ಏಪ್ರಿಲ್‌ನಿಂದ ಕಾರುಗಳ ಬೆಲೆ ಶೇ.4 ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೊಟಾ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ತನ್ನ ಎಲ್ಲಾ ಮಾದರಿಗಳ ಬೆಲೆಗಳನ್ನು ಶೇಕಡಾ 4 ರಷ್ಟು ಹೆಚ್ಚಿಸಲಿದೆ ಇಂದು ಪ್ರಕಟಿಸಿದೆ. ಈ ಬೆಲೆ ಏರಿಕೆಯು 2022ರ ಏಪ್ರಿಲ್ 1 ರಂದು ಜಾರಿಯಾಗಲಿದೆ. ಇದರಿಂದ ಮುಂದಿನ ತಿಂಗಳಿನಿಂದ ಟೊಯೊಟಾ ಕಾರುಗಳು ದುಬಾರಿಯಾಗಲಿವೆ.

ಏಪ್ರಿಲ್‌ನಿಂದ ಕಾರುಗಳ ಬೆಲೆ ಶೇ.4 ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೊಟಾ

ಭಾರತದಲ್ಲಿ ಮಾರುತಿ ಸುಜುಕಿ, ಮರ್ಸಿಡಿಸ್ ಬೆಂಝ್ ಮತ್ತು ಬಿಎಂಡಬ್ಲ್ಯು ಕಂಪನಿಗಳ ಬಳಿಕ ಟೊಯೊಟಾ ಕೂಡ ಬೆಲೆಯನ್ನು ಏರಿಕೆಯನ್ನು ಘೋಷಿಸಿದೆ. ಬಿಎಂಡಬ್ಲ್ಯು ಈ ವಾರದ ಆರಂಭದಲ್ಲಿ ಇದೇ ರೀತಿಯ ಬೆಲೆ ಏರಿಕೆಯನ್ನು ಘೋಷಿಸಿತು.ಕಚ್ಚಾ ಸಾಮಗ್ರಿಗಳು ಸೇರಿದಂತೆ ಇನ್‌ಪುಟ್ ವೆಚ್ಚ ಹೆಚ್ಚುತ್ತಿರುವ ಪರಿಣಾಮ ಈ ಹೆಚ್ಚಳವಾಗಿದೆ ಎಂದು ಟೊಯೊಟಾ ಹೇಳಿದೆ. ಗ್ರಾಹಕರ ಮೇಲೆ ಹೆಚ್ಚುತ್ತಿರುವ ವೆಚ್ಚದ ಪರಿಣಾಮವನ್ನು ಕಡಿಮೆ ಮಾಡಲು ಎಲ್ಲಾ ಜಾಗೃತ ಪ್ರಯತ್ನಗಳನ್ನು ಮಾಡಿದೆ ಎಂದು ಕಂಪನಿಯು ಹೇಳುತ್ತದೆ.

ಏಪ್ರಿಲ್‌ನಿಂದ ಕಾರುಗಳ ಬೆಲೆ ಶೇ.4 ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೊಟಾ

ಟೊಯೊಟಾದ ಪೋರ್ಟ್‌ಫೋಲಿಯೊ ಪ್ರಸ್ತುತ ಗ್ಲಾಂಝಾ, ಅರ್ಬನ್ ಕ್ರೂಸರ್, ಇನೋವಾ ಕ್ರಿಸ್ಟಾ, ಫಾರ್ಚುನರ್, ಹಿಲಕ್ಸ್, ಕ್ಯಾಮ್ರಿ ಮತ್ತು ವೆಲ್‌ಫೈರ್ ಕಾರುಗಳನ್ನು ಹೊಂದಿದೆ. ಟೊಯೊಟಾದ ಇನೋವಾ ಮತ್ತು ಫಾರ್ಚುನರ್ ಕಾರುಗಳು ಹಲವು ವರ್ಷಗಳಿಂದ ಮಾರಾಟದಲ್ಲಿ ಕಂಪನಿಗೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ.

