2022ರ ಜನವರಿ ತಿಂಗಳ ಮಾರಾಟದಲ್ಲಿ ಕುಸಿತ ಕಂಡ ಟೊಯೊಟಾ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ 2022ರ ಜನವರಿ ತಿಂಗಳ ಮಾಸಿಕ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, ಕಳೆದ ತಿಂಗಳು ಟೊಯೊಟಾ ಕಂಪನಿಯು ಒಟ್ಟು 7,328 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

2021ರ ಜನವರಿ ತಿಂಗಳಿನಲ್ಲಿ ಟೊಯೊಟಾ ಕಂಪನಿಯು 11,126 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳು ಕಾರು ತಯಾರಕರು ವರ್ಷದಿಂದ ವರ್ಷಕ್ಕೆ 34 ಪ್ರತಿಶತದಷ್ಟು ಕುಸಿತವನ್ನು ಕಂಡಿದ್ದಾರೆ. 2021ರ ಡಿಸೆಂಬರ್ ತಿಂಗಳಿನಲ್ಲಿ 10,832 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಟೊಯೊಟಾ ಕಂಪನಿಯು ತಿಂಗಳಿನಿಂದ ತಿಂಗಳಿಗೆ ಶೇಕಡಾ 32 ಕ್ಕಿಂತ ಹೆಚ್ಚು ಕುಸಿತವನ್ನು ಕಂಡಿದೆ. ಮಾರಾಟದಲ್ಲಿನ ಈ ಕುಸಿತಕ್ಕೆ ಒಂದು ಪ್ರಮುಖ ಕಾರಣವೆಂದರೆ ಭಾರತದಲ್ಲಿ ವಾಹನ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸೆಮಿಕಂಡೆಕ್ಟರ್ ಚಿಪ್‌ಗಳ ಕೊರತೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸೇಲ್ಸ್ ಮತ್ತು ಕಾರ್ಯತಂತ್ರದ ಮಾರ್ಕೆಟಿಂಗ್‌ನ ಅಸೋಸಿಯೇಟ್ ಉಪಾಧ್ಯಕ್ಷ ಅತುಲ್ ಸೂದ್ ಮಾತನಾಡಿ, ನಾವು ಹೊಸ ಕ್ಯಾಮ್ರಿ ಹೈಬ್ರಿಡ್ ಅನ್ನು ಬಿಡುಗಡೆ ಮಾಡುವ ಮೂಲಕ ಹೊಸ ವರ್ಷವನ್ನು ಪ್ರಾರಂಭಿಸಿದ್ದೇವೆ.ಸ್ಥಳೀಯವಾಗಿ ತಯಾರಿಸಿದ ಏಕೈಕ ಬಲವಾದ, ಸ್ವಯಂ ಚಾರ್ಜಿಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವಾಗಿದೆ.

ಭಾರತದಲ್ಲಿ, ಕ್ಯಾಮ್ರಿ ಹೈಬ್ರಿಡ್ ಗಾಗಿ ಕಳೆದ ತಿಂಗಳು ಗ್ರಾಹಕರ ಆರ್ಡರ್‌ಗಳನ್ನು ಸ್ವೀಕರಿಸಿದೆ. ಟೊಯೊಟಾ ವೆಲ್‌ಫೈರ್ ಸಹ, ಭಾರತೀಯ ಗ್ರಾಹಕರಿಗೆ ಸುಸ್ಥಿರ ಐಷಾರಾಮಿ ಮಾದರಿಯಾಗಿದೆ. ಇದು ಆರೋಗ್ಯಕರ ಆರ್ಡರ್‌ಗಳನ್ನು ಪಡೆಯುವುದನ್ನು ಮುಂದುವರೆಸಿದೆ. ಇನೋವಾ ಮತ್ತು ಫಾರ್ಚುನರ್ ಎರಡೂ ಮಾದರಿಗಳು ದೃಢವಾದ ಗ್ರಾಹಕರ ಆರ್ಡರ್‌ಗಳನ್ನು ಹೊಂದಿರುವುದರಿಂದ ಮತ್ತು ಇದು ನಮ್ಮ ಆರ್ಡರ್ ಪೈಪ್‌ಲೈನ್ ಅನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ಹೇಳಿದರು.

