗಿ ಕಾಣುತ್ತದೆ. ಎಲ್ಇಡಿ DRLs ಜೊತೆಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಪ್‌ಗಳು, ORVM-ಮೌಂಟೆಡ್ ಟರ್ನ್ ಇಂಡಿಕೇಟರ್ ಮತ್ತು ಕೆಲವು ಕ್ರೋಮ್ ಅಂಶಗಳಂತಹ ಡಿಸೈನ್‌ನೊಂದಿಗೆ ಸ್ವಲ್ಪ ಪ್ರೀಮಿಯಂ ಪೀಪಲ್ ಮೂವರ್ ರೀತಿಯಲ್ಲಿ ಕಾಣಿಸುತ್ತದೆ. ಗಾತ್ರಕ್ಕೆ ಬರುವುದಾದರೆ, ಇನ್ನೋವಾ ಕ್ರಿಸ್ಟಾ 4,735 ಮಿಮೀ ಉದ್ದ, 1,850 ಎಂಎಂ ಅಗಲ, 1,795 ಎಂಎಂ ಎತ್ತರ ಇರುವ ಮೂಲಕ ದೊಡ್ಡ MUV ಆಗಿದೆ. ಅಲ್ಲದೆ, ಇದು 2,750 ಎಂಎಂ ವ್ಹೀಲ್‌ಬೇಸ್‌ನೊಂದಿಗೆ ಲಭ್ಯವಿದೆ.

ಬಿಡುಗಡೆಯಾಗಲಿರುವ ಇನ್ನೋವಾ ಹೈಕ್ರಾಸ್ 20 ಎಂಎಂ ಉದ್ದ, 20 ಎಂಎಂ ಅಗಲವಿದೆ. ಅದರ ಮುಂಭಾಗ, ಹಿಂಭಾಗದ ವೀಲ್‌ಗಳ ನಡುವೆ ಮ್ಯಾಮತ್ 100 ಎಂಎಂ ಹೆಚ್ಚಿನ ಸ್ಪೇಸ್ ಅನ್ನು ಹೊಂದಿದೆ. ಗಾತ್ರದ ವಿಷಯದಲ್ಲಿ ಇನ್ನೋವಾ ಕ್ರಿಸ್ಟಾ ಚಿಕ್ಕದಾಗಿದೆ. ಪವರ್‌ಟ್ರೇನ್‌ಗೆ ಬರುವುದಾದರೆ, ಇನ್ನೋವಾ ಕ್ರಿಸ್ಟಾ 2.7-ಲೀಟರ್, 4-ಸಿಲಿಂಡರ್, ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿದ್ದು, 163.7bhp ಪವರ್ ಮತ್ತು 245Nm ಪೀಕ್ ಟಾರ್ಕ್‌ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಜೊತೆ ಸ್ಪೆಸಿಪೈ ಆಗಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ 2.0-ಲೀಟರ್, 4-ಸಿಲಿಂಡರ್, ನ್ಯಾಚುರಲ್ ಆಸ್ಪಿರೇಟೆಡ್, ಅಟ್ಕಿನ್ಸನ್ ಸೈಕಲ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಮುಂಭಾಗದ ವೀಲ್‌ಗಳನ್ನು ಎಲೆಕ್ಟ್ರಿಕ್ ಮೋಟರ್ ಒಳಗೊಂಡಿರುವ ಹೈಬ್ರಿಡ್ ಪವರ್‌ಟ್ರೇನ್‌ನಿಂದ ನಿಯಂತ್ರಿಸಲಾಗುತ್ತದೆ. ಈ ಪವರ್‌ಟ್ರೇನ್ 184.8bhp ಗರಿಷ್ಠ ಪವರ್ ಮತ್ತು 187Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ, ಈ ಹೈಬ್ರಿಡ್ ಪವರ್‌ಟ್ರೇನ್ ಟೊಯೋಟಾ ಇನ್ನೋವಾ ಹೈಕ್ರಾಸ್ ಅನ್ನು ಶುದ್ಧ EV ಮೋಡ್‌ನಲ್ಲಿ ಸೀಮಿತ ದೂರದವರೆಗೆ ಸುಲಭವಾಗಿ ಪ್ರಯಾಣಿಸಲು ಶಕ್ತಗೊಳಿಸುತ್ತದೆ.

ಭಾರತದ ಮಾರುಕಟ್ಟೆಯಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಲಾಂಚ್ ಮಾಡುವುದರೊಂದಿಗೆ, ಜಪಾನಿನ ವಾಹನ ತಯಾರಕ ಸಂಸ್ಥೆಯು ದೇಶದಲ್ಲಿ ತನ್ನ ಹೈಬ್ರಿಡ್ ಮಾದರಿ ಶ್ರೇಣಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ. ಇದಲ್ಲದೆ, ಭಾರತದಲ್ಲಿ 'ಇನ್ನೋವಾ' ಮಾದರಿಗೆ ಭಾರೀ ಪ್ರಮಾಣದಲ್ಲಿ ಬೇಡಿಕೆಯಿದೆ. ಈ ಮಾದರಿಯು ದೇಶದಲ್ಲಿ ಹೈಬ್ರಿಡ್ ಪವರ್‌ಟ್ರೇನ್ ಸೆಟಪ್ ಅನ್ನು ಗಮನಾರ್ಹವಾಗಿ ಜನಪ್ರಿಯಗೊಳಿಸುತ್ತದೆ ಎಂದು ಟೊಯೊಟಾ ಕಂಪನಿ ನಿರೀಕ್ಷಿಯಲಿದೆ. ಯಾವ ರೀತಿ ಈ ಕಾರು ಮಾರಾಟವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
Read more on ಟೊಯೊಟಾ toyota
English summary
Toyota innova hicross vs innova crysta
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X