ಏಪ್ರಿಲ್‌ನಿಂದ ಕಾರುಗಳ ಬೆಲೆ ಶೇ.4 ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೊಟಾ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ 2022ರ ಫೆಬ್ರವರಿ ತಿಂಗಳ ಮಾಸಿಕ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಕಳೆದ ತಿಂಗಳು ಟೊಯೊಟಾ ಕಂಪನಿಯು ಒಟ್ಟು 8745 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಟೊಯೊಟಾ ಕಂಪನಿಯು ಕಳೆದ ವರ್ಷ ಇದೇ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 14,075 ಯುನಿಟ್‌ಗಳನ್ನು ಮಾರಾಟ ಮಾಡಿತ್ತು ಮತ್ತು ಆದ್ದರಿಂದ, ಶೇಕಡಾ 37.8 ರಷ್ಟು ಕುಸಿತವನ್ನು ಕಂಡಿದೆ.

ಏಪ್ರಿಲ್‌ನಿಂದ ಕಾರುಗಳ ಬೆಲೆ ಶೇ.4 ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೊಟಾ

ಇನ್ನು ತಿಂಗಳಿನಿಂದ ತಿಂಗಳ ಮಾರಾಟಕ್ಕೆ ಹೋಲಿಸಿದರೆ, ಈ ವರ್ಷದ ಜನವರಿ ತಿಂಗಳಿನಲ್ಲಿ ಮಾರಾಟವಾದ 7,328 ಯುನಿಟ್‌ಗಳಿಗೆ ಹೋಲಿಸಿದರೆ ಶೇ.19 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಆದರೆ ವರ್ಷದಿಂದ ವರ್ಷದ ಮಾರಾಟದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಕುಸಿತವನ್ನು ಕಂಡಿದೆ.

ಏಪ್ರಿಲ್‌ನಿಂದ ಕಾರುಗಳ ಬೆಲೆ ಶೇ.4 ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಕಳೆದ ವರ್ಷ ಇದೇ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 14,075 ಯುನಿಟ್‌ಗಳನ್ನು ಮಾರಾಟ ಮಾಡಿತ್ತು ಮತ್ತು ಆದ್ದರಿಂದ, ಶೇಕಡಾ 37.8 ರಷ್ಟು ಕುಸಿತವನ್ನು ಕಂಡಿದೆ. ಇನ್ನು ತಿಂಗಳಿನಿಂದ ತಿಂಗಳ ಮಾರಾಟಕ್ಕೆ ಹೋಲಿಸಿದರೆ, ಈ ವರ್ಷದ ಜನವರಿ ತಿಂಗಳಿನಲ್ಲಿ ಮಾರಾಟವಾದ 7,328 ಯುನಿಟ್‌ಗಳಿಗೆ ಹೋಲಿಸಿದರೆ ಶೇ.19 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಆದರೆ ವರ್ಷದಿಂದ ವರ್ಷದ ಮಾರಾಟದಲ್ಲಿ ಟೊಯೊಟಾ ಕಂಪನಿಯು ಕುಸಿತವನ್ನು ಕಂಡಿದೆ.

ಏಪ್ರಿಲ್‌ನಿಂದ ಕಾರುಗಳ ಬೆಲೆ ಶೇ.4 ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೊಟಾ

ಇನ್ನು ನಾವು ಅತ್ಯಂತ ಭರವಸೆಯ ಬುಕಿಂಗ್ ಆರ್ಡರ್‌ಗಳನ್ನು ಹೊಂದಿದ್ದೇವೆ. ಹೊಸ ಕ್ಯಾಮ್ರಿ ಹೈಬ್ರಿಡ್. ಅದೇ ರೀತಿ, ಬೇಡಿಕೆಯ ಪ್ರವೃತ್ತಿಯಲ್ಲಿ ಸ್ಥಿರವಾದ ಏರಿಕೆಗೆ ಸಾಕ್ಷಿಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಒಟ್ಟಾರೆ ಭಾವನೆಯು ಸಕಾರಾತ್ಮಕವಾಗಿ ಮುಂದುವರಿಯುತ್ತದೆ. ಇದು ಬುಕ್ಕಿಂಗ್‌ನಲ್ಲಿ ಸ್ಥಿರವಾದ ಏರಿಕೆಗೆ ಕಾರಣವಾಗಿದೆ ಎಂದು ಕಂಪನಿ ಹೇಳಿದೆ.