2022ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಅನ್ನು ಬಿಡುಗಡೆ ಮಾಡುವುದರ ಜೊತೆಗೆ ಕಳೆದ ತಿಂಗಳು, ಜಪಾನಿನ ಕಾರು ತಯಾರಕರು ಟೊಯೊಟಾ ಗ್ಲಾಂಝಾ ಮತ್ತು ಅರ್ಬನ್ ಕ್ರೂಸರ್‌ನೊಂದಿಗೆ ಹೊಸ ಮಾರಾಟದ ಮೈಲಿಗಲ್ಲನ್ನು ತಲುಪಿದ್ದಾರೆ. ಎರಡೂ ವಾಹನಗಳು ಭಾರತದಲ್ಲಿ 1 ಲಕ್ಷ ಯುನಿಟ್‌ಗಳ ಮಾರಾಟದ ಮೈಲಿಗಲ್ಲನ್ನು ಸಂಚಿತವಾಗಿ ದಾಟಿವೆ.

ಕಾರು ತಯಾರಕರು ಗ್ಲಾಂಝಾ 65,000 ಯುನಿಟ್‌ಗಳನ್ನು ಮತ್ತು ಅರ್ಬನ್ ಕ್ರೂಸರ್‌ನ 35,000 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ವಾಸ್ತವವಾಗಿ, 66 ಪ್ರತಿಶತದಷ್ಟು ಮೊದಲ ಬಾರಿಗೆ ಟೊಯೊಟಾ ಖರೀದಿದಾರರು ಗ್ಲಾಂಝಾ ಅಥವಾ ಅರ್ಬನ್ ಕ್ರೂಸರ್ ಅನ್ನು ಖರೀದಿಸಿದ್ದಾರೆ,

ಇನ್ನು ಟೊಯೊಟಾ ಸತತ ಎರಡನೇ ವರ್ಷವೂ ವಿಶ್ವದ ಅತಿದೊಡ್ಡ ಕಾರು ತಯಾರಕ ಎಂಬ ಸ್ಥಾನವನ್ನು ಉಳಿಸಿಕೊಂಡಿದೆ. 2021ರ ವರ್ಷದ ಮಾರಾಟದ ಅಂಕಿ ಅಂಶಗಳನ್ನು ಟೊಯೊಟಾ ಕಂಪನಿಯು ಬಿಡುಗಡೆಗೊಳಿಸಿದೆ. 2021ರಲ್ಲಿ ಟೊಯೊಟಾ ಕಂಪನಿಯು 10.5 ಮಿಲಿಯನ್ ವಾಹನಗಳ ಮಾರಾಟ ಮಾಡಲಾಗಿದೆ. ಟೊಯೊಟಾ ಕಂಪನಿಯು ಶೇಕಡಾ.10.1 ರಷ್ಟು ಮಾರಾಟದಲ್ಲಿ ಬೆಳವಣಿಗೆಯನ್ನು ಸಾಧಿಸಿದೆ.

ಟೊಯೊಟಾ ಹೈಲಕ್ಸ್ ಮತ್ತು ಟೊಯೊಟಾ ಕೊರೊಲ್ಲಾದಂತಹ ಅದರ ಕೆಲವು ಮಾದರಿಗಳು ಹಲವಾರು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೆಸ್ಟ್ ಸೆಲ್ಲರ್‌ಗಳಾಗಿವೆ. ಟೊಯೊಟಾದ ಕೆಲವು ಮಾದರಿಗಳು 180 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತವೆ ಮತ್ತು ಬಹುತೇಕ ಎಲ್ಲಾ ದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದೆ.

ಈ ಮಾದರಿಗಳಲ್ಲಿ ಲ್ಯಾಂಡ್ ಕ್ರೂಸರ್, ಪ್ರಾಡೊ, ಹೈಲಕ್ಸ್, ಟಂಡ್ರಾ, ಟಕೋಮಾ, ವೆನ್ಜಾ, ಕೊರೊಲ್ಲಾ ಮುಂತಾದ ಕೆಲವು ಐಕಾನಿಕ್ ಹೆಸರುಗಳಿವೆ. ಈ ವಾಹನಗಳು ಮುಖ್ಯವಾಹಿನಿಯ ಕಾರುಗಳಾಗಿದ್ದರೂ ಸಹ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲೂ ಟೊಯೊಟಾದ ವಾಹನಗಳಿಗೆ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.

ಇನ್ನು ಟೊಯೊಟಾ ಫಾರ್ಚುನರ್, ಇನೋವಾ, ಕ್ವಾಲಿಸ್, ಕೊರೊಲ್ಲಾ ಮತ್ತು ಕ್ಯಾಮ್ರಿ ಎಲ್ಲಾ ಐಕಾನಿಕ್ ಹೆಸರುಗಳಾಗಿವೆ ಮತ್ತು ಇವುಗಳು ಜನರು ಹೊಂದಲು ಬಯಸುವ ಬ್ರ್ಯಾಂಡ್‌ಗಳಾಗಿವೆ. ಈ ಕಾರುಗಳು ಮತ್ತೊಂದು ವಿಶೇಷವೆಂದರೆ, ಲಕ್ಷ ಕಿಲೋಮೀಟರ್‌ಗಳು ಓಡಿದರು ಯಾವುದೇ ಪ್ರಮುಖ ರಿಪೇರಿ ಆಗುತ್ತಿರಲಿಲ್ಲ. ಸರಳವಾಗಿ, ಟೊಯೊಟಾ ಕಾರುಗಳು ಏಕೆ ಉತ್ತಮವಾಗಿ ಮಾರಾಟವಾಗುತ್ತವೆ ಎಂಬುದನ್ನು ನೋಡುವುದು ಸುಲಭ. ಟೊಯೊಟಾದ ಅಂಗಸಂಸ್ಥೆಗಳು ಮತ್ತು ಉಪ-ವಿಭಾಗಗಳು ಬರುತ್ತವೆ. Lexus, Ranz, Scion, Daihatsu ಮತ್ತು Hino ನಂತಹ ಬ್ರ್ಯಾಂಡ್‌ಗಳು ಟೊಯೊಟಾ ಕಂಪನಿಯ ಒಂದು ಭಾಗವಾಗಿದೆ. ಎರಡೂ ಆಟೋ ದೈತ್ಯರು 2022 ರಲ್ಲೂ ಪ್ರಬಲ ಹೋರಾಟವನ್ನು ನಡೆಸುವ ನಿರೀಕ್ಷೆಯಿದೆ.

ಆದರೆ ಈ ವರ್ಷ ಎರಡೂ ಬ್ರಾಂಡ್‌ಗಳಿಗೆ ಸವಾಲಾಗಿರಬಹುದು. ಫೋಕ್ಸ್‌ವ್ಯಾಗನ್ ಮೊದಲ ಸ್ಥಾನದಲ್ಲಿ ಕಡಿಮೆ ಮಾರಾಟದೊಂದಿಗೆ ಪ್ರಾರಂಭಿಸಿದೆ. 8.9 ಮಿಲಿಯನ್ ವಾಹನಗಳ ಮಾರಾಟ ಸುಮಾರು 10 ವರ್ಷಗಳಲ್ಲಿ ಫೋಕ್ಸ್‌ವ್ಯಾಗನ್ ಗ್ರೂಪ್ ನೋಡಿದ ಅತ್ಯಂತ ಕಡಿಮೆ ಅಂಕಿ ಅಂಶವಾಗಿದೆ. ಮತ್ತೊಂದೆಡೆ, ಜಪಾನ್‌ನಲ್ಲಿ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿ ಟೋಮೊಬೈಲ್ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತಿದೆ. ವೈರಸ್ ಹರಡುವುದನ್ನು ತಡೆಯಲು ಬ್ರ್ಯಾಂಡ್ ಜಪಾನ್‌ನಲ್ಲಿರುವ ತನ್ನ ಸ್ಥಾವರಗಳಲ್ಲಿ ಉತ್ಪಾದನೆಯನ್ನು ನಿಲ್ಲಿಸುತ್ತದೆ. ಇದು ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡುವ ನಿರೀಕ್ಷೆಯಿದೆ.

ಇನ್ನು ಭಾರತದಲ್ಲಿ ಟೊಯೊಟಾ ಕಂಪನಿಯು ಹಲವು ಕಾರಣಗಳಿಂದ ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಆದರೆ ಟೊಯೊಟಾದ ವಾಹಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಇನ್ನು ಟೊಯೊಟಾ ಕಂಪನಿಯು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಇದರ ಮೂಲಕ ಮಾರಾಟವನ್ನು ಹೆಚ್ಚಿಸಬಹುದು.


Click it and Unblock the Notifications