ಏಪ್ರಿಲ್‌ನಿಂದ ಕಾರುಗಳ ಬೆಲೆ ಶೇ.4 ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೊಟಾ

ಟೊಯೊಟಾ ಕಂಪನಿಯು ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಹಿಲುಕ್ಸ್ ಪಿಕ್-ಅಪ್ ಅನ್ನು ಅನಾವರಣಗೊಳಿಸಿತು ಮತ್ತು ಕಾರಿಗೆ ಅಗಾಧವಾದ ಪ್ರತಿಕ್ರಿಯೆಯಿಂದಾಗಿ ಕಾರಿಗೆ ಬುಕಿಂಗ್ ಅನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸುವ ಅಗತ್ಯವಿದೆ ಎಂದು ಕೆಲವೇ ದಿನಗಳಲ್ಲಿ ಘೋಷಿಸಿತು. ಹಿಲುಕ್ಸ್ ಪಿಕ್-ಅಪ್ ಬೆಲೆಯನ್ನು ತಿಳಿಯಲು ಇನ್ನೂ ಕಾಯುತ್ತಿದ್ದೇವೆ, ಆದರೆ ಬಲವಾದ ಬೇಡಿಕೆಯಿದೆ,

ಏಪ್ರಿಲ್‌ನಿಂದ ಕಾರುಗಳ ಬೆಲೆ ಶೇ.4 ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೊಟಾ

ಇದು ಮಾರುಕಟ್ಟೆಗಳು ತೆರೆಯಲು ಪ್ರಾರಂಭಿಸಿದಾಗ ಟೊಯೊಟಾ ಮಾರಾಟದಲ್ಲಿ ವೇಗವನ್ನು ಪಡೆಯಲು ಸಹಾಯ ಮಾಡುತ್ತದೆ. ಇನ್ನು ಟೊಯೊಟಾ ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ಹೊಸ ಮಾದರಿಗಳನ್ನು ಪರಿಚಯಿಸಲು ಯೋಜಿಸಿದೆ. ಟೊಯೊಟಾ ತನ್ನ ಪೋರ್ಟ್ಫೋಲಿಯೊವನ್ನು ವಿಸ್ತರಿಸಲು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ವಾಹನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.

ಏಪ್ರಿಲ್‌ನಿಂದ ಕಾರುಗಳ ಬೆಲೆ ಶೇ.4 ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೊಟಾ

ಮುಂದಿನ 2 ವರ್ಷಗಳಲ್ಲಿ ಭಾರತದಲ್ಲಿ ಹೊಸ 10 ಕಾರುಗಳನ್ನು ಬಿಡುಗಡೆಗೊಳಿಸಲಿವೆ. ಬಿಡುಗಡೆಯಾಗಲಿರುವ ಹೊಸ ಟೊಯೊಟಾ ಕಾರುಗಳ ಬಗ್ಗೆ ಖರೀದಿದಾರರಲ್ಲಿ ನಿರೀಕ್ಷೆಯು ಸಾಕಷ್ಟು ಹೆಚ್ಚಾಗಿದೆ. ಈಗಗಾಲೇ ಟೊಯೊಟಾ ಕಂಪನಿಯು ಬಹುತೇಕ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಇದರ ನಡುವೆ ಹೊಸ ಮಾದರಿಗಳನ್ನು ಬಿಡುಗಡೆಗೊಳಿಸಿ ಟೊಯೊಟಾ ವಾಹನ ಮಾರಾಟದ ಸಂಖ್ಯೆ ಹೆಚ್ಚಿಸಲು ಸಜ್ಜಾಗುತ್ತಿದೆ,

ಏಪ್ರಿಲ್‌ನಿಂದ ಕಾರುಗಳ ಬೆಲೆ ಶೇ.4 ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೊಟಾ

ಇನ್ನು ಟೊಯೊಟಾ ಅರ್ಬನ್ ಕ್ರೂಸರ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯು ಮಾರುತಿ ಸುಜುಕಿ ವಿಟಾರಾ ಬ್ರೆಝಾ ಮಾದರಿಯ ರಿಬ್ಯಾಡ್ಜ್ ಮಾದರಿಯಾಗಿದೆ. ಈ ಟೊಯೊಟಾ ಅರ್ಬನ್ ಕ್ರೂಸರ್ ಸಬ್-ಕಾಂಪ್ಯಾಕ್ಟ್ ಎಸ್‍ಯುವಿಯು ತನ್ನದೇ ಆದ ಖ್ಯಾತಿಯನ್ನು ಯಶಸ್ವಿಯಾಗಿ ನಿರ್ಮಿಸಿದೆ. ಈ ಟೊಯೊಟಾ ಎಸ್‍ಯುವಿಯು ಪ್ರತಿ ತಿಂಗಳು ಯೋಗ್ಯವಾದ ಮಾರಾಟವನ್ನು ದಾಖಲಿಸುವಲ್ಲಿ ಯಶಸ್ವಿಯಾಗುತ್ತಿದೆ. ಅರ್ಬನ್ ಕ್ರೂಸರ್ ಬದಲಾವಣೆಗೆ ಒಳಗಾಗಲು ಸಿದ್ಧವಾಗಿದೆ. ಪ್ರಮುಖ ಬದಲಾವಣೆಗಳೊಂದಿಗೆ ನ್ಯೂ ಜನರೇಷನ್ ಮಾದರಿಯಾಗಿ ಬಿಡುಗಡೆಯಾಗಲಿದೆ. ಈ ಹೊಸ ಮಾದರಿಯಲ್ಲಿ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ.

ಏಪ್ರಿಲ್‌ನಿಂದ ಕಾರುಗಳ ಬೆಲೆ ಶೇ.4 ರಷ್ಟು ಏರಿಕೆ ಮಾಡುವುದಾಗಿ ಘೋಷಿಸಿದ ಟೊಯೊಟಾ

ಭಾರತದಲ್ಲಿ ಟೊಯೊಟಾ ಕಂಪನಿಯು ಹಲವು ಕಾರಣಗಳಿಂದ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಆದರೆ ತಿಂಗಳಿನಿಂದ ತಿಂಗಳ ಮಾರಾಟದಲ್ಲಿ ಏರಿಕೆಯನ್ನು ಕಂಡಿದೆ. ಟೊಯೊಟಾದ ವಾಹಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಇನ್ನು ಟೊಯೊಟಾ ಕಂಪನಿಯು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಇದರ ಮೂಲಕ ಮಾರಾಟವನ್ನು ಹೆಚ್ಚಿಸಬಹುದು. ಇನ್ನು ಮುಂದಿನ ತಿಂಗಳಿನಿಂದ ಬೆಲೆ ಏರಿಕೆಯಾಗುವುದರಿಂದ ಇದು ಕಾರುಗಳ ಮಾರಾಟ ಮೇಲೆ ಪರಿಣಾಮ ಬೀರುತ್ತದಯೇ ಎಂಬುದನ್ನು ಕಾದು ನೋಡಬೇಕು.

Most Read Articles

Kannada
Read more on ಟೊಯೊಟಾ toyota
English summary
Toyota kirloskar motor announces price hike by up to 4 percent from april 2022 details
Story first published: Saturday, March 26, 2022, 17:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X